Bhagavad Gita: ಜೀವನದಲ್ಲಿ ದುಃಖ ಕಡಿಮೆ ಮಾಡಲು ಈ 3 ಅಭ್ಯಾಸಗಳಲ್ಲಿ ಮಿತವಾಗಿರಬೇಕು; ಗೀತೆಯ ಸಾರಾಂಶ ತಿಳಿಯಿರಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Bhagavad Gita: ಜೀವನದಲ್ಲಿ ದುಃಖ ಕಡಿಮೆ ಮಾಡಲು ಈ 3 ಅಭ್ಯಾಸಗಳಲ್ಲಿ ಮಿತವಾಗಿರಬೇಕು; ಗೀತೆಯ ಸಾರಾಂಶ ತಿಳಿಯಿರಿ

Bhagavad Gita: ಜೀವನದಲ್ಲಿ ದುಃಖ ಕಡಿಮೆ ಮಾಡಲು ಈ 3 ಅಭ್ಯಾಸಗಳಲ್ಲಿ ಮಿತವಾಗಿರಬೇಕು; ಗೀತೆಯ ಸಾರಾಂಶ ತಿಳಿಯಿರಿ

Bhagavad Gita Updesh: ಜೀವನದಲ್ಲಿ ದುಃಖ ಕಡಿಮೆ ಮಾಡಲು ಈ 3 ಅಭ್ಯಾಸಗಳಲ್ಲಿ ಮಿತವಾಗಿರಬೇಕು ಎಂಬುದರ ಬಗ್ಗೆ ಭಗವದ್ಗೀತೆಯಲ್ಲಿರುವ ಅರ್ಥವನ್ನು ತಿಳಿಯಿರಿ.

ಜೀವನದಲ್ಲಿ ದುಃಖ ಕಡಿಮೆ ಮಾಡಲು ಈ 3 ಅಭ್ಯಾಸಗಳಲ್ಲಿ ಮಿತವಾಗಿರಬೇಕು ಎಂಬುದರ ಬಗ್ಗೆ ಭಗವದ್ಗೀತೆಯಲ್ಲಿ ಇದರ ಅರ್ಥವನ್ನು ತಿಳಿಯಿರಿ.
ಜೀವನದಲ್ಲಿ ದುಃಖ ಕಡಿಮೆ ಮಾಡಲು ಈ 3 ಅಭ್ಯಾಸಗಳಲ್ಲಿ ಮಿತವಾಗಿರಬೇಕು ಎಂಬುದರ ಬಗ್ಗೆ ಭಗವದ್ಗೀತೆಯಲ್ಲಿ ಇದರ ಅರ್ಥವನ್ನು ತಿಳಿಯಿರಿ.

ಯುಕ್ತಾಹಾರವಿಹಾರಸ್ಯ ಯುಕ್ತಚೇಷ್ಟಸ್ಯ ಕರ್ಮಸು |

ಯುಕ್ತಸ್ವಪ್ನಾವಬೋಧಸ್ಯ ಯೋಗೋ ಭವತಿ ದುಃಖಹಾ ||17||

ಆಹಾರ, ನಿದ್ರೆ, ವಿಹಾರ ಮತ್ತು ಕೆಲಸಗಳ ಅಭ್ಯಾಸಗಳಲ್ಲಿ ಮಿತವಾಗಿರುವವನಿಗೆ ಯೋಗ ಪದ್ಧತಿಯ ಅಭ್ಯಾಸವು ಎಲ್ಲ ಐಹಿಕ ದುಃಖಗಳನ್ನು ಕಡಿಮೆ ಮಾಡಬಲ್ಲದು.

