ಭಗವದ್ಗೀತೆ: ಇಂದ್ರಿಯಗಳ ಮೇಲೆ ಹಿಡಿತ ಸಾಧಿಸುವ ವ್ಯಕ್ತಿ ತನ್ನ ಗುರಿಯನ್ನ ಸಾಧಿಸುತ್ತಾನೆ; ಗೀತೆಯಲ್ಲಿನ ಸಾರಾಂಶ ತಿಳಿಯಿರಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಭಗವದ್ಗೀತೆ: ಇಂದ್ರಿಯಗಳ ಮೇಲೆ ಹಿಡಿತ ಸಾಧಿಸುವ ವ್ಯಕ್ತಿ ತನ್ನ ಗುರಿಯನ್ನ ಸಾಧಿಸುತ್ತಾನೆ; ಗೀತೆಯಲ್ಲಿನ ಸಾರಾಂಶ ತಿಳಿಯಿರಿ

ಭಗವದ್ಗೀತೆ: ಇಂದ್ರಿಯಗಳ ಮೇಲೆ ಹಿಡಿತ ಸಾಧಿಸುವ ವ್ಯಕ್ತಿ ತನ್ನ ಗುರಿಯನ್ನ ಸಾಧಿಸುತ್ತಾನೆ; ಗೀತೆಯಲ್ಲಿನ ಸಾರಾಂಶ ತಿಳಿಯಿರಿ

ಕುರುಕ್ಷೇತ್ರದ ಯುದ್ಧದಲ್ಲಿ ಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಸತ್ಯದ ಮಾರ್ಗವನ್ನು ಅನುಸರಿಸುವುದು ಗೀತೆಯ ಅರ್ಥವಾಗಿದೆ.

ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.

ಯದಾ ಸಂಹರತೇ ಚಾಯಂ ಕೂರ್ಮೋನ್ಗಾನೀವ ಸರ್ವಶಃ |

ಇಂದ್ರಿಯಾಣೀಂದ್ರಿಯಾರ್ಥೇಭ್ಯಸ್ತಸ್ಯ ಪ್ರಜ್ಞಾ ಪ್ರತಿಷ್ಠಿತಾ ||58||

ಆಮೆಯು ತನ್ನ ಅಂಗಗಳನ್ನು ಚಿಪ್ಪಿನೊಳಕ್ಕೆ ಎಳೆದುಕೊಳ್ಳುವಂತೆ ಯಾರು ತನ್ನ ಇಂದ್ರಿಯಗಳನ್ನು ಇಂದ್ರಿಯ ವಿಷಯಗಳಿಂದ ಹಿಂದಕ್ಕೆ ಎಳೆದುಕೊಳ್ಳಬಲ್ಲರೋ ಅವರು ಪರಿಪೂರ್ಣ ಪ್ರಜ್ಞೆಯಲ್ಲಿ ಸ್ಥಿರವಾಗಿರುತ್ತಾರೆ.

ಒಬ್ಬ ಯೋಗಿಯ, ಭಕ್ತನ ಅಥವಾ ಆತ್ಮ ಸಾಕ್ಷಾತ್ಕಾರ ಪಡೆದವನು ಪರೀಕ್ಷೆಯು ಆತನು ತನ್ನ ಯೋಜನೆಗನುಗುವಾಗಿ ಇಂದ್ರಿಯಗಳನ್ನು ನಿಯಂತ್ರಿಸಬಲ್ಲನೇ ಎನ್ನುವುದು. ಬಹು ಮಂದಿ ಇಂದ್ರಿಯಗಳ ಸೇವಕರಾಗಿರುತ್ತಾರೆ ಮತ್ತು ಇಂದ್ರಿಯಗಳು ಬಯಸಿದಂತೆ ನಡೆದುಕೊಳ್ಳುತ್ತಾರೆ. ಯೋಗಿಯ ಸ್ಥಿತಿ ಏನು ಎನ್ನುವ ಪ್ರಶ್ನೆಗೆ ಇದೇ ಉತ್ತರ, ಇಂದ್ರಿಯಗಳನ್ನು ವಿಷಸರ್ಪಗಳಿಗೆ ಹೋಲಿಸುತ್ತಾರೆ. ಅವು ಯಾವ ನಿರ್ಬಂಧವಿಲ್ಲದೆ ಹೊಣೆ ಇಲ್ಲದೆ ನಡೆದುಕೊಳ್ಳಲು ಬಯಸುತ್ತವೆ.

