Bhagavad Gita: ಮೇಲ್ಮಟ್ಟ, ಕೆಳಮಟ್ಟದ ಪ್ರಕೃತಿಗಳಿಗೆ ಅಜ್ಞಾನವೇ ಕಾರಣ; ಭಗವದ್ಗೀತೆಯ ಸಾರಾಂಶ ಹೀಗಿದೆ-spiritual news bhagavad gita updesh lord krishna reason of ignorance bhagavad gita quotes in kannada rmy ,ರಾಶಿ ಭವಿಷ್ಯ ಸುದ್ದಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Bhagavad Gita: ಮೇಲ್ಮಟ್ಟ, ಕೆಳಮಟ್ಟದ ಪ್ರಕೃತಿಗಳಿಗೆ ಅಜ್ಞಾನವೇ ಕಾರಣ; ಭಗವದ್ಗೀತೆಯ ಸಾರಾಂಶ ಹೀಗಿದೆ

Bhagavad Gita: ಮೇಲ್ಮಟ್ಟ, ಕೆಳಮಟ್ಟದ ಪ್ರಕೃತಿಗಳಿಗೆ ಅಜ್ಞಾನವೇ ಕಾರಣ; ಭಗವದ್ಗೀತೆಯ ಸಾರಾಂಶ ಹೀಗಿದೆ

Bhagavad Gita Updesh: ಮೇಲ್ಮಟ್ಟದ ಮತ್ತು ಕೆಳಮಟ್ಟದ ಪ್ರಕೃತಿಗಳಿಗೆ ಅಜ್ಞಾನವೇ ಕಾರಣ ಎಂಬುದರ ಅರ್ಥವನ್ನು ಭಗವದ್ಗೀತೆಯ 13ನೇ ಅಧ್ಯಾಯದ 5ನೇ ಶ್ಲೋಕದಲ್ಲಿ ತಿಳಿಯಿರಿ.

ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.

ಅಧ್ಯಾಯ - 13: ಪ್ರಕೃತಿ, ಪುರುಷ ಹಾಗೂ ಪ್ರಜ್ಞೆ - ಶ್ಲೋಕ 5

ಋಷಿಭಿರ್ಬಹುಧಾ ಗೀತಂ ಛನ್ದೋಭಿರ್ವಿವಿಧೈ ಪೃಥಕ್ |

ಬ್ರಹ್ಮ ಸೂತ್ರಪದೈಶ್ಚೈವ ಹೇತುಮದ್ಭಿರ್ವಿನಿಶ್ಚಿತೈಃ ||5|

ಅನುವಾದ: ಕ್ಷೇತ್ರ ಮತ್ತು ಕ್ಷೇತ್ರಜ್ಞನ ಜ್ಞಾನವನ್ನು ಅನೇಕ ಋಷಿಗಳು ಬೇರೆ ಬೇರೆ ವೈದಿಕ ಬರೆಹಗಳಲ್ಲಿ ವರ್ಣಿಸಿದ್ದಾರೆ. ವಿಶೇಷವಾಗಿ ವೇದಾಂತಸೂತ್ರದಲ್ಲಿ ಕಾರ್ಯ ಕಾರಣದ ತರ್ಕದೊಂದಿಗೆ ಅದನ್ನು ನಿರೂಪಿಸಿದೆ.

ಭಾವಾರ್ಥ: ಜ್ಞಾನವನ್ನು ವಿವರಿಸುವುದರಲ್ಲಿ ದೇವೋತ್ತಮ ಪರಮ ಪುರುಷನಾದ ಕೃಷ್ಣೇ ಅತ್ಯುನ್ನತ ಅಧಿಕಾರಿ. ಆದರೂ ವಿದ್ವಾಂಸರೂ, ಪ್ರಮಾಣಭೂತ ಆಚಾರ್ಯರೂ, ಯಾವಾಗಲೂ ಹಿಂದಿನ ಆಚಾರ್ಯರಿಂದ ಸಾಕ್ಷ್ಯವನ್ನು ಕೊಡುತ್ತಾರೆ. ಆತ್ಮ ಮತ್ತು ಪರಮಾತ್ಮಗಳ ದ್ವೈತ - ಅದ್ವೈತಗಳನ್ನು ಕುರಿತ ಅತ್ಯಂತ ವಿವಾದಾಸ್ಪದವಾದ ಈ ಅಂಶವನ್ನು, ಪ್ರಮಾಣವೆಂದು ಸ್ವೀಕೃತವಾಗಿರುವ ಶಾಸ್ತ್ರಗ್ರಂಥವಾದ ವೇದಾಂತವನ್ನು ಪ್ರಸ್ತಾಪಿಸಿ ಕೃಷ್ಣನು ವಿವರಿಸುತ್ತಾನೆ. ಮೊದಲು ಆತನು, ಇದು ಬೇರೆ ಬೇರೆ ಋಷಿಗಳ ಅಭಿಪ್ರಾಯಕ್ಕೆ ಅನುಗುಣವಾಗಿ ಎಂದು ಹೇಳುತ್ತಾನೆ (Bhagavad Gita Updesh in Kannada).

