ಕನ್ನಡ ಸುದ್ದಿ  /  Astrology  /  Spiritual News Bhagavad Gita Updesh Lord Krishna Sustains All Living Beings Bhagavad Gita Quotes In Kannada Rmy

Bhagavad Gita: ಮರದ ಬೇರು ಇಡೀ ಮರವನ್ನ ಪೋಷಿಸುವಂತೆ ಭಗವಂತ ಎಲ್ಲ ಜೀವಿಗಳನ್ನ ಪೋಷಿಸುತ್ತಾನೆ ; ಗೀತೆಯ ಸಾರಾಂಶ ಹೀಗಿದೆ

Bhagavad Gita Updesh: ಮರದ ಬೇರು ಇಡೀ ಮರವನ್ನ ಪೋಷಿಸುವಂತೆ ಭಗವಂತ ಎಲ್ಲ ಜೀವಿಗಳನ್ನ ಪೋಷಿಸುತ್ತಾನೆ ಎಂಬುದರ ಅರ್ಥವನ್ನು ಭಗವದ್ಗೀತೆಯ ಅಧ್ಯಾಯ 7ನೇ ಅಧ್ಯಾಯದ 9 ಮತ್ತು 10ನೇ ಶ್ಲೋಕದಲ್ಲಿ ಓದಿ.

ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.

7ನೇ ಅಧ್ಯಾಯದ ಪರತ್ಪರ ಜ್ಞಾನ - ಶ್ಲೋಕ - 9

ಪುಣ್ಯೋ ಗನ್ಧಃ ಪೃಥಿವ್ಯಾಂಚ ತೇಜಶ್ಚಾಸ್ಮಿ ವಿಭಾವಸೌ |

ಜೀವನಂ ಸರ್ವಭೂತೇಷು ತಪಶ್ಚಾಸ್ಮಿ ತಪಸ್ವಿಷು ||9||

ಅನುವಾದ: ನಾನು ಭಮಿಯ ಮೂಲ ಪರಿಮಳ. ನಾನು ಅಗ್ನಿಯಲ್ಲಿ ತೇಜಸ್ಸು. ಎಲ್ಲ ಜೀವಿಗಳಲ್ಲಿ ನಾನೇ ಜೀವ, ತಪಸ್ವಿಗಳ ತಪಸ್ಸೂ ನಾನೇ.

ಭಾವಾರ್ಥ: ಎಂದರೆ ಕೊಳೆಯದಿರುವುದು. ಪುಣ್ಯವು ಮೂಲವಾಗಿದೆ. (Bhagavad Gita Updesh in Kannadaಪುಣ್ಯ) ಐಹಿಕ ಜಗತ್ತಿನಲ್ಲಿ ಪ್ರತಿಯೊಂದು ವಸ್ತುವಿಗೂ ಒಂದು ಕಂಪು ಅಥವಾ ಸುವಾಸನೆ ಇರುತ್ತದೆ - ಒಂದು ಹೂವಿನಲ್ಲಿ ಅಥವಾ ಭೂಮಿಯಲ್ಲಿ ನೀರಿನಲ್ಲಿ, ಅಗ್ನಿಯಲ್ಲಿ, ವಾಯು ಮೊದಲಾದವುಗಳಲ್ಲಿ ಇರುವಂತೆ. ನಿರ್ಮಲವಾದ ಸುಗಂಧ, ಎಲ್ಲವನ್ನೂ ವ್ಯಾಪಿಸುವ ಮೂಲ ಸುಗಂಧ, ಕೃಷ್ಣ. ಹಾಗೆಯೇ, ಪ್ರತಿಯೊಂದು ವಸ್ತುವಿಗೂ ಒಂದು ಮೂಲ ರುಚಿ ಇರುತ್ತದೆ. ರಸಾಯನಗಳನ್ನು ಬೆರೆಸಿ ಈ ರುಚಿಯನ್ನು ಬದಲಾಯಿಸಬಹುದು. ಹೀಗೆ ಪ್ರತಿಯೊಂದು ಮೂಲ ವಸ್ತುವಿಗೂ ಒಂದು ವಾಸನೆ, ಒಂದು ಕಂಪು, ಒಂದು ರರುಚಿ ಇರುತ್ತದೆ. ವಿಭಾವಸು ಎಂದರೆ ಅಗ್ನಿ.

