ಭಗವದ್ಗೀತೆ: ಜೀವನದಲ್ಲಿ ಮಾಡಿದ ಈ 3 ಅಭ್ಯಾಸಗಳಿಗೆ ಬೆಲೆ ತೆರಬೇಕಾಗುತ್ತದೆ; ಇಂದಿಗೂ ಪ್ರಸ್ತುತ ಶ್ರೀಕೃಷ್ಣನ ಧರ್ಮೋಪದೇಶ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಭಗವದ್ಗೀತೆ: ಜೀವನದಲ್ಲಿ ಮಾಡಿದ ಈ 3 ಅಭ್ಯಾಸಗಳಿಗೆ ಬೆಲೆ ತೆರಬೇಕಾಗುತ್ತದೆ; ಇಂದಿಗೂ ಪ್ರಸ್ತುತ ಶ್ರೀಕೃಷ್ಣನ ಧರ್ಮೋಪದೇಶ

ಭಗವದ್ಗೀತೆ: ಜೀವನದಲ್ಲಿ ಮಾಡಿದ ಈ 3 ಅಭ್ಯಾಸಗಳಿಗೆ ಬೆಲೆ ತೆರಬೇಕಾಗುತ್ತದೆ; ಇಂದಿಗೂ ಪ್ರಸ್ತುತ ಶ್ರೀಕೃಷ್ಣನ ಧರ್ಮೋಪದೇಶ

ಮಹಾಭಾರತದಲ್ಲಿ ಯುದ್ಧ ಆರಂಭಕ್ಕೂ ಮುನ್ನ ಅರ್ಜುನ ಹತಾಶನಾದ ಸಂದರ್ಭದಲ್ಲಿ ಶ್ರೀಕೃಷ್ಣ ನೀಡುವ ಉಪದೇಶವೇ ಭಗವದ್ಗೀತೆ. ಹಿಂದೂ ಧರ್ಮದಲ್ಲಿ ಗೀತೆಯ ಪ್ರಾಮುಖ್ಯ ಅನನ್ಯವಾಗಿದೆ. ಮನುಷ್ಯರ ಜೀವನಕ್ಕೆ ಇಂದಿಗೂ ಪ್ರಸ್ತುತವಾಗಿದೆ.

ಮಹಾಭಾರತದಲ್ಲಿ ಯುದ್ಧ ಆರಂಭಕ್ಕೂ ಮುನ್ನ ಅರ್ಜುನ ಹತಾಶನಾದ ಸಂದರ್ಭದಲ್ಲಿ ಶ್ರೀಕೃಷ್ಣ ನೀಡುವ ಉಪದೇಶವೇ ಭಗವದ್ಗೀತೆ.
ಮಹಾಭಾರತದಲ್ಲಿ ಯುದ್ಧ ಆರಂಭಕ್ಕೂ ಮುನ್ನ ಅರ್ಜುನ ಹತಾಶನಾದ ಸಂದರ್ಭದಲ್ಲಿ ಶ್ರೀಕೃಷ್ಣ ನೀಡುವ ಉಪದೇಶವೇ ಭಗವದ್ಗೀತೆ.

ಶ್ರೀಕೃಷ್ಣನು (Lord Sri Krishna) ಭಗವದ್ಗೀತೆಯಲ್ಲಿ (Bhagavad Gita) ಹೀಗೆ ಹೇಳುತ್ತಾನೆ. ಸುಳ್ಳು, ಮೋಸ ಮತ್ತು ಬೈಗುಳಗಳು ನಿಮಗೆ ಸ್ವಲ್ಪ ದಿನಗಳ ಕಾಲ ಸಂತೋಷವನ್ನು ನೀಡುತ್ತದೆ. ಆದರೆ ಜೀವನದಲ್ಲಿ ಮುಂದೊಂದು ದಿನ ನೀವು ಬೆಲೆ ತೆರಬೇಕಾಗುತ್ತದೆ. ಅದಕ್ಕಾಗಿಯೇ ಪ್ರತಿಯೊಬ್ಬರೂ ಜೀವನದಲ್ಲಿ ಈ ಅಭ್ಯಾಸಗಳನ್ನು ತಪ್ಪಿಸಬೇಕು.

ಮನುಷ್ಯನು ಸುಖದ ಸಮಯದಲ್ಲಿ ಎಂದಿಗೂ ಅಹಂಕಾರದಿಂದ ಇರಬಾರದು. ದುಃಖದ ಸಮಯದಲ್ಲಿ ದೇವರನ್ನು ಬಿಡಬಾರದು ಎಂದು ಭಗವದ್ಗೀತೆಯಲ್ಲಿ ಬರೆಯಲಾಗಿದೆ. ಭಕ್ತಿ ಮತ್ತು ಭಾವದಿಂದ ಹರಿಯುವ ಕಣ್ಣೀರು ದೇವರು ನಿಮ್ಮನ್ನು ಮುಟ್ಟಿದ ಸಂಕೇತವಾಗಿದೆ. ಒಬ್ಬ ವ್ಯಕ್ತಿ ಎಷ್ಟೇ ಬಲಶಾಲಿಯಾಗಿದ್ದರೂ ಒಳಗಿರುವ ದುರ್ಬಲನೆಂಬುದು ಕೃಷ್ಣನಿಗೆ ಮಾತ್ರ ಗೊತ್ತು.

