Bhagavad Gita: ಭಗವಂತನ ಸಂಕೀರ್ತನೆಯಿಂದ ಮನುಷ್ಯನು ಪರಿಶುದ್ಧ ಜ್ಞಾನದ ನೆಲೆಗೆ ಏರುತ್ತಾನೆ; ಗೀತೆಯ ಸಾರಾಂಶ ಹೀಗಿದೆ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Bhagavad Gita: ಭಗವಂತನ ಸಂಕೀರ್ತನೆಯಿಂದ ಮನುಷ್ಯನು ಪರಿಶುದ್ಧ ಜ್ಞಾನದ ನೆಲೆಗೆ ಏರುತ್ತಾನೆ; ಗೀತೆಯ ಸಾರಾಂಶ ಹೀಗಿದೆ

Bhagavad Gita: ಭಗವಂತನ ಸಂಕೀರ್ತನೆಯಿಂದ ಮನುಷ್ಯನು ಪರಿಶುದ್ಧ ಜ್ಞಾನದ ನೆಲೆಗೆ ಏರುತ್ತಾನೆ; ಗೀತೆಯ ಸಾರಾಂಶ ಹೀಗಿದೆ

Bhagavad Gita Updesh: ಭಗವಂತನ ಸಂಕೀರ್ತನೆಯಿಂದ ಮನುಷ್ಯನು ಪರಿಶುದ್ಧ ಜ್ಞಾನದ ನೆಲೆಗೆ ಏರುತ್ತಾನೆ ಎಂಬುದರ ಅರ್ಥವನ್ನು ಭಗವದ್ಗೀತೆಯ 10 ಅಧ್ಯಾಯದ 11ನೇ ಶ್ಲೋಕದಲ್ಲಿ ತಿಳಿಯಿರಿ.

ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.

10ನೇ ಅಧ್ಯಾಯ ರಹಸ್ಯತಮ ಜ್ಞಾನ ಶ್ಲೋಕ - 11

ತೇಷಾಮೇವಾನುಕಮ್ಪಾರ್ಥಮಹಮಜ್ಞಾನಜಂ ತಮಃ |

ನಾಶಯಾಮ್ಯಾತ್ಮಭಾವಸ್ಥೋ ಜ್ಞಾನದೀಪೇನ ಭಾಸ್ವತಾ ||11||

ಅನುವಾದ: ಅವರಿಗೆ ವಿಶೇಷ ಅನುಕಂಪವನ್ನು ತೋರಲು ನಾನು ಅವರ ಹೃದಯಗಳಲ್ಲಿದ್ದು, ಜ್ಞಾನದ ದೀಪದ ಬೆಳಕಿನಿಂದ ಅಜ್ಞಾನದ ಕತ್ತಲನ್ನು ನಾಶಮಾಡುತ್ತೇನೆ.

ಭಾವಾರ್ಥ: ಹರೇ ಕೃಷ್ಣ ಹರೇ ಕೃಷ್ಣ, ಹರೇ ಹರೇ / ಹರೇ ರಾಮ ಹರೇ ರಾಮ ರಾಮ ರಾಮ ಹರೇ ಹರೇ ಮಂತ್ರದ ಸಂಕೀರ್ತನೆಯನ್ನು ವಾರಣಾಸಿಯಲ್ಲಿ ಚೈತನ್ಯ ಪ್ರಹಾಪ್ರಭುಗಳು ಪ್ರಸಾರಮಾಡುತ್ತಿದ್ದಾಗ ಸಾವಿರಾರು ಮಂದಿ ಅವರನ್ನು ಅನುಸರಿಸಿದರು. ಈ ದಿನಗಳಲ್ಲಿ ವಾರಣಾಸಿಯಲ್ಲಿ ಬಹು ಪ್ರಭಾವಶಾಲಿಗಳೂ ವಿದ್ವಾಂಸರೂ ಆದ ಪ್ರಕಾಶಾನಂದ ಸರಸ್ವತಿಯವರು ಚೈತನ್ಯ ಮಹಾಪ್ರಭುಗಳು ಅತಿಭಾವುಕರೆಂದು ಹಾಸ್ಯ ಮಾಡಿದರು. ಕೆಲವೊಮ್ಮೆ ತತ್ವಶಾಸ್ತ್ರಜ್ಞು ಭಕ್ತರನ್ನು ಟೀಕೆ ಮಾಡುತ್ತಾರೆ. ಏಕೆಂದರೆ ಭಕ್ತರಲ್ಲಿ ಬಹುಮಂದಿ ಅಜ್ಞಾನದ ಕತ್ತಲಿನಲ್ಲಿದ್ದಾರೆ. ತತ್ವಜ್ಞಾನದಲ್ಲಿ ಅವರು ಅತಿಮುದ್ಧರೂ ಅತಿಭಾವುಕರೂ ಆಗಿದ್ದಾರೆ ಎಂದು ತತ್ವಶಾಸ್ತ್ರಜ್ಞರು ಭಾವಿಸುತ್ತಾರೆ. ವಾಸ್ತವಾಂಶ ಇದಲ್ಲ. ಭಕ್ತಿಯ ತತ್ವವನ್ನು ಪ್ರತಿಪಾದಿಸಿದ ಪ್ರಗಲ್ಭ ವಿದ್ವಾಂಸರಿದ್ದಾರೆ (Bhagavad Gita Updesh in Kannada).