ಸರ್ವಗಳನ್ನು ನಿಯಂತ್ರಿಸುವ ಹಾವಾಡಿಗನಂತೆ ಯೋಗಿಯು ಶಕ್ತನಾಗಿರಬೇಕು. ಅವು ಸ್ವತಂತ್ರವಾಗಿ ಕಾರ್ಯಪ್ರವೃತ್ತವಾಗಲು ಆತನು ಅವಕಾಶವನ್ನೇ ಕೊಡುವುದಿಲ್ಲ, ಶಾಸ್ತ್ರಗಳಲ್ಲಿ ಅನೇಕ ಅಪ್ಪಣೆಗಳಿವೆ. ಇವುಗಳಲ್ಲಿ ಕೆಲವು ವಿಧಗಳಿವೆ, ಕೆಲವು ನಿಷೇಧಗಳಿವೆ. ಇಂದ್ರಿಯ ಭೋಗದಿಂದ ದೂರವಾಗಿ ವಿಧಿನಿಷೇಧಗಳನ್ನು ಅನುಸರಿಸದಿದ್ದರೆ, ಸ್ಥಿರವಾದ ಕೃಷ್ಣಪ್ರಜ್ಞೆಯು ಸಾಧ್ಯವಾಗುವುದಿಲ್ಲ.

ಇಲ್ಲಿ ಹೇಳಿರುವಂತೆ ಅತ್ಯುತ್ತಮವಾದ ಉದಾಹರಣೆ ಆಮೆ, ಆಮೆಯ ಯಾವ ಗಳಿಗೆಯಲ್ಲಾದರೂ ತನ್ನ ಇಂದ್ರಿಯಗಳನ್ನು ಭಗವಂತನ ಸೇವೆಗಾಗಿ ವಿಶೇಷ ಉದ್ದೇಶಗಳಿಗಾಗಿ ಬಳಸುತ್ತಾನೆ. ಹಾಗೆಯೇ ಕೃಷ್ಣ ಪ್ರಶ್ನೆಯುಳ್ಳ, ಮಾನುಷ್ಯನು ಹರಪ್ರಿಯೆಗಳನ್ನು ಭಗವಂತನ ಸೇವೆ ವಿಶೇಷ ಉದ್ದೇಶಗಳಿಗಾಗಿ ಬಳಸುತ್ತಾನೆ: ಇಲ್ಲವಾದಲ್ಲಿ ಹಿಂದಕ್ಕೆಳೆಯಕೊಳ್ಳುತ್ತಾನೆ. ಅರ್ಜುನನು ತನ್ನ ಇಂದ್ರಿಯಗಳನ್ನು ತನ್ನ ತೃಪ್ತಿಗಾಗಿಯೇ ಬಳಸದೆ ಭಗವಂತನ ಸೇವೆಗಾಗಿ ಬಳಸಬೇಕೆಂದು ಇಲ್ಲಿ ಉಪದೇಶಿಸಲಾಗಿದೆ. ಇಂದ್ರಿಯಗಳನ್ನು ಸದಾ ಭಗವಂತನ ಸೇವೆಯಲ್ಲಿ ಇರಿಸುವುದನ್ನು, ಸದಾ ಇಂದ್ರಿಯಗಳನ್ನು ಆಮೆಯ ಸಾದೃಶ್ಯದಿಂದ ಹೇಳಲಾಗಿದೆ.

ವಿಷಯಾ ವಿನಿವರ್ತನ್ತೇ ನಿರಾಹಾರಸ್ಯ ದೇಹಿನಃ |

ರಸವರ್ಜನಂ ರಸೋಪ್ಯಸ್ಯ ಪರಂ ದೃಷ್ಟ್ವಾ ನಿವರ್ತತೇ ||59||

ದೇವನ ಆತ್ಮವನ್ನು ಇಂದ್ರಿಯ ಸುಖದಿಂದ ದೂರವಿಡಬಹುದು. ಆದರೆ ಇಂದ್ರಿಯಸುಖದ ದಸ್ತುಗಳ ರುಚಿಯು ಉಳಿಯುತ್ತದೆ. ಆದರೆ ಇನ್ನೂ ಉತ್ತಮವಾದ ರುಚಿಯ ಅನುಭವದಿಂದ ಈ ಆಸಕ್ತಿಗಳನ್ನು ಕೊನೆಗಾಣಿಸಿದರೆ ಆತನ ಪ್ರಜ್ಞೆಯು ಸ್ಥಿರವಾಗಿರುತ್ತದೆ.

