Bhagavad Gita: ಯಶಸ್ಸು ಸಾಧಿಸಲು ಭಗವಂತನಲ್ಲಿ ಕಾಯಾ ವಾಚಾ ಮನಸಾ ಪರಿಶುದ್ಧವಾಗಿರಬೇಕು; ಗೀತೆಯ ಅರ್ಥ ಹೀಗಿದೆ-spiritual news bhagavad gita updesh lord krishna success mantra in life bhagavad gita quotes in kannada rmy ,ರಾಶಿ ಭವಿಷ್ಯ ಸುದ್ದಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Bhagavad Gita: ಯಶಸ್ಸು ಸಾಧಿಸಲು ಭಗವಂತನಲ್ಲಿ ಕಾಯಾ ವಾಚಾ ಮನಸಾ ಪರಿಶುದ್ಧವಾಗಿರಬೇಕು; ಗೀತೆಯ ಅರ್ಥ ಹೀಗಿದೆ

Bhagavad Gita: ಯಶಸ್ಸು ಸಾಧಿಸಲು ಭಗವಂತನಲ್ಲಿ ಕಾಯಾ ವಾಚಾ ಮನಸಾ ಪರಿಶುದ್ಧವಾಗಿರಬೇಕು; ಗೀತೆಯ ಅರ್ಥ ಹೀಗಿದೆ

Bhagavad Gita Updesh: ಯಶಸ್ಸು ಸಾಧಿಸಲು ಭಗವಂತನಲ್ಲಿ ಕಾಯಾ ವಾಚಾ ಮನಸಾ ಪರಿಶುದ್ಧವಾಗಿರಬೇಕು ಎಂಬುದರ ಅರ್ಥವನ್ನು ಭಗವದ್ಗೀತೆಯ 9ನೇ ಅಧ್ಯಾಯದ 14ನೇ ಶ್ಲೋಕದಲ್ಲಿ ತಿಳಿಯಿರಿ.

ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.

ಸತತಂ ಕೀರ್ತಯನ್ತೋ ಮಾಂ ಯತನ್ತಶ್ಚ ದೃಢವ್ರತಾಃ |

ನಮಸ್ಯನ್ತಶ್ಚ ಮಾಂ ಭಕ್ತ್ಯಾ ನಿತ್ಯಯುಕ್ತಾ ಉಪಾಸತೇ ||14||

ಅನುವಾದ: ಸದಾ ನನ್ನ ಕೀರ್ತನೆಯನ್ನು ಮಾಡುತ್ತ, ದೃಢ ಸಂಕಲ್ಪದಿಂದ ಪ್ರಯತ್ನವನ್ನು ಮಾಡುತ್ತ, ನನಗೆ ನಮಸ್ಕಾರವನ್ನು ಮಾಡುತ್ತ ಈ ಮಹಾತ್ಮರು ಸತತವಾಗಿ ಭಕ್ತಿಯಿಂದ ನನ್ನನ್ನು ಪೂಜಿಸುತ್ತಾರೆ.