ತಿನ್ನುವುದು, ನಿದ್ರೆ, ರಕ್ಷಣೆ ಮತ್ತು ಮೈಥುನ ಇವು ದೇಹದ ಅಗತ್ಯಗಳು. ಇವುಗಳು ಅತಿಯಾದರೆ ಯೋಗಾಭ್ಯಾಸದ ಪ್ರಗತಿಯಲ್ಲಿ ಅಡ್ಡಿಯಾಗಬಹುದು. ಆಹಾರದ ವಿಷಯ ಹೇಳುವುದಾದರೆ ಪ್ರಸಾದವನ್ನು ತೆಗೆದುಕೊಳ್ಳುವ ಅಭ್ಯಾಸಮಾಡಿದಾಗ ಮಾತ್ರ ಇದನ್ನು ಹತೋಟಿಯಲ್ಲಿಡಬಹುದು. ಭಗವದ್ಗೀತೆಯ ಪ್ರಕಾರ (9.26) ಕೃಷ್ಣನಿಗೆ ತರಕಾರಿ, ಹಣ್ಣುಗಳು, ಧಾನ್ಯಗಳು, ಹಾಲು ಮೊದಲಾದುವನ್ನು ನೈವೇದ್ಯ ಮಾಡಬಹುದು. ಈ ರೀತಿಯಲ್ಲಿ ಕೃಷ್ಣಪ್ರಜ್ಞೆಯಿರುವವನಿಗೆ ಮನುಷ್ಯನು ತಿನ್ನಬಾರದ ಅಥವಾ ಸಾತ್ವಿಕ ವರ್ಗಕ್ಕೆ ಸೇರದ ಆಹಾರವನ್ನು ಸ್ವೀಕರಿಸದಂತೆ ತಂತಾನೇ ಶಿಕ್ಷಣ ದೊರೆಯುತ್ತದೆ.

ನಿದ್ರೆಯ ವಿಷಯ ಹೇಳವುದಾದರೆ, ಕೃಷ್ಣಪ್ರಜ್ಞೆ ಇರುವ ಮನುಷ್ಯನು ಕೃಷ್ಣಪ್ರಜ್ಞೆಯಲ್ಲಿ ತನ್ನ ಕರ್ತವ್ಯಗಳನ್ನು ನಿರ್ವಹಿಸಲು ಸದಾ ಎಚ್ಚರವಾಗಿರುತ್ತಾನೆ. ಆದುದರಿಂದ ಅನಗತ್ಯವಾಗಿ ನಿದ್ರೆಯಲ್ಲಿ ಕಳೆದ ಕಾಲವನ್ನು ದೊಡ್ಡ ನಷ್ಟ ಎಂದು ಭಾವಿಸುತ್ತಾನೆ. ಅವ್ಯರ್ಥ ಕಾಲತ್ವಮ್ ಕೃಷ್ಣಪ್ರಜ್ಞೆ ಇರುವ ಮನುಷ್ಯನು ಭಗವಂತನ ಸೇವೆಯಲ್ಲಿ ನಿರತನಾಗದೆ ಒಂದು ನಿಮಿಷವನ್ನು ಕಳೆಯುವುದನ್ನೂ ತಡೆದುಕೊಳ್ಳಲಾರ. ಆದುದರಿಂದ ಆದಷ್ಟು ಕಡಿಮೆ ನಿದ್ರೆ ಮಾಡುತ್ತಾನೆ. ಈ ವಿಷಯದಲ್ಲಿ ಅವನ ಆದರ್ಶನ ಶ್ರೀ ರೂಪ ಗೋಸ್ವಾಮಿ. ಅವರು ಸದಾ ಕೃಷ್ಣನ ಸೇವೆಯಲ್ಲಿ ತೊಡಗಿರುತ್ತಿದ್ದರು.

