ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Bhagavad Gita: ಭಗವಂತನ ವಿಷಯವನ್ನು ಕೇಳಿದಷ್ಟೂ, ಆತನ ಅದ್ಭುತವನ್ನು ಸವಿಯಬೇಕು ಎನ್ನಿಸುತ್ತೆ; ಗೀತೆಯ ಸಾರಾಂಶ ಹೀಗಿದೆ

Bhagavad Gita: ಭಗವಂತನ ವಿಷಯವನ್ನು ಕೇಳಿದಷ್ಟೂ, ಆತನ ಅದ್ಭುತವನ್ನು ಸವಿಯಬೇಕು ಎನ್ನಿಸುತ್ತೆ; ಗೀತೆಯ ಸಾರಾಂಶ ಹೀಗಿದೆ

Bhagavad Gita: ಭಗವಂತನ ವಿಷಯವನ್ನು ಕೇಳಿದಷ್ಟೂ, ಆತನ ಅದ್ಭುತವನ್ನು ಸವಿಯಬೇಕು ಎನ್ನಿಸುತ್ತೆ ಎಂಬುದರ ಅರ್ಥವನ್ನು ಭಗವದ್ಗೀತೆಯ 10ನೇ ಅಧ್ಯಾಯದ 18ನೇ ಶ್ಲೋಕದಲ್ಲಿ ತಿಳಿಯಿರಿ.

ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.

ಅಧ್ಯಾಯ 10 - ವಿಭೂತಿ ಯೋಗ -ಶ್ಲೋಕ-18

ವಿಸ್ತರೇಣಾತ್ಮನೋ ಯೋಗಂ ವಿಭೂತಿಂ ಚ ಜನಾರ್ದನ |

ಭೂಯಃ ಕಥಯ ತೃಪ್ತಿರ್ಹಿ ಶೃಣ್ವತೋ ನಾಸ್ತಿ ಮೇಮೃತಮ್ ||18||

ಅನುವಾದ: ಜನಾರ್ದನ, ನಿನ್ನ ಸಿರಿಗಳ ಯೋಗಶಕ್ತಿಯನ್ನು ಮತ್ತೆ ವಿವರವಾಗಿ ವರ್ಣಿಸು. ನಿನ್ನ ವಿಷಯ ಕೇಳುವುದು ಸಾಕು ಎಂದೇ ನನಗೆ ಅನಿಸುವುದಿಲ್ಲ. ನಿನ್ನ ವಿಷಯವನ್ನು ಕೇಳಿದಷ್ಟೂ ನಿನ್ನ ಮಾತುಗಳ ಅದ್ಭುತವನ್ನು ಸವಿಯಬೇಕು ಎನ್ನಿಸುತ್ತದೆ.

ಭಾವಾರ್ಥ: ಶೌನಕರು ಮುಂದಾಳುವಾಗಿದ್ದ ನೈಮಿಷಾರಣ್ಯದ ಋಷಿಗಳು ಸೂತಮುನಿಗಳಿಗೆ ಇಂತಹುದೇ ಮಾತನ್ನು ಹೇಳಿದರು. ಅವರು ಹೇಳಿದ್ದು ಹೀಗೆ -

