Bhagavad Gita: ಭಕ್ತಿಸೇವೆಯಲ್ಲಿ ನಿರತರಾದವರಿಗೆ 2 ಕೈಗಳ ಕೃಷ್ಣನ ರೂಪದಲ್ಲಿಯೇ ಬಹು ಪ್ರೀತಿ; ಗೀತೆಯ ಸಾರಾಂಶ ಹೀಗಿದೆ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Bhagavad Gita: ಭಕ್ತಿಸೇವೆಯಲ್ಲಿ ನಿರತರಾದವರಿಗೆ 2 ಕೈಗಳ ಕೃಷ್ಣನ ರೂಪದಲ್ಲಿಯೇ ಬಹು ಪ್ರೀತಿ; ಗೀತೆಯ ಸಾರಾಂಶ ಹೀಗಿದೆ

Bhagavad Gita: ಭಕ್ತಿಸೇವೆಯಲ್ಲಿ ನಿರತರಾದವರಿಗೆ 2 ಕೈಗಳ ಕೃಷ್ಣನ ರೂಪದಲ್ಲಿಯೇ ಬಹು ಪ್ರೀತಿ; ಗೀತೆಯ ಸಾರಾಂಶ ಹೀಗಿದೆ

Bhagavad Gita: ಭಕ್ತಿಸೇವೆಯಲ್ಲಿ ನಿರತರಾದವರಿಗೆ 2 ಕೈಗಳ ಕೃಷ್ಣನ ರೂಪದಲ್ಲಿಯೇ ಬಹು ಪ್ರೀತಿ ಎಂಬುದರ ಅರ್ಥವನ್ನು ಭಗವದ್ಗೀತೆಯ 11ನೇ ಅಧ್ಯಾಯದ 54ನೇ ಶ್ಲೋಕದ ಮುಂದುವರಿದ ಭಾಗದಲ್ಲಿ ತಿಳಿಯಿರಿ.

ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.

ಅಧ್ಯಾಯ 11 - ವಿಶ್ವರೂಪ -ಶ್ಲೋಕ - 54

ಭಕ್ತ್ಯಾ ತ್ವನನ್ಯಯಾ ಶಕ್ಯ ಅಹಮೇವಂವಿಧೋರ್ಜುನ |

ಜ್ಞಾತುಂ ದ್ರಷ್ಟಂ ಚ ತತ್ತ್ವೇನ ಪ್ರವೇಷ್ಟುಂ ಚ ಪರನ್ತಪ ||54||

ಅನುವಾದ: ನನ್ನ ಪ್ರೀತಿಯ ಅರ್ಜುನನೆ, ಏಕಚಿತ್ತದ ಭಕ್ತಿಸೇವೆಯಿಂದ ಮಾತ್ರ ನಿನ್ನ ಮುಂದೆ ನಿಂತಿರುವ ನನ್ನನ್ನು ನಾನಿರುವಂತೆ ಅರ್ಥಮಾಡಿಕೂಳ್ಳಲು ಸಾಧ್ಯ. ಹೀಗೆ ಮಾತ್ರ ನನ್ನನ್ನು ನೇರವಾಗಿ ನೋಡಲು ಸಾಧ್ಯ. ಈ ರೀತಿಯಲ್ಲಿ ಮಾತ್ರ ನನ್ನನ್ನು ತಿಳಿಯುವ ರಹಸ್ಯಗಳನ್ನು ನೀನು ಪ್ರವೇಶಿಸಬಲ್ಲೆ.

ಭಗವದ್ಗೀತೆಯ 11 ನೇ ಅಧ್ಯಾಯ ವಿಶ್ವರೂಪದ 54 ನೇ ಶ್ಲೋಕದ ಮುಂದುರಿದ ಭಾಗದಲ್ಲಿ ಹೀಗೆಯೇ ಭಗವದ್ಗೀತೆಯಲ್ಲಿ ಭಗವಂತನು ಮತ್ತಃ ಪರತರಂ ನಾನ್ಯತ್ - ದೇವೋತ್ತಮ ಪುರುಷನಾಗಿ ನನ್ನ ರೂಪವನ್ನು ಮೀರಿಸುವುದು ಯಾವುದೂ ಇಲ್ಲ ಎಂದು ಹೇಳುತ್ತಾನೆ. ಭಗವದ್ಗೀತೆಯಲ್ಲಿ ಬೇರೆಡೆ ಅವನು ಅಹಮ್ ಆದಿರ್ ಹಿ ದೇವಾನಾಮ್ - ನಾನು ದೇವತೆಗಳಿಗೆ ಮೂಲ ಎಂದು ಹೇಳುತ್ತಾನೆ. ಕೃಷ್ಣನಿಂದ ಭಗವದ್ಗೀತೆಯನ್ನು ತಿಳಿದುಕೊಂಡನಂತರ ಅರ್ಜುನನೂ ಈ ಮಾತುಗಳಲ್ಲಿ ಇದನ್ನು ದೃಢಪಡಿಸುತ್ತಾನೆ.

