ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Bhagavad Gita: ದುಷ್ಕರ್ಮಿಗಳನ್ನು ಶಿಕ್ಷಿಸುವ ಸಾಧನ ಭಗವಂತನ ಪ್ರತಿನಿಧಿ; ಗೀತೆಯ ಅರ್ಥ ತಿಳಿಯಿರಿ

Bhagavad Gita: ದುಷ್ಕರ್ಮಿಗಳನ್ನು ಶಿಕ್ಷಿಸುವ ಸಾಧನ ಭಗವಂತನ ಪ್ರತಿನಿಧಿ; ಗೀತೆಯ ಅರ್ಥ ತಿಳಿಯಿರಿ

Bhagavad Gita Updesh: ದುಷ್ಕರ್ಮಿಗಳನ್ನು ಶಿಕ್ಷಿಸುವ ಸಾಧನ ಭಗವಂತನ ಪ್ರತಿನಿಧಿ ಎಂಬುದರ ಅರ್ಥವನ್ನು ಭಗವದ್ಗೀತೆಯ 10ನೇ ಅಧ್ಯಾಯದ 37 ಮತ್ತು 38ನೇ ಶ್ಲೋಕದಲ್ಲಿ ವಿವರಿಸಲಾಗಿದೆ.

ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.

ಅಧ್ಯಾಯ 10 - ವಿಭೂತಿ ಯೋಗ -ಶ್ಲೋಕ - 37

ವೃಷ್ಣೀನಾಂ ವಾಸುದೇವೋಸ್ಮಿ ಪಾಣ್ಡವಾನಾಂ ಧನಞ್ಜಯಃ |

ಮುನೀನಾಮಪ್ಯಹಂ ವ್ಯಾಸಃ ಕವೀನಾಮುಶನಾ ಕವಿಃ ||37||

ಅನುವಾದ: ವೃಷ್ಣಿವಂಶದವರಲ್ಲಿ ನಾನು ವಾಸುದೇವ. ಪಾಂಡವರಲ್ಲಿ ನಾನು ಅರ್ಜುನ. ಋಷಿಗಳಲ್ಲಿ ನಾನು ವ್ಯಾಸ. ಮಹಾಚಿಂತಕರಲ್ಲಿ ನಾನು ಉಶನಾ.

ಭಾವಾರ್ಥ: ಕೃಷ್ಣನು ದೇವೋತ್ತಮ ಪರಮ ಪುರುಷನು, ಬಲದೇವನು ಅವನ ನಿಕಟ ವಿಸ್ತರಣೆ. ಕೃಷ್ಣನೂ ಬಲದೇವನೂ ವಾಸುದೇವನ ಮಕ್ಕಳಾಗಿ ಕಾಣಿಸಿಕೊಂಡರು. ಆದುದರಿಂದ ಇಬ್ಬರನ್ನೂ ವಾಸುದೇವ ಎಂದು ಕರೆಯಬಹುದು. ಇನ್ನೊಂದು ದೃಷ್ಟಿಯಿಂದ ನೋಡಿದರೆ, ಕೃಷ್ಣನು ಬೃಂದಾವನವನ್ನು ಬಿಡುವುದೇ ಇಲ್ಲವಾದುದರಿಂದ ಬೇರೆಡೆ ಕಾಣುವ ಕೃಷ್ಣ ಸ್ವರೂಪಗಳೆಲ್ಲ ಅವನ ವಿಸ್ತರಣೆಗಳೇ (Bhagavad Gita Updesh in Kannada).

ವಾಸುದೇವನು ಕೃಷ್ಣನ ನಿಕಟ ವಿಸ್ತರಣೆ. ಆದುದರಿಂದ ವಾಸುದೇವನು ಕೃಷ್ಣನಿಗಿಂತ ಬೇರೆಯಲ್ಲ. ಈ ಶ್ಲೋಕದಲ್ಲಿ ಹೆಸರಿಸಿರುವ ವಾಸುದೇವನು ಬಲದೇವ ಅಥವಾ ಬಲರಾಮ. ಏಕೆಂದರೆ ಅವನು ಎಲ್ಲ ಅವತಾರಗಳ ಆದಿ ಮೂಲ. ಆದುದರಿಂದ ವಾಸುದೇವನಿಗೆ ಅವನು ಏಕಮಾತ್ರ ಮೂಲ ಎಂದು ಅರಿತುಕೊಳ್ಳಬೇಕು. ಪ್ರಭವಿನ ನಿಕಟ ವಿಸ್ತರಣೆಗಳಿಗೆ ಸ್ವಾಂಶ (ವೈಯಕ್ತಿಕ ವಿಸ್ತರಣೆ) ಎಂದು ಹೆಸರು. ವಿಭಿನ್ನಾಂಶ (ಭಿನ್ನವಾದ ವಿಸ್ತರಣೆಗಳು) ಎಂದು ಕರೆಯುವ ವಿಸ್ತರಣೆಗಳೂ ಇವೆ.

