ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಭಗವದ್ಗೀತೆ: ಜ್ಞಾನಿಗಳು ಜನಸಾಮಾನ್ಯರನ್ನು ಸರಿಯಾದ ಮಾರ್ಗದಲ್ಲಿ ಕರೆದೊಯ್ಯುವ ಕೆಲಸ ಮಾಡಬೇಕು; ಗೀತೆಯ ಅರ್ಥ ತಿಳಿಯಿರಿ

ಭಗವದ್ಗೀತೆ: ಜ್ಞಾನಿಗಳು ಜನಸಾಮಾನ್ಯರನ್ನು ಸರಿಯಾದ ಮಾರ್ಗದಲ್ಲಿ ಕರೆದೊಯ್ಯುವ ಕೆಲಸ ಮಾಡಬೇಕು; ಗೀತೆಯ ಅರ್ಥ ತಿಳಿಯಿರಿ

ಕುರುಕ್ಷೇತ್ರದ ಯುದ್ಧದಲ್ಲಿ ಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಜ್ಞಾನಿಗಳು ಜನಸಾಮಾನ್ಯರನ್ನು ಸರಿಯಾದ ಮಾರ್ಗದಲ್ಲಿ ಕರೆದೊಯ್ಯುವ ಕೆಲಸ ಮಾಡಬೇಕು ಎಂಬುದರ ಗೀತೆಯಲ್ಲಿನ ಅರ್ಥ ಹೀಗಿದೆ.

ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.

ಸಕ್ತಾಃ ಕರ್ಮಣ್ಯವಿದ್ವಾಂಸೋ ಯಥಾ ಕುರ್ವಂತಿ ಭಾರತ |

ಕುರ್ಯಾದ್ ವಿದ್ವಾಂಸ್ತಥಾಸಕ್ತಶ್ ಚಿಕೀರ್ಷುರ್ಲೋಕಸನ್ಗ್ರಹಮ್ ||25||

ಅಜ್ಞಾನಿಗಳಾದವರು ಹೇಗೆ ಫಲಾಸಕ್ತರಾಗಿ ಕರ್ಮವನ್ನು ಮಾಡುತ್ತಾರೆಯೋ ಹಾಗೆಯೇ ವಿದ್ವಾಂಸರು ಆಸಕ್ತಿಯಿಲ್ಲದೆ, ಜನಸಾಮಾನ್ಯರನ್ನು ಯೋಗ್ಯಮಾರ್ಗದಲ್ಲಿ ಕರೆದೊಯ್ಯಲು ಕರ್ಮವನ್ನು ಮಾಡಬೇಕು.

ಕೃಷ್ಣಪ್ರಜ್ಞೆ ಇರುವವನಿಗೂ ಮತ್ತು ಕೃಷ್ಣಪ್ರಜ್ಞೆ ಇಲ್ಲದಿರುವವನಿಗೂ ಅವರ ಬೇರೆ ಬೇರೆ ಅಪೇಕ್ಷೆಗಳಿಂದ ವ್ಯತ್ಯಾಸ ಉಂಟಾಗುತ್ತದೆ. ಕೃಷ್ಣಪ್ರಜ್ಞೆಯ ಬೆಳವಣಿಗೆಗೆ ನೆರವಾಗದೆ ಇರುವುದು ಏನನ್ನೂ ಕೃಷ್ಣಪ್ರಜ್ಞೆ ಇರುವವನು ಮಾಡುವುದಿಲ್ಲ. ಅವನು ಐಹಿಕ ಚಟುವಟಿಕೆಗಳಲ್ಲಿ ಅತ್ಯಾಸಕ್ತಿ ಇರುವ ಅಜ್ಞಾನಿಯಂತೆಯೇ ಕೆಲಸಮಾಡಬಹುದು. ಆದರೆ ಅಜ್ಞಾನಿಯು ತನ್ನ ಇಂದ್ರಿಯ ತೃಪ್ತಿಗಾಗಿಯೇ ಕೆಲಸ ಮಾಡುತ್ತಾನೆ. ಇನ್ನೊಬ್ಬನು ಕೃಷ್ಣನ ತೃಪ್ತಿಗಾಗಿಯೇ ಕೆಲಸ ಮಾಡುತ್ತಾನೆ. ಆದುದರಿಂದ ಹೇಗೆ ಕಾರ್ಯಮಾಡಬೇಕು ಮತ್ತು ಹೇಗೆ ಕಾರ್ಯಫಲವನ್ನು ಕೃಷ್ಣಪ್ರಜ್ಞೆಯ ಉದ್ದೇಶಕ್ಕೆ ಬಳಸಬೇಕು ಎಂದು ಜನರಿಗೆ ತೋರಿಸಿಕೊಡುವುದು ಕೃಷ್ಣಪ್ರಜ್ಞೆ ಇರುವವನ ಕರ್ತವ್ಯ.

