Bhagavad Gita: ಜಗತ್ತಿನ ಎಲ್ಲಾ ಅಧ್ಯಾತ್ಮಿಕ ಮೂಲಗಳಿಗೆ ಭಗವಂತನೇ ಕಾರಣ ; ಗೀತೆಯ ಸಾರಾಂಶ ಹೀಗಿದೆ-spiritual news bhagavad gita updesh lord krishna source of all the universe bhagavad gita quotes in kannada rmy ,ರಾಶಿ ಭವಿಷ್ಯ ಸುದ್ದಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Bhagavad Gita: ಜಗತ್ತಿನ ಎಲ್ಲಾ ಅಧ್ಯಾತ್ಮಿಕ ಮೂಲಗಳಿಗೆ ಭಗವಂತನೇ ಕಾರಣ ; ಗೀತೆಯ ಸಾರಾಂಶ ಹೀಗಿದೆ

Bhagavad Gita: ಜಗತ್ತಿನ ಎಲ್ಲಾ ಅಧ್ಯಾತ್ಮಿಕ ಮೂಲಗಳಿಗೆ ಭಗವಂತನೇ ಕಾರಣ ; ಗೀತೆಯ ಸಾರಾಂಶ ಹೀಗಿದೆ

Bhagavad Gita Updesh: ಜಗತ್ತಿನ ಎಲ್ಲಾ ಅಧ್ಯಾತ್ಮಿಕ ಮೂಲಗಳಿಗೆ ಭಗವಂತನೇ ಕಾರಣ ಎಂಬುದರ ಅರ್ಥವನ್ನು ಭಗವದ್ಗೀತೆಯ 10 ನೇ ಅಧ್ಯಾಯದ 8ನೇ ಶ್ಲೋಕದಲ್ಲಿ ತಿಳಿಯಿರಿ.

ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.

ಅಧ್ಯಾಯ 10 - ವಿಭೂತಿ ಯೋಗ - ಶ್ಲೋಕ - 8

ಅಹಂ ಸರ್ವಸ್ಯ ಪ್ರಭವೋ ಮತ್ತಃ ಸರ್ವಂ ಪ್ರವರ್ತತೇ |

ಇತಿ ಮತ್ವಾ ಭಜನ್ತೇ ಮಾಂ ಬುಧಾ ಭಾವಸಮನ್ವಿತಾಃ ||8||

ಅನುವಾದ: ಎಲ್ಲ ಅಧ್ಯಾತ್ಮಿಕ ಮತ್ತು ಭೌತಿಕ ಜಗತ್ತುಗಳ ಮೂಲವು ನಾನೇ. ಎಲ್ಲವೂ ನನ್ನಿಂದ ಹೊರಸೂಸುತ್ತದೆ. ಇದನ್ನು ಸಂಪೂರ್ಣವಾಗಿ ತಿಳಿದ ವಿದ್ವಾಂಸರು ನನ್ನ ಭಕ್ತಿಸೇವೆಯಲ್ಲಿ ನಿರತರಾಗುತ್ತಾರೆ ಮತ್ತು ಹೃದಯತುಂಬಿ ನನ್ನನ್ನು ಪೂಜಿಸುತ್ತಾರೆ.

ಭಾವಾರ್ಥ: ವೇದಗಳನ್ನು ಪರಿಪೂರ್ಣವಾಗಿ ಅಧ್ಯಯನ ಮಾಡಿ ಚೈನತ್ಯ ಮಹಾಪ್ರಭುಗಳಂತಹ ಅಚಾರ್ಯರಿಂದ ತಿಳುವಳಿಕೆ ಪಡೆದು ಈ ಬೋಧನೆಗಳನ್ನು ಹೇಗೆ ಅನ್ವಯಿಸಬೇಕು ಎಂಬುದನ್ನು ತಿಳಿದುಕೊಂಡ ಪ್ರಗಲ್ಭ ವಿದ್ವಾಂಸನು, ಕೃಷ್ಣನು ಐಹಿಕ ಮತ್ತು ಅಧ್ಯಾತ್ಮಿಕ ಪ್ರಪಂಚಗಳಲ್ಲಿ ಇರುವುದೆಲ್ಲಕ್ಕೂ ಮೂಲ ಎನ್ನುವುದನ್ನು ಅರ್ಥಮಾಡಿಕೊಳ್ಳಬಲ್ಲ. ಇದನ್ನು ಪರಿಪೂರ್ಣವಾಗಿ ತಿಳಿದುಕೊಂಡದ್ದರಿಂದ ಅವನು ಪರಮ ಪ್ರಭುವಿನ ಭಕ್ತಿಸೇವೆಯಲ್ಲಿ ಸ್ಥಿತನಾಗಿದ್ದಾನೆ. ಎಷ್ಟೇ ಪ್ರಮಾಣದ ಅಸಂಬದ್ಧ ವ್ಯಾಖ್ಯಾನಗಳಿಂದಾಗಲೀ, ಮೂರ್ಖರಿಂದಾಗಲೀ ಅವನು ಅತ್ತಿತ್ತ ಚಲಿಸುವುದಿಲ್ಲ (Bhagavad Gita Updesh in Kannada).

