ಭಗವದ್ಗೀತೆ: ಮನುಷ್ಯನ ದೇಹಕ್ಕೆ 6 ಬಗೆಯ ಪರಿವರ್ತನೆಗಳಿವೆ ಎಂಬ ಗೀತೆಯಲ್ಲಿನ ಅರ್ಥ ಹೀಗಿದೆ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಭಗವದ್ಗೀತೆ: ಮನುಷ್ಯನ ದೇಹಕ್ಕೆ 6 ಬಗೆಯ ಪರಿವರ್ತನೆಗಳಿವೆ ಎಂಬ ಗೀತೆಯಲ್ಲಿನ ಅರ್ಥ ಹೀಗಿದೆ

ಭಗವದ್ಗೀತೆ: ಮನುಷ್ಯನ ದೇಹಕ್ಕೆ 6 ಬಗೆಯ ಪರಿವರ್ತನೆಗಳಿವೆ ಎಂಬ ಗೀತೆಯಲ್ಲಿನ ಅರ್ಥ ಹೀಗಿದೆ

ಕುರುಕ್ಷೇತ್ರದ ಯುದ್ಧದಲ್ಲಿ ಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಸತ್ಯದ ಮಾರ್ಗವನ್ನು ಅನುಸರಿಸುವುದು ಗೀತೆಯ ಅರ್ಥವಾಗಿದೆ. ಮನುಷ್ಯನ ದೇಹಕ್ಕೆ 6 ಬಗೆಯ ಪರಿವರ್ತನೆಗಳಿವೆ ಎಂಬ ಗೀತೆಯಲ್ಲಿನ ಅರ್ಥ ತಿಳಿಯಿರಿ.

ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.

ನ ಜಾಯತೇ ಪ್ರಿಯತೇ ವಾ ಕದಾಚಿನ್ ನಾಯಂ ಭೂತ್ವಾ ಭವಿತಾ ವಾ ನ ಭೂಯಃ | ಅಜೋ ನಿತ್ಯಃ ಶಾಶ್ವತೋಯಂ ಪುರಾಣೋ ನ ಹನ್ಯತೇ ಹನ್ಯಮಾನೇ ಶರೀರೇ ||20||

ಆತ್ಮಕ್ಕೆ ಯಾವಾಗಲೂ ಹುಟ್ಟು ಎನ್ನುವುದಿಲ್ಲ; ಸಾವು ಎನ್ನುವುದಿಲ್ಲ. ಅದು ಹಿಂದೆ ಹುಟ್ಟಿದ್ದಿಲ್ಲ; ಈಗ ಹುಟ್ಟಿ ಬರುವುದಿಲ್ಲ; ಮುಂದೆ ಹುಟ್ಟುವುದೂ ಇಲ್ಲ. ಅದು ಜನ್ಮರಹಿತವಾದದ್ದು, ನಿತ್ಯವಾದದ್ದು, ಶಾಶ್ವತವಾದದ್ದು, ಪುರಾತನವಾದದ್ದು. ದೇಹವನ್ನು ಕೊಂದಾಗ ಅದು ಸಾಯುವುದಿಲ್ಲ.

ಗುಣಾತ್ಮಕವಾಗಿ ಪರಮಾತ್ಮನ ಸೂಕ್ಷ್ಮವಾದ ಅಣುಸ್ವರೂಪದ ಭಾಗಾಂಶವು ಪರಮ ಪ್ರಭುವಿನೊಡನೆ ಒಂದಾಗಿದೆ. ದೇಹವು ಬದಲಾವಣೆ ಹೊಂದುವಂತೆ ಅದು ಬದಲಾವಣೆ ಹೊಂದುವುದಿಲ್ಲ. ಒಮ್ಮೊಮ್ಮೆ ಆತ್ಮವನ್ನು ಕೂಟಸ್ಥ ಎಂದರೆ ಸ್ಥಿರವಾಗಿರುವುದು ಎಂದು ಕರೆಯುವುದುಂಟು.

ದೇಹಕ್ಕೆ ಆರು ಬಗೆಯ ಪರಿವರ್ತನೆಗಳುಂಟು; ಅದು ತಾಯಿಯ ಗರ್ಭದಲ್ಲಿ ಹುಟ್ಟುತ್ತದೆ, ಸ್ವಲ್ಪಕಾಲ ಇರುತ್ತದೆ, ಬೆಳೆಯುತ್ತದೆ, ಕೆಲವು ಪರಿಣಾಮಗಳನ್ನು ಮಾಡುತ್ತದೆ, ಕ್ರಮೇಣ ಕ್ಷೀಣಿಸುಹೃದಯ, ಕಟ್ಟಕಡೆಗೆ ಮಾಯವಾಗಿ ಜನ ಅದನ್ನು ಮರೆತುಬಿಡುತ್ತಾರೆ. ಆದರೆ ಆತ್ಮವು ಇಂತಹ ಪರಿವರ್ತನೆಗಳಿಗೆ ಒಳಪಡುವುದಿಲ್ಲ. ಆತ್ಮವು ಹುಟ್ಟುವುದಿಲ್ಲ. ಆದರೆ ಅದು ಒಂದು ಐಹಿಕ ದೇಹವನ್ನು ಧರಿಸುವುದರಿಂದ ದೇಹವು ಜನ್ಮ ತಾಳುತ್ತದೆ.