ಪಾಂಡುವಿನ ಮಕ್ಕಳಲ್ಲಿ ಅರ್ಜುನನು ಧನಂಜಯನೆಂದು ಹೆಸರಾದವನು. ಅವನು ಪುರುಷ ಶ್ರೇಷ್ಠ. ಆದುದರಿಂದ ಕೃಷ್ಣನನ್ನು ಪ್ರತಿನಿಧಿಸುತ್ತಾನೆ. ಮುನಿಗಳಲ್ಲಿ ಅಥವಾ ವೇದಗಳನ್ನು ಬಲ್ಲ ವಿದ್ವಾಂಸರಲ್ಲಿ ವ್ಯಾಸರೇ ಎಲ್ಲರಿಗಿಂತ ಶ್ರೇಷ್ಠರು. ಏಕೆಂದರೆ, ಈ ಕಲಿಯುಗದಲ್ಲಿ ಜನಸಾಮಾನ್ಯರಿಗೂ ವೇದಗಳು ತಿಳಿಯಲೆಂದು ವೇದಗಳನ್ನು ಬೇರೆ ಬೇರೆ ರೀತಿಗಳಲ್ಲಿ ವಿವರಿಸಿದ ವ್ಯಾಸರು ಕೃಷ್ಣನ ಅವತಾರವೆಂದೂ ಪ್ರಸಿದ್ಧ. ಆದುದರಿಂದ ವ್ಯಾಸರೂ ಕೃಷ್ಣನ ಪ್ರತಿನಿಧಿ. ಯಾವುದಾದರೂ ವಿಷಯವನ್ನು ಕೂಲಂಕಷವಾಗಿ ಯೋಚಿಸಬಲ್ಲವರು ಕವಿಗಳು. ಕವಿಗಳಲ್ಲಿ ಉಶನಾ. ಶ್ರಕ್ರಾಚಾರ್ಯರು ದಾವನರ ಗುರು. ಅವರು ಬಹು ಬುದ್ಧಿವಂತರು. ದೂರದೃಷ್ಟಿಯ ರಾಜನೀತಜ್ಞರು. ಆದುದರಿಂದ ಶುಕ್ರಾಚಾರ್ಯರು ಕೃಷ್ಣನ ಮಹಿಮೆಯ ಮತ್ತೊಬ್ಬ ಪ್ರತಿನಿಧಿ.

ಅಧ್ಯಾಯ 10 - ವಿಭೂತಿ ಯೋಗ -ಶ್ಲೋಕ - 38

ದಣ್ಡೋ ದಮಯತಾಮಸ್ಮಿ ನೀತಿರಸ್ಮಿ ಜಿಗೀಷತಾಮ್ |

ಮೌನಂ ಚೈವಾಸ್ಮಿ ಗುಣ್ಯಾನಾಂ ಜ್ಞಾನಂ ಜ್ಞಾನವತಾಮಹಮ್ ||38||

ಅನುವಾದ: ಶಾಸನ ಅವಿಧೇಯತೆಯನ್ನು ದಮನ ಮಾಡುವ ರೀತಿಗಳಲ್ಲಿ ನಾನು ಶಿಕ್ಷೆ, ಜಯವನ್ನು ಅರಸುವವರಲ್ಲಿ ನಾನು ನೀತಿ, ಗುಹ್ಯ ವಿಷಯಗಳಲ್ಲಿ ನಾನು ಮೌನ, ಜ್ಞಾನಿಗಳ ಜ್ಞಾನ ನಾನು.

ಭಾವಾರ್ಥ: ದಮನ ಮಾಡುವ ಸಾಧನಗಳು ಹಲವು. ಇವುಗಳಲ್ಲಿ ದುಷ್ಕರ್ಮಿಗಳನ್ನು ಕತ್ತರಿಸಿ ಹಾಕುವ ಸಾಧನಗಳು ತುಂಬ ಮುಖ್ಯವಾದವು. ದುಷ್ಕರ್ಮಿಗಳನ್ನು ಕತ್ತರಿಸಿ ಶಿಕ್ಷೆ ಮಾಡಿದಾಗ ಶಿಕ್ಷೆಯ ಸಾಧನವು ಕೃಷ್ಣನ ಪ್ರತಿನಿಧಿ. ಯಾವುದಾದರೂ ಕಾರ್ಯಕ್ಷೇತ್ರದಲ್ಲಿ ವಿಜಯವನ್ನು ಸಾಧಿಸಲು ಪ್ರಯತ್ನಿಸುವವರ ನಡುವೆ ಅತ್ಯಂತ ಜಯಶಾಲಿ ಅಂಶ ನೀತಿ. ಶ್ರವಣ, ಚಿಂತನ ಮತ್ತು ಧ್ಯಾನ ಈ ಗುಹ್ಯ ಚಟುವಟಿಕೆಗಳಲ್ಲಿ ಮೌನವೇ ತುಂಬ ಮುಖ್ಯ. ಏಕೆಂದರೆ ಮೌನದಿಂದ ಮನುಷ್ಯನು ಬಹುಶೀಘ್ರವಾಗಿ ಮುಂದುವರಿಯಬಲ್ಲ. ಜಡವಸ್ತು ಮತ್ತು ಚೇತನ - ಇವುಗಳ ನಡುವೆ, ಭಗವಂತನ ಮೇಲ್ಮಟ್ಟದ ಮತ್ತು ಕೆಳಮಟ್ಟದ ಪ್ರಕೃತಿಗಳ ನಡುವೆ ವ್ಯತ್ಯಾಸವನ್ನು ಕಾಣಬಲ್ಲವನು ಜ್ಞಾನಿ. ಇಂತಹ ಜ್ಞಾನವು ಸ್ವಯಂ ಕೃಷ್ಣನೇ.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.