Bhagavad Gita: ಮನುಷ್ಯನಿಗೆ ಅತಿ ಮೋಹ, ಅತಿ ನಿರ್ಮೋಹ ಎರಡೂ ಒಳ್ಳೆಯದಲ್ಲ; ಗೀತೆಯ ಸಾರಾಂಶ ಹೀಗಿದೆ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Bhagavad Gita: ಮನುಷ್ಯನಿಗೆ ಅತಿ ಮೋಹ, ಅತಿ ನಿರ್ಮೋಹ ಎರಡೂ ಒಳ್ಳೆಯದಲ್ಲ; ಗೀತೆಯ ಸಾರಾಂಶ ಹೀಗಿದೆ

Bhagavad Gita: ಮನುಷ್ಯನಿಗೆ ಅತಿ ಮೋಹ, ಅತಿ ನಿರ್ಮೋಹ ಎರಡೂ ಒಳ್ಳೆಯದಲ್ಲ; ಗೀತೆಯ ಸಾರಾಂಶ ಹೀಗಿದೆ

Bhagavad Gita Updesh: ಮನುಷ್ಯನಿಗೆ ಅತಿ ಮೋಹ, ಅತಿ ನಿರ್ಮೋಹ ಎರಡೂ ಒಳ್ಳೆಯದಲ್ಲ ಎಂಬುದರ ಅರ್ಥವನ್ನು ಭಗವದ್ಗೀತೆಯ 10ನೇ ಅಧ್ಯಾಯದ 4 ಮತ್ತು 5ನೇ ಶ್ಲೋಕದ ಮುಂದುವರಿದ ಭಾಗದಲ್ಲಿ ತಿಳಿಯಿರಿ.

ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.

ಅಧ್ಯಾಯ 10 - ವಿಭೂತಿ ಯೋಗ - ಶ್ಲೋಕ 4-5

ಬುದ್ಧಿರ್ಜ್ಞಾನಮಸಮ್ಮೋಹಃ ಕ್ಷಮಾ ಸತ್ಯಂ ದಮಃ ಶಮಃ|

ಸುಖಂ ದುಃಖಂ ಭವೋಭಾವೋ ಭಯಂ ಚಾಭಯಮೇ ಚ||4||

ಅಹಿಂಸಾ ಸಮತಾ ತುಷ್ಟಿಸ್ತಪೋ ದಾನಂ ಯಶೋಯಶಃ|

ಭವಂತಿ ಭಾವಾ ಭೂತಾನಾಂ ಮತ್ತ ಏವ ಪೃಥಗ್‌ವಿಧಾಃ ||5||

ಭಗವದ್ಗೀತೆಯ 10ನೇ ಅಧ್ಯಾಯದ ಶ್ಲೋಕ 4 ಮತ್ತು 5ನೇ ಶ್ಲೋಕದ ಮುಂದುವರಿದ ಭಾಗದಲ್ಲಿ ಸಮತಾ ಅಥವಾ ಸಮಚಿತ್ತ ಎನ್ನುವುದು ಮೋಹ ಮತ್ತು ಜುಗುಪ್ಪೆಗಳಿಂದ ಬಿಡುಗಡೆಯನ್ನು ಸೂಚಿಸುತ್ತದೆ. ಅತಿ ಮೋಹ, ಅತಿ ನಿರ್ಮೋಹ ಎರಡೂ ಒಳ್ಳೆಯದಲ್ಲ. ಈ ಐಹಿಕ ಜಗತ್ತನ್ನು ಮೋಹವಿಲ್ಲದೆ, ದುಗುಪ್ಸೆ ಇಲ್ಲದೆ ಒಪ್ಪಿಕೊಳ್ಳಬೇಕು. ಕೃಷ್ಣಪ್ರಜ್ಞೆಯನ್ನು ಮುಂದುವರಿಸಲು ಯಾವುದು ನೆರವಾಗುವುದೋ ಅದನ್ನು ಒಪ್ಪಿಕೊಳ್ಳಬೇಕು. ಪ್ರತಿಕೂಲವಾದದ್ದನ್ನು ಬಿಡುಬೇಕು. ಇದಕ್ಕೆ ಸಮತಾ, ಸಮಚಿತ್ತ ಎಂದು ಹೆಸರು. ಕೃಷ್ಣಪ್ರಜ್ಞೆಯಲ್ಲಿರುವವನು ಏನನ್ನೇ ಆಗಲಿ ಕೃಷ್ಣಪ್ರಜ್ಞೆಯ ಬೆಳವಣಿಗೆಗೆ ನೆರವಾಗುತ್ತದೆಯೇ ಎಂಬ ದೃಷ್ಟಿಯಿಂದ ಅಲ್ಲದೆ, ಬೇರಾವ ದೃಷ್ಟಿಯಿಂದಲೂ ಸ್ವೀಕರಿಸಬೇಕಾಗಿಲ್ಲ. ನಿರಾಕರಿಸಲೂ ಬೇಕಾಗಿಲ್ಲ. (Bhagavad Gita Updesh in Kannada)