ಭಕ್ತನು ಅವರ ಬರೆಹಗಳಿಂದ ಅಥವಾ ತನ್ನ ಗುರುವಿನಿಂದ ಪ್ರಯೋಜವನ್ನು ಪಡೆದುಕೊಳ್ಳದಿದ್ದರೂ, ಆತನು ತನ್ನ ಭಕ್ತಿಸೇವೆಯಲ್ಲಿ ಪ್ರಮಾಣಿಕನಾಗಿದ್ದರೆ ಅವರ ಹೃದಯದಲ್ಲಿರುವ ಕೃಷ್ಣನೇ ಅವನಿಗೆ ನೆರವಾಗುತ್ತಾನೆ. ಆದುದರಿಂದ ಕೃಷ್ಣಪ್ರಜ್ಞೆಯಲ್ಲಿ ನಿರತನಾದ ಭಕ್ತನು ಜ್ಞಾನಹೀನನಾಗಿರುವುದಿಲ್ಲ. ವ್ಯಕ್ತಿಗೆ ಅಗತ್ಯವಾದ ಒಂದೇ ಅರ್ಹತೆ ಎಂದರೆ ಅವನು ಪೂರ್ಣ ಕೃಷ್ಣಪ್ರಜ್ಞೆಯಲ್ಲಿ ಭಕ್ತಿಸೇವೆಯನ್ನು ಮಾಡಬೇಕು.

ತಾರತಮ್ಯ ಜ್ಞಾನವಿಲ್ಲದೆ ಮನುಷ್ಯನಿಗೆ ಪರಿಶುದ್ಧ ಜ್ಞಾನವು ಇರುವುದಿಲ್ಲ ಎಂದು ಆಧುನಿಕ ತತ್ವಶಾಸ್ತ್ರಜ್ಞರು ಭಾವಿಸುತ್ತಾರೆ. ಪರಮ ಪ್ರಭುವೇ ಅವರಿಗೆ ಉತ್ತರಕೊಟ್ಟಿದ್ದಾನೆ. ಭಕ್ತಿಸೇವೆಯಲ್ಲಿ ನಿರತರಾಗಿರುವವರಿಗೆ ಸಾಕಷ್ಟು ಶಿಕ್ಷಣವಿಲ್ಲದಿರಬಹುದು. ವೇದದ ತತ್ವಗಳ ತಿಳಿವಳಿಕೆ ಸಾಕಷ್ಟು ಇಲ್ಲದಿರಬಹುದು. ಆದರೆ, ಈ ಶ್ಲೋಕದಲ್ಲಿ ಹೇಳಿರುವಂತೆ, ಪರಮ ಪ್ರಭು ಅವರಿಗೆ ಸಹಾಯ ಮಾಡುತ್ತಾನೆ.

ಮಾನಸಿಕ ಪ್ರಯತ್ನ ಒಂದರಿಂದಲೇ ಆತನನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ

ಪರಮ ಸತ್ಯವನ್ನು, ಪರಿಪೂರ್ಣ ಸತ್ಯವನ್ನು, ದೇವೋತ್ತಮ ಪರಮ ಪುರುಷನನ್ನು ಊಹಾತ್ಮಕ ಚಿಂತನೆಯಿಂದ ಅರ್ಥಮಾಡಿಕೊಳ್ಳವುದು ಮೂಲತಃ ಸಾಧ್ಯವೇ ಇಲ್ಲ. ಏಕೆಂದರೆ ಪರಮಸತ್ಯನ ಮಹಿಮೆ ಎಷ್ಟೆಂದರೆ ಮಾನಸಿಕ ಪ್ರಯತ್ನ ಒಂದರಿಂದಲೇ ಆತನನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಪ್ರಭುವು ಅರ್ಜುನನಿಗೆ ಹೇಳುತ್ತಾನೆ. ಮನುಷ್ಯ ಎಷ್ಟೋ ಕೋಟಿ ವರ್ಷ ಊಹಾಪೋಹ ಮಾಡುತ್ತ ಇರಬಹುದು. ಆದರೆ ಆತನಲ್ಲಿ ಭಕ್ತಿ ಇಲ್ಲವಾದರೆ, ಪರಮಸತ್ಯನನ್ನು ಆತ ಪ್ರೀತಿಸದಿದ್ರೆ, ಅವನಿಗೆ ಕೃಷ್ಣ ಅಥವಾ ಪರಮಸತ್ಯ ಅರ್ಥವಾಗುವುದೇ ಇಲ್ಲ.