ಆತ್ಮವು ಅಲ್ಲಿ ಹುಟ್ಟುವುದಿಲ್ಲ; ಸಾಯುವುದೂ ಇಲ್ಲ, ಹುಟ್ಟಿದುದೆಲ್ಲ ಸಾಯಲೇಬೇಕು. ಆತ್ಮಕ್ಕೆ ಹುಟ್ಟು ಎನ್ನುವುದಿಲ್ಲ; ಆದುದರಿಂದ ಅದಕ್ಕೆ ಭೂತ, ವರ್ತಮಾನ ಮತ್ತು ಭವಿಷ್ಯ ಎಂಬುದಿಲ್ಲ. ಆತ್ಮವು ನಿತ್ಯವಾದದ್ದು, ಶಾಶ್ವತವಾದದ್ದು ಮತ್ತು ಪುರಾತನವಾದದ್ದು - ಎಂದರೆ ಅದು ಜನ್ಮತಾಳಿದುದರ ಕುರುಹು ಚರಿತ್ರೆಯಲ್ಲಿಲ್ಲ. ದೇಹವನ್ನು ಕುರಿತ ನಮ್ಮ ಭಾವನೆಯಿಂದ ನಾವು ಆತ್ಮದ ಹುಟ್ಟಿನ ಚರಿತ್ರೆ ಮೊದಲಾದುವನ್ನು ಹುಡುಕುತ್ತೇವೆ.

ದೇಹಕ್ಕೆ ಮುಪ್ಪು ಬರುವಂತೆ ಆತ್ಮಕ್ಕೆ ಯಾವಾಗಲೂ ಮುಪ್ಪು ಬರುವುದಿಲ್ಲ. ಆದುದರಿಂದ ಜನರು ಮುದುಕ ಎಂದು ಕರೆಯುವ ಮನುಷ್ಯನು ತನಗೆ ಬಾಲ್ಯದಲ್ಲಿ ಅಥವಾ ಯೌವನದಲ್ಲಿ ಇದ್ದ ಚೇತನವೇ ಈಗಲೂ ಇದೆ ಎಂದುಕೊಳ್ಳುತ್ತಾನೆ. ದೇಹದಲ್ಲಿ ಆಗುವ ಬದಲಾವಣೆಗಳಿಂದ ಆತ್ಮದ ಮೇಲೆ ಯಾವ ಪರಿಣಾಮವೂ ಆಗುವುದಿಲ್ಲ. ಒಂದು ಮರದಂತೆ ಅಥವಾ ಯಾವುದೇ ಅಹಿಕ ವಸ್ತುವಿನಂತೆ ಆತ್ಮವು ಕ್ಷೀಣಿಸುವುದಿಲ್ಲ.

ಆತ್ಮಕ್ಕೆ ಉಪ ಉತ್ಪತ್ತಿಗಳು ಇಲ್ಲ, ದೇಹದ ಉಪ ಉತ್ಪತ್ತಿಗಳಾದ ಮಕ್ಕಳು ಪ್ರತ್ಯೇಕವಾದ, ಭಿನ್ನವಾದ ಆತ್ಮಗಳೇ, ಶರೀರದ ಕಾರಣದಿಂದಾಗಿ ಅವರು ಒಬ್ಬ ನಿರ್ದಿಷ್ಟ ಮನುಷ್ಯನ ಮಕ್ಕಳಾಗಿ ಕಾಣುತ್ತಾರೆ. ಆತ್ಮದ ಇರವಿನಿಂದ ದೇಹವು ಬೆಳೆಯುತ್ತದೆ. ಆದರೆ ಆತ್ಮಕ್ಕೆ ಶಾಖೆಗಳೂ ಇಲ್ಲ, ಬದಲಾವಣೆಯೂ ಇಲ್ಲ. ಆದುದರಿಂದ ಆತ್ಮವು ದೇಹಕ್ಕೆ ಒದಗುವ ಆರು ಬದಲಾವಣೆಗಳಿಂದ ಮುಕ್ತವಾಗಿದೆ.

Whats_app_banner

ವಿಭಾಗ

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.