ಪರಂ ಬ್ರಹ್ಮ ಪರಂ ಧಾಮ ಪವಿತ್ರಂ ಪರಮಂ ಭವಾನ್ - ನೀನು ಪರಿಪೂರ್ಣ ಸತ್ಯನಾದ ದೇವೋತ್ತಮ ಪರಮ ಪುರುಷನೆಂದೂ ಎಲ್ಲಕ್ಕೂ ಆಶ್ರಯನೆಂದೂ ನಾನು ಈಗ ಸಂಪೂರ್ಣವಾಗಿ ತಿಳಿದಿದ್ದೇನೆ. ಆದುದರಿಂದ ಕೃಷ್ಣನು ಅರ್ಜುನನಿಗೆ ತೋರಿದ ವಿಶ್ವರೂಪವು ಭಗವಂತನ ಮೂಲ ರೂಪವಲ್ಲ. ಮೂಲವು ಕೃಷ್ಣನ ರೂಪ. ಸಹಸ್ರ ಶಿರಗಳ ಸಹಸ್ರ ಬಾಹುಗಳ ವಿಶ್ವರೂಪವು, ದೇವರಲ್ಲಿ ಪ್ರೀತಿ ಇಲ್ಲದವರ ಗಮನವನ್ನು ಸೆಳೆಯಲು ಮಾತ್ರ ಪ್ರಕಟವಾಗಿದೆ. ಅದು ಭಗವಂತನ ಮೂಲ ರೂಪವಲ್ಲ.

ಭಗವಂತನೊಡನೆ ಬೇರೆ ಬೇರೆ ಅಲೌಕಿಕ ಸಂಬಂಧಗಳನ್ನು ಹೊಂದಿರುವ ಪರಿಶುದ್ಧ ಭಕ್ತರಿಗೆ ವಿಶ್ವರೂಪವು ಆಕರ್ಷವಾಗಿಲ್ಲ. ಪರಮ ಪ್ರಭುವು ತನ್ನ ಮೂಲ ರೂಪವಾದ ಕೃಷ್ಣನ ರೂಪದಲ್ಲಿ ಪ್ರೀತಿಯನ್ನು ವಿನಿಮಯ ಮಾಡಿಕೊಳ್ಳುತ್ತಾನೆ. ಆದುದರಿಂದ, ಸ್ನೇಹದಲ್ಲಿ ಕೃಷ್ಣನೊಡನೆ ಆತ್ಮೀಯ ಸಂಬಂಧವನ್ನು ಬೆಳೆಸಿಕೊಂಡ ಅರ್ಜುನನಿಗೆ ಈ ವಿಶ್ವರೂಪವು ಸಂತೋಷದಾಯಕವಲ್ಲ. ಅದು ಭಯಂಕರವಾಗಿತ್ತು.

ಕೃಷ್ಣನ ನಿತ್ಯಸಂಗಾತಿಯಾಗಿದ್ದ ಅರ್ಜುನನಿಗೆ ದಿವ್ಯನೇತ್ರಗಳಿದ್ದರಬೇಕು. ಅವನು ಸಾಮಾನ್ಯ ಮನುಷ್ಯನಾಗಿರಲಿಲ್ಲ. ಆದುದರಿಂದ ವಿಶ್ವರೂಪವು ಅವನಿಗೆ ಮೋಹಕವಾಗಿರಲಿಲ್ಲ. ಫಲವನ್ನು ನೀಡುವ ಕರ್ಮಗಳಿಂದ ತಾವು ಮೇಲೇರಲು ಬಯಸುವವರಿಗೆ ಇದು ಆಶ್ಚರ್ಯಕರವಾಗಿ ತೋರಬಹುದು. ಆದರೆ ಭಕ್ತಿಸೇವೆಯಲ್ಲಿ ನಿರತರಾದವರಿಗೆ ಎರಡು ಕೈಗಳ ಕೃಷ್ಣನ ರೂಪದಲ್ಲಿಯೇ ಬಹು ಪ್ರೀತಿ.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.