Bhagavad Gita: ದೇವರಲ್ಲಿ ಪೂರ್ಣವಾಗಿ ತೊಡಗಿಸಿಕೊಳ್ಳುವವನು ಸಕಲ ಜೀವಿಗಳ ಕಲ್ಯಾಣ ಕಾರ್ಯದಲ್ಲಿ ಭಾಗಿಯಾಗುತ್ತಾನೆ; ಗೀತೆಯ ಸಾರಾಂಶ ತಿಳಿಯಿರಿ
Bhagavad Gita Updesh: ದೇವರಲ್ಲಿ ಪೂರ್ಣವಾಗಿ ತೊಡಗಿಸಿಕೊಳ್ಳುವವನು ಸಕಲ ಜೀವಿಗಳ ಕಲ್ಯಾಣ ಕಾರ್ಯದಲ್ಲಿ ಭಾಗಿಯಾಗುತ್ತಾನೆ ಎಂಬುದರ ಅರ್ಥವನ್ನು ಭಗವದ್ಗೀತೆಯಲ್ಲಿ ತಿಳಿಯಿರಿ.
ಅಧ್ಯಾಯ - 5 ಕರ್ಮಯೋಗ -ಕೃಷ್ಣಪ್ರಜ್ಞೆಯಲ್ಲಿ ಕಾರ್ಯ
ಲಭನ್ತೇ ಬ್ರಹ್ಮನಿರ್ವಾಣಮ್ ಋಷಯಃ ಕ್ಷೀಣಕಲ್ಮಷಾಃ |
ಛಿನ್ನದ್ವೈಧಾ ಯತಾತ್ಮಾನಃ ಸರ್ವಭೂತಹಿತೇ ರತಾಃ ||25||
Bhagavad Gita Updesh in Kannada: ಯಾರು ಸಂದೇಹಗಳಿಂದ ಉದ್ಭವವಾಗುವ ದ್ವಂದ್ವಗಳನ್ನು ಮೀರಿರುವರೋ, ಅಂತರಂಗದಲ್ಲಿ ಮನಸ್ಸನ್ನು ತೊಡಗಿಸಿಕೊಳ್ಳುತ್ತಾರೋ, ಎಲ್ಲ ಜೀವಿಗಳ ಹಿತಕ್ಕಾಗಿ ಸದಾ ಶ್ರಮಿಸುವರೋ, ಮತ್ತು ಎಲ್ಲ ಪಾಪಗಳಿಂದ ಮುಕ್ತರಾಗಿರುವರೋ ಅವರು ಬ್ರಹ್ಮ ನಿರ್ವಾಣವನ್ನು ಪಡೆಯುತ್ತಾರೆ.
ಸಂಪೂರ್ಣವಾಗಿ ಕೃಷ್ಣಪ್ರಜ್ಞೆಯಲ್ಲಿರುವನ ಮನುಷ್ಯನು ಮಾತ್ರ ಎಲ್ಲ ಜೀವಿಗಳ ಕಲ್ಯಾಣಕಾರ್ಯದಲ್ಲಿ ನಿರತನಾಗಿರದ್ದಾನೆ ಎಂದು ಹೇಳಬಹುದು. ಎಲ್ಲ ವಸ್ತುಗಳು ಆದಿಮೂಲವು ಕೃಷ್ಣನೆಂಬ ವಾಸ್ತವ ಜ್ಞಾನ ಹೊಂದಿದ್ದು ಆ ಮನೋಧರ್ಮದಲ್ಲಿ ಕೆಲಸ ಮಾಡುವ ಮನುಷ್ಯನು ಎಲ್ಲರಿಗಾಗಿ ಕೆಲಸ ಮಾಡುತ್ತಾನೆ. ಕೃಷ್ಣನೇ ಪರಮ ಭೋಕ್ತಾರ, ಪರಮ ಪ್ರಭು ಮತ್ತು ಪರಮಿತ್ರ ಎನ್ನುವುದನ್ನು ಮರೆತಿರುವುದೇ ಮಾನವ ಕುಲದ ದುಃಖಗಳಿಗೆ ಕಾರಣ. ಆದುದರಿಂದ ಇಡೀ ಮಾನವ ಸಮಾಜದಲ್ಲಿ ಈ ಪ್ರಜ್ಞೆಯನ್ನು ಪುನಃಶ್ಚೇತಗೊಳಿಸಲು ಶ್ರಮಿಸುವುದೇ ಅತ್ಯುನ್ನತ ಕಲ್ಯಾಣ ಕಾರ್ಯ. ಬ್ರಹ್ಮನಿರ್ವಾಣವಾಗದೆ ಇಂತಹ ಶ್ರೇಷ್ಠ ಕಲ್ಯಾಣಕಾರ್ಯದಲ್ಲಿ ತೊಡಗುವುದು ಸಾಧ್ಯವಿಲ್ಲ. ಕೃಷ್ಣಪ್ರಜ್ಞೆ ಇರುವ ಮನುಷ್ಯನಿಗೆ ಕೃಷ್ಣನ ಪರಮಾಧಿಕಾರದ ವಿಷಯದಲ್ಲಿ ಯಾವುದೇ ಸಂದೇಹವಿರುವುದಿಲ್ಲ. ಆತನು ಎಲ್ಲ ಪಾಪಗಳಿಂದಲೂ ಬಿಡುಗಡೆ ಹೊಂದಿದವನು. ಆದುದರಿಂದ ಆತನಿಗೆ ಸಂದೇಹವೇ ಇಲ್ಲ. ಇದೇ ದೈವೀಪ್ರೇಮದ ಸ್ಥಿತಿ.
