Bhagavad Gita: ವ್ಯಕ್ತಿಗತ ಆತ್ಮನ ಪರಮಗುರಿ ಯಾವುದು, ವ್ಯಕ್ತಿಗತ ಆತ್ಮದ ವಾಸ್ತವಿಕ ರೂಪವೇನು; ಭಗವದ್ಗೀತೆಯ ಅರ್ಥ ತಿಳಿಯಿರಿ-spiritual news bhagavad gita updesh lord krishna ultimate goal of soul bhagavad gita quotes in kannada rmy ,ರಾಶಿ ಭವಿಷ್ಯ ಸುದ್ದಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Bhagavad Gita: ವ್ಯಕ್ತಿಗತ ಆತ್ಮನ ಪರಮಗುರಿ ಯಾವುದು, ವ್ಯಕ್ತಿಗತ ಆತ್ಮದ ವಾಸ್ತವಿಕ ರೂಪವೇನು; ಭಗವದ್ಗೀತೆಯ ಅರ್ಥ ತಿಳಿಯಿರಿ

Bhagavad Gita: ವ್ಯಕ್ತಿಗತ ಆತ್ಮನ ಪರಮಗುರಿ ಯಾವುದು, ವ್ಯಕ್ತಿಗತ ಆತ್ಮದ ವಾಸ್ತವಿಕ ರೂಪವೇನು; ಭಗವದ್ಗೀತೆಯ ಅರ್ಥ ತಿಳಿಯಿರಿ

Bhagavad Gita: ವ್ಯಕ್ತಿಗತ ಆತ್ಮನ ಪರಮಗುರಿ ಯಾವುದು, ವ್ಯಕ್ತಿಗತ ಆತ್ಮದ ವಾಸ್ತವಿಕ ರೂಪವೇನು ಎಂಬುದರ ಅರ್ಥವನ್ನು ಭಗವದ್ಗೀತೆಯ 13 ನೇ ಅಧ್ಯಾಯದ 4 ನೇ ಶ್ಲೋಕದಲ್ಲಿ ಓದಿ.

ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.

ಅಧ್ಯಾಯ - 13: ಪ್ರಕೃತಿ, ಪುರುಷ ಹಾಗೂ ಪ್ರಜ್ಞೆ - ಶ್ಲೋಕ 4

ತತ್ ಕ್ಷೇತ್ರಂ ಯಚ್ಚ ಯಾದೃಕ್ ಚ ಯದ್ವಿಕಾರಿ ಯತಶ್ಚ ಯತ್ |

ಸ ಚ ಯೋ ಯತ್ಪ್ರಭಾವಶ್ಚ ತತ್ ಸಮಾಸೇನ ಮೇ ಶೃಣು ||4|

ಅನುವಾದ: ಈ ಕಾರ್ಯಕ್ಷೇತ್ರ ಮತ್ತು ಅದರ ಸ್ವರೂಪ, ಅದರಲ್ಲಿ ಆಗುವ ಬದಲಾವಣೆಗಳು, ಅದು ಹೇಗೆ ಉತ್ಪತ್ತಿಯಾಯಿತು? ಕಾರ್ಯಕ್ಷೇತ್ರವನ್ನು ಬಲ್ಲವನು ಯಾರು ಮತ್ತು ಅವನ ಪ್ರಭಾವಗಳು ಯಾವುವು ಎನ್ನುವುದನ್ನು ಕುರಿತು ನನ್ನ ಸಂಕ್ಷಿಪ್ತವಾದ ವಿವರಣೆಯನ್ನು ಕೇಳು.

ಭಾವಾರ್ಥ: ಕಾರ್ಯಕ್ಷೇತ್ರ ಮತ್ತು ಕಾರ್ಯಕ್ಷೇತ್ರವನ್ನು ತಿಳಿದವನು ಇವುಗಳ ಸಹಜ ಸ್ವರೂಪವನ್ನು ಇಲ್ಲಿ ಪ್ರಭವು ವರ್ಣಿಸುತ್ತಿದ್ದಾನೆ. ಈ ದೇಹದ ರಚನೆ ಎಂತಹುದು, ಅದನ್ನು ಯಾವ ವಸ್ತುಗಳಿಂದ ಮಾಡಿದೆ, ಯಾರ ನಿಯಂತ್ರಣದಲ್ಲಿ ಈ ದೇಹವು ಕೆಲಸ ಮಾಡುತ್ತಿದೆ, ಬದಲಾವಣೆಗಳು ಹೇಗೆ ಆಗುತ್ತವೆ, ಬದಲಾವಣೆಗಳ ಮೂಲಕ ಯಾವುದು, ಅವುಗಳ ಕಾರಣಗಳೇನು, ವ್ಯಕ್ತಿಗತ ಆತ್ಮನ ಪರಮಗುರಿ ಯಾವುದು ಮತ್ತು ವ್ಯಕ್ತಿಗತ ಆತ್ಮದ ವಾಸ್ತವಿಕ ರೂಪವೇನು - ಇವುಗಳನ್ನು ತಿಳಿದುಕೊಳ್ಳಬೇಕು. ವ್ಯಕ್ತಿಗತ ಆತ್ಮ ಮತ್ತು ಪರಮಾತ್ಮನ ನಡುವಣ ವ್ಯತ್ಯಾಸ, ಅವರ ಭಿನ್ನ ಪ್ರಭಾವಗಳು, ಅವರ ಸುಪ್ತಶಕ್ತಿಗಳು ಇವನ್ನೂ ತಿಳಿದುಕೊಳ್ಳಬೇಕು.

ದೇವೋತ್ತಮ ಪರಮ ಪುರುಷನು ಕೊಟ್ಟಿರುವ ವರ್ಣನೆಯಿಂದ ಭಗವದ್ಗೀತೆಯನ್ನು ನೇರವಾಗಿ ಅರ್ಥಮಾಡಿಕೊಳ್ಳಬೇಕು. ಆಗ ಇದೆಲ್ಲ ಸ್ಪಷ್ಟವಾಗುತ್ತದೆ. ಆದರೆ ಪ್ರತಿಯೊಂದು ದೇಹದಲ್ಲಿರುವ ದೇವೋತ್ತಮ ಪರಮ ಪುರುಷನೂ, ಜೀವಿಯೂ ಒಂದೇ ಎಂದು ಭಾವಿಸದಂತೆ ಎಚ್ಚರಿಕೆ ವಹಿಸಬೇಕು. ಇದು ವೀರ್ಯವತ್ತಾದವನನ್ನೂ, ಷಂಡನನ್ನೂ ಒಂದೇ ಎಂದು ಭಾವಿಸಿದಂತೆ ಆಗುತ್ತದೆ.

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.