ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Bhagavad Gita: ಭಗವಂತನಿಗೆ ಶರಣಾದವನು ಜೀವನದ ಸಂಕಷ್ಟಗಳಿಂದ ಬಿಡುಗಡೆ ಹೊಂದುತ್ತಾನೆ; ಗೀತೆಯ ಸಾರಾಂಶ ತಿಳಿಯಿರಿ

Bhagavad Gita: ಭಗವಂತನಿಗೆ ಶರಣಾದವನು ಜೀವನದ ಸಂಕಷ್ಟಗಳಿಂದ ಬಿಡುಗಡೆ ಹೊಂದುತ್ತಾನೆ; ಗೀತೆಯ ಸಾರಾಂಶ ತಿಳಿಯಿರಿ

Bhagavad Gita Updesh: ಭಗವಂತನಿಗೆ ಶರಣಾದವನು ಜೀವನದ ಸಂಕಷ್ಟಗಳಿಂದ ಬಿಡುಗಡೆ ಹೊಂದುತ್ತಾನೆ ಎಂಬುದರ ಅರ್ಥವನ್ನು ಭಗವದ್ಗೀತೆಯ 9ನೇ ಅಧ್ಯಾಯದ 13ನೇ ಶ್ಲೋಕದಲ್ಲಿ ಈ ರೀತಿಯಲ್ಲಿ ವಿವರಿಸಲಾಗಿದೆ.

ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.

9ನೇ ಅಧ್ಯಾಯ ರಹಸ್ಯತಮ ಜ್ಞಾನ - ಶ್ಲೋಕ - 13

ಮಹಾತ್ಮಾನಸ್ತು ಮಾಂ ಪಾರ್ಥ ದೈವೀಂ ಪ್ರಕೃತಿಮಾಶ್ರಿತಾಃ |

ಭಜನ್ತ್ಯನನ್ಯಮನಸೋ ಜ್ಞಾತ್ವಾ ಭೂತಾದಿಮವ್ಯಯಮ್ ||13||

ಅನುವಾದ: ಪ್ರಾರ್ಥನೇ, ಭ್ರಾಂತಿಗೆ ಸಿಲುಕದ ಮಹಾತ್ಮರು ದೈವೀ ಪ್ರಕೃತಿಯ ರಕ್ಷಣೆಯಲ್ಲಿ ಇರುತ್ತಾರೆ. ಅವರಿಗೆ ನಾನು ಮೂಲನೂ ಅವ್ಯಯನೂ ಆದ ದೇವೋತ್ತಮ ಪರಮ ಪುರುಷನು ಎಂದು ಗೊತ್ತು. ಆದುದರಿಂದ ಅವರು ಭಕ್ತಿಸೇವೆಯಲ್ಲಿ ಸಂಪೂರ್ಣವಾಗಿ ನಿರತರಾಗಿರುತ್ತಾರೆ.

ಭಾವಾರ್ಥ: ಈ ಶ್ಲೋಕದಲ್ಲಿ ಮಹಾತ್ಮನನ್ನು ಸ್ಪಷ್ಟವಾಗಿ ವರ್ಣಿಸಿದೆ. ಮಹಾತ್ಮನ ಮೊದಲನೆಯ ಲಕ್ಷಣವೆಂದರೆ ಆತನು ಆಗಲೇ ದೈವೀ ಪ್ರಕೃತಿಯಲ್ಲಿ ನೆಲೆಸಿದ್ದಾನೆ. ಆತನು ಐಹಿಕ ಪ್ರಕೃತಿಯ ನಿಯಂತ್ರಣದಲ್ಲಿ ಇಲ್ಲ. ಇದನ್ನು ಸಾಧಿಸುವುದು ಹೇಗೆ? ಇದನ್ನು ಏಳನೆಯ ಅಧ್ಯಾಯದಲ್ಲಿ ವಿವರಿಸಿದೆ. ದೇವೋತ್ತಮ ಪರಮ ಪುರುಷನಾದ ಶ್ರೀಕೃಷ್ಣನಿಗೆ ಶರಣಾಗತವಾದವನು ಕೂಡಲೇ ಐಹಿಕ ಪ್ರಕೃತಿಯ ನಿಯಂತ್ರಣದಿಂದ ಬಿಡುಗಡೆ ಹೊಂದುತ್ತಾನೆ. ಅದೇ ಅರ್ಹತೆ. ಮನುಷ್ಯನು ತನ್ನ ಆತ್ಮವನ್ನು ದೇವೋತ್ತಮ ಪರಮ ಪುರುಷನಿಗೆ ಒಪ್ಪಿಸುತ್ತಲೇ ಆತನುಐಹಿಕ ಪ್ರಕೃತಿಯ ನಿಯಂತ್ರಣದಿಂದ ಬಿಡುಗಡೆಯಾಗುತ್ತಾನೆ. ಇದು ಪ್ರಾಥಮಿಕ ಸೂತ್ರ.

