ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Bhagavad Gita: ಅರ್ಜುನನಂತೆ ಶ್ರೀಕೃಷ್ಣನ ಪರಮ ಸತ್ಯವನ್ನು ತಿಳಿದುಕೊಳ್ಳಬೇಕು; ಗೀತೆಯ ಅರ್ಥ ತಿಳಿಯಿರಿ

Bhagavad Gita: ಅರ್ಜುನನಂತೆ ಶ್ರೀಕೃಷ್ಣನ ಪರಮ ಸತ್ಯವನ್ನು ತಿಳಿದುಕೊಳ್ಳಬೇಕು; ಗೀತೆಯ ಅರ್ಥ ತಿಳಿಯಿರಿ

Bhagavad Gita Updesh: ಅರ್ಜುನನಂತೆ ಶ್ರೀಕೃಷ್ಣನ ಪರಮ ಸತ್ಯವನ್ನು ತಿಳಿದುಕೊಳ್ಳಬೇಕು ಎಂಬುದರ ಅರ್ಥವನ್ನು ಭಗವದ್ಗೀತೆಯ 10 ಅಧ್ಯಾಯದ 14ನೇ ಶ್ಲೋಕದಲ್ಲಿ ಓದಿ.

ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.

ಅಧ್ಯಾಯ 10 - ವಿಭೂತಿ ಯೋಗ -ಶ್ಲೋಕ - 14

ಸರ್ವಮೇತದ್ ಋತಂ ಮನ್ಯೇ ಯನ್ಮಾಂ ವದಸಿ ಕೇಶವ |

ನ ಹಿ ತೇ ಭಗವನ್ ವ್ಯಕ್ತಿಂ ವಿದುರ್ದೇವಾ ನ ದಾನವಾಃ ||14||

ಅನುವಾದ: ಕೃಷ್ಣ, ನೀನು ನನಗೆ ಹೇಳುವುದನ್ನೆಲ್ಲ ಸತ್ಯವೆಂದು ಸಂಪೂರ್ಣವಾಗಿ ಒಪ್ಪಿಕೊಳ್ಳುತ್ತೇನೆ. ಪ್ರಭುವೇ, ದೇವತೆಗಳಾಗಲಿ ದಾನವರಾಗಲಿ ನಿನ್ನ ವ್ಯಕ್ತಿತ್ವವನ್ನು ಅರ್ಥಮಾಡಿಕೊಳ್ಳಲಾರರು.

ಭಾವಾರ್ಥ: ಶ್ರದ್ಧೆಯಿಲ್ಲದವರು ಮತ್ತು ದಾನವ ಸ್ವಭಾವದವರು ಕೃಷ್ಣನನ್ನು ಅರ್ಥ ಮಾಡಿಕೊಳ್ಳಲಾರರು. ದೇವತೆಗಳು ಸಹ ಅವನನ್ನು ತಿಳಿಯಲಾರರು. ಇನ್ನು ಆಧುನಿಕ ಜಗತ್ತಿನಲ್ಲಿ ವಿದ್ವಾಂಸರೆಂದು ಕರೆಸಿಕೊಳ್ಳುವವರ ಪಾಡೇನು? ಪರಮ ಪ್ರಭುವಿನ ಕೃಪೆಯಿಂದ ಅರ್ಜುನನು ಪರಮಸತ್ಯವು ಕೃಷ್ಣ ಮತ್ತು ಅವನು ಪರಿಪೂರ್ಣನು ಎಂದು ಅರ್ಥಮಾಡಿಕೊಂಡಿದ್ದಾನೆ. ಆದುದರಿಂದ ಅರ್ಜುನನ ಮಾರ್ಗವನ್ನು ಅನುಸರಿಬೇಕು. ಅವನು ಭಗವದ್ಗೀತೆಯ ಪ್ರಮಾಣವನ್ನು ಸ್ವೀಕರಿಸಿದನು. ನಾಲ್ಕನೆಯ ಅಧ್ಯಾಯದಲ್ಲಿ ವರ್ಣಿಸಿದಂತೆ ಭಗವದ್ಗೀತೆಯನ್ನು (Bhagavad Gita) ಅರ್ಥಮಾಡಿಕೊಳ್ಳಲು ಗುರುಶಿಷ್ಯ ಪರಂಪರೆಯು ಕಳೆದು ಹೋಗಿತ್ತು (Bhagavad Gita Updesh in Kannada).