ಭಾವಾರ್ಥ: ಸಾಮಾನ್ಯ ಮನುಷ್ಯನಿಗೆ ರಬ್ಬರ್‌ಸ್ಟಾಂಪನ್ನು ಒತ್ತಿ ಮಹಾತ್ಮನ ಉತ್ಪಾದನೆ ಮಾಡಲು ಸಾಧ್ಯವಿಲ್ಲ. ಅವನ ಲಕ್ಷಣಗಳನ್ನು ಇಲ್ಲಿ ವರ್ಣಿಸಿದೆ. ಮಹಾತ್ಮನು ದೇವೋತ್ತಮ ಪುರುಷನಾದ ಪರಮ ಪ್ರಭು ಕೃಷ್ಣನ ಕೀರ್ತನೆಯನ್ನು ಸದಾ ನಿರತನಾಗಿರುತ್ತಾನೆ. ಅವನಿಗೆ ಬೇರೆ ಕೆಲಸವೇ ಇಲ್ಲ. ಅವನು ಸದಾ ದೇವರನ್ನು ಸ್ತುತಿಸುವುದರಲ್ಲಿಯೇ ನಿರತನು. ಬೇರೆ ಮಾತುಗಳಲ್ಲಿ ಹೇಳುವುದಾದರೆ, ಆತನು ನಿರಾಕಾರವಾದಿಯಲ್ಲ. ಕೀರ್ತನೆಯ ಪ್ರಶ್ನೆ ಇರುವಾಗ, ಪರಮ ಪ್ರಭುವನ್ನು ಕೀರ್ತಿಸಬೇಕು. ಅವನ ಪವಿತ್ರ ನಾಮವನ್ನೂ ನಿತ್ಯ ರೂಪವನ್ನೂ ದಿವ್ಯ ಗುಣಗಳನ್ನೂ ಅಸಾಧಾರಣ ಲೀಲೆಗಳನ್ನೂ ಹೊಗಳಬೇಕು. ಇವೆಲ್ಲವನ್ನೂ ಸ್ತಿತಿಸಬೇಕು. ಆದುದರಿಂದ ಮಹಾತ್ಮನಾದವನಿಗೆ ದೇವೋತ್ತಮ ಪರಮ ಪುರುಷನಲ್ಲಿ ಆಸಕ್ತಿ (Bhagavad Gita Updesh in Kananda).

ಪರಮ ಪ್ರಭುವಿನ ನಿರಾಕಾರಸ್ವರೂಪವಾದ ಬ್ರಹ್ಮಜ್ಯೋತಿಯಲ್ಲಿ ಆಸಕ್ತನಾದವನನ್ನು ಭಗವದ್ಗೀತೆಯಲ್ಲಿ ಮಹಾತ್ಮಾನೆಂದು ವರ್ಣಿಸಿಲ್ಲ. ಮುಂದಿನ ಶ್ಲೋಕದಲ್ಲಿ ಅವನನ್ನು ಬೇರೆ ರೀತಿಯಲ್ಲಿ ವರ್ಣಿಸಿದೆ. ಮಹಾತ್ಮನು ಶ್ರೀಮದ್ಭಾಗವತದಲ್ಲಿ ವರ್ಣಿಸಿದಂತೆ ವಿಷ್ಣುವಿನ ವಿಷಯವನ್ನು ಕೇಳುತ್ತ, ಆತನ ಸಂಕೀರ್ತನೆಯನ್ನು ಮಾಡುತ್ತ ಭಕ್ತಿಸೇವೆಯ ಬೇರೆಬೇರೆ ಕಾರ್ಯಗಳಲ್ಲಿ ಸದಾ ತೊಡಗಿರುತ್ತಾನೆ. ಯಾವುದೇ ದೇವತೆಯ ಅಥವಾ ಮನುಷ್ಯನ ಸೇವೆಯಲ್ಲಿ ಅಲ್ಲ. ಇದು ಭಕ್ತಿ ಶ್ರವಣಂ ಕೀರ್ತನಂ ವಿಷ್ಣೋಃ ಮತ್ತು ಸ್ಮರಣಮ್, ಅವನ ನೆನಪು, ಐದು ದಿವ್ಯ ರಸಗಳಲ್ಲಿ ಯಾವುದಾದರೂ ಒಂದು ರಸದಲ್ಲಿ ಕಟ್ಟಕಡೆಗೆ ಪರಮ ಪ್ರಭುವಿನ ಸಹವಾಸವನ್ನು ಪಡೆಯಬೇಕು. ಇದು ಇಂತಹ ಮಹಾತ್ಮನ ವಜ್ರಸಂಕಲ್ಪ. ಈ ಯಶಸ್ಸನ್ನು ಸಾಧಿಸಲು ಅವನು ಕಾಯಾ ವಾಚಾ ಮನಸಾ ಎಲ್ಲ ಚಟುವಟಿಕೆಗಳನ್ನೂ ಪರಮ ಪ್ರಭುವಾದ ಶ್ರೀಕೃಷ್ಣನ ಸೇವೆಯಲ್ಲಿ ತೊಡಗಿಸಿಸುತ್ತಾನೆ. ಇದನ್ನು ಸಂಪೂರ್ಣ ಕೃಷ್ಣಪ್ರಜ್ಞೆ ಎಂದು ಕರೆಯುತ್ತಾರೆ.

