ಭಗವದ್ಗೀತೆ: ಸಾಧನೆಗೆ ಹಾಕಿದ ಪರಿಶ್ರಮ ಎಂದಿಗೂ ವ್ಯರ್ಥವಾಗುವುದಿಲ್ಲ, ಒಂದಲ್ಲಾ ಒಂದು ದಿನ ಫಲಿಸುತ್ತೆ; ಗೀತೆಯಲ್ಲಿನ ಅರ್ಥ ತಿಳಿಯಿರಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಭಗವದ್ಗೀತೆ: ಸಾಧನೆಗೆ ಹಾಕಿದ ಪರಿಶ್ರಮ ಎಂದಿಗೂ ವ್ಯರ್ಥವಾಗುವುದಿಲ್ಲ, ಒಂದಲ್ಲಾ ಒಂದು ದಿನ ಫಲಿಸುತ್ತೆ; ಗೀತೆಯಲ್ಲಿನ ಅರ್ಥ ತಿಳಿಯಿರಿ

ಭಗವದ್ಗೀತೆ: ಸಾಧನೆಗೆ ಹಾಕಿದ ಪರಿಶ್ರಮ ಎಂದಿಗೂ ವ್ಯರ್ಥವಾಗುವುದಿಲ್ಲ, ಒಂದಲ್ಲಾ ಒಂದು ದಿನ ಫಲಿಸುತ್ತೆ; ಗೀತೆಯಲ್ಲಿನ ಅರ್ಥ ತಿಳಿಯಿರಿ

ಕುರುಕ್ಷೇತ್ರದ ಯುದ್ಧದಲ್ಲಿ ಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಸಾಧನೆಗೆ ಹಾಕಿದ ಪರಿಶ್ರಮ ಎಂದಿಗೂ ವ್ಯರ್ಥವಾಗುವುದಿಲ್ಲ, ಒಂದಲ್ಲಾ ಒಂದು ದಿನ ಫಲಿಸುತ್ತೆ ಎಂಬ ಗೀತೆಯಲ್ಲಿ ಅರ್ಥ ತಿಳಿಯಿರಿ.

ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.

ಭಯಾದ್ ರಣಾದುಪರತಂ ಮಂಸ್ಯಂತೇ ತ್ವಾಂ ಮಹಾರಥಾಃ |

ಯೇಷಾಂ ಚ ತ್ವಂ ಬಹುಮತೋ ಭೂತ್ವಾ ಯಾಸ್ಯಸಿ ಲಾಘವಮ್ ||35||

ನಿನ್ಮ ವಿಷಯದಲ್ಲಿ ಅತ್ಯಂತ ಗೌರವನ್ನಿಟ್ಟುಕೊಂಡಿರುವ ಮಹಾರಥರು ನೀನು ಭಯದಿಂದಲೇ ರಣಭೂಮಿಯನ್ನು ಬಿಟ್ಟುಹೋದೆ ಎಂದು ಭಾವಿಸತ್ತಾರೆ ಮತ್ತು ನಿನ್ನ ವಿಷಯವಾಗಿ ಹಗುರವಾಗಿ ಪರಗಣಿಸುತ್ತಾರೆ.

ಶ್ರೀಕೃಷ್ಣನು ತನ್ನ ತೀರ್ಮಾನವನ್ನು ಮುಂದುವರಿಸಿ ಅರ್ಜುನನಿಗೆ ಹೀಗೆ ಹೇಳುತ್ತಾನೆ. ದುರ್ಯೋಧನ, ಕರ್ಣರಂತಹ ಮಹಾರಥರೂ ಇತರ ಸಮಕಾಲೀನರೂ, ನೀನು ನಿನ್ನ ಸಹೋದರರ ಮತ್ತು ತಾತನ ವಿಷಯದಲ್ಲಿ ಅನುಕಂಪಪಟ್ಟು ಯುದ್ಧಭೂಮಿಯನ್ನು ಬಿಟ್ಟುಹೋದೆ ಎಂದು ಭಾಸುತ್ತಾರೆ ಎಂದುಕೊಳ್ಳಬೇಡ. ಪ್ರಾಣಭಯದಿಂದ ನೀನು ಹೊರಟುಹೋದೆ ಎಂದು ಯೋಚಿಸುತ್ತಾರೆ. ಆದ್ದರಿಂದ ನಿನ್ನ ವಿಷಯದಲ್ಲಿ ಅವರ ಗೌರವಭಾವನೆಯು ಮಣ್ಣುಪಾಲಾಗುತ್ತದೆ.

