ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Bhagavad Gita: ಭಗವಂತ ಅದ್ಭುತವಾದ ವಿಶ್ವರೂಪವನ್ನು ಎಲ್ಲರಿಗೂ ತೋರಿಸಬಲ್ಲ; ಗೀತೆಯ ಅರ್ಥ ತಿಳಿಯಿರಿ

Bhagavad Gita: ಭಗವಂತ ಅದ್ಭುತವಾದ ವಿಶ್ವರೂಪವನ್ನು ಎಲ್ಲರಿಗೂ ತೋರಿಸಬಲ್ಲ; ಗೀತೆಯ ಅರ್ಥ ತಿಳಿಯಿರಿ

Bhagavad Gita in Updesh: Bhagavad Gita: ಭಗವಂತ ಅದ್ಭುತವಾದ ವಿಶ್ವರೂಪವನ್ನು ಎಲ್ಲರಿಗೂ ತೋರಿಸಬಲ್ಲ ಎಂಬುದರ ಅರ್ಥವನ್ನು ಭಗವದ್ಗೀತೆಯ 11ನೇ ಅಧ್ಯಾಯದ 45ನೇ ಶ್ಲೋಕದಲ್ಲಿ ಓದಿ.

ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.

ಅಧ್ಯಾಯ 11 - ವಿಶ್ವರೂಪ -ಶ್ಲೋಕ - 45

ಅದೃಷ್ಟಪೂರ್ವಂ ಹೃಷಿತೋಸ್ಮಿ ದೃಷ್ಟ್ವಾ

ಭಯೇನ ಚ ಪ್ರವ್ಯಥಿತಂ ಮನೋ ಮೇ |

ತದೇವ ಮೇ ದರ್ಶಯ ದೇವ ರೂಪಮ್

ಪ್ರಸೀದ ದೇವೇಶ ಜಗನ್ನಿವಾಸ ||45||

ಅನುವಾದ: ನಾನು ಹಿಂದೆ ನೋಡಿದ್ದ ಈ ವಿಶ್ವರೂಪವನ್ನು ಕಂಡು ಸಂತೋಷಪಟ್ಟಿದ್ದೇನೆ. ಆದರೆ ಅದೇ ಕಾಲದಲ್ಲಿ ನನ್ನ ಮನಸ್ಸು ಭಯದಿಂದ ತಲ್ಲಣಗೊಂಡಿದೆ. ಹೇ ಪ್ರಭುಗಳ ಪ್ರಭುವೇ, ಜಗನ್ನಿವಾಸನೇ, ನನ್ನಲ್ಲಿ ಕೃಪೆಮಾಡಿ ದೇವೋತ್ತಮ ಪರಮ ಪುರುಷನಾದ ನಿನ್ನ ರೂಪವನ್ನು ನನಗೆ ಮತ್ತೆ ತೋರಿಸು (Bhagavad Gita in Updesh in Kannada).

ಭಾವಾರ್ಥ: ಅರ್ಜುನನು ಕೃಷ್ಣನ ಪರಮ ಪ್ರಿಯಸಖನಾದದ್ದರಿಂದ ಯಾವಾಗಲೂ ಆತನಿಗೆ ಪ್ರೀತಿಪಾತ್ರನು. ಅರ್ಜುನನು ಪ್ರಿಯಸ್ನೇಹಿತನಾಗಿ ತನ್ನ ಸ್ನೇಹಿತನ ಸಿರಿಯನ್ನು ಕಂಡು ಹರ್ಷಪಟ್ಟಿದ್ದಾನೆ. ತನ್ನ ಸ್ನೇಹಿತನಾದ ಕೃಷ್ಣನು ದೇವೋತ್ತಮ ಪರಮ ಪುರುಷ ಮತ್ತು ಇಂತಹ ಅದ್ಭುತವಾದ ವಿಶ್ವರೂಪವನ್ನು ತೋರಿಸಬಲ್ಲ ಎಂದು ಅರ್ಜುನನಿಗೆ ಸಂತೋಷವಾಗಿದೆ. ಆದರೆ ಅದೇ ಕಾಲದಲ್ಲಿ ವಿಶ್ವರೂಪವನ್ನು ಕಂಡು ತನ್ನ ಪರಿಶುದ್ಧ ಸ್ನೇಹದ ಕಾರಣದಿಂದ ಕೃಷ್ಣನ ವಿಷಯದಲ್ಲಿ ಹಲವು ಅಪರಾಧಗಳನ್ನು ಮಾಡಿದ್ದೇನೆ ಎಂದು ಅವನಿಗೆ ಭಯವಾಗುತ್ತದೆ.

