ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Bhagavad Gita: ಮನುಷ್ಯರಲ್ಲಿನ ನಾಯಕ ಭಗವಂತನ ಪ್ರತಿನಿಧಿಯಾಗಿರುತ್ತಾನೆ; ಗೀತೆಯ ಸಾರಾಂಶ ಹೀಗಿದೆ

Bhagavad Gita: ಮನುಷ್ಯರಲ್ಲಿನ ನಾಯಕ ಭಗವಂತನ ಪ್ರತಿನಿಧಿಯಾಗಿರುತ್ತಾನೆ; ಗೀತೆಯ ಸಾರಾಂಶ ಹೀಗಿದೆ

Bhagavad Gita Updesh: ಮನುಷ್ಯರಲ್ಲಿನ ನಾಯಕ ಭಗವಂತನ ಪ್ರತಿನಿಧಿಯಾಗಿರುತ್ತಾನೆ ಎಂಬುದರ ಅರ್ಥವನ್ನು ಭಗವದ್ಗೀತೆಯ 10ನೇ ಅಧ್ಯಾಯದ 26 ಮತ್ತು 27ನೇ ಶ್ಲೋಕದಲ್ಲಿ ತಿಳಿಯಿರಿ.

ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.

ಅಧ್ಯಾಯ 10 - ವಿಭೂತಿ ಯೋಗ - ಶ್ಲೋಕ - 26

ಅಶ್ವತ್ಥಃ ಸರ್ವವೃಕ್ಷಾಣಾಂ ದೇವರ್ಷೀಣಾಂ ಚ ನಾರದಃ |

ಗಂಧರ್ವಾಣಾಂ ಚಿತ್ರರಥಃ ಸಿದ್ಧಾನಾಂ ಕಪಿಲೋ ಮುನಿಃ ||26||

ಅನುವಾದ: ವೃಕ್ಷಗಳಲ್ಲಿ ನಾನು ಅಶ್ವತ್ಥ, ದೇವ ಋಷಿಗಳಲ್ಲಿ ನಾರದ, ಗಂಧರ್ವರಲ್ಲಿ ನಾನು ಚಿತ್ರರಥ, ಸಿದ್ಧಿ ಪಡೆದವರಲ್ಲಿ ನಾನು ಕಪಿಲಮುನಿ.

ಭಾವಾರ್ಥ: ಅತ್ಯಂತ ಎತ್ತರವಾದ ಮತ್ತು ಸಂದರವಾದ ಮರಗಳಲ್ಲಿ ಅಶ್ವತ್ಥ ವೃಕ್ಷವೂ ಒಂದು. ಭಾರತದಲ್ಲಿ ಜನರು ತಮ್ಮ ಪ್ರತಿದಿನದ ಬೆಳಗಿನ ಧಾರ್ಮಿಕ ವಿಧಿಗಳಲ್ಲಿ ಒಂದೆನ್ನುವಂತೆ ಈ ವೃಕ್ಷವನ್ನು ಪೂಜಿಸುತ್ತಾರೆ. ದೇವತೆಗಳಲ್ಲಿ ಅವರು ನಾರದನನ್ನು ಪೂಜಿಸುತ್ತಾರೆ. ನಾರದನು ವಿಶ್ವದಲ್ಲಿ ಅತ್ಯಂತ ಶ್ರೇಷ್ಠ ಭಕ್ತ ಎಂದು ಭಾವಿಸಲಾಗಿದೆ. ಅವನು ಭಕ್ತನಾಗಿ ಶ್ರೀಕೃಷ್ಣನ ಪ್ರತಿನಿಧಿಯೂ ಹೌದು (Bhagavad Gita Updesh in Kannada).

ಗಂಧರ್ವ ಲೋಕದಲ್ಲಿ ಬಹು ಮಧುರವಾಗಿ ಹಾಡುವವರಿದ್ದಾರೆ. ಅವರಲ್ಲಿ ಅತ್ಯಂತ ಮಧುರ ಗಾಯಕ ಚಿತ್ರರಥ. ಪರಿಪೂರ್ಣ ಜೀವಿಗಳಲ್ಲಿ ದೇವಹೂತಿಯ ಮಗ ಕಪಿಲನು ಕೃಷ್ಣನ ಪ್ರತಿನಿಧಿ. ಅವನನ್ನು ಕೃಷ್ಣನ ಅವತಾರ ಎಂದು ಭಾವಿಸುತ್ತಾರೆ. ಅವನ ತತ್ವಜ್ಞಾನವನ್ನು ಶ್ರೀಮದ್ಭಾಗವತದಲ್ಲಿ ಪ್ರಸ್ತಾಪಿಸಿದೆ. ಮುಂದೆ ಮತ್ತೊಬ್ಬ ಕಪಿಲನು ಖ್ಯಾತಿ ಪಡೆದನು. ಆದರೆ ಆತನು ನಾಸ್ಕಿತನು. ಆದುದರಿಂದ ಇವರ ನಡುವೆ ವಿಶಾಲವಾದ ವ್ಯತ್ಯಾಸವಿದೆ.