ಮನುಷ್ಯನು ಆಧ್ಯಾತ್ಮಿಕ ನೆಲೆ ಕಂಡುಕೊಳ್ಳದಿದ್ದರೆ ಇಂದ್ರಿಯಸುಖವನ್ನು ಕೊನೆಗಾಣಿಸಲು ಸಾಧ್ಯವಾಗುವುದಿಲ್ಲ. ನಿಯಮಗಳಿಗನುಗುಣವಾಗಿ ವಿಷಯಸುಖವನ್ನು ನಿಯಂತ್ರಿಸುವುದೆಂದರೆ ರೋಗಿಯನ್ನು ಕೆಲವು ಬಗೆಯ ತಿಂಬಿಸುಗಳನ್ನು ಮುಟ್ಟಿದಂತೆ ನಿಯಂತ್ರಿಸುವ ಹಾಗೆ. ರೋಗಿಯ ಈ ನಿಯಮಗಳು ಇಷ್ಟವಾಗುವುದೂ ಇಲ್ಲ. ತಿಂಡಿ ತಿನಿಸುಗಳ ರುಚಿಯೂ ಹೋಗುವುದಿಲ್ಲ. ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧಾರಣಾ, ಧ್ಯಾನ ಮೊದಲಾದ ಅಷ್ಟಾಂಗ

ಯೋಗದಂತಹ ಆಧ್ಯಾತ್ಮಿಕ ಪ್ರಕ್ರಿಯೆಯಿಂದ ಇಂದ್ರಿಯನಿಗ್ರಹ ಮಾಡಬೇಕೆಂದು ಉತ್ತಮ ತಿಳುವಳಿಕೆ ಇಲ್ಲದ ಕಡಿಮೆ ಬುದ್ಧಿಯ ಜನರಿಗೆ ಹೇಳಲಾಗುತ್ತದೆ. ಆದರೆ, ಕೃಷ್ಣ ಪ್ರಜ್ಞೆಯಲ್ಲಿ ಮುಂದುವರಿಯುತ್ರ ಪರಮ ಪ್ರಭು ಶ್ರೀಕೃಷ್ಣನ ಸೌಂದರ್ಯವನ್ನು ಸವಿದವನಿಗೆ ನಿರ್ಜಿವವಾದ ಐಹಿಕ ವಿಷಯಗಳಲ್ಲಿ ರುಚಿಯಿರುವುದಿಲ್ಲ, ಆದುದರಿಂದ ಅಷ್ಟು ಬುದ್ಧಿವಂತರಲ್ಲದ ಹೊಸದಾಗಿ ದೀಕ್ಷೆಪಡೆದವರಿಗೆ ಆಧ್ಯಾತ್ಮಿಕವಾಗಿ ಬದುಕಿನಲ್ಲಿ ಮುಂದುವರಿಯಲು ಕಟ್ಟುಪಾಡುಗಳು ಅಗತ್ಯ. ಆದರೆ ಆದರೆ ಕೃಷ್ಣಪ್ರಜ್ಞೆಯಲ್ಲಿ ರುಚಿ ಬರುವವರೆಗೆ ಮಾತ್ರ ಇಂತಹ ಕಟ್ಟುಪಾಡುಗಳು ಉಪಯೋಗವಾಗುತ್ತವೆ. ವಾಸ್ತವವಾಗಿ ಕಪ್ಪಪ್ರಜ್ಞೆ ಇರುವವನಿಗೆ ನಿಸ್ಸಾರವಾದ ವಸ್ತುಗಳಲ್ಲಿ ರುಚಿಯು ತಾನಾಗಿಯೇ ಹೋಗುತ್ತದೆ.

Whats_app_banner

ವಿಭಾಗ

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.