ಭಕ್ತಿಸೇವೆಯಲ್ಲಿ ಕೆಲವು ನಿರ್ಧಾರಿತ ಚಟುವಟಿಕೆಗಳಿವೆ. ಉದಾಹರಣೆಗೆ, ಏಕಾದಶಿಯ ದಿವಸ ಮತ್ತು ಪ್ರಭುವಿನ ಅವತಾರದ ದಿವಸ ಉಪವಾಸ ಮಾಡುವುದು. ದಿವ್ಯಜಗತ್ತಿನಲ್ಲಿ ದೇವೋತ್ತಮ ಪರಮ ಪುರುಷನ ಸಹವಾಸಕ್ಕೆ ಪ್ರವೇಶ ಪಡೆಯಲು ಆಸಕ್ತರಾದವರಿಗೆಲ್ಲ ಮಹಾ ಆಚಾರ್ಯರು ಈ ವಿಧಿನಿಯಮಗಳನ್ನು ಕೊಟ್ಟಿದ್ದಾರೆ. ಮಹಾತ್ಮರು ಎಲ್ಲ ವಿಧಿನಿಯಮಗಳನ್ನೂ ಕಟ್ಟುನಿಟ್ಟಾಗಿ ಪಾಲಿಸುತ್ತಾರೆ. ಆದುದರಿಂದ ಅವರು ಅಪೇಕ್ಷಿತ ಫಲವನ್ನು ನಿಶ್ಚಯವಾಗಿಯೂ ಸಾಧಿಸುವರು.

ಈ ಅಧ್ಯಾಯದ ಎರಡನೆಯ ಶ್ಲೋಕದಲ್ಲಿ ವರ್ಣಿಸಿದಂತೆ ಈ ಭಕ್ತಿಸೇವೆಯು ಸುಲಭ ಮಾತ್ರವಲ್ಲ, ಅದನ್ನು ಸುಖವಾದ ಮನಸ್ಥಿತಿಯಲ್ಲಿ ನಡೆಸಬಹುದು. ಇದಕ್ಕಾಗಿ ಯಾವುದೇ ಕಠಿಣವಾದ ಪ್ರಾಯಶ್ಚಿತ್ತವನ್ನಾಗಲೀ, ವ್ರತವನ್ನಾಗಲೀ ನಡೆಸಬೇಕಾಗಿಲ್ಲ. ವ್ಯಕ್ತಿಯು ಒಬ್ಬ ತಜ್ಞ ಗುರುವಿನ ಮಾರ್ಗದರ್ಶನದಲ್ಲಿ ಈ ಭಕ್ತಿಸೇವೆಯಲ್ಲಿ ಬಾಳಬಹುದು. ಗೃಹಸ್ಥನಾಗಿ ಅಥವಾ ಸನ್ಯಾಸಿಯಾಗಿ ಅಥವಾ ಬ್ರಹ್ಮಚಾರಿಯಾಗಿ ಆತನು ಯಾವುದೇ ಸ್ಥಿತಿಯಲ್ಲಾದರೂ ಮತ್ತು ಜಗತ್ತಿನಲ್ಲಿ ಎಲ್ಲಾದರೂ ದೇವೋತ್ತಮ ಪರಮ ಪುರುಷನ ಈ ಭಕ್ತಿಸೇವೆಯನ್ನು ಮಾಡಬಹುದು ಮತ್ತು ಹೀಗೆ ವಾಸ್ತವವಾಗಿ ಮಹಾತ್ಮನಾಗಬಹುದು.

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.