ಕನ್ನಡ ಸುದ್ದಿ  /  Astrology  /  Spiritual News Bhagavad Gita Updesh Lord Krishna Who Want To Beautiful Wife Can Worship Umadevi Wife Of Shiva Rmy

Bhagavad Gita: ಸುಂದರವಾದ ಹೆಂಡತಿ ಬಯಸುವವನು ಶಿವನ ಪತ್ನಿ ಉಮಾದೇವಿಯನ್ನ ಪೂಜಿಸಬಹುದು; ಗೀತೆಯ ಸಾರಾಂಶ ಹೀಗಿದೆ

Bhagavad Gita Updesh: ಸುಂದರವಾದ ಹೆಂಡತಿ ಬಯಸುವವನು ಶಿವನ ಪತ್ನಿ ಉಮಾದೇವಿಯನ್ನ ಪೂಜಿಸಬಹುದು ಎಂಬುದರ ಅರ್ಥವನ್ನು ಭಗವದ್ಗೀತೆಯ 7ನೇ ಅಧ್ಯಾಯದ 21 ಶ್ಲೋಕದಲ್ಲಿ ಓದಿ.

ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.

7ನೇ ಅಧ್ಯಾಯದ ಪರತ್ಪರ ಜ್ಞಾನ - ಶ್ಲೋಕ - 21

ಯೋ ಯೋ ಯಾಂ ಯಾಂ ತನುಂ ಭಕ್ತಃ ಶ್ರದ್ಧಯಾರ್ಚಿತುಮಿಚ್ಛತಿ |

ತಸ್ಯ ತಸ್ಯಾಚಲಾಂ ಶ್ರದ್ಧಾಂ ತಾಮೇವ ವಿದಧಾಮ್ಯಹಮ್ ||21||

ಅನುವಾದ: ನಾನು ಪರಮಾತ್ಮನಾಗಿ ಪ್ರತಿಯೊಬ್ಬರ ಹೃದಯದಲ್ಲಿದ್ದೇನೆ. ಯಾರಾದರೂ ಯಾವುದಾದರೂ ದೇವತೆಯನ್ನು ಪೂಜಿಸಲು ಇಚ್ಛಿಸುತ್ತಲೇ, ಆತನು ಆ ದೇವೆತೆಗೆ ಮುಡಿಪಾಗುವಂತೆ ಅವನ ಶ್ರದ್ಧೆಯನ್ನು ಸ್ಥಿರಗೊಳಿಸುತ್ತೇನೆ.

ಭಾವಾರ್ಥ: ಭಗವಂತನು (Bhagavad Gita Updesh in Kannada) ಪ್ರತಿಯೊಬ್ಬರಿಗೂ ಸ್ವಾತಂತ್ರ್ಯವನ್ನು ಕೊಟ್ಟಿದ್ದಾನೆ. ಆದುದರಿಂದ ಯಾವುದೇ ಮನುಷ್ಯನು ಐಹಿಕ ಭೋಗವನ್ನು ಬಯಸಿ ಅಂತಹ ಸೌಲಭ್ಯಗಳನ್ನು ಐಹಿಕ ದೇವತೆಗಳಿಂದ ಪಡೆಯಲು ಮನಃಪೂರ್ವಕವಾಗಿ ಅಪೇಕ್ಷಿಸಿದರೆ ಎಲ್ಲರ ಹೃದಯಗಳಲ್ಲಿರುವ ಪರಮಾತ್ಮನಾಗಿ ಪರಮ ಪ್ರಭುವು ಅವರ ಅಪೇಕ್ಷೆಯನ್ನು ಅರ್ಥಮಾಡಿಕೊಂಡು ಸೌಲಭ್ಯಗಳನ್ನು ನೀಡುತ್ತಾನೆ. ಎಲ್ಲ ಜೀವಿಗಳ ಪರಮ ಜನಕನಾಗಿ ಆತನು ಅವರ ಸ್ವಾತಂತ್ರ್ಯಕ್ಕೆ ಅಡ್ಡಬರುವುದಿಲ್ಲ. ಅವರು ತಮ್ಮ ಐಹಿಕ ಅಪೇಕ್ಷೆಗಳನ್ನು ಪಡೆದುಕೊಳ್ಳುವಂತೆ ಎಲ್ಲ ಸೌಲಭ್ಯಗಳನ್ನು ನೀಡುತ್ತಾನೆ.

