ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Bhagavad Gita: ಭಗವಂತ ಈ ಜಗತ್ತಿನಲ್ಲಿರುವ ಎಲ್ಲರಿಗೂ ದಿವ್ಯದೃಷ್ಟಿಯನ್ನು ಕರುಣಿಸಿದ್ದಾನೆ; ಗೀತೆಯ ಅರ್ಥ ತಿಳಿಯಿರಿ

Bhagavad Gita: ಭಗವಂತ ಈ ಜಗತ್ತಿನಲ್ಲಿರುವ ಎಲ್ಲರಿಗೂ ದಿವ್ಯದೃಷ್ಟಿಯನ್ನು ಕರುಣಿಸಿದ್ದಾನೆ; ಗೀತೆಯ ಅರ್ಥ ತಿಳಿಯಿರಿ

Bhagavad Gita Updesh: ಭಗವಂತ ಈ ಜಗತ್ತಿನಲ್ಲಿರುವ ಎಲ್ಲರಿಗೂ ದಿವ್ಯದೃಷ್ಟಿಯನ್ನು ಕರುಣಿಸಿದ್ದಾನೆ ಎಂಬುದರ ಅರ್ಥವನ್ನು ಭಗವದ್ಗೀತೆಯ 11ನೇ ಅಧ್ಯಾಯದ 20 ರಿಂದ 23ನೇ ಶ್ಲೋಕದವರೆಗೆ ಓದಿ.

ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.

ಅಧ್ಯಾಯ 11 - ವಿಶ್ವರೂಪ -ಶ್ಲೋಕ - 20

ದ್ಯಾವಾಪೃಥಿವ್ಯೋರಿದಮಂತರಂ ಹಿ

ವ್ಯಾಪ್ತಂ ತ್ವಯೈಕೇನ ದಿಶಶ್ಚ ಸರ್ವಾಃ |

ದೃಷ್ಟ್ವಾದ್ಭುತಂ ರೂಪಮುಗ್ರಂ ತವೇದಂ

ಲೋತ್ರಯಂ ಪ್ರವ್ಯಥಿತಂ ಮಹಾತ್ಮನ್ ||20||

ಅನುವಾದ: ನೀನು ಒಬ್ಬನೇ, ಆದರೂ ನೀನು ಆಕಾಶವನ್ನೂ ಎಲ್ಲ ಲೋಕಗಳನ್ನೂ ಅವುಗಳ ನಡುವಣ ಎಲ್ಲ ಸ್ಥಳವನ್ನೂ ವ್ಯಾಪಿಸಿದ್ದೀಯೆ. ಮಹಾತ್ಮನೆ, ಈ ಅದ್ಭುತವಾದ ಮತ್ತು ಉಗ್ರವಾದ ರೂಪವನ್ನು ಕಂಡು ಮೂರು ಲೋಕಗಳು ಭಯಗೊಂಡಿವೆ.

ಭಾವಾರ್ಥ: ದ್ಯಾವಾ ಪೃಥಿವ್ಯೋಃ (ಸ್ವರ್ಗ ಮತ್ತು ಭೂಮಿಗಳ ನಡುವ ಸ್ಥಳ) ಮತ್ತು ಲೋಕತ್ರಯಮ್ (ಮೂರು ಲೋಕಗಳು) ಈ ಶ್ಲೋಕದಲ್ಲಿ ಮಹತ್ವದ ಶಬ್ದಗಳು. ಏಕೆಂದರೆ ಪ್ರಭುವಿನ ಈ ವಿಶ್ವರೂಪವನ್ನು ಅರ್ಜುನನು ಮಾತ್ರವಲ್ಲದೆ ಇತರ ಲೋಕವ್ಯೂಹಗಳಲ್ಲಿರುವವರು ನೋಡಿದರು ಎಂದು ಕಾಣುತ್ತದೆ. ಅರ್ಜುನನು ವಿಶ್ವರೂಪವನ್ನು ಕಂಡದ್ದು ಕನಸಾಗಿರಲಿಲ್ಲ. ಪ್ರಭುವು ಯಾರು ಯಾರಿಗೆ ದಿವ್ಯದೃಷ್ಟಿಯನ್ನು ಕರುಣಿಸಿದನೋ ಅವರೆಲ್ಲರೂ ರಣರಂಗದಲ್ಲಿನ ಈ ವಿಶ್ವರೂಪವನ್ನು ಕಂಡರು (Bhagavad Gita Updesh in Kannada).

