ಭಗವದ್ಗೀತೆ: ಹೃದಯದ ಸತ್ಯ ಮತ್ತು ಒಳ್ಳೆಯತನ ಎಂದಿಗೂ ವ್ಯರ್ಥವಾಗುವುದಿಲ್ಲ; ಶ್ರೀಕೃಷ್ಣ ಮಾತಿನಲ್ಲಿ ಹತ್ತಾರು ಅರ್ಥ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಭಗವದ್ಗೀತೆ: ಹೃದಯದ ಸತ್ಯ ಮತ್ತು ಒಳ್ಳೆಯತನ ಎಂದಿಗೂ ವ್ಯರ್ಥವಾಗುವುದಿಲ್ಲ; ಶ್ರೀಕೃಷ್ಣ ಮಾತಿನಲ್ಲಿ ಹತ್ತಾರು ಅರ್ಥ

ಭಗವದ್ಗೀತೆ: ಹೃದಯದ ಸತ್ಯ ಮತ್ತು ಒಳ್ಳೆಯತನ ಎಂದಿಗೂ ವ್ಯರ್ಥವಾಗುವುದಿಲ್ಲ; ಶ್ರೀಕೃಷ್ಣ ಮಾತಿನಲ್ಲಿ ಹತ್ತಾರು ಅರ್ಥ

ಮಹಾಭಾರತದಲ್ಲಿ ಯುದ್ಧ ಆರಂಭಕ್ಕೂ ಮುನ್ನ ಅರ್ಜುನ ಹತಾಶನಾದ ಸಂದರ್ಭದಲ್ಲಿ ಶ್ರೀಕೃಷ್ಣ ನೀಡುವ ಉಪದೇಶವೇ ಭಗವದ್ಗೀತೆ. ಹಿಂದೂ ಧರ್ಮದಲ್ಲಿ ಗೀತೆಯ ಪ್ರಾಮುಖ್ಯ ಅನನ್ಯವಾಗಿದೆ. ಮನುಷ್ಯರ ಜೀವನಕ್ಕೆ ಇಂದಿಗೂ ಪ್ರಸ್ತುತವಾಗಿದೆ. ಮನುಷ್ಯ ಸರಿಯಾದ ಮಾರ್ಗದಲ್ಲಿ ನಡೆಯಬೇಕಾದರೆ ಬೇಕಿರುವ ಗುಣಗಳನ್ನು ತಿಳಿಯೋಣ.

ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.

ಶ್ರೀಕೃಷ್ಣ (Lord Krishna) ಅರ್ಜುನನಿಗೆ ಹೀಗೆ ಹೇಳುತ್ತಾನೆ. ನಮ್ಮ ಭವಿಷ್ಯವು ಹಿಂದಿನ ಕರ್ಮದ ಫಲಿತಾಂಶವಾಗಿದೆ. ಇಂದು ನಾವು ಮಾಡುವ ಕ್ರಿಯೆಗಳು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ಅದಕ್ಕಾಗಿಯೇ ಯಾವಾಗಲೂ ನಮ್ಮ ಕರ್ಮವನ್ನು ಚೆನ್ನಾಗಿ ಇಟ್ಟುಕೊಳ್ಳಬೇಕು.

ಸೌಮ್ಯತೆ, ಮೌನ, ಸ್ವಯಂ ನಿಯಂತ್ರಣ ಹಾಗೂ ಶುದ್ಧತೆ ಮನಸ್ಸನ್ನು ಶಿಸ್ತುಗೊಳಿಸುತ್ತವೆ. ಪ್ರತಿಯೊಬ್ಬ ವ್ಯಕ್ತಿಯು ಈ ಎಲ್ಲಾ ಗುಣಗಳನ್ನು ಹೊಂದಿದಾಗ ಮಾತ್ರ ಅವರು ಸರಿಯಾದ ಮಾರ್ಗದಲ್ಲಿ ನಡೆಯಲು ಸಾಧ್ಯವಾಗುತ್ತದೆ ಎಂದು ಗೀತೆಯಲ್ಲಿ ಹೇಳಿದ್ದಾನೆ.

ಪ್ರತಿಯೊಬ್ಬ ಮನುಷ್ಯನಲ್ಲೂ ಒಂದಲ್ಲ ಒಂದು ರೀತಿಯ ಪ್ರತಿಭೆ ಇರುತ್ತದೆ. ಆದರೆ ನಮ್ಮಲ್ಲಿರುವ ಪ್ರತಿಭೆಯನ್ನು ಅರಿತುಕೊಳ್ಳುವ ಬದಲು ಜನರು ಇತರರಂತೆ ಆಗಲು ಪ್ರಯತ್ನಿಸುತ್ತಾರೆ. ಜೀವನದಲ್ಲಿ ಸಂತೋಷವನ್ನು ಕಳೆದುಕೊಳ್ಳುತ್ತೇವೆ. ಇದು ಕೂಡ ಸೋಲಿಗೆ ಒಂದು ಕಾರಣವಾಗಿರುತ್ತದೆ