ಸರ್ವಶಕ್ತನಾದ ದೇವರು ಈ ಐಹಿಕ ಜಗತ್ತಿನಲ್ಲಿ ಜೀವಿಗಳಿಗೆ ಭೋಗಕ್ಕೆ ಸೌಲಭ್ಯಗಳನ್ನು ಕೊಟ್ಟು ಅವರು ಮಾಯಾಶಕ್ತಿಯ ಬಲೆಗೆ ಬೀಳಲು ಅವಕಾಶ ಕೊಡುವುದೇಕೆ ಎಂದು ಕೆಲವರು ಕೇಳಬಹುದು. ಅದಕ್ಕೆ ಉತ್ತರ ಇದು - ಪರಮಾತ್ಮನಾದ ಪರಮ ಪ್ರಭುವು ಇಂತಹ ಸೌಲಭ್ಯಗಳನ್ನು ಕೊಡದಿದ್ದರೆ ಸ್ವಾತಂತ್ರ್ಯಕ್ಕೆ ಅರ್ಥವೇ ಇಲ್ಲ. ಆದುದರಿಂದ ಆತನು ಪ್ರತಿಯೊಬ್ಬರಿಗೆ ಸಂಪೂರ್ಣ ಸ್ವಾತಂತ್ರ್ಯವನ್ನು, ಅವರು ಬಯಸಿದುದನ್ನು ಕೊಡುತ್ತಾನೆ. ಆದರೆ ಅವನ ಕೊನೆಯ ಬುದ್ಧಿವಾದವನ್ನು ಭಗವದ್ಗೀತೆಯಲ್ಲಿ ಕಾಣುತ್ತೇವೆ - ಮನುಷ್ಯನು ಬೇರೆ ಯಾತರಲ್ಲಿಯೂ ಮನಸ್ಸನ್ನು ತೊಡಗಿಸದೆ ಅವನಿಗೆ ಸಂಪೂರ್ಣವಾಗಿ ಶರಣಾಗಬೇಕು. ಅದು ಮನುಷ್ಯನಿಗೆ ಸುಖವನ್ನು ತರುತ್ತದೆ.

ಒಂದು ವಸ್ತುವನ್ನು ಬಯಸುವವರು ಒಬ್ಬ ನಿರ್ದಿಷ್ಟ ದೇವತೆಯನ್ನ ಪೂಜಿಸಬಹುದು

ಜೀವಿಯೂ ದೇವತೆಗಳೂ ದೇವೋತ್ತಮ ಪರಮ ಪುರುಷನ ಇಚ್ಛೆಗೆ ಅಧೀನರು. ಆದುದರಿಂದ ಜೀವಿಯು ಸ್ವಂತ ಇಚ್ಛೆಯಿಂದ ದೇವತೆಯನ್ನು ಪೂಜಿಸುವುದೂ ಸಾಧ್ಯವಿಲ್ಲ. ಪರಮ ಸಂಕಲ್ಪಕ್ಕೆ ಹೊರತಾಗಿ ದೇವತೆಯೂ ಯಾವ ವರನ್ನೂ ಕೊಡುವಂತೆಯೂ ಇಲ್ಲ. ಸಾಮಾನ್ಯವಾಗಿ ಐಹಿಕ ಜಗತ್ತಿನಲ್ಲಿ ದುಃಖಕ್ಕೊಳಗಾದವರು ವೈದಿಕ ಸಾಹಿತ್ಯದಲ್ಲಿ ಸೂಚಿಸಿರುವಂತೆ ದೇವತೆಗಳ ಬಳಿಸಾರುತ್ತಾರೆ. ಯಾವುದೇ ಒಂದು ವಸ್ತುವನ್ನು ಬಯಸುವವರು ಒಬ್ಬ ನಿರ್ದಿಷ್ಟ ದೇವತೆಯನ್ನು ಪೂಜಿಸಬಹುದು. ವಿದ್ಯೆ ಬಯಸುವವನು ಸರಸ್ವತಿಯನ್ನು ಪೂಜಿಸಬಹುದು. ಸುಂದರವಾದ ಹೆಂಡತಿಯನ್ನು ಬಯಸುವವನು ಶಿವನ ಪತ್ನಿಯಾದ ಉಮಾದೇವಿಯನ್ನು ಪೂಜಿಸಬಹುದು. ಹೀಗೆ ಶಾಸ್ತ್ರಗಳಲ್ಲಿ ಬೇರೆ ಬೇರೆ ದೇವತೆಗಳ ಆರಾಧನೆಗೆ ಬೇರೆ ಬೇರೆ ಪೂಜಾಮಾರ್ಗಗಳನ್ನು ಹೇಳಿದೆ.