ದಿನಕ್ಕೆ ಎರಡು ಗಂಟೆಗಳಿಗಿಂತ ಹೆಚ್ಚು ನಿದ್ರೆ ಮಾಡುತ್ತಿರಲಿಲ್ಲ. ಕೆಲವೊಮ್ಮೆ ಅಷ್ಟೂ ಇಲ್ಲ. ತನ್ನ ಜಪಮಣಿಗಳನ್ನು ಬಳಸಿ ದಿನಕ್ಕೆ ಮೂರುಲಭ ಬಾರಿ ನಾಮಸಂಕೀರ್ತನೆಯ ಕರ್ತವ್ಯವನ್ನು ಮಾಡಿ ಮುಗಿಸುವ ತನಕ ಠಾಕೂರ ಹರಿದಾಸರು ಪ್ರಸಾದವನ್ನು ಸ್ವೀಕರಿಸುತ್ತಿರಲಿಲ್ಲ. ನಿದ್ರೆ ಮಾಡುತ್ತಿರಲಿಲ್ಲ. ಕೆಲಸದ ವಿಷಯವಾದರೆ, ಕೃಷ್ಣಪ್ರಜ್ಞೆ ಇರುವ ಮನುಷ್ಯನು ಕೃಷ್ಣ ಆಸಕ್ತಿಗೆ ಸಂಬಂಧಿಸಿಲ್ಲದ ಏನನ್ನೂ ಮಾಡುವುದಿಲ್ಲ. ಆದುದರಿಂದ ಅವನ ಕೆಲಸವು ಯಾವಾಗಲೂ ಕ್ರಮಕ್ಕೊಳಪಟ್ಟಿರುತ್ತದೆ. ಅದಕ್ಕೆ ಇಂದ್ರಿಯ ತೃಪ್ತಿಯ ಸೋಂಕಿರುವುದಿಲ್ಲ. ಇಂದ್ರಿಯತೃಪ್ತಿಯ ಪ್ರಶ್ನೆಯೇ ಇಲ್ಲದಿರುವುದರಿಂದ ಕೃಷ್ಣಪ್ರಜ್ಞೆಯಲ್ಲಿರುವ ಮನುಷ್ಯನಿಗೆ ಐಹಿಕ ವಿರಾಮ ಎಂಬುದೇ ಇಲ್ಲ. ಆತನು ತನ್ನ ಎಲ್ಲ ಕೆಲಸಕಾರ್ಯಗಳಲ್ಲಿ, ಮಾತಿನಲ್ಲಿ ನಿದ್ರೆಯಲ್ಲಿ, ಎಚ್ಚರಾವಸ್ಥೆಯಲ್ಲಿ ಮತ್ತು ಇತರ ಎಲ್ಲ ದೈಹಿಕ ಕ್ರಿಯೆಗಳಲ್ಲಿ ಒಂದು ಕ್ರಮಕ್ಕೆ ಒಳಪ್ಟಟಿರುವುದರಿಂದ, ಆತನಿಗೆ ಐಹಿಕ ದುಃಖವೇ ಇಲ್ಲ.

ಮಹಾಭಾರತದ ಯುದ್ಧ ಆರಂಭಕ್ಕೂ ಮುನ್ನವೇ ಎದುರಾಳಿ ಬಣದಲ್ಲಿ ಇದ್ದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸುತ್ತಾನೆ. ಆಗ ಶ್ರೀಕೃಷ್ಣನು ಪಾಂಡವರಲ್ಲಿ ಒಬ್ಬರಾದ ಅರ್ಜುನನಿಗೆ ಉಪದೇಶ ನೀಡುತ್ತಾನೆ. ಅರ್ಜುನನ ಮುಂದೆ ಬೃಹತ್ ಸೈನ್ಯ ನಿಂತಿರುತ್ತದೆ. ಆ ಸೈನ್ಯದಲ್ಲಿರುವ ಸಾರಥಿಗಳಲ್ಲಿ ಈತನ ಚಿಕ್ಕಪ್ಪ, ತಾಯಿಯ ಅಣ್ಣ, ತಾತ ಹಾಗೂ ಸಹೋದರರು ಇರುತ್ತಾರೆ. ಈ ವೇಳೆ ಅರ್ಜುನ, ನಾನು ನನ್ನ ಸ್ವಂತ ಜನರನ್ನು ಹೇಗೆ ಕೊಲ್ಲುವುದು ಎಂದು ಮನಸ್ಸಿನಲ್ಲೇ ಯೋಚನೆ ಮಾಡಿ ಯುದ್ಧಭೂಮಿಯಲ್ಲಿ ತನ್ನ ಬಿಲ್ಲನ್ನು ಕೆಳಗೆ ಇಳಿಸುತ್ತಾನೆ. ಆಗ ಅರ್ಜುನನಿಗೆ ಶ್ರೀಕೃಷ್ಣ ಮೇಲಿನಂತೆ ಉಪದೇಶ ನೀಡುತ್ತಾನೆ. ಇತರರನ್ನು ಮೋಸ ಮಾಡುವವನು ತಾನೂ ಸ್ವತಃ ಮೋಸ ಹೋಡುತ್ತಾನೆ ಎನ್ನುವುದು ಶ್ರೀಕೃಷ್ಣನ ಮಾತು.

(This copy first appeared in Hindustan Times Kannada website. To read more like this please logon to kannada.hindustantimes.com )

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.