ಅಧ್ಯಾಯ 11 - ವಿಶ್ವರೂಪ -ಶ್ಲೋಕ - 21

ಅಮೀ ಹಿ ತ್ವಾಂ ಸುರಸನ್ಘಾ ವಿಶನ್ತಿ

ಕೇಚಿದ್ ಭೀತಾಃ ಪ್ರಾಞ್ಜಾಲಯೋ ಗೃಣನ್ತಿ|

ಸ್ವಸ್ತೀತ್ಯುಕ್ತ್ವಾ ಮಹರ್ಷಿಸಿದ್ಧಸನ್ಘಾಃ

ಸ್ತುವನ್ತಿ ತ್ವಾಂ ಸ್ತುತಿಭಿಂ ಪುಷ್ಕಲಾಭಿಃ ||21||

ಅನುವಾದ: ದೇವತೆಗಳ ಸಮೂಹಗಳೆಲ್ಲ ನಿನ್ನ ಮುಂದೆ ಶರಣಾಗತವಾಗಿ ನಿನ್ನನ್ನೇ ಪ್ರವೇಶಿಸುತ್ತಿರುವುವು. ಅವರಲ್ಲಿ ಕೆಲವರು ಭಯಭೀತರಾಗಿ ಕೈಮುಗಿದುಕೊಂಡು ಪ್ರಾರ್ಥನೆ ಮಾಡುತ್ತಿದ್ದಾರೆ. ಮಹರ್ಷಿಗಳ ಮತ್ತು ಪರಿಪೂರ್ಣ ಸಿದ್ಧರ ಸಮೂಹಗಳು ಸ್ವಸ್ತಿ, ಸ್ವಸ್ತಿ. ಎಂದು ಹೇಳುತ್ತ ವೇದದ ಸ್ತುತಿಗಳನ್ನು ಹಾಡುತ್ತ ನಿನಗೆ ಪ್ರಾರ್ಥನೆ ಸಲ್ಲಿಸುತ್ತಿರುವವರು.

ಭಾವಾರ್ಥ: ಎಲ್ಲ ಲೋಕವ್ಯೂಹಗಳ ದೇವತೆಗಳು ವಿಶ್ವರೂಪದ ಉಗ್ರ ಅಭಿವ್ಯಕ್ತಿಯಿಂದ ಮತ್ತು ಅದರ ಕಣ್ಣುಕೋರೈಸುವ ಪ್ರಭೆಯಿಂದ ಭಯಭೀತರಾಗಿದ್ದಾರೆ ಮತ್ತು ರಕ್ಷಿಸಬೇಕೆಂದು ಪ್ರಾರ್ಥಿಸುತ್ತಿದ್ದಾರೆ.

ಅಧ್ಯಾಯ 11 - ವಿಶ್ವರೂಪ -ಶ್ಲೋಕ - 22

ರುದ್ರಾದಿತ್ಯಾ ವಸವೋ ಯೇ ಚ ಸಾಧ್ಯಾ

ವಿಶ್ವೇಶ್ವಿನೌ ಮರುತಶ್ಚೋಷ್ಮಪಾಶ್ಚ |

ಗನ್ಧರ್ವಯಕ್ಷಾಸುರಸಿದ್ಧಸನ್ಘಾ

ವೀಕ್ಷನ್ತೇ ತ್ವಾಂ ವಿಸ್ಮಿತಾಶ್ಚೈವ ಸರ್ವೇ ||22||

ಅನುವಾದ: ರುದ್ರರು, ಆದಿತ್ಯರು, ವಸುಗಳು, ಸಾಧ್ಯರು, ವಿಶ್ವೇದೇವತೆಗಳು, ಇಬ್ಬರು ಅಶ್ವಿನೀ ದೇವತೆಗಳು, ಮರುತರು, ಪಿತೃಗಳು, ಗಂಧರ್ವರು, ಯಕ್ಷರು, ಅಸುರರು ಮತ್ತು ಸಿದ್ಧ ದೇವತೆಗಳು ಬೆರಗಾಗಿ ನಿನ್ನನ್ನು ನೋಡುತ್ತಿದ್ದಾರೆ.

ಅಧ್ಯಾಯ 11 - ವಿಶ್ವರೂಪ -ಶ್ಲೋಕ - 23

ರೂಪಂ ಮಹತ್ತೇ ಬಹುವಕ್ತ್ರನೇತ್ರಂ

ಮಹಾಬಾಹೋ ಬಹುಬಾಹೂರುಪಾದಮ್ |

ಬಹೂದರಂ ಬಹುದಂಷ್ಟ್ರಾಕರಾಲಂ

ದೃಷ್ಟ್ವಾ ಲೋಕಾಃ ಪ್ರವ್ಯಥಿತಾಸ್ತಥಾಹಮ್ ||23||

ಅನುವಾದ: ಎಲೈ ಮಹಾಬಾಹುವೆ, ಹಲವು ಮುಖಗಳನ್ನು, ಕಣ್ಣುಗಳನ್ನು, ಬಾಹುಗಳನ್ನು, ತೊಡೆಗಳನ್ನು, ಪಾದಗಳನ್ನು, ಉದರಗಳನ್ನು ಮತ್ತು ಕೋರೆದಾಡೆಗಳನ್ನು ಹೊಂದಿರುವ ನಿನ್ನ ಮಹಾನ್ ರೂಪವನ್ನು ಕಂಡು ದೇವತೆಗಳನ್ನೊಳಗೊಂಡಂತೆ ಅವರ ಲೋಕಗಳು ಭಯಗೊಂಡಿವೆ. ಅವರಂತೆ ನಾನೂ ಭಯಗೊಂಡಿದ್ದೇನೆ.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.