ನೇಹಾಭಿಕ್ರಮನಾಶೋಸ್ತಿ ಪ್ರತ್ಯವಾಯೋ ನ ವಿದ್ಯತೇ |

ಸ್ವಲ್ಪಮಪ್ಯಸ್ಯ ಧರ್ಮಸ್ಯ ತ್ರಾಯತೇ ಮಹತೋ ಭಯಾತ್ ||40||

ಈ ಪರಿಶ್ರಮದಲ್ಲಿ ನಷ್ಟವಾಗಲಿ ಕುಗ್ಗುವುದಾಗಲಿ ಇಲ್ಲ. ಈ ಮಾರ್ಗದಲ್ಲಿ ಸಾಧಿಸುವ ಸ್ವಲ್ಪ ಪ್ರಗತಿಯೂ ಮನುಷ್ಯನನ್ನು ಮಹಾಭಯದಿಂದ ಕಾಪಾಡುತ್ತದೆ.

ಕೃಷ್ಣಪ್ರಜ್ಞೆಯಲ್ಲಿ ಕೆಲಸ ಮಾಡುವುದು ಅಥವಾ ಇಂದ್ರಿಯತೃಪ್ತಿಯ ನಿರೀಕ್ಷಣೆಯಿಲ್ಲದೆ ಕೃಷ್ಣನ ಉಪಯೋಗಕ್ಕಾಗಿ ಕೆಲಸ ಮಾಡುವುದು ಕರ್ಮದ ಅತ್ಯುನ್ನತ ಆಧ್ಯಾತ್ಮಿಕ ಲಕ್ಷಣ. ಇಂತಹ ಕರ್ಮದ ಅಲ್ಪ ಪ್ರಾರಂಭಕ್ಕೂ ಅಡ್ಡಿಯುಂಟಾಗುವುದಿಲ್ಲ. ಈ ಅಲ್ಪ ಪ್ರಾರಂಭವು ಯಾವ ಘಟ್ಟದಲ್ಲೂ ನಷ್ಟವಾಗುವುದಿಲ್ಲ. ಐಹಿಕ ಮಟ್ಟದಲ್ಲಿ ಪ್ರಾರಂಭಮಾಡಿದ ಯಾವುದೇ ಕೆಲಸವನ್ನು ಸಂಪೂರ್ಣ ಮಾಡಬೇಕು. ಇಲ್ಲವಾದರೆ ಇಡೀ ಪ್ರಯತ್ನವೇ ವಿಫಲವಾಗುತ್ತದೆ. ಆದರೆ ಕೃಷ್ಣಪ್ರಜ್ಞೆಯಿಂದ ಪ್ರಾರಂಭಮಾಡಿದ ಕೆಲಸವನ್ನು ಸಂಪೂರ್ಣಗೊಳಿಸದಿದ್ದರೂ ಅದರ ಪರಿಣಾಮವು ಶಾಶ್ವತವಾಗಿರುತ್ತದೆ. ಆದುದರಿಂದ ಇಂತಹ ಕೆಲಸವನ್ನು ಕೃಷ್ಣಪ್ರಜ್ಞೆಯಲ್ಲಿ ಮಾಡುವವನು ಕೆಲಸವನ್ನು ಪೂರ್ಣವಾಗಿ ಮಾಡದಿದ್ದರೂ ಅವನಿಗೆ ನಷ್ಟವಾಗುವುದಿಲ್ಲ. ಕೃಷ್ಮಪ್ರಜ್ಞೆಯಲ್ಲಿ ಶೇಕಡಾ ಒಂದರಷ್ಟು ಕೆಲಸ ಮಾಡಿದರೂ ಅದು ಶಾಶ್ವತವಾದ ಪರಿಣಾಮವನ್ನು ನೀಡುತ್ತದೆ. ಆದರೆ ಪ್ರಾಪಂಚಿಕ ವ್ಯವಹಾರದಲ್ಲಿ ನೂರಕ್ಕೆ ನೂರರಷ್ಟು ಯಶಸ್ವಿಯಾಗದಿದ್ದರೆ ಲಾಭವಿಲ್ಲ. ಅಜಾಮಿಳನು ತನ್ನ ಕರ್ತವ್ಯವನ್ನು ಕೃಷ್ಣಪ್ರಜ್ಞೆಯ ಶೇಕಡಾ ಒಂದಿಷ್ಟು ಭಾಗದಿಂದ ಮಾಡಿದ. ಆದರೆ ಭಗವಂತನ ಕೃಪೆಯಿಂದ ಅವನಿಗೆ ಲಭ್ಯವಾದದ್ದು ನೂರಕ್ಕೆ ನೂರರಷ್ಟು ಫಲ. ಈ ವಿಷಯವಾಗಿ ಶ್ರೀಮದ್ಭಾಗವತದಲ್ಲಿ ಒಂದು ಸೊಗಸಾದ ಶ್ಲೋಕವಿದೆ (1.5.17)