ಭಕ್ತಿಸೇವೆಯಿಂದ ಮಾತ್ರ ಕೃಷ್ಣನು ಪ್ರಸನ್ನನಾಗುತ್ತಾನೆ. ತನ್ನ ಊಹಾತೀತ ಶಕ್ತಿಯಿಂದ ಅವನು ಪರಿಶುದ್ಧ ಭಕ್ತನ ಹೃದಯಕ್ಕೆ ಪ್ರತ್ಯಕ್ಷನಾಗಬಲ್ಲ. ಪರಿಶುದ್ಧ ಭಕ್ತನು ತನ್ನ ಹೃದಯದಲ್ಲಿ ಕೃಷ್ಣನನ್ನು ಸದಾ ನೆಲೆಗೊಳಿಸಿಕೊಂಡಿರುತ್ತಾನೆ. ಸೂರ್ಯನಂತಿರುವ ಕೃಷ್ಣನ ಸನ್ನಿಧಿಯಲ್ಲಿ ಅಜ್ಞಾನದ ಕತ್ತಲೆಯ ಕೂಡಲೇ ಚದುರಿಹೋಗುತ್ತದೆ. ಪರಿಶುದ್ಧ ಭಕ್ತನಿಗೆ ಕೃಷ್ಣನು ತೋರುವ ವಿಶೇಷ ಅನುಕಂಪ ಇದು.

ಲಕ್ಷಾಂತರ ಜನ್ಮಗಳಲ್ಲಿ ಪಡೆದ ಐಹಿಕ ಸಹವಾಸದ ಕಲ್ಮಷದ ಸೋಂಕಿನಿಂದ ಮನುಷ್ಯನ ಹೃದಯವನ್ನು ಪ್ರಾಪಂಚಿಕತೆಯ ಧೂಳು ಮುಚ್ಚಿಬಿಟ್ಟಿರುತ್ತದೆ. ಆದರೆ ಅವನು ಭಕ್ತಿಸೇವೆಯಲ್ಲಿ ನಿರತನಾಗಿದ್ದರೆ ಮತ್ತು ಸದಾ ಹರೇಕೃಷ್ಣ ಸಂಕೀರ್ತನೆ ಮಾಡುತ್ತಿದ್ದರೆ ಧೂಳು ಶೀಘ್ರವಾಗಿ ಹೊರಟುಹೋಗಿ ಮನುಷ್ಯನು ಪರಿಶುದ್ಧ ಜ್ಞಾನದ ನೆಲೆಗೆ ಏರುತ್ತಾನೆ. ಕಟ್ಟಕಡೆಯ ಗುರಿಯಾದ ವಿಷ್ಣವನ್ನು ಈ ಸಂಕೀರ್ತನೆಯಿಂದ ಮತ್ತು ಭಕ್ತಿಸೇವೆಯಿಂದ ಮಾತ್ರ ಮುಟ್ಟಲು ಸಾಧ್ಯ. ಊಹಾತ್ಮಕ ಚಿಂತನೆ ಅಥವಾ ವಾದದಿಂದ ಸಾಧ್ಯವಿಲ್ಲ.

ಪರಿಶುದ್ಧ ಭಕ್ತನು ಪ್ರಾಪಂಚಿಕ ಅಗತ್ಯಗಳ ವಿಷಯವಾಗಿ ಆತಂಕಪಟ್ಟುಕೊಳ್ಳಬೇಕಾಗಿಲ್ಲ. ಏಕೆಂದರೆ ಅವನು ತನ್ನ ಹೃದಯದಿಂದ ಕತ್ತಲನ್ನು ತೊಡೆದು ಹಾಕಿದಾಗ ಪರಮ ಪ್ರಭುವು ಭಕ್ತನ ಪ್ರೇಮಪೂರ್ವಕ ಭಕ್ತಿಸೇವೆಯಿಂದ ಸುಪ್ರೀತನಾಗಿ ತಾನಾಗಿಯೇ ಎಲ್ಲವನ್ನೂ ಒದಗಿಸುತ್ತಾನೆ. ಭಗವದ್ಗೀತೆಯ ಉಪದೇಶಗಳ ಸಾರ ಇದೇ. ಭಗವದ್ಗೀತೆಯನ್ನು ಅಧ್ಯಯನ ಮಾಡಿದವನು ಪರಮ ಪ್ರಭುವಿಗೆ ಸಂಪೂರ್ಣವಾಗಿ ಶರಣಾದ ಆತ್ಮನಾಗಬಲ್ಲ. ಭಕ್ತಿಸೇವೆಯಲ್ಲಿ ತನ್ನನ್ನು ತೊಡಗಿಸಿಕೊಳ್ಳಬಲ್ಲ. ಪ್ರಭುವೇ ಹೊಣೆಯನ್ನು ವಹಿಸಿಕೊಂಡಾಗ ಮನುಷ್ಯನು ಎಲ್ಲ ಬಗೆಯ ಪ್ರಾಪಂಚಿಕ ಪ್ರಯತ್ನಗಳಿಂದ ಸಂಪೂರ್ಣವಾಗಿ ಬಿಡುಗಡೆ ಹೊಂದುತ್ತಾನೆ.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.