Bhagavad Gita: ಮನಸ್ಸು ಅಹಂಕಾರ ಮತ್ತು ಬುದ್ಧಿಯ ಪ್ರತಿನಿಧಿಯಾಗಿರುತ್ತೆ; ಭಗವದ್ಗೀತೆಯ ಸಾರಾಂಶ ಹೀಗಿದೆ-spiritual news bhagavad gita updesh lord krishna these 2 representative of mind bhagavad gita quotes in kannada rmy ,ರಾಶಿ ಭವಿಷ್ಯ ಸುದ್ದಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Bhagavad Gita: ಮನಸ್ಸು ಅಹಂಕಾರ ಮತ್ತು ಬುದ್ಧಿಯ ಪ್ರತಿನಿಧಿಯಾಗಿರುತ್ತೆ; ಭಗವದ್ಗೀತೆಯ ಸಾರಾಂಶ ಹೀಗಿದೆ

Bhagavad Gita: ಮನಸ್ಸು ಅಹಂಕಾರ ಮತ್ತು ಬುದ್ಧಿಯ ಪ್ರತಿನಿಧಿಯಾಗಿರುತ್ತೆ; ಭಗವದ್ಗೀತೆಯ ಸಾರಾಂಶ ಹೀಗಿದೆ

Bhagavad Gita: ಮನಸ್ಸು ಅಹಂಕಾರ ಮತ್ತು ಬುದ್ಧಿಯ ಪ್ರತಿನಿಧಿಯಾಗಿರುತ್ತೆ ಎಂಬುದರ ಅರ್ಥವನ್ನು ಭಗವದ್ಗೀತೆಯ 13 ನೇ ಅಧ್ಯಾಯದ 6 ಮತ್ತು 7ನೇ ಶ್ಲೋಕದಲ್ಲಿ ತಿಳಿಯಿರಿ.

ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.

ಅಧ್ಯಾಯ - 13: ಪ್ರಕೃತಿ, ಪುರುಷ ಹಾಗೂ ಪ್ರಜ್ಞೆ - 6-7

ಮಹಾಭೂತಾನ್ಯಹನ್ಕಾರೋ ಬುದ್ಧಿರವ್ಯಕ್ತಮೇವ ಚ |

ಇನ್ದ್ರಿಯಾಣಿ ದಶೈಕಂ ಚ ಪಞ್ಚಚೇನ್ದ್ರಿಯಗೋಚರಾಃ ||6|

ಇಚ್ಛಾ ದ್ವೇಷಃ ಸುಖಂ ದುಃಖಂ ಸಂಘಾತಶ್ಚೇತನಾ ಧೃತಿ |

ಏತತ್ ಕ್ಷೇತ್ರಂ ಸಮಾಸೇನ ಸವಿಕಾರಮುದಾಹೃತಮ್ ||7||

ಅನುವಾದ: ಪಂಚಮಹಾಭೂತಗಳು, ಅಹಂಕಾರ, ಬುದ್ಧಿ, ಅವ್ಯಕ್ತವಾದದ್ದು, ಹತ್ತು ಇಂದ್ರಿಯಗಳು ಮತ್ತು ಮನಸ್ಸು, ಐದು ಇಂದ್ರಿಯ ವಿಷಯಗಳು, ಬಯಕೆ, ದ್ವೇಷ, ಸುಖ, ದುಃಖ, ಮೊತ್ತ, ಚೇತನ, ಧೃತಿ - ಸಂಕ್ಷೇಪವಾಗಿ ಇವನ್ನು ಕ್ಷೇತ್ರ ಮತ್ತು ಅದರ ಪರಸ್ಪರ ಪ್ರತಿಕ್ರಿಯೆಗಳು ಎಂದು ಪರಿಗಣಿಸುತ್ತಾರೆ.

ಭಾವಾರ್ಥ: ಮಹರ್ಷಿಗಳು, ವೇದಸ್ತೋತ್ರಗಳು ಮತ್ತು ವೇದಾಂತಸೂತ್ರದ ಸೂತ್ರಗಳು ಇವುಗಳ ಅಧಿಕಾರಯುತ ಹೇಳಿಕೆಗಳಿಂದ ಜಗತ್ತಿನ ಘಟಕಾಂಶಗಳನ್ನು ಹೀಗೆ ಅರ್ಥಮಾಡಿಕೊಳ್ಳಬಹುದು. ಮೊದಲನೆಯಾಗಿ ಭೂಮಿ, ನೀರು, ಅಗ್ನಿ, ವಾಯು ಮತ್ತು ಆಕಾಶ ಇವುಗಳಿವೆ. ಇವು ಪಂಚಮಹಾಭೂತಗಳು. ಅನಂತರ ಅಹಂಕಾರ, ಬುದ್ಧಿ ಮತ್ತು ಪ್ರಕೃತಿಯ ಮೂರು ಗುಣಗಳ ಅವ್ಯಕ್ತ ಹಂತ. ಇದಾದ ಮೇಲೆ ತಿಳುವಳಿಕೆಯ ಗ್ರಹಿಕೆಗಾಗಿರುವ ಐದು ಇಂದ್ರಿಯಗಳು - ಕಣ್ಣುಗಳು, ಕಿವಿಗಳು, ಮೂಗು, ನಾಲಿಗೆ ಮತ್ತು ಚರ್ಮ. ಅನಂತರ ಐದು ಕರ್ಮೇಂದ್ರಿಯಗಳು - ಶಬ್ದ, ಕಾಲುಗಳು, ಕೈಗಳು, ಗುದ ಮತ್ತು ಜನನೇಂದ್ರಿಯಗಳು.

