Bhagavad Gita: ಭಗವಂತನ ಇಚ್ಛೆಯಂತೆ ನಡೆದುಕೊಳ್ಳುವವರನ್ನು ಎಂದೂ ಕೈಬಿಡುವುದಿಲ್ಲ; ಗೀತೆಯ ಅರ್ಥ ತಿಳಿಯಿರಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Bhagavad Gita: ಭಗವಂತನ ಇಚ್ಛೆಯಂತೆ ನಡೆದುಕೊಳ್ಳುವವರನ್ನು ಎಂದೂ ಕೈಬಿಡುವುದಿಲ್ಲ; ಗೀತೆಯ ಅರ್ಥ ತಿಳಿಯಿರಿ

Bhagavad Gita: ಭಗವಂತನ ಇಚ್ಛೆಯಂತೆ ನಡೆದುಕೊಳ್ಳುವವರನ್ನು ಎಂದೂ ಕೈಬಿಡುವುದಿಲ್ಲ; ಗೀತೆಯ ಅರ್ಥ ತಿಳಿಯಿರಿ

Bhagavad Gita: ಭಗವಂತನ ಇಚ್ಛೆಯಂತೆ ನಡೆದುಕೊಳ್ಳುವವರನ್ನು ಎಂದೂ ಕೈಬಿಡುವುದಿಲ್ಲ ಎಂಬುದರ ಅರ್ಥವನ್ನು ಭಗವದ್ಗೀತೆಯ 11ನೇ ಅಧ್ಯಾಯದ ಶ್ಲೋಕ 30, 34 ಮತ್ತು 35ನೇ ಶ್ಲೋಕದಲ್ಲಿ ಓದಿ

ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.

ಅಧ್ಯಾಯ 11 - ವಿಶ್ವರೂಪ -ಶ್ಲೋಕ - 30

ಲೇಲಿಹ್ಯಸೇ ಗ್ರಸಮಾನಃ ಸಮನ್ತಾಲ್

ಲೋಕಾನ್ ಸಮಗ್ರಾನ್ ವದನೈರ್ಜ್ವಲದ್ಭಿಃ |

ತೇಜೋಭಿರಾಪೂರ್ಯ ಜಗತ್ಸಮಗ್ರಮ್

ಭಾಸಸ್ತವೋಗ್ರಾಃ ಪ್ರತಪನ್ತಿ ವಿಷ್ಣೋ ||30||

ಅನುವಾದ: ಎಲೈ ವಿಷ್ಣುವೆ, ಉರಿಯುತ್ತಿರುವ ನಿನ್ನ ಬಾಯಿಗಳಲ್ಲಿ ಎಲ್ಲ ಕಡೆಗಳಿಂದ ನೀನು ಎಲ್ಲ ಜನರನ್ನು ನುಂಗುತ್ತಿರುವುದನ್ನು ನಾನು ಕಾಣುತ್ತಿದ್ದೇನೆ. ನಿನ್ನ ತೇಜಸ್ಸಿನಿಂದ ಇಡೀ ವಿಶ್ವವನ್ನು ಆವರಿಸಿದ್ದೀಯೆ. ನೀನು ಭಯಂಕರವಾದ, ಸುಡುವ ಕಿರಣಗಳೊಡನೆ ಪ್ರಕಟವಾಗಿದ್ದೀಯೆ.

ಅಧ್ಯಾಯ 11 - ವಿಶ್ವರೂಪ -ಶ್ಲೋಕ - 34

ದ್ರೋಣಂ ಚ ಭೀಷ್ಮಂಚ ಜಯದ್ರಥಂ ಚ

ಕರ್ಣಂ ತಥಾನ್ಯಾನಪಿ ಯೋಧವೀರಾನ್|

ಮಯಾ ಹತಾಂಸ್ತ್ವಂ ಜಹಿ ಮಾ ವ್ಯತಿಷ್ಠಾ

ಯುದ್ಧ್ಯಸ್ವ ಜೇತಾಸಿ ರಣೇ ಸಪತ್ನಾನ್ ||34||

ಅನುವಾದ: ದ್ರೋಣ, ಭೀಷ್ಮ, ಜಯದ್ರಥ, ಕರ್ಣ ಮತ್ತು ಇತರ ವೀರ ಯೋಧರು ಆಗಲೇ ನನ್ನಿಂದ ನಾಶವಾಗಿದ್ದಾರೆ. ಆದುದರಿಂದ ಅವರನ್ನು ಕೊಲ್ಲು. ವ್ಯಥೆ ಪಡಬೇಡ. ಯುದ್ಧ ಮಾಡು, ಯುದ್ಧದಲ್ಲಿ ನಿನ್ನ ಶತ್ರುಗಳನ್ನು ಸೋಲಿಸುವೆ.

