ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Bhagavad Gita: ಶ್ರೀಕೃಷ್ಣ ಪ್ರಭುಗಳ ಪ್ರಭು, ಎಲ್ಲ ಲೋಕಗಳ ಆಶ್ರಯನು; ಗೀತೆಯ ಸಾರಾಂಶ ಹೀಗಿದೆ

Bhagavad Gita: ಶ್ರೀಕೃಷ್ಣ ಪ್ರಭುಗಳ ಪ್ರಭು, ಎಲ್ಲ ಲೋಕಗಳ ಆಶ್ರಯನು; ಗೀತೆಯ ಸಾರಾಂಶ ಹೀಗಿದೆ

Bhagavad Gita Updesh: ಶ್ರೀಕೃಷ್ಣ ಪ್ರಭುಗಳ ಪ್ರಭು, ಎಲ್ಲ ಲೋಕಗಳ ಆಶ್ರಯನು ಎಂಬುದರ ಅರ್ಥವನ್ನು ಭಗವದ್ಗೀತೆಯ 11ನೇ ಅಧ್ಯಾಯದ 24 ರಿಂದ 27ನೇ ಶ್ಲೋಕದಲ್ಲಿ ತಿಳಿಯಿರಿ.

ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.

ಅಧ್ಯಾಯ 11 - ವಿಶ್ವರೂಪ -ಶ್ಲೋಕ - 24

ನಭಃಸ್ಪೃಶಂ ದೀಪ್ತಮನೇಕವರ್ಣಮ್

ವ್ಯಾತ್ತಾನನಂ ದೀಪ್ತವಿಶಾಲನೇತ್ರಮ್ |

ದೃಷ್ಟ್ವಾ ಹಿ ತ್ವಾಂ ಪ್ರವ್ಯಥಿತಾನ್ತರಾತ್ಮಾ

ಧೃತಿಂ ನ ವಿನ್ದಾಮಿ ಶಮಂ ಚ ವಿಷ್ಣೋ ||24||

ಅನುವಾದ: ಸರ್ವಾಂತರ್ಯಾಮಿಯಾದ ವಿಷ್ಣುವೆ, ಆಕಾಶವನ್ನು ಮುಟ್ಟುತ್ತಿರುವ ನಿನ್ನ ಅನೇಕ ಉಜ್ವಲ ವರ್ಣಗಳು, ತೆರೆದಿರುವ ನಿನ್ನ ಬಾಯಿಗಳು, ನಿನ್ನ ವಿಶಾಲವಾದ ಹೊಳೆಯುತ್ತಿರುವ ಕಣ್ಣುಗಳು, ಇವೆಲ್ಲವನ್ನು ಕಂಡು ನನ್ನ ಮನಸ್ಸು ಭಯದಿಂದ ತಲ್ಲಣಗೊಂಡಿದೆ. ನನ್ನ ಧೃತಿಯನ್ನಾಗಲಿ, ಸಮಚಿತ್ತವನ್ನಾಗಲಿ ಉಳಿಸಿಕೊಳ್ಳಲಾರೆ.

ಅಧ್ಯಾಯ 11 - ವಿಶ್ವರೂಪ -ಶ್ಲೋಕ - 25

ದಂಷ್ಟ್ರಾಕರಾಲಾನಿ ಚ ತೇ ಮುಖಾನಿ

ದೃಷ್ಟ್ವೈವ ಕಾಲಾನಲಸನ್ನಿಭಾನಿ |

ದಿಶೋ ನ ಜಾನೇ ನ ಲಭೇ ಚ ಶರ್ಮ

ಪ್ರಸೀದ ದೇವೇಶ ಜಗನ್ನಿವಾಸ ||25||

ಅನುವಾದ: ಎಲ್ಲ ಪ್ರಭುಗಳ ಪ್ರಭುವೆ, ಎಲ್ಲ ಲೋಕಗಳ ಆಶ್ರಯನೆ, ನನ್ನಲ್ಲಿ ಕೃಪೆ ಮಾಡು. ನಿನ್ನ ಪ್ರಜ್ವಲಿಸುತ್ತಿರುವ ಮೃತ್ಯು ಸದೃಶ ಮುಖಗಳನ್ನೂ, ಭಯಂಕರವಾದ ಹಲ್ಲುಗಳನ್ನೂ ಕಂಡೂ ನಾನು ನನ್ನ ಸಮತೋಲನವನ್ನು ಉಳಿಸಿಕೊಳ್ಳಲಾರೆ. ಎಲ್ಲ ರೀತಿಯಲ್ಲೂ ನಾನು ದಿಗ್ಭ್ರಾಂತನಾಗಿದ್ದೇನೆ (Bhagavad Gita Updesh in Kannada).

