ಭಗವದ್ಗೀತೆ: ಫಲಾಪೇಕ್ಷೆಯಿಲ್ಲದೆ ಕೆಲಸ ಮಾಡುವವರಿಗೆ ಭಗವಂತ ಒಳ್ಳೆಯ ಫಲವನ್ನೇ ಕೊಡುತ್ತಾನೆ; ಗೀತೆಯ ಸಾರಾಂಶ ತಿಳಿಯಿರಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಭಗವದ್ಗೀತೆ: ಫಲಾಪೇಕ್ಷೆಯಿಲ್ಲದೆ ಕೆಲಸ ಮಾಡುವವರಿಗೆ ಭಗವಂತ ಒಳ್ಳೆಯ ಫಲವನ್ನೇ ಕೊಡುತ್ತಾನೆ; ಗೀತೆಯ ಸಾರಾಂಶ ತಿಳಿಯಿರಿ

ಭಗವದ್ಗೀತೆ: ಫಲಾಪೇಕ್ಷೆಯಿಲ್ಲದೆ ಕೆಲಸ ಮಾಡುವವರಿಗೆ ಭಗವಂತ ಒಳ್ಳೆಯ ಫಲವನ್ನೇ ಕೊಡುತ್ತಾನೆ; ಗೀತೆಯ ಸಾರಾಂಶ ತಿಳಿಯಿರಿ

ಕುರುಕ್ಷೇತ್ರದ ಯುದ್ಧದಲ್ಲಿ ಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಫಲಾಪೇಕ್ಷೆಯಿಲ್ಲದೆ ಕೆಲಸ ಮಾಡುವವರಿಗೆ ಭಗವಂತ ಒಳ್ಳೆಯ ಫಲವನ್ನೇ ಕೊಡುತ್ತಾನೆ ಎಂಬುದರ ಅರ್ಥ ತಿಳಿಯಿರಿ.

ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.

ಯೇ ಯಥಾ ಮಾಂ ಪ್ರಪದ್ಯಂತೇ ತಾಂಸ್ತಥೈವ ಭಜಾಮ್ಯಹಮ್ |

ಮಮ ವರ್ತ್ಮಾನುವರ್ತನ್ತೇ ಮನುಷ್ಯಾಃ ಪಾರ್ಥ ಸರ್ವಶಃ ||11||

ಯಾರು ನನಗೆ ಹೇಗೆ ಶರಣಾಗತರಾಗುತ್ತಾರೋ ಹಾಗೆ ನಾನು ಅವರಿಗೆ ಅನುಗ್ರಹಿಸುತ್ತೇನೆ. ಪಾರ್ಥನೇ, ಎಲ್ಲರೂ ಎಲ್ಲ ರೀತಿಗಳಲ್ಲೂ ನನ್ನ ಮಾರ್ಗವನ್ನೇ ಅನುಸರಿಸುತ್ತಾರೆ.

ಪ್ರತಿಯೊಬ್ಬರೂ ಕೃಷ್ಣನ ವಿವಿಧ ಅಭಿವ್ಯಕ್ತಿಗಳ ವಿವಿಧ ಮುಖಗಳಲ್ಲಿ ಕೃಷ್ಣನಿಗಾಗಿ ಹುಡುಕುತ್ತಿದ್ದಾರೆ. ದೇವೋತ್ತಮ ಪರಮ ಪುರುಷನಾದ ಕೃಷ್ಣನು ತನ್ನ ನಿರಾಕಾರ ಬ್ರಹ್ಮಜ್ಯೋತಿಪ್ರಭೆಯಾಗಿ ಮತ್ತು ಅಣುಗಳೂ ಸೇರಿದಂತೆ ಎಲ್ಲ ವಸ್ತುಗಳಲ್ಲಿ ನೆಲೆಸಿರುವ ಸರ್ವಾಂತರ್ಯಾಮಿ ಪರಮಾತ್ಮನಾಗಿ ಭಾಗಶಃ ಸಾಕ್ಷಾತ್ಕಾರವಾಗಿದ್ದಾನೆ. ಆದರೆ ಪರಿಶುದ್ಧ ಭಕ್ತರಿಗೆ ಮಾತ್ರ ಅವನ ಸಂಪೂರ್‌ಣ ಸಾಕ್ಷಾತ್ಕಾರ ಸಾಧ್ಯ. ಇದರಿಂದ ಕೃಷ್ಣನು ಪ್ರತಿಯೊಬ್ಬರ ಸಾಕ್ಷಾತ್ಕಾರದ ಗುರಿ.

