ಭಗವದ್ಗೀತೆ: ಶ್ರೀಕೃಷ್ಣ ತನ್ನ ವಿಷಯವಾಗಿ ಮಾತನಾಡುವುದು ಎಲ್ಲ ಲೋಕಗಳಿಗೂ ಮಂಗಳಕರ; ಗೀತೆಯ ಸಾರಾಂಶ ಹೀಗಿದೆ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಭಗವದ್ಗೀತೆ: ಶ್ರೀಕೃಷ್ಣ ತನ್ನ ವಿಷಯವಾಗಿ ಮಾತನಾಡುವುದು ಎಲ್ಲ ಲೋಕಗಳಿಗೂ ಮಂಗಳಕರ; ಗೀತೆಯ ಸಾರಾಂಶ ಹೀಗಿದೆ

ಭಗವದ್ಗೀತೆ: ಶ್ರೀಕೃಷ್ಣ ತನ್ನ ವಿಷಯವಾಗಿ ಮಾತನಾಡುವುದು ಎಲ್ಲ ಲೋಕಗಳಿಗೂ ಮಂಗಳಕರ; ಗೀತೆಯ ಸಾರಾಂಶ ಹೀಗಿದೆ

ಕುರುಕ್ಷೇತ್ರದ ಯುದ್ಧದಲ್ಲಿ ಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಶ್ರೀಕೃಷ್ಣ ತನ್ನ ವಿಷಯವಾಗಿ ಮಾತನಾಡುವುದು ಎಲ್ಲ ಲೋಕಗಳಿಗೂ ಮಂಗಳಕರ ಎಂಬುದರ ಅರ್ಥ ತಿಳಿಯಿರಿ.

ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.

ಅರ್ಜುನ ಉವಾಚ

ಅಪರಂ ಭವತೋ ಜನ್ನ ಪರಂ ಜನ್ನ ವಿವಸ್ವತಃ |

ಕಥಮೇತದ್ ವಿಜಾನೀಯಾಂ ತ್ವಮಾದೌ ಪ್ರೋಕ್ತವಾನಿತಿ ||4 ||

ಅರ್ಜುನನು ಕೇಳಿದ - ಸೂರ್ಯದೇವನಾದ ವಿವಸ್ವಾನನು ನಿನಗಿಂತ ಮೊದಲು ಹುಟ್ಟಿದವನು. ಆದಿಯಲ್ಲಿ ನೀನು ಅವನಿಗೆ ಶಾಸ್ತ್ರವನ್ನು ಬೋಧಿಸಿದೆ ಎಂದು ನಾನು ಹೇಗೆ ತಿಳಿದುಕೊಳ್ಳಲಿ?

ಅರ್ಜುನನು ಭಗವಂತನ ಅಂಗೀಕೃತನಾದ ಭಕ್ತನು. ಅವನು ಕೃಷ್ಣನ ಮಾತುಗಳನ್ನು ನಂಬದಿರುವುದು ಹೇಗೆ? ವಾಸ್ತವ ಸಂಗತಿ ಎಂದರೆ, ಅರ್ಜುನನು ಈ ಪ್ರಶ್ನೆಯನ್ನು ಕೇಳುತ್ತಿರುವುದು ತನಗಾಗಿ ಅಲ್ಲ, ದೇವೋತ್ತಮ ಪರಮ ಪುರುಷನಲ್ಲಿ ನಂಬಿಕೆ ಇಲ್ಲದವರಿಗಾಗಿ ಅಥವಾ ಶ್ರೀಕೃಷ್ಣನನ್ನು ದೇವೋತ್ತಮ ಪರಮ ಪುರುಷನಾಗಿ ಸ್ವೀಕರಿಸುವ ವಿಚಾರವನ್ನು ಒಪ್ಪದ ರಾಕ್ಷಸರಿಗಾಗಿ. ತನಗೇ ದೇವೋತ್ತಮ ಪರಮ ಪುರುಷನ ಅಥವಾ ಕೃಷ್ಣನ ವಿಷಯ ತಿಳಿಯದು ಎನ್ನುವಂತೆ ಅರ್ಜುನನು ಅವರಿಗಾಗಿ ಈ ಪ್ರಶ್ನೆಯನ್ನು ಕೇಳುತ್ತಾನೆ.

