ಕನ್ನಡ ಸುದ್ದಿ  /  Astrology  /  Spiritual News Bhagavad Gita Updesh Lord Krishna Resides In Every Living Being Bhagavad Gita Quotes In Kannada Rmy

Bhagavad Gita: ಪರಮಾತ್ಮ ಪ್ರತಿಯೊಂದು ಜೀವಿಯಲ್ಲೂ ನೆಲೆಸಿರುತ್ತಾನೆ; ಗೀತೆಯ ಸಾರಾಂಶ ತಿಳಿಯಿರಿ

Bhagavad Gita Updesh: ಪ್ರತಿಯೊಂದು ಜೀವಿಯೂ ಒಂದಲ್ಲ ಒಂದು ರೀತಿಯಲ್ಲಿ ಭಗವಂತನಲ್ಲಿ ನೆಲೆಸಿರುತ್ತದೆ. ಪರಮಾತ್ನನೂ ಕೂಡ ಅಷ್ಟೇ ಎಂಬುದರ ಅರ್ಥವನ್ನು ಭಗವದ್ಗೀತೆಯಲ್ಲಿ ತಿಳಿಯಿರಿ.

ಪರಮಾತ್ಮ ಪ್ರತಿಯೊಂದು ಜೀವಿಯಲ್ಲೂ ನೆಲೆಸಿರುತ್ತಾನೆ ಎಂಬುದರ ಅರ್ಥವನ್ನು ಭಗವದ್ಗೀತೆಯಲ್ಲಿ ತಿಳಿಯಿರಿ
ಪರಮಾತ್ಮ ಪ್ರತಿಯೊಂದು ಜೀವಿಯಲ್ಲೂ ನೆಲೆಸಿರುತ್ತಾನೆ ಎಂಬುದರ ಅರ್ಥವನ್ನು ಭಗವದ್ಗೀತೆಯಲ್ಲಿ ತಿಳಿಯಿರಿ

ಅಧ್ಯಾಯ 6- ಧ್ಯಾನ ಯೋಗ:

ಯುಞ್ಜನ್ನೇವಂ ಸದಾತ್ಮಾನಂ ಯೋಗೀ ವಿಗತಕಲ್ಮಷಃ |

ಸುಖೇನ ಬ್ರಹ್ಮಸಂಸ್ಪರ್ಶಮತ್ಯನ್ತಂ ಸುಖಮಶ್ನುತೇ ||28||

ಅನುವಾದ: Bhagavad Gita Updesh in Kannada: ಸದಾ ಯೋಗಾಭ್ಯಾಸದಲ್ಲಿ ನಿರತನಾದ ಆತ್ಮಸಂಯಮಿಯಾದ ಯೋಗಿಯು ಎಲ್ಲ ಐಹಿಕ ಕಲ್ಮಷದಿಂದ ಮುಕ್ತನಾಗಿ ಭಗವಂತನ ಅಲೌಕಿಕ ಪ್ರೇಮಸೇವೆಯಲ್ಲಿ ಪರಿಪೂರ್ಣ ಸುಖದ ಅತ್ಯುನ್ನತ ಹಂತವನ್ನು ತಲಪುತ್ತಾನೆ.

ಭಾವಾರ್ಥ: ಆತ್ಮಸಾಕ್ಷಾತ್ಕಾರ ಎಂದರೆ ಪರಮ ಪ್ರಭವಿನೊಂದಿಗೆ ಮನುಷ್ಯನಿಗೆ ಇರುವ ಸಂಬಂಧದ ಸಹಜ ಸ್ವರೂಪವನ್ನು ತಿಳಿದುಕೊಳ್ಳುವುದು. ವೈಯಕ್ತಿಕ ಆತ್ಮವು ಪರಮ ಪ್ರಭುವಿನ ವಿಭಿನ್ನಾಂಶ. ಅದರ ಸ್ಥಾನವೆಂದರೆ ಭಗವಂತನಿಗೆ ಅಲೌಕಿಕ ಸೇವೆಯನ್ನು ಮಾಡುವುದು. ಪರಮ ಪ್ರಭವಿನೊಂದಿಗೆ ಈ ದಿವ್ಯಸಂಪರ್ಕಕ್ಕೆ ಬ್ರಹ್ಮಸಂಸ್ಪರ್ಶ ಎಂದ ಹೆಸರು.