ಅಧ್ಯಾಯ 11 - ವಿಶ್ವರೂಪ -ಶ್ಲೋಕ - 26-27

ಅಮೀ ಚ ತ್ವಾಂ ಧೃತರಾಷ್ಟ್ರಸ್ಯ ಪುತ್ರಾಃ

ಸರ್ವೇ ಸಹೈವಾವನಿಪಾಲ ಸಂಘೈಃ |

ಭೀಷ್ಮೋ ದ್ರೋಣಃ ಸೂತಪುತ್ರಸ್ತಥಾಸೌ

ಸಹಾಸ್ಮದೀಯೈರಪಿ ಯೋಧಮುಖ್ಯೈಃ ||26||

ವಕ್ತ್ರಾಣಿ ತೇ ತ್ವರಮಾಣಾ ವಿಶಂತಿ

ದಂಷ್ಟ್ರಾಕರಾಲಾನಿ ಭಯಾನಕಾನಿ |

ಕೇಚಿದ್ ವಿಲಗ್ನಾ ದಶನಾನ್ತರೇಷು

ಸಂದೃಶ್ಯಂತೇ ಚೂರ್ಣಿತೈರುತ್ತಮಾನ್ಗೈಃ ||27||

ಅನುವಾದ: ಧೃತರಾಷ್ಟ್ರನ ಎಲ್ಲ ಪುತ್ರರೂ ಅವರ ಸ್ನೇಹಿತರಾದ ರಾಜರುಗಳೂ, ಭೀಷ್ಮ, ದ್ರೋಣ ಮತ್ತು ಕರ್ಣರೂ, ನಮ್ಮ ಮುಖ್ಯಯೋಧರೂ, ನಿನ್ನ ಭಯಂಕರ ಬಾಯಿಗಳನ್ನು ವೇಗವಾಗಿ ಪ್ರವೇಶಿಸುತ್ತಿದ್ದಾರೆ. ನಿನ್ನ ಹಲ್ಲಿನ ಸಂದುಗಳಲ್ಲಿ ಸಿಕ್ಕಿಕೊಂಡು ಪುಡಿಪುಡಿಯಾದ ಕೆಲವರ ತಲೆಗಳನ್ನು ಕಾಣುತ್ತಿದ್ದೇನೆ.

ಭಾವಾರ್ಥ: ಹಿಂದಿನ ಒಂದು ಶ್ಲೋಕದಲ್ಲಿ ಅರ್ಜುನನಿಗೆ ಬಹು ಆಸಕ್ತಿಯನ್ನುಂಟುಮಾಡುವ ದೃಶ್ಯಗಳನ್ನು ತೋರಿಸುವುದಾಗಿ ಪರಮ ಪ್ರಭುವು ಭರವಸೆ ನೀಡಿ. ತಮ್ಮ ವಿರುದ್ಧ ಪಕ್ಷದ ನಾಯಕರು (ಭೀಷ್ಮ, ದ್ರೋಣ, ಕರ್ಣ ಮತ್ತು ಧೃತರಾಷ್ಟ್ರನ ಎಲ್ಲ ಗಂಡು ಮಕ್ಕಳು), ಅವರ ಯೋಧರು ಮತ್ತು ಅರ್ಜುನನ ಯೋಧರು ಸಹ ನಾಶವಾಗುತ್ತಿರುವುದನ್ನು ಈಗ ಅರ್ಜುನನು ಕಾಣುತ್ತಾನೆ. ಕುರುಕ್ಷೇತ್ರದಲ್ಲಿ ಸೇರಿದವರಲ್ಲಿ ಸ್ವಲ್ಪ ಹೆಚ್ಚು ಕಡಮೆ ಎಲ್ಲರ ಸಾವಿನನಂತರ ಅರ್ಜುನನು ಜಯಶಾಲಿಯಾಗುತ್ತಾನೆ ಎನ್ನುವುದಕ್ಕೆ ಇದೊಂದು ಸೂಚನೆ. ಅಜೇಯನೆನಿಸಿಕೊಂಡ ಭೀಷ್ಮನು ಸಹ ನುಚ್ಚುನೂರಾಗುತ್ತಾನೆ ಎಂದು ಇಲ್ಲಿ ಹೇಳಿದೆ. ಹಾಗೆಯೇ ಕರ್ಣನೂ ಸಹ. ಶತ್ರುಪಕ್ಷದ ಭೀಷ್ಮನಂತಹ ಮಹಾ ಯೋಧರು ಮಾತ್ರವಲ್ಲದೆ ಅರ್ಜುನನ ಪಕ್ಷದ ಹಲವಾರು ಮಹಾನ್ ಯೋಧರೂ ನುಚ್ಚುನುರಾಗುತ್ತಾರೆ.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.