Bhagavad Gita: ಕೃಷ್ಣನಿಗೆ ಭಕ್ತಿಸೇವೆ ಸಲ್ಲಿಸಿದರೆ ಬದುಕಿನ ಎಲ್ಲ ಸಮಸ್ಯೆಗಳಿಂದ ಬಿಡುಗಡೆ ದೊರೆಯುತ್ತೆ; ಗೀತೆಯ ಅರ್ಥ ತಿಳಿಯಿರಿ
Bhagavad Gita Updesh: ಕೃಷ್ಣನಿಗೆ ಭಕ್ತಿಸೇವೆ ಸಲ್ಲಿಸಿದರೆ ಬದುಕಿನ ಎಲ್ಲ ಸಮಸ್ಯೆಗಳಿಂದ ಬಿಡುಗಡೆ ದೊರೆಯುತ್ತೆ ಎಂಬುದರ ಅರ್ಥವನ್ನು ಭಗವದ್ಗೀತೆಯ 11ನೇ ಅಧ್ಯಾಯದ 55ನೇ ಶ್ಲೋಕದ ಕೊನೆಯ ಭಾಗದಲ್ಲಿ ಓದಿ.
ಅಧ್ಯಾಯ 11 - ವಿಶ್ವರೂಪ -ಶ್ಲೋಕ - 55
ಮತ್ಕರ್ಮಕೃನ್ಮತ್ಪರಮೋ ಮದ್ಭಕ್ತಃ ಸನ್ಗವರ್ಜಿತಃ |
ನಿರ್ವೈರಃ ಸರ್ವಭೂತೇಷು ಯಃ ಸ ಮಾಮೇತಿ ಪಾಣ್ಡವ ||55||
ಅಧ್ಯಾಯ 11 - ವಿಶ್ವರೂಪ -ಶ್ಲೋಕ - 55 ಮುಂದುರಿದ ಭಾಗದಲ್ಲಿ ಕೃಷ್ಣನ ಭಕ್ತನ ಎಲ್ಲರೊಂದಿಗೂ ಸ್ನೇಹದಿಂದ ಇರುತ್ತಾನೆ. ಆದುದರಿಂದ ಆತನು ನಿರ್ವೈರಃ ಎಂದು ಇಲ್ಲಿ ಹೇಳಿದೆ. ಇದು ಹೇಗೆ? ಕೃಷ್ಣಪ್ರಜ್ಞೆಯಲ್ಲಿ ನೆಲೆಗೊಂಡ ಭಕ್ತನಿಗೆ, ಕೃಷ್ಣನಿಗೆ ಭಕ್ತಿಸೇವೆ ಸಲ್ಲಿಸುವುದರಿಂದ ಮಾತ್ರವೇ ಬದುಕಿನ ಎಲ್ಲ ಸಮಸ್ಯೆಗಳಿಂದ ಬಿಡುಗಡೆಯು ದೊರೆಯುತ್ತದೆ ಎಂಬ ಅರಿವು ಇರುತ್ತದೆ. ಅವನಿಗೆ ಇದರ ವೈಯಕ್ತಿಕ ಅನುಭವ ಉಂಟು. ಆದುದರಿಂದ ಅವನು ಈ ಪದ್ಧತಿಯನ್ನು, ಕೃಷ್ಣಪ್ರಜ್ಞೆಯನ್ನು ಮನುಷ್ಯನ ಸಮಾಜಕ್ಕೆ ತರಬೇಕೆಂದು ಬಯಸುತ್ತಾನೆ (Bhagavad Gita Updesh in Kannada).
ಭಗವಂತನ ಪ್ರಜ್ಞೆಯನ್ನು ಹರಡಲು ಭಗವಂತನ ಭಕ್ತರು ತಮ್ಮ ಪ್ರಾಣವನ್ನೇ ಅಪಾಯಕ್ಕೊಡ್ಡಿದ ಹಲವು ನಿದರ್ಶನಗಳು ಚರಿತ್ರೆಯಲ್ಲಿವೆ. ಯೇಸು ಕ್ರಿಸ್ತನು ಬಹು ಜನರಿಗೆ ಇಷ್ಟವಾಗುವ ನಿದರ್ಶನವಾಗಿದ್ದಾನೆ. ಭಕ್ತರಲ್ಲದವರು ಅವನನ್ನು ಶಿಲುಬೆಗೆ ಏರಿಸಿದರು. ಆದರೆ ಭಗವತ್ಪ್ರಜ್ಞೆಯನ್ನು ಹರಡಲು ಆತನು ತನ್ನನ್ನೆ ಬಲಿಕೊಟ್ಟುಕೊಂಡನು. ನಿಜ, ಅವನನ್ನು ಕೊಂದರು ಎಂದು ಅರ್ಥಮಾಡಿಕೊಂಡರೆ ಅಲ್ಪ ತಿಳಿವಳಿಕೆಯಾಗುತ್ತದೆ. ಹೀಗೆಯೆ ಭಾರತದಲ್ಲಿಯೂ ಠಾಕೂರ ಹರಿದಾಸರರು ಮತ್ತು ಪ್ರಹ್ಲಾದ ಮಹಾರಾಜರಂತಹವರ ನಿರ್ದೇಶನಗಳಿವೆ. ಹೀಗೆ ಅಪಾಯವನ್ನು ಎದುರಿಸಬೇಕೇಕೆ? ಏಕೆಂದರೆ, ಅವರು ಕೃಷ್ಣಪ್ರಜ್ಞೆಯನ್ನು ಹರಡಲು ಬಯಸಿದರು, ಅದು ಕಷ್ಟದ ಕೆಲಸ.