ಶ್ರೀಕೃಷ್ಣ ಹೇಳುತ್ತಾನೆ ಯಾರೂ ಕೂಡ ವಿಶ್ವಕೋಶವನ್ನು ಸಂಪೂರ್ಣವಾಗಿ ತಿಳಿದಿಲ್ಲ. ಅವರ ಶಕ್ತಿಯನ್ನೂ ಎಂದಿಗೂ ತಿಳಿದಿರುವುದಿಲ್ಲ. ಹೃದಯದ ಸತ್ಯ ಮತ್ತು ಒಳ್ಳೆಯತನ ಎಂದಿಗೂ ವ್ಯರ್ಥವಾಗುವುದಿಲ್ಲ ಎಂದು ಭಗವದ್ಗೀತೆಯಲ್ಲಿ ಬರೆಯಲಾಗಿದೆ. ಪೂಜೆಯನ್ನು ದೇವರೇ ಕಂಡುಹಿಡಿದಿದ್ದಾನೆ. ನೀವು ಏನು ಮಾಡಿದರೂ ಅದನ್ನು ದೇವರಿಗೆ ಅರ್ಪಿಸಿ ಎಂದು ಕೃಷ್ಣ ಹೇಳುತ್ತಾನೆ. ಹೀಗೆ ಮಾಡುವುದರಿಂದ ಮುಕ್ತ ಜೀವನದ ಆನಂದವನ್ನು ಸದಾ ಅನುಭವಿಸಬಹುದು.

ಮಹಾಭಾರತದ ಯುದ್ಧ ಆರಂಭಕ್ಕೂ ಮುನ್ನವೇ ಎದುರಾಳಿ ಬಣದಲ್ಲಿ ಇದ್ದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸುತ್ತಾನೆ. ಆಗ ಶ್ರೀಕೃಷ್ಣನು ಪಾಂಡವರಲ್ಲಿ ಒಬ್ಬರಾದ ಅರ್ಜುನನಿಗೆ ಉಪದೇಶ ನೀಡುತ್ತಾನೆ.

ಅರ್ಜುನನ ಮುಂದೆ ಬೃಹತ್ ಸೈನ್ಯ ನಿಂತಿರುತ್ತದೆ. ಆ ಸೈನ್ಯದಲ್ಲಿರುವ ಸಾರಥಿಗಳಲ್ಲಿ ಈತನ ಚಿಕ್ಕಪ್ಪ, ತಾಯಿಯ ಅಣ್ಣ, ತಾತ ಹಾಗೂ ಸಹೋದರರು ಇರುತ್ತಾರೆ. ಈ ವೇಳೆ ಅರ್ಜುನ, ನಾನು ನನ್ನ ಸ್ವಂತ ಜನರನ್ನು ಹೇಗೆ ಕೊಲ್ಲುವುದು ಎಂದು ಮನಸ್ಸಿನಲ್ಲೇ ಯೋಚನೆ ಮಾಡಿ ಯುದ್ಧಭೂಮಿಯಲ್ಲಿ ತನ್ನ ಬಿಲ್ಲನ್ನು ಕೆಳಗೆ ಇಳಿಸುತ್ತಾನೆ.

ಆಗ ಅರ್ಜುನನಿಗೆ ಶ್ರೀಕೃಷ್ಣ ಈ ರೀತಿಯಾಗಿ ಉಪದೇಶ ನೀಡುತ್ತಾನೆ. ಇತರರನ್ನು ಮೋಸ ಮಾಡುವವನು ತಾನೂ ಸ್ವತಃ ಮೋಸ ಹೋಗುತ್ತಾನೆ ಎನ್ನುವುದು ಶ್ರೀಕೃಷ್ಣನ ಮಾತು. ಜೀವನದ ಸಾರವನ್ನು ಗೀತೆಯಲ್ಲಿ ಹೇಳಲಾಗಿದೆ. ಒಬ್ಬ ವ್ಯಕ್ತಿ ಹೇಗೆ ವರ್ತಿಸಬೇಕು, ಯಾರನ್ನಾದರೂ ಸರಿಯೇ ಅವರನ್ನು ಹೇಗೆ ನಡೆಸಿಕೊಳ್ಳಬೇಕು ಎಂಬುದು ಭಗವದ್ಗೀತೆಯಲ್ಲಿ ಅಡಕವಾಗಿದೆ. ಗೀತೆಯ ಈ ಅಂಶವನ್ನು ಅತ್ಯುತ್ತಮ ಜೀವನದ ಪಾಠ ಎಂದು ಪರಿಗಣಿಸಲಾಗಿದೆ.

-----------------------------------------------------------------------------------

ಸಂಬಂಧಿತ ಲೇಖನ

Whats_app_banner

ವಿಭಾಗ

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.