ಅರ್ಜುನನನ್ನು ತನ್ನ ಅಪ್ತಸ್ನೇಹಿತನೆಂದು, ಶ್ರೇಷ್ಠ ಭಕ್ತನೆಂದು ಭಾವಿಸಿ ಕೃಷ್ಣನು ಅರ್ಜುನನೊಡನೆ ಆ ಗುರುಶಿಷ್ಯ ಪರಂಪರೆಯನ್ನು ಮತ್ತೆ ಪ್ರಾರಂಭಿಸಿದನು. ಆದುದರಿಂದ ಗೀತೋಪನಿಷತ್ತಿಗೆ ಬರೆದ ನಮ್ಮ ಮುನ್ನಡಿಯಲ್ಲಿ ಹೇಳುವಂತೆ ಭಗವದ್ಗೀತೆಯನ್ನು ಪರಂಪರೆಯ ರೂಢಿಯಲ್ಲಿ ಅರ್ಥ ಮಾಡಿಕೊಳ್ಳಬೇಕು. ಪರಂಪರೆಯ ರೂಢಿಯು ಕಳೆದುಹೋದಾಗ ಅದಕ್ಕೆ ಮತ್ತೆ ಚೈತನ್ಯವನ್ನು ಕೊಡಲು ಅರ್ಜುನನನ್ನು ಆರಿಸಲಾಯಿತು. ಕೃಷ್ಣನು ಹೇಳಿದುದನ್ನೆಲ್ಲ ಅರ್ಜುನನು ಸ್ವೀಕರಿಸುತ್ತಾನೆ. ಅದನ್ನು ನಾವು ಮೇಲ್ಪಂಕ್ತಿಯಾಗಿ ಅನುಸರಿಸಬೇಕು. ಆಗ ನಾವು ಭಗವದ್ಗೀತೆಯ ತಿರುಳನ್ನು ತಿಳಿಯಬಲ್ಲೆವು. ಮತ್ತು ಆಗ ಮಾತ್ರ ಕೃಷ್ಣನು ದೇವೋತ್ತಮ ಪರಮ ಪುರುಷನೆಂದು ಅರ್ಥಮಾಡಿಕೊಳ್ಳಬಲ್ಲೆವು.

ಅಧ್ಯಾಯ 10 - ವಿಭೂತಿ ಯೋಗ -ಶ್ಲೋಕ - 16

ವಕ್ತುಮರ್ಹಸ್ಯಶೇಷೇಣ ದಿವ್ಯಾ ಹ್ಯಾತ್ಮವಿಭೂತಯಃ |

ಯಾಭಿರ್ವಿಭೂತಿಭಿರ್ಲೋಕಾನಿಮಾಂಸ್ತ್ವಂ ವ್ಯಾಪ್ಯ ತಿಷ್ಠಸಿ ||16||

ಅನುವಾದ: ಯಾವ ದೈವಿಕ ಸಂಪತ್ತುಗಳಿಂದ ನೀನು ಈ ಎಲ್ಲ ಜಗತ್ತುಗಳನ್ನು ವ್ಯಾಪಿಸಿರುವೆಯೋ ಅವನ್ನು ಕುರಿತು ನಿನಗೆ ವಿವರವಾಗಿ ಹೇಳು.

ಭಾವಾರ್ಥ: ದೇವೋತ್ತಮ ಪರಮ ಪುರುಷನಾದ ಕೃಷ್ಣನನ್ನು ತಾನು ಅರ್ಥಮಾಡಿಕೊಂಡಿದ್ದರಿಂದ ಅರ್ಜುನನಿಗೆ ಆಗಲೇ ತೃಪ್ತಿಯಾಗಿದೆ ಎಂದು ಈ ಶ್ಲೋಕದಲ್ಲಿ ಕಾಣುತ್ತದೆ. ಕೃಷ್ಣನ ಕೃಪೆಯಿಂದ ಅರ್ಜುನನಿಗೆ ವೈಯಕ್ತಿಕ ಅನುಭವವಿದೆ, ಬುದ್ಧಿಶಕ್ತಿಯಿದೆ, ಜ್ಞಾನವಿದೆ ಮತ್ತು ಈ ಸಾಧನಗಳಿಂದ ಮನುಷ್ಯನಿಗೆ ಬರಬಹುದಾದುದೆಲ್ಲ ಇದೆ. ಆತನು ಕೃಷ್ಣನನ್ನು ದೇವೋತ್ತಮ ಪರಮ ಪುರುಷನೆಂದು ಅರ್ಥಮಾಡಿಕೊಂಡಿದ್ದಾನೆ.

ಅವನಿಗೆ ಯಾವ ಸಂಶಯವೂ ಇಲ್ಲ. ಆದರೂ ಕೃಷ್ಣನು ತನ್ನ ಸರ್ವವ್ಯಾಪಿ ಸ್ವಭಾವವನ್ನು ವಿವರಿಸಬೇಕೆಂದು ಕೃಷ್ಣನನ್ನು ಕೇಳುತ್ತಿದ್ದಾನೆ. ಸಾಮಾನ್ಯವಾಗಿ ಜನರು, ವಿಶೇಷವಾಗಿ ನಿರಾಕಾರವಾದಿಗಳು ಮುಖ್ಯವಾಗಿ ಪರಮದ ಸರ್ವವ್ಯಾಪಿ ಸ್ವಭಾವವನ್ನು ಕುರಿತು ಆಸಕ್ತಿ ಹೊಂದಿರುತ್ತಾನೆ. ಆದುದರಿಂದ ಅರ್ಜುನನು ಕೃಷ್ಣನನ್ನು ಅವನ ವಿವಿಧ ಶಕ್ತಿಗಳ ಮೂಲಕ ತನ್ನ ಸರ್ವವ್ಯಾಪಿ ಸ್ವರೂಪದಲ್ಲಿ ಹೇಗೆ ಅಸ್ತಿತ್ವದಲ್ಲಿದ್ದಾನೆ ಎಂದು ಕೇಳುತ್ತಿದ್ದಾನೆ. ಅರ್ಜುನನು ಇದನ್ನು ಸಾಮಾನ್ಯಜನರ ಪರವಾಗಿ ಕೇಳುತ್ತಿದ್ದಾನೆ ಎನ್ನುವುದನ್ನು ಅರ್ಥಮಾಡಿಕೊಳ್ಳಬೇಕು.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)