ಯಾರೇ ಆದರೂ ಕಷ್ಟದಲ್ಲಿದ್ದರೆ ಅದಕ್ಕೆ ಕಾರಣ ಆತನು ಕೃಷ್ಣನೊಡನೆ ತನ್ನ ಶಾಶ್ವತ ಸಂಬಂಧವನ್ನು ಮರೆತಿರುವುದೇ ಎಂದು ಕೃಷ್ಣಪ್ರಜ್ಞೆ ಇರುವ ಮನುಷ್ಯನಿಗೆ ಗೊತ್ತು. ಆದುದರಿಂದ ಮಾನವ ಸಮಾಜಕ್ಕೆ ತಂದುಕೊಡಬಹುದಾದ ಅತ್ಯುನ್ನತ ಲಾಭ ಎಂದರೆ ತನ್ನ ನೆರೆಯವನಿಗೆ ಎಲ್ಲ ಪ್ರಾಪಂಚಿಕ ಸಮಸ್ಯೆಗಳ ಹೊರೆಯನ್ನು ತಪ್ಪಿಸುವುದು. ಈ ರೀತಿಯಲ್ಲಿ ಪರಿಶುದ್ಧ ಭಕ್ತನು ಪರಮ ಪ್ರಭುವಿನ ಸೇವೆಯಲ್ಲಿ ನಿರತನಾಗಿರುತ್ತಾನೆ. ಕೃಷ್ಣನಿಗಾಗಿ ಎಲ್ಲವನ್ನೂ ಅಪಾಯಕ್ಕೆ ಒಡ್ಡಿ ಅವನ ಸೇವೆಯಲ್ಲಿ ತೊಡಗಿರುವವರ ವಿಷಯದಲ್ಲಿ ಕೃಷ್ಣನು ಎಷ್ಟು ಕರುಣಾಯನಾಗಿರುತ್ತಾನೆ ಎನ್ನುವುದನ್ನು ಊಹಿಸಿಕೊಳ್ಳಬಹುದು. ಇಂತಹವರು ದೇಹವನ್ನು ಬಿಟ್ಟನಂತರ ಪರಮ ಲೋಕವನ್ನು ಸೇರುತ್ತಾರೆ ಎನ್ನುವುದು ನಿಶ್ಚಯ.
ಒಟ್ಟಿನಲ್ಲಿ, ಸ್ವಲ್ಪ ಕಾಲದ ಅಭಿವ್ಯಕ್ತಿಯಾದ ವಿಶ್ವರೂಪ, ಎಲ್ಲವನ್ನೂ ನುಂಗುವ ಕಾಲದ ರೂಪ, ನಾಲ್ಕು ಕೈಗಳ ವಿಷ್ಣುವಿನ ರೂಪ - ಎಲ್ಲವನ್ನೂ ಕೃಷ್ಣನು ತೋರಿದ್ದಾನೆ. ಹೀಗೆ ಕೃಷ್ಣನು ಈ ಎಲ್ಲ ಅಭಿವ್ಯಕ್ತಿಗಳ ಮೂಲ. ಕೃಷ್ಣನು ಮೂಲ ವಿಶ್ವರೂಪದ ಅಥವಾ ವಿಷ್ಣುರೂಪದ ಅಭಿವ್ಯಕ್ತಿ ಎಂದು ಅರ್ಥವಲ್ಲ. ಕೃಷ್ಣನೇ ಎಲ್ಲ ರೂಪಗಳ ಮೂಲನು. ನೂರಾರು ಸಾವಿರಾರು ವಿಷ್ಣುಗಳಿದ್ದಾರೆ. ಆದರೆ ಕೃಷ್ಣಭಕ್ತನಿಗೆ ಮೂಲ ರೂಪವಾದ ಎರಡು ಕೈಗಳ ಶ್ಯಾಮಸುಂದರ ರೂಪವನ್ನು ಬಿಟ್ಟು ಬೇರೆ ಯಾವುದೂ ಮುಖ್ಯವಲ್ಲ. ಬ್ರಹ್ಮಸಂಹಿತೆಯಲ್ಲಿ ಪ್ರೀತಿ ಭಕ್ತಿಗಳಿಂದ, ಶ್ಯಾಮಸುಂದರ ರೂಪವನ್ನು ಮೆಚ್ಚಿದವರು ತಮ್ಮ ಹೃದಯದಲ್ಲಿ ಆತನನ್ನು ಸದಾ ಕಾಣುತ್ತಾರೆ, ಅವರಿಗೆ ಬೇರೇನೂ ಕಾಣುವುದಿಲ್ಲ ಎಂದು ಹೇಳಿದೆ. ಹನ್ನೊಂದನೆಯ ಅಧ್ಯಾಯದ ಭಾವಾರ್ಥವೆಂದರೆ ಕೃಷ್ಣರೂಪವು ಅಗತ್ಯ ಮತ್ತು ಪರಮವಾದದ್ದು ಎನ್ನುವುದನ್ನು ತಿಳಿದುಕೊಳ್ಳಬೇಕು.
(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)