ಪ್ರತಿಯೊಬ್ಬರೂ ಅವನನ್ನು ಹೇಗೆ ಬಯಸಿದರೆ ಹಾಗೆ ಅವರಿಗೆ ತೃಪ್ತಿದೊರೆಯುತ್ತದೆ. ಆಧ್ಯಾತ್ಮಿಕ ಜಗತ್ತಿನಲ್ಲಿ ಸಹ ಆಧ್ಯಾತ್ಮಿನ ನಿಲುವಿನಲ್ಲಿ ಭಕ್ತನು ಬಯಸಿದಂತೆಯೇ ಕೃಷ್ಣನು ಪರಿಶುದ್ಧ ಭಕ್ತರಿಗೆ ತನ್ನನ್ನು ಕೊಟ್ಟುಕೊಳ್ಳುತ್ತಾನೆ. ಒಬ್ಬ ಭಕ್ತನಿಗೆ ಕೃಷ್ಣನು ತನ್ನ ಪರಮ ಪ್ರಭುವಾಗಬೇಕೆಂದು, ಮತ್ತೊಬ್ಬನಿಗೆ ತನ್ನ ಸಖನಾಗಬೇಕೆಂದು, ಇನ್ನೊಬ್ಬನಿಗೆ ತನ್ನ ಮಗನಾಬೇಕೆಂದು, ಬೇರೊಬ್ಬನಿಗೆ ತನ್ನ ಪ್ರೇಮಿಯಾಗಬೇಕೆಂದು ಬಯಕೆಯಿರಬಹುದು. ಭಕ್ತರು ಅವನಲ್ಲಿಟ್ಟಿರುವ ಪ್ರೇಮದ ವಿಧವಿಧ ತೀವ್ರತೆಗೆ ಅನುಗುಣವಾಗಿ ಕೃಷ್ಣನು ಎಲ್ಲ ಭಕ್ತರಿಗೂ ಸಮಾನವಾಗಿ ಅನುಗ್ರಹಿಸುತ್ತಾನೆ. ಭೌತಿಕ ಜಗತ್ತಿನಲ್ಲಿ ಸಹ ಭಾವಗಳ ಇದೇ ವಿನಿಮಯ ಇರುತ್ತದೆ.

ಭಗವಂತನು ಬೇರೆಬೇರೆ ವಿಧಗಳ ಆರಾಧಕರೊಂದಿಗೆ ಅವುಗಳನ್ನು ಸಮನಾಗಿ ವಿನಿಮಯ ಮಾಡಿಕೊಳ್ಳುತ್ತಾನೆ. ಇಲ್ಲಿಯೂ ಮತ್ತು ದಿವ್ಯಲೋಕದಲ್ಲಿಯೂ ಪರಿಶುದ್ಧ ಭಕ್ತರು ವೈಯಕ್ತಿಕವಾಗಿ ಅವನ ಸಹವಾಸದಲ್ಲಿರುತ್ತಾರೆ. ಭಗವಂತನಿಗೆ ವೈಯಕ್ತಿಕ ಸೇವೆಯನ್ನು ಅರ್ಪಿಸಲು ಸಮರ್ಥರಾಗುತ್ತಾರೆ ಮತ್ತು ಅವನ ಪ್ರೇಮಪೂರ್ವಕ ಸೇವೆಯಲ್ಲಿ ದಿವ್ಯಾನಂದವನ್ನು ಪಡೆಯುತ್ತಾರೆ. ನಿರಾಕಾರವಾದಿಗಳಾಗಿ ಜೀವಿಯ ಪ್ರತ್ಯೇಕ ಅಸ್ತಿತ್ವವನ್ನು ನಾಶಗೊಳಿಸುವ ಮೂಲಕ ಆಧ್ಯಾತ್ಮಿಕ ಆತ್ಮಹತ್ಯೆಯನ್ನು ಮಾಡಿಕೊಳ್ಳಲು ಬಯಸುವವರಿದ್ದಾರೆ. ಅವರನ್ನು ತನ್ನ ಪ್ರಭೆಯಲ್ಲಿ ಲೀನಮಾಡಿಕೊಳ್ಳುವ ಮೂಲಕ ಕೃಷ್ಣನು ಅವರಿಗೆ ನೆರವಾಗುತ್ತಾನೆ. ನಿತ್ಯಾವದ ಆನಂದಮಯವಾದ ದೇವೋತ್ತಮ ಪರಮ ಪುರುಷನನ್ನು ಇಂತಹ ನಿರಾಕಾರವಾದಿಗಳು ಒಪ್ಪುವುದಿಲ್ಲ. ಪರಿಣಾಮವಾಗಿ ತಮ್ಮ ಪ್ರತ್ಯೇಕ ವ್ಯಕ್ತಿತ್ವನ್ನು ನಂದಿಸಿದ ಇವರಿಗೆ ಭಗವಂತನ ಅಲೌಕಿಕ ವೈಯಕ್ತಿಕ ಸೇವೆಯ ಆನಂದವು ರುಚಿಸುವುದಿಲ್ಲ. ಅವರಲ್ಲಿ ಕೆಲವರು ನಿರಾಕಾರ ಅಸ್ತಿತ್ವದಲ್ಲಿಯೂ ಗಟ್ಟಿಯಾಗಿ ನೆಲೆಗೊಂಡವರಲ್ಲ.