ಪ್ರತಿಯೊಬ್ಬರೂ ಜೀವನದಲ್ಲಿ ಈ ಮೂರು ಮಂತ್ರಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಸಂತೋಷದಲ್ಲಿ ಯಾರಿಗೂ ಭರವಸೆ ನೀಡಬೇಡಿ, ಕೋಪದಲ್ಲಿ ಇರುವಾಗ ಯಾರಿಗೂ ಉತ್ತರಿಸಬೇಡಿ ಹಾಗೂ ದುಃಖದಲ್ಲಿದ್ದಾಗ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ.

ಜೀವನದಲ್ಲಿ ನಾನು ಅನೇಕ ಬಾರಿ ದೊಡ್ಡ ಕಷ್ಟಗಳಿಂದ ಹೊರಬರುತ್ತೇವೆ. ಯಾರೂ ನಮ್ಮನ್ನು ಬೆಂಬಲಿಸುತ್ತಾರೆ. ಈ ಅದೃಷ್ಟ ಶಕ್ತಿಯ ಹೆಸರು ದೇವರು ಎಂದು ಭಗವದ್ಗೀತೆಯಲ್ಲಿ ಬರೆಯಲಾಗಿದೆ. ಆತ್ಮಶುದ್ದಿ, ಉತ್ತಮ ಜೀವನ, ನಾಲು ಜನಕ್ಕೆ ಉಪಯೋಗಕ್ಕೆ ಬರುವಂತೆ ಬದುಕುವುದು, ಇದಷ್ಟೂ ದಿನ ಆತ್ಮವಂಚನೆ ಮಾಡಿಕೊಳ್ಳದೇ ಸಂತೋಷವಾಗಿರುವುದು, ಜೀನವದ ಗುರಿಯನ್ನು ನಿಜವಾದ ಅರ್ಥದಲ್ಲಿ ಸಾಧಿಸುವುದೇ ಶ್ರೇಷ್ಠ ಎಂದು ಗೀತೆಯಲ್ಲಿ ಬರೆಯಲಾಗಿದೆ.

ಗೀತೆಯ ಮಹಾಭಾರತದಲ್ಲಿ ಯುದ್ಧ ಆರಂಭಕ್ಕೂ ಮುನ್ನ ಹತಾಶನಾದ ಅರ್ಜುನನಿಗೆ ಶ್ರೀಕೃಷ್ಣನು ನೀಡಿದ ಉಪದೇಶವಾಗಿದೆ. ಹಿಂದೂ ಧರ್ಮದಲ್ಲಿ ಭಗವದ್ಗೀತೆಯ ಪ್ರಾಮುಖ್ಯತೆ ಅನನ್ಯವಾಗಿದೆ. ಮಹಾಭಾರತ ಹಿಂದೂ ಜನರ ಸಂಸ್ಕೃತಿಯ ಪವಿತ್ರ ಗ್ರಂಥವಾಗಿದೆ. ಇದು ಅಧರ್ಮದೊಂದಿಗಿನ ಧರ್ಮದ ಯುದ್ಧವನ್ನು ಆಧರಿಸಿದೆ. ಇದನ್ನು ಐದನೇ ವೇದ ಅಂತಲೂ ಕರೆಯುತ್ತಾರೆ. ಭಗವದ್ಗೀತೆ ಮತ್ತು ವಿದುರ್ ನೀತಿ ಭಗವದ್ಗೀತೆಯ ಎರಡು ಕಂಬಗಳಿದ್ದಂತೆ.

ಅರ್ಜುನ ತನ್ನ ಸ್ವಂತ ಸಂಬಂಧಿಕರ ವಿರುದ್ಧ ಹೋರಾಡುವ ಮೊದಲು ತನ್ನ ಬಿಲ್ಲುಬಾಣವನ್ನು ಕೆಳಗೆ ಇಳಿಸಿ ಮನಸ್ಸಿನಲ್ಲೇ ಹೀಗೆ ಅಂದುಕೊಳ್ಳುತ್ತಾನೆ. ನನ್ನ ಸ್ವಂತ ಬಂಧುಗಳ ವಿರುದ್ಧ ನಾನು ಹೇಗೆ ಯುದ್ಧ ಮಾಡಲಿ ಎಂದು ಯೋಚಿಸುತ್ತಾನೆ. ಆಗ ಅರ್ಜುನನ ಈ ಎಲ್ಲಾ ಪ್ರಶ್ನೆಗಳಿಗೆ ಶ್ರೀಕೃಷ್ಣನು ಗೀತೆಯ ಮೂಲಕ ಉತ್ತರ ನೀಡುತ್ತಾನೆ.

-----------------------------------------------------------------------------------

ಸಂಬಂಧಿತ ಲೇಖನ

Whats_app_banner

ವಿಭಾಗ

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.