ವಯಂ ತು ನ ವಿತೃಪ್ಯಾಮ ಉತ್ತಮಶ್ಲೋಕವಿಕ್ರಮೇ |

ಯಚ್ಫೃಣ್ವತಾಂ ರಸಜ್ಞಾನಾಂ ಸ್ವಾದು ಸ್ವಾದು ಪದೇ ಪದೇ ||

ಸೊಗಸಾದ ಸ್ತೋತ್ರಗಳು ಯಾರ ಮಹಿಮೆಯನ್ನು ಹಾಡುವುವೋ ಆ ಕೃಷ್ಣನ ಲೀಲೆಗಳನ್ನು ಸದಾ ಕೇಳಿದರೂ ಸಾಕೆನಿಸುವುದೇ ಇಲ್ಲ. ಕೃಷ್ಣನೊಡನೆ ಒಂದು ದಿವ್ಯ ಸಂಬಂಧವನ್ನು ಪಡೆದುಕೊಂಂಡವರು ಹೆಜ್ಜೆ ಹೆಜ್ಜೆಗೂ ಪ್ರಭುವಿನ ಲೀಲೆಗಳನ್ನು ಸವಿಯುತ್ತಾರೆ. (ಭಾಗವತ, 1.1.19). ಹೀಗೆ ಅರ್ಜುನನಿಗೆ ಕೃಷ್ಣನ ವಿಷಯವನ್ನು ಕೇಳುವುದರಲ್ಲಿ ಆಸಕ್ತಿ. ಅದರಲ್ಲಿಯೂ ಅವನು ಹೇಗೆ ಸರ್ವವ್ಯಾಪಿ ಪರಮ ಪ್ರಭವಾಗಿಯೇ ಇರುತ್ತಾನೆ ಎನ್ನುವುದರಲ್ಲಿ ಆಸಕ್ತಿ.

ಅಮೃತದ ವಿಷಯ ಹೇಳುವುದಾದರೆ, ಕೃಷ್ಣನನ್ನು ಕುರಿತ ಯಾವುದೇ ವೃತ್ತಾಂತ ಅಥವಾ ಹೇಳಿಕೆಯು ಅಮೃತದಂತೆ. ಅಮತೃತವನ್ನು ಸ್ವಾನುಭವದಿಂದ ಕಂಡುಕೊಳ್ಳಬಹುದು. ಆಧುನಿಕ ಕಥೆ, ಕಾದಂಬರಿ ಮತ್ತು ಚರಿತ್ರೆಗಳಿಗೂ ಪ್ರಭವಿನ ದಿವ್ಯಲೀಲೆಗಳಿಗೂ ವ್ಯತ್ಯಾಸವಿದೆ. ಐಹಿಕ ಆಗುಹೋಗುಗಳ ಕಥೆಯನ್ನು ಮತ್ತೆ ಮತ್ತೆ ಕೇಳಿದರೆ ಬೇಸರವಾಗುತ್ತದೆ. ಆದರೆ ಕೃಷ್ಣನ ವಿಷಯ ಎಷ್ಟು ಕೇಳಿದರೂ ಬೇಸರವಾಗುವುದಿಲ್ಲ. ಈ ಕಾರಣದಿಂದಲೇ ಇಡೀ ವಿಶ್ವದ ಚರಿತ್ರೆಯ ಭಗವಂತನ ಅವತಾರಗಳ ಲೀಲಾಪ್ರಸ್ತಾಪಗಳಿಂದ ತುಂಬಿಹೋಗಿವೆ. ಪುರಾಣಗಳು ಪ್ರಭುವಿನ ವಿವಿಧ ಅವತಾರಗಳ ಲೀಲೆಗಳನ್ನು ವಿವರಿಸುವ ಹಿಂದಿನ ಯುಗಗಳ ಇತಿಹಾಸಗಳು. ಈ ರೀತಿಯಲ್ಲಿ ಓದುವ ವಿಷಯವು ಮತ್ತೆ ಮತ್ತೆ ಓದಿದರೂ ಸಹ, ಹೊಟ್ಟ ಹೊಸದಾಗಿರುತ್ತದೆ.