ಹೀಗೆ ಅವನು ಭಯಪಡಲು ಕಾರಣವೇ ಇಲ್ಲದಿದ್ದರೂ ಭಯದಿಂದ ಅವನ ಮನಸ್ಸು ವ್ಯಗ್ರವಾಗಿದೆ. ಆದುದರಿಂದ ಕೃಷ್ಣನು ತನ್ನ ನಾರಾಯಣ ರೂಪವನ್ನು ತೋರಬೇಕೆಂದು ಅರ್ಜುನನು ಬೇಡುತ್ತಿದ್ದಾನೆ. ಏಕೆಂದರೆ ಕೃಷ್ಣನು ಯಾವ ರೂಪವನ್ನಾದರೂ ಧರಿಸಬಲ್ಲ. ಈ ವಿಶ್ವರೂಪವು ಐಹಿಕವಾದದ್ದು ಮತ್ತು ಸ್ವಲ್ಪಕಾಲದ್ದು. ಏಕೆಂದರೆ ಈ ಐಹಿಕ ಜಗತ್ತು ಅಲ್ಪ ಕಾಲದ್ದು. ಆದರೆ ವೈಕುಂಠ ಲೋಕಗಳಲ್ಲಿ ಅವನಿಗೆ ಚತುರ್ಭಜನಾದ ನಾರಾಯಣನ ದಿವ್ಯ ರೂಪವಿದೆ. ಅಧ್ಯಾತ್ಮಿಕ ಗಗನದಲ್ಲಿ ಲೆಕ್ಕವಿಲ್ಲದಷ್ಟು ಲೋಕಗಳಿವೆ. ಬೇರೆ ಬೇರೆ ಹೆಸರುಗಳ ತನ್ನ ಪರಿಪೂರ್ಣವಿಸ್ತರಣೆಗಳಿಂದ ಕೃಷ್ಣನು ಪ್ರತಿಯೊಂದು ಲೋಕದಲ್ಲಿಯೂ ಇದ್ದಾನೆ.

ವೈಕುಂಠ ಲೋಕಗಳ ಪ್ರಕಟವಾದ ರೂಪಗಳಲ್ಲಿ ಒಂದನ್ನು ಕಾಣಲು ಅರ್ಜುನನು ಬಯಸುತ್ತಾನೆ. ಪ್ರತಿಯೊಂದು ವೈಕುಂಠ ಲೋಕದಲ್ಲಿಯೂ ನಾರಾಯಣ ರೂಪಕ್ಕೆ ನಾಲ್ಕು ಭುಜಗಳಿವೆ. ಆದರೆ ಶಂಖ, ಗದೆ, ಪದ್ಮ ಮತ್ತು ಚಕ್ರ ಈ ಸಂಕೇತಗಳ ಜೋಡಣೆಯು ಬೇರೆ ಬೇರೆಯಾಗಿರುತ್ತವೆ. ಈ ನಾಲ್ಕು ವಸ್ತುಗಳನ್ನು ಬೇರೆ ಬೇರೆ ಕೈಗಳು ಹಿಡಿದಿರುವುದಕ್ಕೆ ಅನುಗುಣವಾಗಿ ನಾರಾಯಣನಿಗೆ ಬೇರೆ ಬೇರೆ ಹೆಸರುಗಳುಂಟು. ಈ ಎಲ್ಲ ರೂಪಗಳೂ ಕೃಷ್ಣನಿಂದ ಅಭಿನ್ನ. ಆದುದರಿಂದ ಅರ್ಜುನನು ಈ ಚತುರ್ಭುಜ ರೂಪವನ್ನು ತನಗೆ ತೋರಿಸಬೇಕೆಂದು ಪ್ರಾರ್ಥಿಸುತ್ತಾನೆ.

ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.