ಹತ್ತನೆಯ ಅಧ್ಯಾಯದಲ್ಲಿ ಸ್ಪಷ್ಟವಾಗುವಂತೆ ದೇವೋತ್ತಮ ಪರಮ ಪುರುಷನಾದ ಶ್ರೀಕೃಷ್ಣನೇ ಎಲ್ಲದರ ಆದಿಮೂಲನು ಮತ್ತು ಅಧ್ಯಾತ್ಮದಲ್ಲಿ ಕಡೆಯ ಪ್ರಮಾಣ ಎಂದು ಅರ್ಜುನನಿಗೆ ಚೆನ್ನಾಗಿ ತಿಳಿದಿದೆ. ಶ್ರೀಕೃಷ್ಣನು ದೇವಕಿಯ ಮಗನಾಗಿ ಭೂಮಿಯಲ್ಲಿ ಅವತರಿಸಿದ ಎಂಬುದು ನಿಜ. ಆ ಶ್ರೀಕೃಷ್ಣನೇ ನಿತ್ಯನಾದ ಆದಿಪುರುಷನಾಗಿ, ದೇವೋತ್ತಮ ಪರಮ ಪುರುಷನಾಗಿ ಹೇಗೆ ಉಳಿದ ಎನ್ನುವುದನ್ನು ಅರ್ಥಮಾಡಿಕೊಳ್ಳುವುದು ಸಾಮಾನ್ಯ ಮನುಷ್ಯನಿಗೆ ಕಷ್ಟ. ಈ ಅಂಶವನ್ನು ಸ್ಪಷ್ಟಪಡಿಸುವುದಕ್ಕಾಗಿ ಅರ್ಜುನನು ಶ್ರೀಕೃಷ್ಣನೇ ಅಧಿಕಾರಯುತವಾಗಿ ಮಾತನಾಡಲೆಂದು, ಈ ಪ್ರಶ್ನೆಯನ್ನು ಕೇಳಿದನು.

ಇಂದು ಮಾತ್ರವಲ್ಲ, ನೆನಪಿಗೇ ಎಟುಕದಿರುವಷ್ಟು ಅನಾದಿ ಕಾಲದಿಂದಲೂ ಶ್ರೀಕೃಷ್ಣನೇ ಪರಮ ಪ್ರಮಾಣ ಎಂದು ಇಡೀ ಜಗತ್ತು ಒಪ್ಪಿಕೊಂಡಿದೆ. ರಾಕ್ಷಸರು ಮಾತ್ರವೇ ಆತನನ್ನು ನಿರಾಕರಿಸುತ್ತಾರೆ. ರಾಕ್ಷಸರಿಗೆ ಮತ್ತು ಅವರ ಹಿಂಬಾಲಕರಿಗೆ ಅರ್ಥವಾಗುವಂತೆ ಕೃಷ್ಣನನ್ನು ವಿರೂಪಗೊಳಿಸಲು ರಾಕ್ಷಸರು ಸದಾ ಪ್ರಯತ್ನಿಸುತ್ತಿರುತ್ತಾರೆ. ರಾಕ್ಷಸರು ಚಿತ್ರಿಸದ ಹಾಗೆ ಕೃಷ್ಣನೇ ತನ್ನ ವರ್ಣಿಸಿಕೊಳ್ಳುವಂತೆ ಅರ್ಜುನನು ಈ ಪ್ರಶ್ನೆಯನ್ನು ಕೃಷ್ಣನ ಮುಂದೆ ಇಟ್ಟನು. ಪ್ರತಿಯೊಂದು ತನ್ನ ಕಲ್ಯಾಣಕ್ಕಾಗಿಯೇ ಕೃಷ್ಣಶಾಸ್ತ್ರವನ್ನು ತಿಳಿದಿರುವುದು ಅಗತ್ಯ. ಕೃಷ್ಣನು ತನ್ನ ವಿಷಯವಾಗಿ ಮಾತನಾಡುವುದು ಎಲ್ಲ ಲೋಕಗಳಿಗೂ ಮಂಗಳಕರ. ಕೃಷ್ಣನೇ ಇಂತಹ ವಿವರಣೆಗಳನ್ನು ನೀಡುವುದು ರಾಕ್ಷಸರಿಗೆ ವಿಚಿತ್ರವಾಗಿ ಕಾಣಬಹುದು.