ಬ್ರಹ್ಮ, ಶಿವ ಮತ್ತು ಇತರರ ಎಲ್ಲ ದೇವತೆಗಳ ಮೂಲ ಕೃಷ್ಣನೇ ಎಂದು ಎಲ್ಲ ವೈದಿಕ ಸಾಹಿತ್ಯದಲ್ಲಿ ಒಮ್ಮತವಿದೆ. ಅಥರ್ವಣ ವೇದದಲ್ಲಿ (ಗೋಪಾಲ ತಾಪನಿ ಉಪನಿಷತ್ 1.24) ಹೀಗೆ ಹೇಳಿದೆ - ಯೋ ಬ್ರಹ್ಮಾಹಣ ವಿದಧಾತಿ ಪೂರ್ವಂ ಯೋ ವೈ ವೇದಾಂಶ್ಚ ಗಾಪಯತಿ ಸ್ಮ ಕೃಷ್ಣಃ - ಬ್ರಹ್ಮನಿಗೆ ವೇದದ ಜ್ಞಾನದಲ್ಲಿ ಮೊದಲು ಉಪದೇಶ ಮಾಡಿದವನು ಮತ್ತು ಭೂತಕಾಲದಲ್ಲಿ ವೇದದ ಜ್ಞಾನವನ್ನು ಪ್ರಸಾರ ಮಾಡಿದವನು ಕೃಷ್ಣನೇ. ನಾರಾಯಣ ಉಪನಿಷತ್ (1) ಹೀಗೆ ಹೇಳುತ್ತದೆ - ಅಥ ಪುರುಷೋ ಹ ವೈ ನಾರಾಯಣೋಕಾಮಯತ ಪ್ರಜಾಃ ಸೃಜೇಯೇತಿ - ಅನಂತರ ಪರಮ ಪುರುಷನಾದ ನಾರಾಯಣನು ಜೀವಿಗಳನ್ನು ಸೃಷ್ಟಿಸಲು ಅಪೇಕ್ಷಿಸಿದನು.

ಉಪನಿಷತ್ತು ಮುಂದುವರಿಸಿ ಹೀಗೆ ಹೇಳುತ್ತದೆ - ನಾರಾಯಣಾದ್ ಬ್ರಹ್ಮಾಜಾಯತೇ, ನಾರಾಯಣಾದ್ ಪ್ರಜಾಪತಿಃ ಪ್ರಜಾಯತೇ, ನಾರಾಯಣಾದ್ ಇನ್ದ್ರೋ ಜಾಯತೇ, ನಾರಾಯಣಾದ್ ಅಷ್ಟೌ ವಸವೋ ಜಾಯಂತೇ, ನಾರಾಯಣಾದ್ ಏಕಾದಶ ರುದ್ರಾಜಾಯನ್ತೇ, ನಾರಾಯಣಾದ್ ದ್ವಾದಶಾದಿತ್ಯಾಃ - ನಾರಾಯಣನಿಂದ ಬ್ರಹ್ಮನು ಹುಟ್ಟಿದನು. ನಾರಾಯಣನಿಂದ ಪ್ರಜಾಪತಿಗಳು ಸಹ ಹುಟ್ಟಿದರು. ನಾರಾಯಣನಿಂದ ಇಂದ್ರನು ಹುಟ್ಟಿದನು. ನಾರಾಯಣನಿಂದ ಅಷ್ಟವಸುಗಳು ಹುಟ್ಟಿದರು. ನಾರಾಯಣನಿಂದ ಏಕಾದಶ ರುದ್ರರು ಹುಟ್ಟಿದರು. ನಾರಾಯಣನಿಂದ ದ್ವಾದಶಾದಿತ್ಯರು ಹುಟ್ಟಿದರು. ಈ ನಾರಾಯಣನು ಕೃಷ್ಣನ ವಿಸ್ತರಣೆ.

ಅದೇ ವೇದಗಳಲ್ಲಿ ಹೀಗೆ ಹೇಳಿದೆ - ಬ್ರಹ್ಮೋಣ್ಯೋ ದೇವಕೀ ಪುತ್ರಃ. ದೇವಕಿಯ ಮಗನಾದ ಕೃಷ್ಣನು ಪುರುಷೋತ್ತಮನು. (ನಾರಾಯಣ ಉಪನಿಷತ್ತು 4) ಮತ್ತೆ ಹೀಗೆ ಹೇಳಿದೆ, ಏಕೋ ವೈ ನಾರಾಯಣ ಆಸೀನ್‌ ನ ಬ್ರಹ್ಮಾನ ಈಶಾನೋ ನಾಪೋ ನಾಗ್ನಿಸಮೌ ನೇಮೇ ದ್ಯಾವಾಪೃಥಿವೀ ನ ನಕ್ಷತ್ರಾಣಿ ನ ಸೂರ್ಯಃ - ಸೃಷ್ಟಿಯ ಪ್ರಾರಂಭದಲ್ಲಿ ಪರಮ ಪುರುಷನಾದ ನಾರಾಯಣನೊಬ್ಬನೇ ಇದ್ದನು. ಬ್ರಹ್ಮಇರಲಿಲ್ಲ, ಶಿವನಿರಲಿಲ್ಲ, ಅಗ್ನಿ ಇರಲಿಲ್ಲ, ಚಂದ್ರ ಇರಲಿಲ್ಲ, ಆಕಾಶದಲ್ಲಿ ನಕ್ಷತ್ರಗಳಿರಲಿಲ್ಲ, ಸೂರ್ಯನಿರಲಿಲ್ಲ. (ಮಹಾಉಪನಿಷತ್ತು 1) ಮಹಾ ಉಪನಿಷತ್ತಿನಲ್ಲಿ ಶಿವನು ಪರಮ ಪ್ರಭುವಿನ ಹಣೆಯಿಂದ ಹುಟ್ಟಿದ ಎಂದು ಹೇಳಿದೆ. ಹೀಗೆ ವೇದಗಳು ನಾವು ಪೂಜಿಸಬೇಕಾದದ್ದು ಬ್ರಹ್ಮ ಮತ್ತು ಶಿವರನ್ನು ಸೃಷ್ಟಿ ಮಾಡಿದ ಪರಮ ಪ್ರಭುವನ್ನು ಎಂದು ಹೇಳಿದೆ.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.