ತ್ಯಕ್ತ್ವಾ ಸ್ವಧರ್ಮಂ ಚರಣಾಮ್ಬುಜಂ ಹರೇರ್

ಭಜನ್ನಪಕ್ವೋಥ ಪತೇತ್ತತೋ ಯದಿ |

ಯತ್ರ ಕ್ವ ವಾಭದ್ರಮಭೂದಮುಷ್ಯ ಕಿಂ

ಕೋ ವಾರ್ಥ ಆಪ್ತೋಭಜತಾಂ ಸ್ವಧರ್ಮತಃ ||

ಯಾರಾದರೂ ತನ್ನ ವೃತ್ತಿ ಕರ್ತವ್ಯವನ್ನು ಬಿಟ್ಟು ಕೃಷ್ಣಪ್ರಜ್ಞೆಯಲ್ಲಿ ಕೆಲಸ ಮಾಡತೊಡಗಿ ಅನಂತರ ತನ್ನ ಕೆಲಸವನ್ನು ಪೂರ್ತಿಗೊಳಿಸದೆ ಹೋದುದಕ್ಕಾಗಿ ಕೆಳಕ್ಕೆ ಬಿದ್ದರೂ ಅವನಿಗೆ ನಷ್ಟವೇನು? ಮನುಷ್ಯ ತನ್ನ ಐಹಿಕ ಕೆಲಸಕಾರ್ಯಗಳನ್ನು ಪರಿಪೂರ್ಣವಾಗಿ ಮಾಡಿದರೂ ಲಾಭವೇನು? ಅಥವಾ ಕ್ರೈಸ್ತರು ಹೇಳುವಂತೆ ಒಬ್ಬ ಮನುಷ್ಯನು ಇಡೀ ಜಗತ್ತನ್ನು ಪಡೆದುಕೊಂಡರೂ ತನ್ನ ಅಮರವಾದ ಆತ್ಮವನ್ನು ಕಳೆದುಕೊಂಡರೆ ಅವನಿಗೆ ಪ್ರಯೋಜನವೇನು?

ಐಹಿಕ ಕೆಲಸಕಾರ್ಯಗಳೂ ಅವುಗಳ ಪರಿಣಾಮಗಳೂ ದೇಹದೊಂದಿಗೆ ಅಂತ್ಯಾವಾಗುತ್ತವೆ. ಆದರೆ ಕೃಷ್ಣಪ್ರಜ್ಞೆಯಲ್ಲಿ ಮಾಡಿದ ಕೆಲಸವು ಮನುಷ್ಯನ ದೇಹವು ನಷ್ಟವಾದ ಅನಂತರವೂ ಅವನನ್ನು ಕೃಷ್ಣಪ್ರಜ್ಞೆಗೆ ಮತ್ತೆ ಕೊಂಡೊಯ್ಯುತ್ತದೆ. ಕಡೇ ಪಕ್ಷ ಒಂದು ಸುಸಂಸ್ಕೃತ ಬ್ರಾಹ್ಮಣ ಕುಟುಂಬದಲ್ಲಾಗಲೀ ಅಥವಾ ಶ್ರೀಮಂತ ಕುಟುಂಬದಲ್ಲಾಗಲಿ ಮುಂದಿನ ಜನ್ಮದಲ್ಲಿ ಮತ್ತೆ ಮನುಷ್ಯನಾಗಿ ಹುಟ್ಟಿ, ಮೇಲೇರುವುದಕ್ಕೆ ಇನ್ನೊಂದು ಅವಕಾಶವು ದೊರೆಯುವುದಂತೂ ಖಂಡಿತ. ಕೃಷ್ಣಪ್ರಜ್ಞೆಯಲ್ಲಿ ಮಾಡುವ ಕರ್ಮದ ಅದ್ವೀತಿಯ ಲಕ್ಷಣ ಇದು.

Whats_app_banner

ವಿಭಾಗ

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.