Bhagavad Gita: ಮರಣಾನಂತರ ಪಾಪ ಮಾಡಿದವರು ಯಾವ ಲೋಕಕ್ಕೆ ಹೋಗುತ್ತಾರೆ; ಗೀತೆಯ ಅರ್ಥ ತಿಳಿಯಿರಿ
Bhagavad Gita: ಮರಣಾನಂತರ ಬಹಳ ಪಾಪ ಮಾಡಿದವರು ಯಾವ ಲೋಕಕ್ಕೆ ಹೋಗುತ್ತಾರೆ ಎಂಬುದರ ಅರ್ಥವನ್ನು ಭಗವದ್ಗೀತೆಯ 10ನೇ ಅಧ್ಯಾಯದ 29ನೇ ಶ್ಲೋಕದಲ್ಲಿ ಓದಿ.
ಅಧ್ಯಾಯ 10 - ವಿಭೂತಿ ಯೋಗ -ಶ್ಲೋಕ - 22
ವೇದಾನಾಂ ಸಾಮವೇದೋಸ್ಮಿ ದೇವಾನಾಮಸ್ಮಿ ವಾಸವಃ |
ಇನ್ದ್ರಿಯಾಣಾಂ ಮನಶ್ಚಾಸ್ಮಿ ಭೂತಾನಾಮಸ್ಮಿ ಚೇತನಾ ||22||
ಅನುವಾದ: ವೇದಗಳಲ್ಲಿ ನಾನು ಸಾಮವೇದ, ದೇವತೆಗಳಲ್ಲಿ ನಾನು ಸ್ವರ್ಗರಾಜನಾದ ಇಂದ್ರ, ಇಂದ್ರಿಯಗಳಲ್ಲಿ ನಾನು ಮನಸ್ಸು, ಮತ್ತು ಜೀವಿಗಳಲ್ಲಿ ನಾನು ಚೇತನ.
ಭಾವಾರ್ಥ: ಪ್ರಜ್ಞೆ ಇಲ್ಲ. ಜಡದ್ರವ್ಯಕ್ಕೂ ಚೇತನಕ್ಕೂ ಇರುವ ವ್ಯತ್ಯಾಸವೆಂದರೆ, ಜಡದ್ರವ್ಯಕ್ಕೆ ಜೀವಿಗಿರುವಂತೆ ಪ್ರಜ್ಞೆ ಇಲ್ಲ. ಆದುದರಿಂದ ಈ ಪ್ರಜ್ಞೆಯು ಪರಮ ವಾದದ್ದು. ನಿತ್ಯವಾದದ್ದು. ಜಡದ್ರವ್ಯದ ಸಂಘಟನೆಯೂ ಪ್ರಜ್ಞೆಯನ್ನು ಉತ್ಪತ್ತಿ ಮಾಡಲಾರದು.
ಅಧ್ಯಾಯ 10 - ವಿಭೂತಿ ಯೋಗ -ಶ್ಲೋಕ - 28
ಆಯುಧಾನಾಮಹಂ ವಜ್ರಂ ಧೇನೂನಾಮಸ್ಮಿ ಕಾಮಧುಕ್ |
ಪ್ರಜನಶ್ಚಾಸ್ಮಿ ಕನ್ದರ್ಪಃ ಸರ್ಪಾಣಾಮಸ್ಮಿ ವಾಸುಕಿಃ ||28||
ಅನುವಾದ: ಆಯುಧಗಳಲ್ಲಿ ನಾನು ವಜ್ರಾಯುಧ, ಗೋವುಗಳಲ್ಲಿ ಸುರಭಿ. ಪ್ರಜೋತ್ಪತ್ತಿಗೆ ಕಾರಣಗಳಲ್ಲಿ ನಾನು ಕಂದರ್ಪ, ಪ್ರೇಮದೇವತೆ. ಸರ್ಪಗಳಲ್ಲಿ ನಾನು ವಾಸುಕಿ.
ಭಾವಾರ್ಥ: ವಜ್ರಾಯುಧ ಅಥವಾ ಸಿಡಿಲು ನಿಜವಾಗಿಯೂ ಬಲಶಾಲಿಯಾದದ್ದು. ಅದು ಕೃಷ್ಣನ ಶಕ್ತಿಯನ್ನು ಪ್ರತಿನಿಧಿಸುತ್ತದೆ. ಅಧ್ಯಾತ್ಮಿಕ ಗಗನದಲ್ಲಿರುವ ಕೃಷ್ಣಲೋಕದಲ್ಲಿ, ಯಾವಾಗ ಕರೆದರೂ ಹಾಲು ಕೊಡುವ ಹಸುಗಳಿವೆ. ಅವು ಮನುಷ್ಯನು ಎಷ್ಟು ಬಯಸಿದರೆ ಅಷ್ಟು ಹಾಲನ್ನು ಕೂಡುತ್ತವೆ. ನಿಜ, ಇಂತಹ ಗೋವುಗಳು ಐಹಿಕ ಲೋಕದಲ್ಲಿ ಇಲ್ಲ. ಆದರೆ ಕೃಷ್ಣಲೋಕದಲ್ಲಿ ಅವುಗಳ ಪ್ರಸ್ತಾಪ ಇದೆ. ಪ್ರಭುವು ಇಂತಹ ಅನೇಕ ಗೋವುಗಳನ್ನು ಇಟ್ಟುಕೊಂಡಿದ್ದಾನೆ. ಅವುಗಳಿಗೆ ಸುರಭಿ ಎಂದು ಹೆಸರು.