ಜೀವಿಯು ತಟಸ್ಥ ಶಕ್ತಿಯಾದದ್ದರಿಂದ ಐಹಿಕ ಪ್ರಕೃತಿಯ ನಿಯಂತ್ರಣದಿಂದ ಬಿಡುಗಡೆ ಹೊಂದುತ್ತಲೇ ಅವನನ್ನು ಅಧ್ಯಾತ್ಮಿಕ ಪ್ರಕೃತಿಯ ಮಾರ್ಗದರ್ಶನಕ್ಕೆ ಒಳಪಡಿಸಲಾಗುತ್ತದೆ. ಅಧ್ಯಾತ್ಮಿಕ ಪ್ರಕೃತಿಯ ಮಾರ್ಗದರ್ಶನಕ್ಕೆ ದೈವೀಪ್ರಕೃತಿ ಎಂದು ಹೆಸರು. ಆದುದರಿಂದ ದೇವೋತ್ತಮ ಪರಮ ಪುರುಷನಿಗೆ ಶರಣಾಗುವುದರ ಮೂಲಕ ಮೇಲಕ್ಕೆ ಹೋದಾಗ ಮನುಷ್ಯನು ಮಹಾತ್ಮ ಹಂತವನ್ನು ಸಾಧಿಸುತ್ತಾನೆ.

ಮಹಾತ್ಮನಾದವನು ಕೃಷ್ಣನಾಚೆ ಯಾವುದಕ್ಕೂ ಗಮನ ಕೊಡುವುದಿಲ್ಲ. ಏಕೆಂದರೆ ಕೃಷ್ಣನು ಮೂಲ ಆದಿಪುರುಷ, ಎಲ್ಲ ಕಾರಣಗಳ ಕಾರಣ ಎಂದು ಅವನಿಗೆ ಬಹಳ ಚೆನ್ನಾಗಿ ಗೊತ್ತು. ಈ ವಿಷಯದಲ್ಲಿ ಸಂದೇಹವೇ ಇಲ್ಲ. ಇಂತಹ ಮಹಾತ್ಮನು ಇತರ ಪರಿಶುದ್ಧ ಭಕ್ತರಾದ ಮಹಾತ್ಮರ ಸಹವಾಸದಿಂದ ಬೆಳೆಯುತ್ತಾನೆ.

ಪರಿಶುದ್ಧ ಭಕ್ತರಿಗೆ ಚತುರ್ಭಜನಾದ ಮಹಾವಿಷ್ಣುವಿನಂತಹ ಕೃಷ್ಣನ ಇತರ ಸ್ವರೂಪಗಳ ಆಕರ್ಷಣೆಯೇ ಇಲ್ಲ. ಅವರಿಗೆ ಎರಡು ತೋಳುಗಳ ಕೃಷ್ಣನ ರೂಪವೇ ಆಕರ್ಷಕ. ಅವರಿಗೆ ಕೃಷ್ಣನ ಇತರ ರೂಪ ಲಕ್ಷಣಗಳ ಬಗ್ಗೆ ಆಕರ್ಷಣೆಯಿಲ್ಲ. ಯಾವುದೇ ದೇವತೆಯ ಅಥವಾ ಮನುಷ್ಯನ ಯಾವ ರೂಪದಲ್ಲಿಯೂ ಅವರಿಗೆ ಆಸಕ್ತಿಯಿಲ್ಲ. ಕೃಷ್ಣಪ್ರಜ್ಞೆಯಲ್ಲಿ ಅವರು ಕೃಷ್ಣನನ್ನು ಕುರಿತು ಮಾತ್ರ ಧ್ಯಾನ ಮಾಡುತ್ತಾರೆ. ಅವರು ಸದಾ ಕೃಷ್ಣಪ್ರಜ್ಞೆಯಲ್ಲಿ ಪ್ರಭುವಿನ ವಿಚಲಿತ ಸೇವೆಯಲ್ಲಿ ನಿರತರಾಗಿರುತ್ತಾರೆ.