ತುಷ್ಟಿ, ಅಥವಾ ತೃಪ್ತಿ ಎಂದರೆ ಅನಗತ್ಯವಾದ ಚಟುವಟಿಕೆಗಳಿಂದ ಹೆಚ್ಚು ಹೆಚ್ಚು ಪ್ರಾಪಂಚಿಕ ವಸ್ತುಗಳನ್ನು ಸಂಗ್ರಹಿಸಲು ಮನುಷ್ಯನು ಕಾತರನಾಗಿರಬಾರದು ಎಂದು ಅರ್ಥ. ಪರಮ ಪ್ರಭುವಿನ ಕೃಪೆಯಿಂದ ದೊರಕಿದುದರಲ್ಲಿ ತೃಪ್ತಿ ಕಾರಣಬೇಕು. ಇದು ತುಷ್ಟಿ. ತಪ್ಪಸು ಎಂದರೆ ವ್ರತ. ತಪಸ್ಸುಗಳನ್ನು ಆಚರಿಸುವುದು, ಬೆಳಗ್ಗೆ ಬೇಗನೆ ಏಳುವುದು, ಸ್ನಾನ ಮಾಡುವುದು. ವೇದಗಳಲ್ಲಿ ಹೇಳಿರುವ ಇಂತಹ ಹಲವಾರು ನಿಯಮ ನಿಬಂಧನೆಗಳು ಇಲ್ಲಿ ಅನ್ವಯಿಸುತ್ತವೆ. ಕೆಲವೊಮ್ಮೆ ಬೆಳಗ್ಗೆ ಬೇಗ ಏಳುವುದು ಬಹು ಕಷ್ಟವಾಗುತ್ತದೆ. ಈ ರೀತಿಯಲ್ಲಿ ಸ್ವ ಇಚ್ಛೆಯಿಂದ ಪಡುವ ಶ್ರಮಕ್ಕೆ ತಪಸ್ಸು ಎಂದು ಹೆಸರು. ಹಾಗೆಯೇ ತಿಂಗಳಿನಲ್ಲಿ ಕೆಲವು ದಿನಗಳು ಉಪವಾಸ ಮಾಡಬೇಕೆಂದು ವಿಧಿಸಿದೆ.

ಇಂತಹ ಉಪವಾಸವನ್ನು ಮಾಡಲು ಮನುಷ್ಯನಿಗೆ ಇಷ್ಟವಿಲ್ಲದಿರಬಹುದು. ಆದರೆ ಕೃಷ್ಣಪ್ರಜ್ಞೆಯಲ್ಲಿ ಪ್ರಗತಿ ಸಾಧಿಸಬೇಕೆಂಬ ಸಂಕಲ್ಪದಿಂದಾಗಿ ಆತನು, ಇಂತಹ ದೇಹ ಶ್ರಮಗಳನ್ನು ಮಾಡಬೇಕೆಂದು ಸೂಚಿಸಿದಾಗ ಅದನ್ನು ಒಪ್ಪಿಕೊಳ್ಳಬೇಕು. ಆದರೆ ವೇದಗಳ ಆದೇಶಕ್ಕೆ ವಿರುದ್ಧವಾಗಿ, ಅನಗತ್ಯವಾಗಿ ಉಪವಾಸ ಮಾಡಬಾರದು. ರಾಜಕೀಯ ಕಾರಮಗಳಿಗಾಗಿ ಉಪವಾಸ ಮಾಡಬಾರದು. ಇದನ್ನು ಭಗವದ್ಗೀತೆಯಲ್ಲಿ ಅಜ್ಞಾನದಲ್ಲಿ ಮಾಡಿದ ಉಪವಾಸ ಎಂದು ವರ್ಣಿಸಿದೆ. ತಾಮಸದಲ್ಲಿ ಅಥವಾ ರಾಜಸ ಪ್ರವೃತ್ತಿಯಲ್ಲಿ ಏನನ್ನು ಮಾಡಿದರೂ ಅದು ಅಧ್ಯಾತ್ಮಿಕ ಮುನ್ನಡೆಗೆ ಸಾಧನವಾಗಲಾರದು. ಸಾತ್ವಿಕವಾಗಿ ಏನನ್ನು ಮಾಡಿದರೂ ಅದು ಮನುಷ್ಯನನ್ನು ಮುನ್ನಡೆಸುತ್ತದೆ. ವೇದಗಳ ಆದೇಶದಂತೆ ಮಾಡಿದ ಉಪವಾಸವು ಮುನಷ್ಯನನ್ನು ಅಧ್ಯಾತ್ಮಿಕ ಜ್ಞಾನದಲ್ಲಿ ಶ್ರೀಮಂತಗೊಳಿಸುತ್ತದೆ.

ದಾನದ ವಿಷಯ ಹೇಳುವುದಾದರೆ, ಮನುಷ್ಯನು ತನ್ನ ಸಂಪಾದನೆಯಲ್ಲಿ ಅರ್ಧ ಭಾಗವನ್ನು ಯಾವುದಾದರೂ ಒಳ್ಳೆಯ ಕಾರ್ಯಕ್ಕೆ ಕೊಡಬೇಕು. ಒಳ್ಳೆಯ ಕಾರ್ಯ ಯಾವುದು? ಕೃಷ್ಣಪ್ರಜ್ಞೆಗೆ ಅನುಗುಣವಾಗಿ ನಡೆಸುವ ಕಾರ್ಯ. ಅದು ಒಳ್ಳೆಯ ಕಾರ್ಯಮಾತ್ರವಲ್ಲ, ಅತ್ಯಂತ ಶ್ರೇಷ್ಠಕಾರ್ಯ. ಕೃಷ್ಣನು ಒಳ್ಳೆಯವನು. ಆದುದರಿಂದ ಅವನಿಗಾಗಿ ಮಾಡುವ ಕಾರ್ಯವು ಒಳ್ಳೆಯದು. ಆದುದರಿಂದ ಕೃಷ್ಣಪ್ರಜ್ಞೆಯಲ್ಲಿ ನಿರತನಾಗಿರುವ ಮನುಷ್ಯನಿಗೆ ದಾವನ್ನುಕೊಡಬೇಕು.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.