ಸರ್ವಭೂತಸ್ಥಮಾತ್ಮಾನಂ ಸರ್ವಭೂತಾನಿ ಚಾತ್ಮನಿ |

ಈಕ್ಷತೇ ಯೋಗಯುಕ್ತಾತ್ಮಾ ಸರ್ವತ್ರ ಸಮದರ್ಶನಃ ||29||

ಅನುವಾದ: ನಿಜವಾದ ಯೋಗಿಯು ಎಲ್ಲ ಜೀವಿಗಳಲ್ಲಿಯೂ ನನ್ನನ್ನು ಕಾಣುತ್ತಾನೆ ಮತ್ತು ನನ್ನಲ್ಲಿ ಎಲ್ಲ ಜೀವಿಗಳನ್ನೂ ಕಾಣುತ್ತಾನೆ. ವಾಸ್ತವವಾಗಿ, ಆತ್ಮಸಾಕ್ಷಾತ್ಕಾರವನ್ನು ಪಡೆದ ಮನುಷ್ಯನು ಪರಮ ಪ್ರಭುವಾದ ನನ್ನನ್ನೇ ಎಲ್ಲೆಲ್ಲಿಯೂ ಕಾಣುತ್ತಾನೆ.

ಭಾವಾರ್ಥ: ಕೃಷ್ಣಪ್ರಜ್ಞೆ ಇರುವ ಯೋಗಿಯು ಪರಿಪೂರ್ಣ ದ್ರಷ್ಟಾರನು. ಏಕೆಂದರೆ ಅವನು ಪರಮ ಪ್ರಭುವಾದ ಕೃಷ್ಣನು ಪರಮಾತ್ಮನಾಗಿ ಎಲ್ಲರ ಹೃದಯಗಳಲ್ಲಿ ನೆಲೆಸಿರುವುದನ್ನು ಕಾಣುತ್ತಾನೆ. ಈಶ್ವರಃ ಸರ್ವಭೂತಾನಾಂ ಹೃದ್ಧೇಶೇರ್ಜನ ತಿಷ್ಠತಿ. ಪರಮಾತ್ಮ ಸ್ವರೂಪನಾದ ಭಗವಂತನು ಒಂದು ನಾಯಿಯ ಹೃದಯದಲ್ಲಿಯೂ ಒಬ್ಬ ಬ್ರಾಹ್ಮಣನ ಹೃದಯದಲ್ಲಿಯೂ ನೆಲೆಸಿರುತ್ತಾನೆ. ಪರಿಪೂರ್ಣಯೋಗಿಗೆ ಭಗವಂತನು ನಿರಂತರನಾಗಿ ಅಲೌಕಿಕನಾದವನು ಮತ್ತು ನಾಯಿಯಲ್ಲಾಗಲೀ ಬ್ರಾಹ್ಮಣನಲ್ಲಾಗಲೀ ಇರುವುದರಿಂದ ಅವನಿಗೆ ಯಾವವ ಪರಿಣಾಮವೂ ಇಲ್ಲ ಎನ್ನುವುದು ತಿಳಿದಿರುತ್ತದೆ. ಇದು ಭಗವಂತನ ಪರಮ ತಾಟಸ್ಥ್ಯ. ವ್ಯಕ್ತಿಗತ ಆತ್ಮವು ವ್ಯಕ್ತಿಯ ಹೃದಯದಲ್ಲಿ ನೆಲೆಸಿರುತ್ತದೆ. ಆದರೆ ಅದು ಎಲ್ಲ ಹೃದಯಗಳಲ್ಲಿ ಇರುವುದಿಲ್ಲ. ವೈಯಕ್ತಿಕ ಆತ್ಮಕ್ಕೂ ಪರಮಾತ್ಮನಿಗೂ ಇದೇ ವ್ಯತ್ಯಾಸ. ವಾಸ್ತವವಾಗಿ, ಯೋಗಾಭ್ಯಾಸದಲ್ಲಿ ಇಲ್ಲದವನು ಇದನ್ನು ಅಷ್ಟು ಸ್ಪಷ್ಟವಾಗಿ ಕಾಣಲಾರ.

ಕೃಷ್ಣಪ್ರಜ್ಞೆ ಇರುವ ಮನುಷ್ಯನು ಆಸ್ತಿಕನ ಹೃದಯದಲ್ಲಿಯೂ ನಾಸ್ಕಿಕನ ಹೃದಯದಲ್ಲಿಯೂ ಕೃಷ್ಣನನ್ನು ಕಾಣಬಲ್ಲ. ಸ್ಮೃತಿಯಲ್ಲಿ ಇದನ್ನು ಹೀಗೆ ದೃಢಪಡಿಸಿದೆ - ಆತತ್ವಾಚ್ಚತ್ವಾಚ್ಚ ಆತ್ಮಾ ಹಿ ಪರಮೋ ಹರಿಃ ಭಗವಂತನು ಎಲ್ಲ ಜೀವಿಗಳ ಆಕರನಾದ್ದರಿಂದ ಅವನು ತಾಯಿಯಂತೆ ಮತ್ತು ಪಾಲಕನಂತೆ. ತಾಯಿಯು ಬೇರೆಬೇರೆ ಬಗೆಯ ಮಕ್ಕಳಿಗೆ ಹೇಗೆ ತಟಸ್ಥಳೋ ಹಾಗೆ ಪರಮ ಪಿತನು (ಅಥವಾ ಮಾತೆಯು) ತಟಸ್ಥ. ಇದರ ಪರಿಣಾಮವಾಗಿ ಪರಮಾತ್ಮನು ಸದಾ ಪ್ರತಿಯೊಂದು ಜೀವಿಯಲ್ಲಿಯೂ ಇದ್ದಾನೆ.

