ಭಗವದ್ಗೀತೆ: ಅರ್ಜುನ ಯುದ್ಧವನ್ನು ಬಿಟ್ಟು ಈ 1 ಕೆಲಸ ಮಾಡುತ್ತಾನೆಂದು ಧೃತರಾಷ್ಟ್ರನಿಗೆ ಸಂತೋಷವಾಗಿತ್ತು; ಗೀತೆಯಲ್ಲಿನ ಸಾರಾಂಶ ತಿಳಿಯಿರಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಭಗವದ್ಗೀತೆ: ಅರ್ಜುನ ಯುದ್ಧವನ್ನು ಬಿಟ್ಟು ಈ 1 ಕೆಲಸ ಮಾಡುತ್ತಾನೆಂದು ಧೃತರಾಷ್ಟ್ರನಿಗೆ ಸಂತೋಷವಾಗಿತ್ತು; ಗೀತೆಯಲ್ಲಿನ ಸಾರಾಂಶ ತಿಳಿಯಿರಿ

ಭಗವದ್ಗೀತೆ: ಅರ್ಜುನ ಯುದ್ಧವನ್ನು ಬಿಟ್ಟು ಈ 1 ಕೆಲಸ ಮಾಡುತ್ತಾನೆಂದು ಧೃತರಾಷ್ಟ್ರನಿಗೆ ಸಂತೋಷವಾಗಿತ್ತು; ಗೀತೆಯಲ್ಲಿನ ಸಾರಾಂಶ ತಿಳಿಯಿರಿ

ಕುರುಕ್ಷೇತ್ರದ ಯುದ್ಧದಲ್ಲಿ ಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಸತ್ಯದ ಮಾರ್ಗವನ್ನು ಅನುಸರಿಸುವುದು ಗೀತೆಯ ಅರ್ಥವಾಗಿದೆ. ಅರ್ಜುನ ಯುದ್ಧವನ್ನು ಬಿಟ್ಟು ಈ 1 ಕೆಲಸ ಮಾಡುತ್ತಾನೆಂದು ಧೃತರಾಷ್ಟ್ರನಿಗೆ ಸಂತೋಷವಾಗಿತ್ತು ಎಂದು ಗೀತೆಯಲ್ಲಿದೆ. ಯಾವುದು ಆ ಕೆಲಸ ಅನ್ನೋದು ಇಲ್ಲಿದೆ.

ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.

ಸಞ್ಜಯ ಉವಾಚ

ಏವಮುಕ್ತ್ವಾ ಹೃಷಿಕೇಶಂ ಗುಡಾಕೇಶಃ ಪರನ್ತಪಃ |

ನ ಯೋತ್ಸ್ಯ ಇತಿ ಗೋವಿನ್ದಮುಕ್ತ್ವಾ ತೂಷ್ಣೀಂ ಬಭೂವ ಹ ||9||

ಸಂಜಯನು ನುಡಿದನು-ಶತ್ರುಗಳನ್ನು ನಿಗ್ರಹಿಸಲ್ಲ ಅರ್ಜುನನು ಈ ಪ್ರಕಾರ ಕೃಷ್ಣನಿಗೆ ತಿಳಿಸಿ, ಗೋವಿಂದ, ನಾನು ಯುದ್ಧಮಾಡುವುದಿಲ್ಲ, ಎಂದು ಹೇಳಿ ಮೌನತಾಳಿದನು.

ಅರ್ಜುನನು ಯುದ್ಧಮಾಡುವುದಿಲ್ಲ, ಅದರ ಬದಲು ಯುದ್ಧರಂಗವನ್ನು ಬಿಟ್ಟು ಭಿಕ್ಷೆ ಬೇಡಲು ಹೋಗುತ್ತಾನೆ ಎಂದು ತಿಳಿದ ಧೃತರಾಷ್ಟ್ರನಿಗೆ ತುಂಬ ಸಂತೋಷವಾಗಿದ್ದಿರಬೇಕು. ಆದರೆ ಅರ್ಜುನನನ್ನು (ಪರಂತಪಃ) ಶತ್ರುಗಳನ್ನು ನಿಗ್ರಹಿಸುವವನು ಎಂದು ಕರೆದು ಸಂಜಯನು ಮತ್ತೆ ಅವನಿಗೆ ನಿರಾಶೆ ಉಂಟುಮಾಡಿದ.