ಅಧ್ಯಾಯ 10 - ವಿಭೂತಿ ಯೋಗ -ಶ್ಲೋಕ - 21

ಆದಿತ್ಯಾನಾಮಹಂ ವಿಷ್ಣು ರ್ಜ್ಯೋತಿಷಾಂ ರವಿರಂಶುಮಾನ್ |

ಮರೀಚಿರ್ಮರುತಾಮಸ್ಮಿ ನಕ್ಷತ್ರಾಣಾಮಹಂ ಶಶೀ ||21||

ಅನುವಾದ: ನಾನು ಆದಿತ್ಯರಲ್ಲಿ ವಿಷ್ಣು, ಜ್ಯೋತಿಗಳಲ್ಲಿ ತೇಜಸ್ವೀ ಸೂರ್ಯ, ಮರುತರಲ್ಲಿ ಮರೀಚಿ, ಮತ್ತು ನಕ್ಷತ್ರಗಳಲ್ಲಿ ನಾನು ಚಂದ್ರನು.

ಭಾವಾರ್ಥ: ಆದಿತ್ಯರು ಹನ್ನೆರಡು ಮಂದಿ. ಅವರಲ್ಲಿ ಮುಖ್ಯನಾದವನು ಕೃಷ್ಣ. ಆಕಾಶದಲ್ಲಿ ಹೊಳೆಯುತ್ತಿರುವ ಪ್ರಕಾಶಗಳಲ್ಲಿ ಸೂರ್ಯನು ಮುಖ್ಯನಾದವನು. ಬ್ರಹ್ಮಸಂಹಿತೆಯಲ್ಲಿ ಸೂರ್ಯನನ್ನು ಪರಮ ಪ್ರಭುವಿನ ಪ್ರಕಾಶಮಾನ ನೇತ್ರವೆಂದು ಒಪ್ಪಿದೆ. ಆಕಾಶದಲ್ಲಿ ಐವತ್ತು ಬಗೆಗಳ ವಾಯುವು ಬೀಸುತ್ತದೆ. ಇವುಗಳ ನಿಯಂತ್ರಕ ದೇವತೆ ಮರೀಚಿಯು ಕೃಷ್ಣನನ್ನು ಪ್ರತಿನಿಧಿಸುತ್ತಾನೆ.

ನಕ್ಷತ್ರಗಳಲ್ಲಿ ರಾತ್ರಿ ಪ್ರಧಾನವಾದವನು ಚಂದ್ರ. ಆದುದರಿಂದ ಚಂದ್ರನು ಕೃಷ್ಣನ ಪ್ರತಿನಿಧಿ. ಈ ಶ್ಲೋಕದಲ್ಲಿ ಚಂದ್ರನು ನಕ್ಷತ್ರಗಳಲ್ಲಿ ಒಂದೆಂದು ತೋರುತ್ತದೆ. ಆದುದರಿಂದ ಆಕಾಶದಲ್ಲಿ ಮಿನುಗುವ ನಕ್ಷತ್ರಗಳು ಸಹ ಸೂರ್ಯನ ಬೆಳಕನ್ನು ಪ್ರತಿಫಲಿಸುತ್ತವೆ. ವಿಶ್ವದಲ್ಲಿ ಹಲವು ಸೂರ್ಯರಿದ್ದಾರೆ ಎನ್ನುವ ಊಹೆಯನ್ನು ವೇದಸಾಹಿತ್ಯವು ಒಪ್ಪುವುದಿಲ್ಲ. ಸೂರ್ಯನು ಒಬ್ಬನೇ. ಸೂರ್ಯನ ಪ್ರತಿಫಲನದಿಂದ ಚಂದ್ರನು ಬೆಳಗುವಂತೆಯೇ ನಕ್ಷತ್ರಗಳೂ ಬೆಳಗುತ್ತವೆ. ಭಗವದ್ಗೀತೆಯು ಇಲ್ಲಿ, ಚಂದ್ರನು ನಕ್ಷತ್ರಗಳಲ್ಲಿ ಒಂದು. ಮಿನುಗುವ ನಕ್ಷತ್ರಗಳು ಸೂರ್ಯಗಳಲ್ಲಿ, ಆದರೆ ಚಂದ್ರನನ್ನು ಹೋಲುತ್ತವೆ ಎಂದು ಸೂಚಿಸುತ್ತದೆ.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)