ಭಾವಾರ್ಥ: ದೇವೋತ್ತಮ ಪರಮ ಪುರುಷನು ಎಲ್ಲ ಯೋಜನೆಗಳನ್ನು ಮಾಡುತ್ತಾನೆ. ಆದರೆ ತನ್ನ ಭಕ್ತರಲ್ಲಿ ಅವನ ಕೃಪೆ ಎಷ್ಟೆಂದರೆ, ತನ್ನ ಯೋಜನೆಯನ್ನು ತನ್ನ ಅಪೇಕ್ಷೆಯಂತೆ ಕಾರ್ಯಗತ ಮಾಡುವವರಿಗೆ ಅದರ ಕೀರ್ತಿಯನ್ನು ನೀಡಲು ಬಯಸುತ್ತಾನೆ. ಪ್ರತಿಯೊಬ್ಬನೂ ಕೃಷ್ಣಪ್ರಜ್ಞೆಯಲ್ಲಿ ಕೆಲಸಮಾಡಿ, ಒಬ್ಬ ಗುರುವಿನ ಮೂಲಕ ದೇವೋತ್ತಮ ಪರಮ ಪುರುಷನನ್ನು ಅರ್ಥಮಾಡಿಕೊಳ್ಳಬೇಕು. ಬದುಕು ಸಾಗಬೇಕಾದದ್ದು ಹೀಗೆ. ದೇವೋತ್ತಮ ಪರಮ ಪುರುಷನ ಕೃಪೆಯಿಂದ ಅವನ ಯೋಜನೆಗಳು ಅರ್ಥವಾಗುತ್ತವೆ. ಭಕ್ತರ ಯೋಜನೆಗಳು ಕೃಷ್ಣನ ಯೋಜನೆಗಳಂತೆಯೇ. ಮನುಷ್ಯನು ಇಂತಹ ಯೋಜನೆಗಳನ್ನು ಅನುಸರಿಸಿ, ಬದುಕಲು ನಡೆಸುವ ಹೋರಾಟದಲ್ಲಿ ಜಯಶಾಲಿಯಾಗಬೇಕು.

ಅಧ್ಯಾಯ 11 - ವಿಶ್ವರೂಪ -ಶ್ಲೋಕ - 35

ಏತಚ್ಫ್ರುತ್ವಾ ವಚನಂ ಕೇಶವಸ್ಯ

ಕೃತಾಞ್ಜಲಿರ್ವೇಪಮಾನಃ ಕಿರೀಟೀ |

ನಮಸ್ಕೃತ್ವಾ ಭೂಯ ಏವಾಹ ಕೃಷ್ಣಂ

ಸಗದ್ಗದಂ ಭೀತ ಭೀತಃ ಪ್ರಣಮ್ಯ ||35||

ಅನುವಾದ: ಸಂಜಯನು ಧೃತರಾಷ್ಟ್ರನಿಗೆ ಹೀಗೆ ಹೇಳಿದನು - ರಾಜನೇ, ದೇವೋತ್ತಮ ಪರಮ ಪುರುಷನ ಈ ಮಾತುಗಳನ್ನು ಕೇಳಿ ಅರ್ಜುನನು ಕೈಗಳನ್ನು ಮುಗಿದುಕೊಂಡು ನಡುಗುತ್ತ ಮತ್ತೆ ಮತ್ತೆ ನಮಸ್ಕಾರ ಮಾಡಿದನು. ಗದ್ಗದ ಕಂಠದಿಂದ ಭಯಭೀತನಾಗಿ ಶ್ರೀಕೃಷ್ಣನಿಗೆ ಹೀಗೆ ಹೇಳಿದನು.

ಭಾವಾರ್ಥ: ನಾವು ಆಗಲೇ ವಿವರಿಸಿದಂತೆ, ದೇವೋತ್ತಮ ಪರಮ ಪುರುಷನ ವಿಶ್ವರೂಪವು ಸೃಷ್ಟಿಸಿದ ಸನ್ನಿವೇಶದಿಂದ ಅರ್ಜುನನು ಆಶ್ಚರ್ಯಚಕಿತನಾಗಿ ದಿಗ್ಭ್ರಾಂತನಾದನು. ಅನಂತರ ಭಕ್ತಿಪೂರ್ವಕವಾಗಿ ಮತ್ತೆ ಮತ್ತೆ ಕೃಷ್ಣನಿಗೆ ಪ್ರಣಾಮ ಮಾಡಿದನು. ಸ್ನೇಹಿತನಾಗಿ ಅಲ್ಲ, ಬೆರೆಗಾದ ಭಕ್ತನಾಗಿ ಅವನು ಗದ್ಗದ ಸ್ವರದಲ್ಲಿ ಪ್ರಾರ್ಥನೆ ಮಾಡಲು ಪ್ರಾರಂಭಿಸಿದನು.

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.