Bhagavad Gita: ದೇವರು ಹೇಗೆ ದೊಡ್ಡವನೆಂದು ತಿಳಿದರೆ ಮನುಷ್ಯನು ಸಹಜವಾಗಿ ಶರಣಾಗತನಾಗುತ್ತಾನೆ; ಗೀತೆಯ ಸಾರಾಂಶ ಹೀಗಿದೆ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Bhagavad Gita: ದೇವರು ಹೇಗೆ ದೊಡ್ಡವನೆಂದು ತಿಳಿದರೆ ಮನುಷ್ಯನು ಸಹಜವಾಗಿ ಶರಣಾಗತನಾಗುತ್ತಾನೆ; ಗೀತೆಯ ಸಾರಾಂಶ ಹೀಗಿದೆ

Bhagavad Gita: ದೇವರು ಹೇಗೆ ದೊಡ್ಡವನೆಂದು ತಿಳಿದರೆ ಮನುಷ್ಯನು ಸಹಜವಾಗಿ ಶರಣಾಗತನಾಗುತ್ತಾನೆ; ಗೀತೆಯ ಸಾರಾಂಶ ಹೀಗಿದೆ

Bhagavad Gita Updesh: ದೇವರು ಹೇಗೆ ದೊಡ್ಡವನೆಂದು ತಿಳಿದರೆ ಮನುಷ್ಯನು ಸಹಜವಾಗಿ ಶರಣಾಗತನಾಗುತ್ತಾನೆ ಎಂಬುದರ ಅರ್ಥವನ್ನು ಭಗವದ್ಗೀತೆಯ 10ನೇ ಅಧ್ಯಾಯದ 6 ಮತ್ತು 7ನೇ ಶ್ಲೋಕದಲ್ಲಿ ತಿಳಿಯಿರಿ.

ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.

ಅಧ್ಯಾಯ 10 - ವಿಭೂತಿ ಯೋಗ - ಶ್ಲೋಕ-6

ಮಹರ್ಷಯಃ ಸಪ್ತ ಪೂರ್ವೇ ಚತ್ವಾರೋ ಮನವಸ್ತಥಾ |

ಮದ್ಭಾವಾ ಮಾನಸಾ ಜಾತಾ ಯೇಷಾಂ ಲೋಕ ಇಮಾಃ ಪ್ರಜಾಃ ||6||

ಅನುವಾದ: ಸಪ್ತರ್ಷಿಗಳು ಮತ್ತು ಅವರ ಪೂರ್ವದ ನಾಲ್ವರು ಮಹರ್ಷಿಗಳು ಎಲ್ಲರೂ ನನ್ನಿಂದ ಬಂದರು. ನನ್ನ ಮನಸ್ಸಿನಿಂದ ಹುಟ್ಟಿದರು. ವಿವಿಧ ಲೋಕಗಳಲ್ಲಿರುವ ಜೀವಿಗಳೆಲ್ಲ ಅವರ ಸಂತಾನದವರೇ.

ಭಾವಾರ್ಥ: ಪ್ರಭುವು ವಿಶ್ವದ ಜನತೆಯ ವಂಶವೃಕ್ಷವನ್ನು ಸಂಗ್ರಹವಾಗಿ ಕೊಡುತ್ತಿದ್ದಾನೆ. ಹಿರಣ್ಯಗರ್ಭ ಎಂದು ಕರೆಯುವ ಪರಮ ಪ್ರಭುವಿನ ಶಕ್ತಿಯಿಂದ ಮೊದಲು ಹುಟ್ಟಿದವನು ಬ್ರಹ್ಮ. ಬ್ರಹ್ಮನಿಂದ ಸಪ್ತರ್ಷಿಗಳು. ಅವರಿಗೆ ಮೊದಲು ಸನಕ, ಸನಂದ, ಸನಾತನ ಮತ್ತು ಸನತ್ಕುಮಾರ ಎನ್ನುವ ನಾಲ್ವರು ಮಹರ್ಷಿಗಳು ಮತ್ತು ಮನುಗಳು ರೂಪಪಡೆದರು. ಈ ಇಪ್ಪತ್ತೈದು ಮಂದಿ ಮಹರ್ಷಿಗಳು ವಿಶ್ವದ ಎಲ್ಲ ಜೀವಿಗಳ ಪ್ರಜಾಪತಿಗಳೆಂದು ಹೆಸರಾಗಿದ್ದಾರೆ. ಪ್ರತಿಯೊಂದು ಲೋಕವೂ ವಿವಿಧ ಬಗೆಗಳ ಜನಗಳಿಂದ ತುಂಬಿಹೋಗಿದೆ. ಅವರೆಲ್ಲರೂ ಈ ಇಪ್ಪತ್ತೈದು ಮಂದಿ ಪ್ರಜಾಪತಿಗಳ ಸಂತಾನರು (Bhagavad Gita Updesh in Kannada).