ಅಧ್ಯಾಯ 10 - ವಿಭೂತಿ ಯೋಗ -ಶ್ಲೋಕ - 27

ಉಚ್ಚೈಃಶ್ರವಸಮಶ್ವಾನಾಂ ವಿದ್ಧಿ ಮಾಮಮೃತೋದ್ಭವಮ್ |

ಐರಾವತಂ ಗಜೇನ್ದ್ರಾಣಾಂ ನರಾಣಾಂ ಚ ನರಾಧಿಪಮ್ ||27||

ಅನುವಾದ: ಅಶ್ವಗಳಲ್ಲಿ ನಾನು, ಅಮೃತಕ್ಕಾಗಿ ಸಮುದ್ರವನ್ನು ಕಡೆದಾಗ ಉದ್ಭವವಾದ ಉಚ್ಚೈಶ್ರವಸ್ಸು ಎಂದು ತಿಳಿ. ಗಜೇಂದ್ರರಲ್ಲಿ ನಾನು ಐರಾವತ, ಮನುಷ್ಯರಲ್ಲಿ ನಾನು ರಾಜ.

ಭಾವಾರ್ಥ: ಭಕ್ತರಾದ ದೇವತೆಗಳೂ ಅಸುರರೂ ಒಮ್ಮೆ ಸಮುದ್ರವನ್ನು ಕಡೆದರು. ಈ ಮಂಥನದಿಂದ ಅಮೃತ ಮತ್ತು ವಿಷ ಎರಡೂ ಹೊರಬಂದವು. ಶಿವನು ವಿಷವನ್ನು ಕುಡಿದನು. ಅಮೃತಮಥನದಿಂದ ಅನೇಕ ವಸ್ತುಗಳು ಹುಟ್ಟಿದವು. ಅವುಗಳಲ್ಲಿ ಉಚ್ಟೈಶ್ರವಸ್ಸು ಎಂಬ ಹೆಸರಿನ ಕುದುರೆಯೂ ಒಂದು. ಅಮೃತಮಥನದಿಂದ ಮೂಡಿ ಬಂದ ಮತ್ತೊಂದು ಪ್ರಾಣಿ ಐರಾವತ ಎನ್ನುವ ಆನೆ. ಈ ಎರಡು ಪ್ರಾಣಿಗಳೂ ಮತಮಥನದಿಂದ ಬಂದುದರಿಂದ ಅವಕ್ಕೆ ವಿಶೇಷ ಮಹತ್ವ. ಅವು ಕೃಷ್ಣನ ಪ್ರತಿನಿಧಿಗಳು.

ಮನುಷ್ಯರಲ್ಲಿ ರಾಜನು ಕೃಷ್ಣನ ಪ್ರತಿನಿಧಿ. ಏಕೆಂದರೆ ಕೃಷ್ಣನು ವಿಶ್ವವನ್ನು ಪಾಲಿಸುತ್ತಾನೆ. ತಮ್ಮ ದೈವಭಕ್ತಿ ಮತ್ತು ಧಾರ್ಮಿಕ ಗುಣಗಳಿಗಾಗಿ ನೇಮಿತರಾದ ರಾಜರು ತಮ್ಮ ರಾಜ್ಯಗಳ ಪಾಲಕರು. ಮಹಾರಾಜ ಯುಧಿಷ್ಠರ, ಮಹಾರಾಜ ಪರೀಕ್ಷಿತ್ ಮತ್ತು ಶ್ರೀರಾಮನಂತಹ ರಾಜರು ಬಹುಧರ್ಮಿಷ್ಠ ಅರಸರಾಗಿದ್ದರು ಮತ್ತು ಸದಾ ಪ್ರಜೆಗಳ ಯೋಗಕ್ಷೇಮವನ್ನು ಕುರಿತು ಚಿಂತಿಸುತ್ತಿದ್ದರರು. ವೇದ ಸಾಹಿತ್ಯದಲ್ಲಿ ರಾಜನನ್ನು ದೇವರ ಪ್ರತಿನಿಧಿ ಎಂದು ಪರಿಗಣಿಸಿದೆ. ಆದೆ ಈ ಯುಗದಲ್ಲಿ, ಧಾರ್ಮಿಕ ತತ್ವಗಳು ಭ್ರಷ್ಟವಾಗಿ, ರಾಜತ್ವವು ಕ್ಷೀಣಗತಿಗೆ ಬಂದಿತು. ಈಗ ಕೊನೆಗೊಂಡಿದೆ. ಆದರೆ ಹಿಂದಿನ ಕಾಲದಲ್ಲಿ ಧರ್ಮಿಷ್ಠ ರಾಜರ ಆಳ್ವಿಕೆಯಲ್ಲಿ ಜನರು ಇನ್ನೂ ಸುಖವಾಗಿದ್ದರು ಎಂದು ತಿಳಿದುಕೊಳ್ಳಬೇಕು.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)