ಏಕೆಂದರೆ ರಾಕ್ಷಸರು ಯಾವಾಗಲೂ ಕೃಷ್ಣನನ್ನು ತಮ್ಮ ದೃಷ್ಟಿಕೋನದಿಂದಲೇ ಅಧ್ಯಯನ ಮಾಡುತ್ತಾರೆ. ಆದರೆ ಭಕ್ತರಾದವರು ಕೃಷ್ಣನೇ ಹೇಳುವ ಮಾತುಗಳನ್ನು ಮನಃಪೂರ್ವಕವಾಗಿ ಸ್ವಾಗತಿಸುತ್ತಾರೆ. ಭಕ್ತರಿಗೆ ಅವನ ವಿಷಯವನ್ನು ಇನ್ನೂ ಹೆಚ್ಚು ಹೆಚ್ಚಾಗಿ ತಿಳಿದುಕೊಳ್ಳುವ ಹಂಬಲ. ಆದುದರಿಂದ ಅವರರು ಅವರು ಕೃಷ್ಣನ ಅಧಿಕಾರಯುತ ಮಾತುಗಳನ್ನು ಎಂದೂ ಪೂಜಿಸುತ್ತಾರೆ. ಕೃಷ್ಣನು ಸಾಮಾನ್ಯ ಮನುಷ್ಯ ಎಂದು ಭಾವಿಸುವ ನಾಸ್ತಿಕರಿಗೆ ಇದರಿಂದ ಕೃಷ್ಣನು ಮಾನವಾತೀತ, ಸಚ್ಚಿದಾನಂದ ವಿಗ್ರಹ, ಆನಂದ ಜಾನಗಳ ನಿತ್ಯಸ್ವರೂಪನು, ಅಲೌಕಿಕ, ಭೌತಿಕ ನಿಸರ್ಗದ ತ್ರಿಗುಣಗಳನ್ನೂ ಕಾಲ-ದೇಶಗಳ ಆಧಿಪತ್ಯವನ್ನೂ ಮೀರಿದವನು ಎಂದು ತಿಳಿಯಬಹುದು.

ಅರ್ಜುನನಂತಹ ಕೃಷ್ಣಭಕ್ತನಿಗೆ ಕೃಷ್ಣನ ಅಲೌಕಿಕಸ್ಥಾನದ ವಿಷಯದಲ್ಲಿ ತಪ್ಪು ತಿಳಿವಳಿಕೆ ಇರಲು ಸಾಧ್ಯವೇ ಇಲ್ಲ. ಅರ್ಜುನನು ಈ ಪ್ರಶ್ನೆಯನ್ನು ಭಗವಂತನ ಮುಂದಿಡುವುದು, ಕೃಷ್ಣನ ಭೌತಿಕ ನಿಸರ್ಗದ ಗುಣತ್ರಯಗಳಿಗೆ ಬದ್ಧವಾದ ಸಾಮಾನ್ಯ ಮನುಷ್ಯ ಎಂದು ಭಾವಿಸುವ ಜನರ ನಾಸ್ತಿಕ ಮನೋಧರ್ಮವನ್ನು ಧಿಕ್ಕರಿಸಲು ಭಕ್ತನು ಮಾಡುತ್ತಿರುವ ಒಂದು ಪ್ರಯತ್ನ.

Whats_app_banner

ವಿಭಾಗ

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.