ಮಾನವ ಸಮಾಜದ ಭೌತಿಕ ಹಿತಕ್ಕಾಗಿ ಮಾತ್ರ ಶ್ರಮಿಸುತ್ತಿರುವವನು ವಾಸ್ತವವಾಗಿ ಯಾರಿಗೂ ಸಹಾಯ ಮಾಡಲಾರ. ಬಾಹ್ಯ ಶರೀರಕ್ಕೆ ಮತ್ತು ಮನಸ್ಸಿಗೆ ತಾತ್ಕಾಲಿಕ ಪರಿಹಾರವನ್ನು ಕೊಡುವುದು ತೃಪ್ತಿಕರವಲ್ಲ. ಮನುಷ್ಯ ಭಗವಂತನೊಡನೆ ತನ್ನ ಸಂಬಂಧವನ್ನು ಮರೆತಿರುವುದೇ ಬದುಕಿನ ಕಠಿಣ ಹೋರಾಟದಲ್ಲಿ ಅವನ ಕ್ಲೇಶಗಳಿಗೆ ಕಾರಣ. ಮನುಷ್ಯನಿಗೆ ಕೃಷ್ಣನೊಡನೆ ತನ್ನ ಸಂಬಂಧದ ಸಂಪೂರ್ಣಪ್ರಜ್ಞೆ ಇರುವಾಗ ಆತನು ಅಶಾಶ್ವತ ಐಹಿಕ ದೇಹದಲ್ಲಿ ಇದ್ದರೂ ವಾಸ್ತವವಾಗಿ ಮುಕ್ತಾತ್ಮನೇ.
ಶ್ಲೋಕ - 24
ಯೋನ್ತಃಸುಖೋಂತರಾರಾಮಸ್ತಥಾಂತರ್ಜ್ಯೋತಿರೇವ ಯಃ |
ಸ ಯೋಗೀ ಬ್ರಹ್ಮನಿರ್ವಾಣಂ ಬ್ರಹ್ಮಭೂತೋಧಿಗಚ್ಛತಿ ||24||
ಯಾರು ಆಂತರ್ಯದಲ್ಲಿಯೇ ಸುಖಪಡುತ್ತಾನೋ, ಯಾರು ಆಂತರ್ಯದಲ್ಲಿಯೇ ಕ್ರಿಯಾಶೀಲನಾಗಿದ್ದು ಸಂತೋಷಿಸುತ್ತಾನೋ ಮತ್ತು ಯಾರ ಗುರಿಯು ಅಂತರ್ಮುಖಿಯಾಗಿದೆಯೋ ಅಂತಹವನು ವಾಸ್ತವವಾಗಿ ಪರಿಪೂರ್ಣ ಯೋಗಿ. ಆತನು ಬ್ರಹ್ಮನ್‌ನಲ್ಲಿ ಮುಕ್ತನು ಮತ್ತು ಕಟ್ಟಕಡೆಗೆ ಪರಮ ಪ್ರಭುವನ್ನು ಹೊಂದುತ್ತಾನೆ.
ಬಹಿರಂಗದ ಕ್ರಿಯೆಗಳು ಬಾಹ್ಯ ಸುಖವನ್ನು ಪಡೆಯುವುದಕ್ಕಾಗಿಯೇ ಇವೆ. ಮನುಷ್ಯನು ಅಂತರಂಗದಲ್ಲಿ ಸುಖವನ್ನು ಸವಿಯಲು ಅಸಮರ್ಥನಾದರೆ ಬಾಹ್ಯ ಸುಖ ನೀಡುವ ಈ ಕ್ರಿಯೆಗಳನ್ನು ಹೇಗೆ ತಾನೇ ಬಿಡಬಲ್ಲನು? ಮುಕ್ತನಾದ ಮನುಷ್ಯನು ವಾಸ್ತವವಾದ ಮನುಭವದಿಂದ ಸುಖವನ್ನು ಸವಿಯುತ್ತಾನನೆ. ಆದುದದರಿಂದ ಆತನು ಯಾವ ಸ್ಥಳದಲ್ಲಿಯೇ ಆಗಲಿ ಮೌನವಾಗಿ ಕುಳಿತು ತನ್ನೊಳಗೆ ಬದುಕಿನ ಚಟುವಟಿಕೆಗಳನ್ನು ಸವಿಯಬಲ್ಲ. ಇಂತಹ ಮುಕ್ತನಾದ ಮನುಷ್ಯನು ಬಾಹ್ಯ ಐಹಿಕ ಸುಖವನ್ನು ಬಯಸುವುದಿಲ್ಲ. ಈ ಸ್ಥಿತಿಗೆ ಬ್ರಹ್ಮಭೂತ ಎಂದು ಹೆಸರು. ಇದನ್ನು ಸಾಧಿಸಿದರೆ ಭಗವದ್ಧಾಮಕ್ಕೆ ಮರುಳುವುದು ಖಂಡಿತ. (This copy first appeared in Hindustan Times Kannada website. To read more like this please logon to kannada.hindustantime.com )