ಕರ್ಮಗಳಲ್ಲಿ ತಮಗಿರುವ ಸುಪ್ತ ಬಯಕೆಗಳನ್ನು ತೋರಿಸಿಕೊಳ್ಳಲು ಅವರು ಐಹಿಕ ರಂಗಕ್ಕೆ ಮರಳುತ್ತಾರೆ. ಅವರಿಗೆ ಆಧ್ಯಾತ್ಮಿಕ ಲೋಕಗಳಲ್ಲಿ ಪ್ರವೇಶವಿಲ್ಲ. ಆದರೆ ಭೌತಿಕ ಲೋಕಗಳಲ್ಲಿ ಕರ್ಮಪ್ರವೃತ್ತರಾಗಲು ಮತ್ತೆ ಅವರಿಗೆ ಅವಕಾಶ ದೊರೆಯುತ್ತದೆ. ಫಲಾಪೇಕ್ಷೆಯಿಂದ ಕರ್ಮಮಾಡುವವರಿಗೆ ಯಜ್ಞೇಶ್ವರನಾಗಿ ಭಗವಂತನು ಅವರ ನಿಯತ ಕರ್ಮಗಳಿಗೆ ಅವರು ಅಪೇಕ್ಷಿಸುವ ಫಲವನ್ನು ಕೊಡುತ್ತಾನೆ. ಯೋಗಸಿದ್ಧಿಯನ್ನು ಬಯಸುವ ಯೋಗಿಗಳಿಗೆ ಅವನ್ನು ಅನುಗ್ರಹಿಸುತ್ತಾನೆ.

ಬೇರೆಮಾತುಗಳಲ್ಲಿ ಹೇಳುವುದಾದರೆ, ಪ್ರತಿಯೊಬ್ಬರೂ ಯಶಸ್ಸಿಗೆ ಭಗವಂತನ ಕರುಣೆಯೊಂದನ್ನೇ ಅವಲಂಬಿಸಬೇಕಾಗುತ್ತದೆ. ಎಲ್ಲ ಬಗೆಯ ಆಧ್ಯಾತ್ಮಿಕ ಪ್ರಕ್ರಿಯೆಗಳೂ ಒಂದೇ ಮಾರ್ಗದಲ್ಲಿ ದೊರೆಯುವ ಯಸ್ಸಿನ ವಿವಿಧ ಪ್ರಮಾಣಗಳು ಅಷ್ಟೇ. ಆದುದರಿಂದ ಮನುಷ್ಯನು ಕೃಷ್ಣಪ್ರಜ್ಞೆಯ ಅತ್ಯುನ್ನತ ಪರಿಪೂರ್ಣತೆಯನ್ನು ಸಾಧಿಸದಿದ್ದರೆ ಎಲ್ಲ ಪ್ರಯತ್ನಗಳನ್ನೂ ಅಪೂರ್ಣವಾಗಿಯೇ ಉಳಿಯುತ್ತವೆ. ಇದನ್ನು ಶ್ರೀಮದ್ಭಾಗವತದಲ್ಲಿ (2.3.10) ಹೀಗೆ ಹೇಳಿದೆ -

ಅಕಾಮಃ ಸರ್ವಕಾಮೋ ವಾ ಮೋಕ್ಷಕಾಮ ಉದಾರಧೀಃ |

ತೀವ್ರೇಣಿ ಭಕ್ತಿಯೋಗೇನ ಯಜೇತ ಪುರುಷಂ ಪರಮ್ ||

ಒಬ್ಬ ಮನುಷ್ಯನಿಗೆ ಆಸೆಯೇ ಇಲ್ಲದಿರಲಿ (ಇದು ಭಕ್ತರ ಸ್ಥಿತಿ) ಅಥವಾ ಎಲ್ಲ ಫಲಾಪೇಕ್ಷೆಯಿರಲಿ ಇಲ್ಲವೇ ಮುಕ್ತಿಯ ಅಪೇಕ್ಷಿಯಿರಲಿ ಅವನು ಸಂಪೂರ್ಣವಾಗಿ ಪರಿಪೂರ್ಣತೆಗಾಗಿ ದೇವೋತ್ತಮ ಪರಮ ಪುರುಷನನ್ನು ಆರಾಧಿಸಲು ಎಲ್ಲ ಪ್ರಯತ್ನಗಳನ್ನು ಮಾಡಬೇಕು. ಈ ಮಾರ್ಗವು ಕೃಷ್ಣಪ್ರಜ್ಞೆಯಲ್ಲಿ ಕೊನೆಗೊಳ್ಳುತ್ತದೆ.

Whats_app_banner

ವಿಭಾಗ

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.