ಪ್ರತಿಯೊಂದು ಜೀವಿಯೂ ಸದಾ ಭಗವಂತನ ಶಕ್ತಿಯಲ್ಲೇ ಇದೆ

ಅಲ್ಲದೆ ಬಾಹ್ಯದಲ್ಲಿಯೂ ಪ್ರತಿಯೊಂದು ಜೀವಿಯೂ ಭಗವಂತನ ಶಕ್ತಿಯಲ್ಲಿ ನೆಲೆಗೊಂಡಿದೆ. ಏಳನೆಯ ಅಧ್ಯಾಯದಲ್ಲಿ ವಿವರಿಸಿರುವಂತೆ ಭಗವಂತನಿಗೆ ಮುಖ್ಯವಾಗಿ ಎರಡು ಶಕ್ತಿಗಳಿವೆ - ಆಧ್ಯಾತ್ಮಿಕವಾದ (ಅಥವಾ ಶ್ರೇಷ್ಠವಾದ) ಮತ್ತು ಐಹಿಕವಾದ (ಅಥವಾ ಕೆಳಮಟ್ಟದ) ಶಕ್ತಿಗಳು. ಜೀವಿಯು ಶ್ರೇಷ್ಠಶಕ್ತಿಯ ಭಾಗವಾದರೂ ಕೆಳಮಟ್ಟದ ಶಕ್ತಿಯಿಂದ ಬದ್ಧವಾಗಿದ್ದಾನೆ. ಜೀವಿಯು ಸದಾ ಭಗವಂತನ ಶಕ್ತಿಯಲ್ಲಿದ್ದಾನೆ. ಪ್ರತಿಯೊಂದು ಜೀವಿಯೂ ಒಂದಲ್ಲ ಒಂದು ರೀತಿಯಲ್ಲಿ ಭಗವಂತನಲ್ಲಿ ನೆಲೆಸಿದ್ದಾನೆ.

ಯೋಗಿಯು ಎಲ್ಲರನ್ನೂ ಒಂದೇ ಸಮನೆ ಕಾಣುತ್ತಾನೆ. ಏಕೆಂದರೆ ಎಲ್ಲ ಜೀವಿಗಳೂ ಕರ್ಮಫಲಕ್ಕನುಗುಣವಾಗಿ ಬೇರೆಬೇರೆ ಸನ್ನಿವೇಶಗಳಲ್ಲಿದ್ದರೂ ಅವರೆಲ್ಲ ಎಲ್ಲ ಸನ್ನಿವೇಶಗಳಲ್ಲಿಯೂ ಭಗವಂತನ ಸೇವಕರಾಗೇ ಇರುತ್ತಾರೆ ಎನ್ನುವುದನ್ನು ಆತನು ಕಾಣುತ್ತಾನೆ. ಐಹಿಕ ಶಕ್ತಿಯಲ್ಲಿದ್ದಾಗ ಜೀವಿಯು ಐಹಿಕ ಇಂದ್ರಿಯಗಳ ಸೇವೆ ಮಾಡುತ್ತಾನೆ. ಆಧ್ಯಾತ್ಮಿಕ ಶಕ್ತಿಯಲ್ಲಿದ್ದಾಗ ಅವನು ಭಗವಂತನನ್ನು ನೇರವಾಗಿ ಸೇವೆ ಮಾಡುತ್ತಾನೆ. ಹೇಗೇ ಆದರೂ ಜೀವಿಯು ಭಗವಂತನ ಸೇವಕ. ಈ ಸಮಾನತೆಯ ದೃಷ್ಟಿಯು ಕೃಷ್ಣಪ್ರಜ್ಞೆಯಲ್ಲಿರುವ ಮನುಷ್ಯನಿಗೆ ಪರಿಪೂರ್ಣವಾಗಿರುತ್ತದೆ.

(This copy first appeared in Hindustan Times Kannada website. To read more like this please logon to kannada.hindustantimes.com )