ಅಗ್ನಿ ಇಲ್ಲದೆ ನಾವು ಕಾರ್ಖಾನೆಗಳನ್ನು ನಡೆಸಲಾರೆವು, ಅಡಿಗೆಯನ್ನು ಮಾಡಲಾರೆವು. ಆ ಅಗ್ನಿಯೇ ಕೃಷ್ಣ. ಅಗ್ನಿಯಲ್ಲಿನ ತೇಜಸ್ಸು ಕೃಷ್ಣ. ವೇದ ವೈದ್ಯದ ಪ್ರಕಾರ, ಅಜೀರ್ಣಕ್ಕೆ ಹೊಟ್ಟೆಯೊಳಗ ಶಾಖವು ಕಡಮಮೆಯಾಗುವುದೇ ಕಾರಣ. ಆದುದರಿಂದ ಜೀರ್ಣಶಕ್ತಿಗೂ ಅಗ್ನಿಯು ಅಗತ್ಯ. ಕೃಷ್ಣಪ್ರಜ್ಞೆಯಲ್ಲಿ ಭೂಮಿ, ನೀರು, ಅಗ್ನಿ, ವಾಯು ಮತ್ತು ಪ್ರತಿಯೊಂದು ಕ್ರಿಯಾಶೀಲ ತತ್ವವೂ, ಎಲ್ಲ ರಾಸಾಯನಿಕಗಳೂ ಮತ್ತು ಎಲ್ಲ ಐಹಿಕ ಅಂಶಗಳೂ ಕೃಷ್ಣನಿಂದ ಆದುವು ಎನ್ನುವ ಅರಿವು ನಮಗೆ ಬರುತ್ತದೆ. ಮನುಷ್ಯನ ಆಯಸ್ಸನ್ನು ನಿರ್ಧರಿಸುವವನೂ ಕೃಷ್ಣನೇ. ಕೃಷ್ಣನ ಕೃಪೆಯಿಂದ ಮನುಷ್ಯನು ತನ್ನ ಆಯುಸ್ಸನ್ನು ಹೆಚ್ಚಿಸಿಕೊಳ್ಳಬಹುದು ಅಥವಾ ಕಡಮೆಮಾಡಿಕೊಳ್ಳಬಹುದು. ಆದುದರಿಂದ ಕೃಷ್ಣಪ್ರಜ್ಞೆಯು ಪ್ರತಿಯೊಂದು ರಂಗದಲ್ಲಿಯೂ ಕ್ರಿಯಾಶಾಲಿಯಾಗಿರುತ್ತದೆ.

7ನೇ ಅಧ್ಯಾಯದ ಪರತ್ಪರ ಜ್ಞಾನ - ಶ್ಲೋಕ - 10

ಬೀಜ ಮಾಸಂ ಸರ್ವಭೂತಾನಾಂ ವಿದ್ಧಿ ಪಾರ್ಥ ಸನಾತನಮ್ |

ಬುದ್ಧಿರ್ಬುದ್ಧಿಮತಾಮಸ್ಮಿ ತೇಜಸ್ತೇಜಸ್ವಿನಾಮಹಮ್ ||10||

ಅನುವಾದ: ಪಾರ್ಥ, ನಾನು ಎಲ್ಲ ಅಸ್ತಿತ್ವಗಳ ಮೂಲ ಬೀಜ, ಬುದ್ಧಿವಂತರ ಬುದ್ಧಿಶಕ್ತಿ ಮತ್ತು ಎಲ್ಲ ಶಕ್ತಿಶಾಲಿಗಳ ಶಕ್ತಿ ಎಂದು ತಿಳಿದುಕೊ.