ಒಂದು ಜೀವಿಯು ಯಾವುದೋ ಒಂದು ನಿರ್ದಿಷ್ಟ ಸೌಲಭ್ಯವನ್ನು ಬಯಸುವುದರಿಂದ, ಆ ನಿರ್ದಿಷ್ಟ ದೇವತೆಯಿಂದ ಆ ಅನುಗ್ರಹವನ್ನು ಪಡೆಯುವಂತೆ ಪರಮ ಪ್ರಭುವು ಆ ಜೀವಿಗೆ ಪ್ರಬಲವಾದ ಪ್ರೇರಣೆಯನ್ನು ನೀಡುತ್ತಾನೆ. ಆದುದರಿಂದ ಆತನು ಆ ಅನುಗ್ರಹವನ್ನು ಪಡೆಯುತ್ತಾನೆ. ಆ ಜೀವಿಯು ಆ ನಿರ್ದಿಷ್ಟ ದೇವತೆಯ ಬಗ್ಗೆ ತಳೆಯುವ ವಿಶಿಷ್ಟ ಭಕ್ತಿಯ ಮನೋಭಾವವನ್ನು ಪರಮ ಪ್ರಭುವು ನಿರ್ಧರಿಸುತ್ತಾನೆ. ದೇವತೆಗಳು ಜೀವಿಯಲ್ಲಿ ಇಂತಹ ಬಾಂಧವ್ಯವನ್ನು ತುಂಬಲಾರರು. ಏಕೆಂದರೆ ಅವನೇ ಪರಮ ಪ್ರಭು ಅಥವಾ ಎಲ್ಲ ಜೀವಿಗಳ ಹೃದಯಗಳಲ್ಲಿರುವ ಪರಮಾತ್ಮನು. ಏಕೆಂದರೆ ಅವರೇ ಪರಮ ಪ್ರಭು ಅಥವಾ ಎಲ್ಲಾ ಜೀವಿಗಳ ಹೃದಯಗಳಲ್ಲಿರುವ ಪರಮಾತ್ಮನು.

ದೇವತೆಗಳು ವಾಸ್ತವವಾಗಿ ಪರಮ ಪ್ರಭುವಿನ ವಿಶ್ವರೂಪದ ಬೇರೆ ಬೇರೆ ಭಾಗಗಳು. ಆದುದರಿಂದ ಅವರಿಗೆ ಸ್ವಾತಂತ್ರ್ಯವಿಲ್ಲ. ಪರಮಾತ್ಮನಾಗಿ ದೇವೋತ್ತಮ ಪರಮ ಪುರುಷನು ದೇವತೆಯ ಹೃದಯದಲ್ಲಿಯೂ ಇದ್ದಾನೆ. ಆದುದರಿಂದ ಆತನು ಜೀವಿಯ ಅಪೇಕ್ಷಯನ್ನು ದೇವತೆಯ ಮೂಲಕ ಪೂರೈಸಲು ವ್ಯವಸ್ಥೆ ಮಾಡುತ್ತಾನೆ. ಆದರೆ ದೇವತೆಯೂ ಜೀವಿಯೂ ಪರಮ ಸಂಕಲ್ಪವನ್ನು ಅವಲಂಬಿಸಿದವರು, ಅವರಿಗೆ ಸ್ವಾತಂತ್ರ್ಯವಿಲ್ಲ ಎಂದು ವೈದಿಕ ಸಾಹಿತ್ಯದಲ್ಲಿ ಹೇಳಿದೆ.