ಸೃಷ್ಟಿಮಾಡುವುದು ಹೇಗೆ ಎನ್ನುವುದನ್ನು ತಿಳಿಯುವ ಮೊದಲು ಬ್ರಹ್ಮನು ದೇವತೆಗಳ ಲೆಕ್ಕದ ಒಂದು ಸಾವಿರ ವರ್ಷಗಳ ಕಾಲ ತಪಸ್ಸು ಮಾಡಿದ. ಅನಂತರ ಬ್ರಹ್ಮನಿಂದ ಸನಕ. ಸನಂದ, ಸನಾತನ ಮತ್ತು ಸನತ್ಕುಮಾರ ಇವರು ಬಂದರು. ಅನಂತರ ರುದ್ರ. ಅನಂತರ ಸಪ್ತರ್ಷಿಗಳು. ಈ ರೀತಿಯಾಗಿ ಎಲ್ಲ ಬ್ರಾಹ್ಮಣರೂ, ಕ್ಷತ್ರಿಯರೂ ದೇವೋತ್ತಮ ಪರಮ ಪುರುಷನ ಶಕ್ತಿಯಿಂದ ಹುಟ್ಟಿದವರು. ಬ್ರಹ್ಮನನ್ನು ಪಿತಾಮಹ ಅಥವಾ ಅಜ್ಜ ಎಂದೂ ಕೃಷ್ಣನನ್ನೂ ಪ್ರಪಿತಾಮಹ ಅಥವಾ ಅಜ್ಜನ ತಂದೆ ಎಂದೂ ಕರೆಯುತ್ತಾರೆ. ಇದನ್ನು ಭಗವದ್ಗೀತೆಯ ಹನ್ನೊಂದನೆಯ ಅಧ್ಯಾಯದಲ್ಲಿ (11.39) ಹೇಳಿದೆ.

ಅಧ್ಯಾಯ 10 - ವಿಭೂತಿ ಯೋಗ - ಶ್ಲೋಕ-7

ಏತಾಂ ವಿಭೂತಿಂ ಯೋಗಂ ಚ ಮಮ ಯೋ ವೇತ್ತಿ ತತ್ತ್ವತಃ |

ಸೋವಿಕಲ್ಪೇನ ಯೋಗೇನ ಯುಜ್ಯತೇ ನಾತ್ರ ಸಂಶಯಃ ||7||

ಅನುವಾದ: ನನ್ನ ಈ ಐಶ್ವರ್ಯವನ್ನೂ ಮತ್ತು ಯೋಗಶಕ್ತಿಯನ್ನೂ ಯಥಾರ್ಥವಾಗಿ ತಿಳಿದವನು ಪರಿಶುದ್ಧವಾದ ಭಕ್ತಿಸೇವೆಯಲ್ಲಿ ತೊಡಗುತ್ತಾನೆ. ಈ ವಿಷಯದಲ್ಲಿ ಸಂಶಯವಿಲ್ಲ.