ಸಾಂಸಾರಿಕ ಮೋಹದಿಂದ ಹುಸಿದುಃಖಕ್ಕೆ ಗುರಿಯಾಗಿ ಅರ್ಜುನನು ತತ್ಕಾಲಕ್ಕೆ ಭಾವಪರವಶನಾದ. ಆದರೂ ಅವನು ಪರಮ ಗುರುವಾದ ಕೃಷ್ಣನ ಶಿಷ್ಯನಾಗಿ ಶರಣಾಗತನಾದ. ಸಂಸಾರಮೋಹದಿಂದ ಉಂಟಾದ ಹುಸಿಗೋಳಾಟದಿಂದ ಅವನು ಬೇಗನೆ ಮುಕ್ತನಾಗುತ್ತಾನೆ ಮತ್ತು ಆತ್ಮಸಾಕ್ಷಾತ್ಕಾರದ ಅಥವಾ ಕೃಷ್ಣಪ್ರಜ್ಞೆಯ ಪರಿಪೂರ್ಣ ಅರವಿನಿಂದ ಬೆಳಕು ಕಾಣುತ್ತಾನೆ ಹಾಗೂ ಖಂಡಿತವಾಗಿಯೂ ಯುದ್ಧ ಮಾಡುತ್ತಾನೆ ಎಂದು ಇದು ತೋರಿಸುತ್ತದೆ. ಕೃಷ್ಣನಿಂದ ಜ್ಞಾನೋದಯವನ್ನು ಪಡೆದ ಅರ್ಜುನನು ಕಟ್ಟಕಡೆಯವರಿಗೆ ಯುದ್ಧ ಮಾಡುವುದರಿಂದ ಧೃತರಾಷ್ಟ್ರನ ಸಂತೋಷವು ನಂದಿಹೋಗುತ್ತದೆ.

ತಮುವಾಚ ಹೃಷೀಕೇಶಃ ಪ್ರಹಸನ್ನಿವ ಭಾರತ |

ಸೇನಯೋರುಭಯೋರ್ಮಧ್ಯೇ ವಿಷೀದನ್ತಮಿದಂ ವಚಃ ||10||

ಭರತನ ವಂಶನಾದ ಧೃತರಾಷ್ಟ್ರನೇ, ಆಗ ಎರಡು ಸೈನ್ಯಗಳ ಮಧ್ಯೆ ವಿಷಾಯದದಲ್ಲಿ ಮುಳುಗಿದ ಅರ್ಜುನನನ್ನು ಕುರಿತು ಕೃಷ್ಣನು ನಸುನಗುತ್ತ ಈ ಮಾತುಗಳನ್ನು ಹೇಳಿದನು.

ಇಬ್ಬರು ಆತ್ಮೀಯ ಸ್ನೇಹಿತರಾದ ಹೃಷಿಕೇಶ ಮತ್ತು ಗುಡಾಕೇಶರ ನಡುುವೆ ಸಂವಾದ ನಡೆಯುತ್ತಿತ್ತು. ಸ್ನೇಹಿತರಾಗಿ ಇಬ್ಬರೂ ಸರಿಮಾನರು. ಆದರೆ ಅವರಲ್ಲಿ ಒಬ್ಬನು ಸ್ವ ಇಚ್ಛೆಯಿಂದ ಮತ್ತೊಬ್ಬನ ಶಿಷ್ಯಯನಾದನು. ಸ್ನೇಹಿತನು ಶಿಷ್ಯನಾಗಲು ತೀರ್ಮಾನಿಸಿದ ಎಂದು ಕೃಷ್ಣನು ನಸುನಗುತ್ತಿದ್ದ. ಎಲ್ಲರ ಪ್ರಭುವಾಗಿ ಅವನು ಯಾವಾಗಲೂ ಎಲ್ಲರಿಗಿಂತ ಉಚ್ಚಸ್ಥಾನದಲ್ಲಿರುತ್ತಾನೆ.

ಆದರೆ ಭಗವಂತನು ಭಕ್ತನು ಬಯಸಿದಂತೆ ಸ್ನೇಹಿತ ಅಥವಾ ಮಗ ಅಥವಾ ನಲ್ಲನ ಪಾತ್ರವನ್ನು ವಹಿಸಲು ಸಿದ್ಧನಾಗಿರುತ್ತಾನೆ. ಆದರೆ ಅವನನ್ನು ಗುರು ಎಂದು ಸ್ವೀಕರಿಸಿದಾಗ ಅವನು ತಕ್ಷಣವೇ ಆ ಪಾತ್ರವನ್ನು ಒಪ್ಪಿಕೊಂಡ ಮತ್ತು ಶಿಷ್ಯರೊಡನೆ ಗುರುವು ಮಾತನಾಡುವಂತೆ ಗಂಭೀರವಾಗಿ ಮಾತನಾಡಿದ. ಇದರಿಂದ ಎಲ್ಲರಿಗೂ ಲಾಭವಾಯಿತು ಎಂದು ಕಾಣುತ್ತದೆ. ಆದುದರಿಂದ ಭಗವದ್ಗೀತೆಯ ನುಡಿಗಳು ಯಾವ ಒಬ್ಬ ವ್ಯಕ್ತಿಗಾಗಿ ಅಥವಾ ಸಮಾಜಕ್ಕಾಗಿ ಅಥವಾ ಸಮುದಾಯಕ್ಕಾಗಿ ಉದ್ದೇಶಿದುವಲ್ಲ. ಅವು ಎಲ್ಲರಿಗಾಗಿ ಆಡಿದ ಮಾತುಗಳು. ಸ್ನೇಹಿತರಾಗಲಿ ಶುತ್ರುಗಳಾಗಲಿ ಎಲ್ಲರಿಗೂ ಅವನ್ನು ಕೇಳುವ ಸಮಾನವಾದ ಹಕ್ಕಿದೆ.

Whats_app_banner

ವಿಭಾಗ

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.