ನ ಬುದ್ಧಿಭೇದಂ ಜನಯೇದಜ್ಞಾನಾಂ ಕರ್ಮಸನ್ಗಿನಾಮ್ |

ಜೋಷಯೇತ್ಸರ್ವಕರ್ಮಾಣಿ ವಿದ್ವಾನ್ ಯುಕ್ತಃ ಸಮಾಚರನ್ ||26||

ನಿಯತ ಕರ್ತವ್ಯಗಳ ಕರ್ಮಫಲಕಕ್ಕೆ ಅಂಟಿಕೊಂಡಿರುವವರ ಕೆಲಸವನ್ನು ನಿಲ್ಲಿಸಿಬಿಟ್ಟರೆ ಅವರ ಬುದ್ಧಿ ಕಲಕುತ್ತದೆ. ಆದುದರಿಂದ ವಿದ್ವಾಂಸನು ಅವರ ಕೆಲಸವನ್ನು ನಿಲ್ಲಿಸಿಬಿಡಬಾರದು. ಭಕ್ತಿಭಾವದಿಂದ ಕೆಲಸಮಾಡಿ ಆತನು ಅಜ್ಞಾನಿಗಳನ್ನು (ಕೃಷ್ಣಪ್ರಜ್ಞೆಯ ಕ್ರಮಕ್ರಮವಾದ ಬೆಳವಣಿಗೆಗಾಗಿ) ಎಲ್ಲ ಬಗೆಯ ಚಟುವಟಿಕೆಗಳಲ್ಲಿ ತೊಡಗಿಸಬೇಕು.

ವೇದೈಶ್ಚ ಸರ್ವೈರಹಮೇವ ವೇದ್ಯಃ. ಎಲ್ಲ ವೈದಿಕ ವಿಧಿಗಳ ಗುರಿಯೂ ಇದೇ. ಎಲ್ಲ ವಿಧಿಗಳ, ಎಲ್ಲ ಯಜ್ಞಾಚರಣೆಗಳ ಮತ್ತು ಐಹಿಕ ಚಟುವಟಿಕೆಗಳ ನಿರ್ದೇಶನವೂ ಸೇರಿದಂತೆ ವೇದಗಳಲ್ಲಿ ಇರುವುದೆಲ್ಲದರ ಉದ್ದೇಶ ಕೃಷ್ಣನನ್ನು ಅರಿಯುವುದು. ಆತನೇ ಬದುಕಿನ ಪರಮ ಗುರಿಯು. ಆದರೆ ಬದ್ಧಜೀವಿಗಳಿಗೆ ಇಂದ್ರಿಯ ತೃಪ್ತಿಯಾಚೆ ಏನೂ ತಿಳಿಯದು. ಆದುದರಿಂದ ಆ ಗುರಿಗಾಗಿ ಅವರು ವೇದಗಳನ್ನು ಅಭ್ಯಾಸಮಾಡುತ್ತಾರೆ.

ಆದರೆ ವೇದ ವಿಧಿಗಳಿಂದ ನಿಯಂತ್ರಿತವಾದ ಫಲಾಸಕ್ತ ಚಟುವಟಿಕೆಗಳು ಮತ್ತು ಇಂದ್ರಿಯ ತೃಪ್ತಿಯು, ಕ್ರಮೇಣ ಮನುಷ್ಯನನ್ನು ಕೃಷ್ಣಪ್ರಜ್ಞೆಗೆ ಏರಿಸುತ್ತದೆ. ಆದುದರಿಂದ ಕೃಷ್ಣಪ್ರಜ್ಞೆಯಲ್ಲಿ ಆತ್ಮಸಾಕ್ಷಾತ್ಕಾರವಾದವನು ಇತರರ ಚಟುವಟಿಕೆಗಳನ್ನಾಗಿಲೀ ಅರಿವನ್ನಾಗಲೀ ಕಲಕಬಾರದು. ಎಲ್ಲ ಕಾರ್ಯದ ಫಲಗಳನ್ನು ಕೃಷ್ಣನ ಸೇವೆಗೆ ಹೇಗೆ ಸಮರ್ಪಿಸಬಹುದೆಂಬುದನ್ನು ತೋರಿಸಿಕೊಡುವುದರ ಮೂಲಕ ಅವನು ಕೆಲಸ ಮಾಡಬೇಕು. ಇಂದ್ರಿಯ ತೃಪ್ತಿಗಾಗಿ ಕೆಲಸಮಾಡುವ ಅಜ್ಞಾನಿಯು ಹೇಗೆ ಕೆಲಸಮಾಡಬೇಕು ಮತ್ತು ಹೇಗೆ ನಡೆದುಕೊಳ್ಳಬೇಕು ಎನ್ನುವುದನ್ನು ಕಲಿತುಕೊಳ್ಳುವಂತೆ ಕೃಷ್ಣಪ್ರಜ್ಞೆಯುಳ್ಳ ವಿದ್ವಾಂಸನು ಕೆಲಸ ಮಾಡಬಹುದು.

ಅಜ್ಞಾನಿಯಾದವನ ಚಟುವಟಿಕೆಗಳಿಗೆ ಭಂಗ ತರಬಾರದು. ಆದರೆ ಸ್ವಲ್ಪಮಟ್ಟಿಗೆ ಬೆಳೆದ ಕೃಷ್ಣಪ್ರಜ್ಞೆಯುಳ್ಳ ಮನುಷ್ಯನು ಇತರ ವೈದಿಕ ನಿಯಮಗಳಿಗೆ ಕಾಯದೆ ನೇರವಾಗಿ ಭಗವಂತನ ಸೇವೆಯಲ್ಲಿ ತೊಡಗಬಹುದು. ಈ ಭಾಗ್ಯಶಾಲಿಗೆ ವೈದಿಕ ವಿಧಿಗಳನ್ನು ಅನುಸರಿಸುವ ಅಗತ್ಯವಿಲ್ಲ. ಏಕೆಂದರೆ ನಿಯತ ಕರ್ತವ್ಯಗಳನ್ನು ಮಾಡುವುದರಿಂದ ಪಡೆಯುವ ಎಲ್ಲ ಪರಿಣಾಮಗಳನ್ನು ನೇರವಾದ ಕೃಷ್ಣಪ್ರಜ್ಞೆಯಿಂದ ಪಡೆಯಬಹುದು.

ವಿಭಾಗ