ಋಷಿಗಳ ವಿಷಯ ಹೇಳುವುದಾದರೆ, ಸ್ವತಃ ಕೃಷ್ಣನಲ್ಲದೆ, (ವೇದಾಂತಸೂತ್ರವನ್ನು ರಚಿಸಿದ) ವೇದವ್ಯಾಸರು ಒಬ್ಬ ಮಹರ್ಷಿಗಳು. ವೇದಾಂತಸೂತ್ರದಲ್ಲಿ ದ್ವೈತವನ್ನು ಪರಿಪೂರ್ಣವಾಗಿ ವಿವರಿಸಿದೆ. ವ್ಯಾಸದೇವರ ತಂದೆ ಪರಾಶರರೂ ಮಹರ್ಷಿಗಳು. ಅವರು ತಮ್ಮ ಧಾರ್ಮಿಕ ಗ್ರಂಥಗಳ ಅಹಂ ತ್ವಂ ಚ ತಥಾನ್ಯೇ ಎಂದಿದ್ದಾರೆ. ನಾವು, ನೀವು ನಾನು ಮತ್ತು ಬೇರೆ ಬೇರೆ ಜೀವಿಗಳು - ಎಲ್ಲರೂ, ಐಹಿಕ ದೇಹಗಳಲ್ಲಿದ್ದರೂ ದಿವ್ಯರು. ಈಗ ನಾವು ನಮ್ಮ ಬೇರೆ ಬೇರೆ ಕರ್ಮಗಳಿಗನುಗುಣವಾಗಿ ತ್ರಿಗುಣಗಳ ಅಧೀನದಲ್ಲಿದ್ದೇವೆ. ಇದರಿಂದ ಕೆಲವರು ಮೇಲಿನ ಮಟ್ಟಗಳಲ್ಲಿ ಇದ್ದಾರೆ.

ಕೆಲವರು ಕೆಳಮಟ್ಟದ ಪ್ರಕೃತಿಯಲ್ಲಿದ್ದಾರೆ. ಮೇಲ್ಮಟ್ಟದ ಮತ್ತು ಕೆಳಮಟ್ಟದ ಪ್ರಕೃತಿಗಳಿಗೆ ಅಜ್ಞಾನವೇ ಕಾರಣ. ಇವು ಅಸಂಕ್ಯಾತ ಜೀವಿಗಳಲ್ಲಿ ಪ್ರಕಟವಾಗುತ್ತವೆ. ಆದರೆ ಅಚ್ಯುತನಾದ ಪರಮಾತ್ಮನಿಗೆ ಪ್ರಕೃತಿಯ ಮೂರು ಗುಣಗಳ ಸೋಂಕಿಲ್ಲ. ಅವನು ದಿವ್ಯನಾದವನು. ಹೀಗೆಯೇ ಮೂಲ ದೇವಗಳಲ್ಲಿ ಮುಖ್ಯವಾಗಿ ಕಠ ಉಪನಿಷತ್ತಿನಲ್ಲಿ ಆತ್ಮ, ಪರಮಾತ್ಮ ಮತ್ತು ದೇಹಗಳ ನಡುವೆ ವ್ಯತ್ಯಾಸಗಳನ್ನು ಗುರುತಿಸಿದೆ.

ಇದನ್ನೂ ಅನೇಕ ಮಂದಿ ಮಹರ್ಷಿಗಳು ಗುರುತಿಸಿದ್ದಾರೆ. ಇವರಲ್ಲಿ ಪರಾಶರರನ್ನು ಪ್ರಮುಖರೆಂದು ಪರಿಗಣಿಸಲಾಗಿದೆ. ಛನ್ದೋಭಿಃ ಎನ್ನುವ ಶಬ್ದವು ವಿವಿಧ ವೇದಸಾಹಿತ್ಯವನ್ನು ಸೂಚಿಸುತ್ತದೆ. ಉದಾಹರಣೆಗೆ, ಯಜುರ್ವೇದದ ಒಂದು ಶಾಖೆಯಾದ ತೈತ್ತಿರೀಯ ಉಪನಿಷತ್ತು ಪ್ರಕೃತಿ, ಜೀವಿ ಮತ್ತು ದೇವೋತ್ತಮ ಪರಮ ಪುರುಷನನ್ನು ವರ್ಣಿಸುತ್ತದೆ.

ಮೊದಲೇ ಹೇಳಿದಂತೆ, ಕ್ಷೇತ್ರವು ಇದೆ ಮತ್ತು ಕ್ಷೇತ್ರಜ್ಞರಲ್ಲಿ ಎರಡು ವಿಧಗಳಿವೆ. ಜೀವಿ ಮತ್ತು ಪರಮಾತ್ಮ. ತೈತ್ತಿರೀಯ ಉಪನಿಷತ್ತಿನಲ್ಲಿ ಹೇಳಿದಂತೆ (2.2), ಬ್ರಹ್ಮ ಪುಚ್ಛಂ ಪ್ರತಿಷ್ಠಾ ಪರಮ ಪ್ರಭುವಿನ ಒಂದು ಅಭಿವ್ಯಕ್ತಿಗೆ ಅನ್ನಮಯ, ಬದುಕುವುದಕ್ಕಾಗಿ ಅನ್ನದ ಆಧಾರ, ಎಂದು ಹೆಸರು. ಇದು ಪರಮೋನ್ನತನ ಒಂದು ಐಹಿಕ ಸಾಕ್ಷಾತ್ಕಾರ. ಅಂತರ, ಪ್ರಾಣಮಯದಲ್ಲಿ, ಪರಮ ಪರಿಪೂರ್ಣ ಸತ್ಯವನ್ನು ಆಹಾರದಲ್ಲಿ ಸಾಕ್ಷಾತ್ಕರಿಸಿಕೊಂಡು, ಪರಮಸತ್ಯವನ್ನು ಜೀವ ಲಕ್ಷಣಗಳಲ್ಲಿ ಅಥವಾ ಜೀವ ರೂಪಗಳಲ್ಲಿ ಸಾಕ್ಷಾತ್ಕರಿಸಿಕೊಳ್ಳಬಹುದು.

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.