ಭಾವಾರ್ಥ: ಅಧ್ಯಾತ್ಮಿಕ ಪರಿಪೂರ್ಣತೆಯ ಅತ್ಯುನ್ನತ ಶಿಖರವೆಂದರೆ ದೇವೋತ್ತಮ ಪರಮ ಪುರುಷನ ಅರಿವು. ಪರಮ ಪ್ರಭುವಿನ ವಿವಿಧ ಸಿರಿಗಳಲ್ಲಿ ದೃಢವಾದ ವಿಶ್ವಾಸವಿಲ್ಲದಿದ್ದರೆ ಮನುಷ್ಯನು ಭಕ್ತಿಸೇವೆಯಲ್ಲಿ ನಿರತನಾಗಲಾರ. ಸಾಮಾನ್ಯವಾಗಿ ಜನರಿಗೆ ದೇವರು ದೊಡ್ಡವನೆಂದು ಗೊತ್ತು. ಆದರೆ ದೇವರರು ಹೇಗೆ ದೊಡ್ಡವನು ಎಂದು ವಿವರವಾಗಿ ತಿಳಿಯದು. ವಿವರಗಳು ಇಲ್ಲಿವೆ. ದೇವರು ಹೇಗೆ ದೊಡ್ಡವನು ಎಂದು ಯತಾರ್ಥವಾಗಿ ತಿಳಿದರೆ ಮನುಷ್ಯನು ಸಹಜವಾಗಿ ಶರಣಾಗತನಾಗುತ್ತಾನೆ ಮತ್ತು ಪ್ರಭುವಿನ ಭಕ್ತಿಸೇವೆಯಲ್ಲಿ ನಿರತನಾಗುತ್ತಾನೆ. ಪರಮ ಪ್ರಭುವಿನ ಸಿರಿಯನ್ನು ಯಥಾರ್ಥವಾಗಿ ತಿಳಿದುಕೊಂಡಾಗ ಅವನಿಗೆ ಶರಣಾಗುವುದಲ್ಲದೆ ಬೇರೆ ಮಾರ್ಗವೇ ಇಲ್ಲ. ಶ್ರೀಮದ್ಭಾಗವತ, ಭಗವದ್ಗೀತೆ ಮತ್ತು ಇಂತಹ ಇತರ ಸಾಹಿತ್ಯದಲ್ಲಿನ ವರ್ಣನೆಗಳಿಂದ ಈ ಯಥಾರ್ಥ ಜ್ಞಾನವನ್ನು ಪಡೆಯಬಹುದು.

ಈ ವಿಶ್ವದ ಆಡಳಿತ ನಿರ್ವಹಣೆಯಲ್ಲಿ ಲೋಕಗಳ ವ್ಯೂಹದಲ್ಲೆಲ್ಲ ಬೇರೆ ಬೇರೆ ಸ್ಥಳಗಳಲ್ಲಿರುವ ದೇವತೆಗಳು ಇದ್ದಾರೆ. ಅವರ ಮುಖ್ಯವಾದವನು ಬ್ರಹ್ಮ, ಶಿವ, ನಾಲ್ವರು ಕುಮಾರರು ಮತ್ತು ಇತರರ ಪ್ರಜಾಪತಿಗಳು. ವಿಶ್ವದ ಜನತೆಯ ಪ್ರಜಾಪತಿಗಳು ಹಲವರು. ಅವರೆಲ್ಲ ಪರಮ ಪ್ರಭು ಶ್ರೀಕೃಷ್ಣನ ಸಂತಾನ. ದೇವೋತ್ತಮ ಪರಮ ಪುರುಷನಾದ ಕೃಷ್ಣನು ಎಲ್ಲ ಪರಮ ಪ್ರಭುವಿನ ಸಿರಿಗಳಲ್ಲಿ ಇವು ಕೆಲವು. ಅವುಗಳಲ್ಲಿ ದೃಢ ನಂಬಿಕೆಯು ಉಂಟಾದಾಗ ವ್ಯಕ್ತಿಯು ಬಹು ಶ್ರದ್ಧೆಯಿಂದ ಮತ್ತು ಯಾವುದೇ ಸಂಶಯವಿಲ್ಲದೆ ಕೃಷ್ಣನನ್ನು ಒಪ್ಪಿಕೊಳ್ಳುತ್ತಾನೆ ಮತ್ತು ಭಕ್ತಿಸೇವೆಯಲ್ಲಿ ನಿರತನಾಗುತ್ತಾನೆ. ಪ್ರಭುವಿನ ಭಕ್ತಿಸೇವೆಯಲ್ಲಿ ಮನುಷ್ಯನ ಆಸಕ್ತಿಯನ್ನು ಹೆಚ್ಚಿಸಲು ಈ ಖಚಿತವಾದ ಜ್ಞಾನವು ಅಗತ್ಯವಾಗುತ್ತದೆ. ಕೃಷ್ಣನು ಎಂತಹ ಮಹಾನುಭಾವ ಎನ್ನುವುದನ್ನು ತಿಳಿದುಕೊಳ್ಳುವುದನ್ನು ಅಲಕ್ಷ್ಯಮಾಡಬಾರದು. ಏಕೆಂದರೆ ಕೃಷ್ಣನ ಮಹಾತ್ಮಮೆಯನ್ನು ತಿಳಿದವನು ಪ್ರಾಮಾಣಿಕ ಭಕ್ತಿಸೇವೆಯಲ್ಲಿ ನಿಶ್ಚಲನಾಗಿರುತ್ತಾನೆ.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.