ಭಗವಂತನು ಸುರಭಿ ಗೋವುಗಳನ್ನು ನೋಡಿಕೊಳ್ಳುವುದರಲ್ಲಿ ನಿರತನಾಗಿರುತ್ತಾನೆ ಎಂದು ಹೇಳಲಾಗಿದೆ. ಕಂದರ್ಪ ಎಂದರೆ ಸತ್ಪುತ್ರರ ಪ್ರಾಪ್ತಿಗಾಗಿ ಇರುವ ಕಾಮಾಪೇಕ್ಷೆ. ಆದುದರಿಂದ ಕಂದರ್ಪನು ಕೃಷ್ಣನ ಪ್ರತಿನಿಧಿ. ಕೆಲವೊಮ್ಮೆ ಇಂದ್ರಿಯ ಸುಖಕ್ಕಾಗಿಯೇ ರತಿಕ್ರೀಡೆ ಆಡುವುದುಂಟು. ಇಂತಹ ರತಿಕ್ರೀಡೆಯು ಕೃಷ್ಣನ ಪ್ರತಿನಿಧಿಯಲ್ಲ. ಆದರೆ ಒಳ್ಳೆಯ ಮಕ್ಕಳ ಜನನಕ್ಕಾಗಿ ನಡೆಯುವ ಕಾಮಜೀವನಕ್ಕೆ ಕಂದರ್ಪ ಎಂದು ಹೆಸರು. ಇದು ಕೃಷ್ಣನನ್ನು ಪ್ರತಿನಿಧಿಸುತ್ತದೆ.
ಅಧ್ಯಾಯ 10 - ವಿಭೂತಿ ಯೋಗ -ಶ್ಲೋಕ - 29
ಅನಂತಶ್ಚಾಸ್ಮಿ ನಾಗಾನಾಂ ವರುಣೋ ಯಾದಸಾಮಹಮ್ |
ಪಿತೃಣಾಮರ್ಯಮಾ ಚಾಸ್ಮಿ ಯಮಃ ಸಂಯಮತಾಮಹಮ್ ||29||
ಅನುವಾದ: ಬಹು ಹೆಡೆಗಳ ನಾಗರಲ್ಲಿ ನಾನು ಅನಂತ, ಜಲವಾಸಿಗಳಲ್ಲಿ ನಾನು ವರುಣ ದೇವತೆ. ಪಿತೃಗಳಲ್ಲಿ ಅರ್ಯಮಾ ಮತ್ತು ಶಾಸನ ನಿರ್ವಹಿಸುವವರಲ್ಲಿ ನಾನು ಯಮ.
ಭಾವಾರ್ಥ: ಜಲವಾಸಿಗಳಲ್ಲಿ ವರುಣದೇವನೇ ಅತ್ಯಂತ ಶ್ರೇಷ್ಠನಾದಂತೆ ಬಹು ಹೆಡೆಗಳ ನಾಗಸರ್ಪಗಳಲ್ಲಿ ಅನಂತನೇ ಬಹುಶ್ರೇಷ್ಠ. ಇವರಿಬ್ಬರೂ ಕೃಷ್ಣನನ್ನು ಪ್ರತಿನಿಧಿಸುತ್ತಾರೆ. ಪಿತೃಗಳ ಲೋಕವೊಂದಿದೆ. ಅದರ ಅಧಿಪತಿ ಅರ್ಯಮಾ. ಆತನು ಕೃಷ್ಣನನ್ನು ಪ್ರತಿನಿಧಿಸುತ್ತಾನೆ. ದುಷ್ಕರ್ಮಿಗಳಿಗೆ ಶಿಕ್ಷೆ ಮಾಡುವ ಜೀವಿಗಳು ಅನೇಕರಿದ್ದಾರೆ. ಅವರಲ್ಲಿ ಯಮನೇ ಪ್ರಧಾನನು. ಯಮನು ಭೂಲೋಕದ ಬಳಿ ಇರುವ ಒಂದು ಗ್ರಹದಲ್ಲಿ ನೆಲೆಸಿದ್ದಾನೆ. ಮರಣಾನಂತರ ಬಹಳ ಪಾಪ ಮಾಡಿರುವವರನ್ನು ಆ ಲೋಕಕ್ಕೆ ಕರೆದೊಯ್ಯಲಾಗುತ್ತದೆ. ಯಮನು ಅವರಿಗೆ ವಿಧವಿಧಾನವಾದ ಶಿಕ್ಷೆಗಳನ್ನು ವಿಧಿಸುತ್ತಾನೆ.
(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)