ಇಂದ್ರಿಯಗಳ ಮೇಲೆ ಮನಸ್ಸಿದೆ. ಅದು ಒಳಗಿದೆ. ಅದನ್ನು ಅಂತರೇಂದ್ರಿಯ ಎಂದು ಕರೆಯಬಹುದು. ಆದ್ದರಿಂದ ಮನಸ್ಸೂ ಸೇರಿದಂತೆ ಒಟ್ಟು ಹನ್ನೊಂದು ಇಂದ್ರಿಯಗಳಿವೆ. ಅನಂತರ ಐದು ಇಂದ್ರಿಯ ವಸ್ತುಗಳಿವೆ - ವಾಸನೆ, ರುಚಿ, ರೂಪ, ಸ್ಪರ್ಶ ಮತ್ತು ಶಬ್ದ. ಈ ಇಪ್ಪತ್ತನಾಲ್ಕು ಘಟಕಾಂಶಗಳ ಮೊತ್ತವನ್ನು ಕ್ಷೇತ್ರ ಎಂದು ಕರೆಯಲಾಗುತ್ತದೆ. ಈ ಇಪ್ಪತ್ತನಾಲ್ಕು ವಿಷಯಗಳನ್ನು ವಿಶ್ಲೇಷಿಸಿ ಅಧ್ಯಯನ ಮಾಡಿದವನಿಗೆ ಕ್ಷೇತ್ರದ ಅರ್ಥವಾಗುತ್ತದೆ. ಅನಂತರ ಬಯಕೆ, ದ್ವೇಷ, ಸುಖ ಮತ್ತು ದುಃಖಗಳಿವೆ. ಇವು ಕ್ರಿಯೆ ಪ್ರತಿಕ್ರಿಯೆಗಳು. ಜಡದೇಹದ ಪಂಚ ಮಹಾಭೂತಗಳ ನಿರೂಪಣೆಗಳು. ಪ್ರಜ್ಞೆ ಮತ್ತು ದೃಢವಿಶ್ವಾಸಗಳು ಜೀವ ಲಕ್ಷಣಗಳನ್ನು ಪ್ರತಿನಿಧಿಸುತ್ತವೆ. ಜೀವ ಲಕ್ಷಣಗಳು ಸೂಕ್ಷ್ಮದೇಹದ - ಮನಸ್ಸು ಅಹಂಕಾರ ಮತ್ತು ಬುದ್ಧಿಗಳ - ಪ್ರತಿನಿಧಿಯಾಗಿವೆ. ಈ ಸೂಕ್ಷ್ಮಘಟಕಾಂಶಗಳು ಕ್ಷೇತ್ರದಲ್ಲಿ ಸೇರಿವೆ.

ಪಂಚಮಹಾಭೂತಗಳು ಅಹಂಕಾರದ ಒಂದು ಸ್ಥೂಲ ನಿರೂಪಣೆ. ಅಹಂಕಾರವು ಪಾರಿಭಾಷಿಕವಾಗಿ ತಾಮಸಬುದ್ಧಿ ಅಥವಾ ಐಹಿಕ ಪರಿಕಲ್ಪನೆಯ ಪ್ರಾಥಮಿಕ ಘಟ್ಟ. ತಾಮಸಬುದ್ಧಿಯೆಂದರೆ ಅಜ್ಞಾನದ ಬುದ್ಧಿ. ಇದು ಐಹಿಕ ಪ್ರಕೃತಿಯ ಅವ್ಯಕ್ತಗುಣಗಳಿಗೆ ಪ್ರಧಾನ ಎಂದು ಹೆಸರು. ಈ ಇಪ್ಪತ್ನಾಲ್ಕು ಘಟಕಗನ್ನೂ ಮತ್ತು ಅವುಗಳ ಪರಸ್ಪರ ಪ್ರತಿಕ್ರಿಯೆಗಳನ್ನೂ ವಿವರವಾಗಿ ತಿಳಿಯಬಯಸುವವನು ತತ್ವಶಾಸ್ತ್ರವನ್ನು ಇನ್ನೂ ವಿವರವಾಗಿ ಅಭ್ಯಾಸ ಮಾಡಬೇಕು. ಭಗವದ್ಗೀತೆಯಲ್ಲಿ ಸಾರಾಂಶವನ್ನು ಮಾತ್ರ ಕೊಟ್ಟಿದೆ.

ದೇಹವು ಈ ಎಲ್ಲ ಅಂಶಗಳ ನಿರೂಪಣೆ, ದೇಹಕ್ಕೆ ಆರು ಬಗೆಯ ವ್ಯತ್ಯಾಸಗಳುಂಟು - ದೇಹವು ಹುಟ್ಟುತ್ತದೆ, ಬೆಳೆಯುತ್ತದೆ, ಉಳಿಯುತ್ತದೆ, ಉಪ ಉತ್ಪತ್ತಿಗಳನ್ನು ಉತ್ಪಾದಿಸುತ್ತದೆ. ಕ್ಷಯಿಸಲು ಪ್ರಾರಂಭಿಸುತ್ತದೆ ಮತ್ತು ಕಡೆಯ ಘಟ್ಟದಲ್ಲಿ ಮಾಯಾಗುತ್ತದೆ. ಆದುದರಿಂದ ಕ್ಷೇತ್ರವು ಅನಿತ್ಯವಾದ ಭೌತಿಕ ವಸ್ತು. ಆದರೆ ಅದರ ಒಡೆಯನಾದ ಕ್ಷೇತ್ರಜ್ಞನು ಅದರಿಂದ ಬೇರೆಯಾದವನು.

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.