ಭಾವಾರ್ಥ: ಕೃಷ್ಣನು ಎಲ್ಲ ವಸ್ತುಗಳ ಬೀಜ. ಚಿರಾಚರ ಜೀವಿಗಳು ಹಲವಿದೆ. ಪಕ್ಷಿಗಳು, ಪ್ರಾಣಿಗಳು, ಮನುಷ್ಯರು ಮತ್ತು ಇತರ ಅನೇಕ ಪ್ರಾಣಿಗಳು ಚಲಿಸುವ ಜೀವಿಗಳು. ಸಸ್ಯಗಳು ಮತ್ತು ಮರಗಳು ಚಲಿಸಲಾರವು, ನಿಂತಿರುತ್ತವೆ ಅಷ್ಟೆ. ಪ್ರತಿಯೊಂದು ಜೀವಿಯು 84,00,000 ಜೀವವರ್ಗಗಳ ವ್ಯಾಪ್ತಿಯಲ್ಲಿ ಸೇರುತ್ತವೆ. ಇವುಗಳಲ್ಲಿ ಕೆಲವು ಚಲಿಸುತ್ತವೆ, ಕೆಲವು ಚಲಿಸುವುದಿಲ್ಲ. ಆದರೆ ಇವೆಲ್ಲವುಗಳ ಜೀವದ ಜೀಜ ಕೃಷ್ಣ. ವೇದ ಸಾಹಿತ್ಯದಲ್ಲಿ ಹೇಳಿರುವಂತೆ ಬ್ರಹ್ಮನ್ ಅಥವಾ ಪರಮ ಪರಾತ್ಪರ ಸತ್ಯದಿಂದಲೇ ಪ್ರತಿಯೊಂದೂ ಮೂಡುತ್ತದೆ.

ಕೃಷ್ಣನು ಪರಬ್ರಹ್ಮ, ಪರಮಾತ್ಮ. ಬ್ರಹ್ಮನ್ ನಿರಾಕಾರವಾದದ್ದು, ಪರಬ್ರಹ್ಮನು ಸಾಕಾರ. ನಿರಾಕಾರ ಬ್ರಹ್ಮನ್ ಸಾಕಾರ ರೂಪದಲ್ಲಿ ನೆಲಿಸಿದ್ದಾನೆ. ಹೀಗೆಂದು ಭಗವದ್ಗೀತೆಯಲ್ಲಿ ಹೇಳಿದೆ. ಆದ್ದರಿಂದ ಪ್ರಾರಂಭದಲ್ಲಿ ಕೃಷ್ಣನು ಪ್ರತಿಯೊಂದು ವಸ್ತುವಿನ ಮೂಲ. ಅವನು ಬೇರು. ಮರದ ಬೇರು ಇಡೀ ಮರವನ್ನು ಪೋಷಿಸುವಂತೆ ಕೃಷ್ಣನು ಎಲ್ಲ ವಸ್ತುಗಳ ತಾಯಿ ಬೇರಾದದ್ದರಿಂದ ಈ ಐಹಿಕ ಅಭಿವ್ಯಕ್ತಿಯಲ್ಲಿ ಪ್ರತಿಯೊಂದನ್ನೂ ಪೋಷಿಸುತ್ತಾನೆ. ಇದು ವೇದ ಸಾಹಿತ್ಯದಲ್ಲಿಯೂ (ಕಠ ಉಪನಿಷತ್ತು 2.2.13) ದೃಢಪಟ್ಟಿದೆ -

ನಿತ್ಯೋ ನಿತ್ಯಾನಾಂ ಚೇತನಶ್ಚೇತನಾನಾಮ್ |

ಏಕೋ ಬಹೂನಾಂ ಯೋ ವಿದಧಾತಿ ಕಾಮಾನ್ ||

ಅವನು ಎಲ್ಲ ನಿತ್ಯದಲ್ಲಿಲ ಪ್ರಧಾನ ನಿತ್ಯನು, ಎಲ್ಲ ಜೀವಿಗಳಲ್ಲಿ ಪರಮ ಪುರುಷನು, ಅವನೊಬ್ಬನೇ ಸಮಸ್ತ ಜೀವವನ್ನು ಪೋಷಿಸುವವನು. ಬುದ್ಧಿಶಕ್ತಿಯಿಲ್ಲದೆ ಮನುಷ್ಯನು ಏನನ್ನೂ ಮಾಡಲಾರ. ಕೃಷ್ಣನು ತಾನು ಎಲ್ಲ ಬುದ್ಧಿಶಕ್ತಿಯ ಮೂಲ ಎಂದೂ ಹೇಳುತ್ತಾನೆ. ಮನುಷ್ಯನು ಬುದ್ಧಿವಂತನಲ್ಲದಿದ್ದರೆ ಅವನು ದೇವೋತ್ತಮ ಪರಮ ಪುರುಷನಾದ ಕೃಷ್ಣನನ್ನು ಅರ್ಥಮಾಡಿಕೊಳ್ಳಲಾರ.