ಭಗವದ್ಗೀತೆ: ಜೀವನದಲ್ಲಿ ಸಂತೋಷ ಬಯಸುವ ಜನರು ಬೇರೆಯವರನ್ನು ಎಂದಿಗೂ ಟೀಕಿಸುವುದಿಲ್ಲ; ಶ್ರೀಕೃಷ್ಣ ಹೇಳಿದ ಮಾತಿನ ಅರ್ಥ ತಿಳಿಯಿರಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಭಗವದ್ಗೀತೆ: ಜೀವನದಲ್ಲಿ ಸಂತೋಷ ಬಯಸುವ ಜನರು ಬೇರೆಯವರನ್ನು ಎಂದಿಗೂ ಟೀಕಿಸುವುದಿಲ್ಲ; ಶ್ರೀಕೃಷ್ಣ ಹೇಳಿದ ಮಾತಿನ ಅರ್ಥ ತಿಳಿಯಿರಿ

ಭಗವದ್ಗೀತೆ: ಜೀವನದಲ್ಲಿ ಸಂತೋಷ ಬಯಸುವ ಜನರು ಬೇರೆಯವರನ್ನು ಎಂದಿಗೂ ಟೀಕಿಸುವುದಿಲ್ಲ; ಶ್ರೀಕೃಷ್ಣ ಹೇಳಿದ ಮಾತಿನ ಅರ್ಥ ತಿಳಿಯಿರಿ

ಮಹಾಭಾರತದಲ್ಲಿ ಯುದ್ಧ ಆರಂಭಕ್ಕೂ ಮುನ್ನ ಅರ್ಜುನ ಹತಾಶನಾದ ಸಂದರ್ಭದಲ್ಲಿ ಶ್ರೀಕೃಷ್ಣ ನೀಡುವ ಉಪದೇಶವೇ ಭಗವದ್ಗೀತೆ. ಹಿಂದೂ ಧರ್ಮದಲ್ಲಿ ಗೀತೆಯ ಪ್ರಾಮುಖ್ಯ ಅನನ್ಯವಾಗಿದೆ. ಮನುಷ್ಯರ ಜೀವನಕ್ಕೆ ಇಂದಿಗೂ ಪ್ರಸ್ತುತವಾಗಿದೆ. ಜೀವನದಲ್ಲಿ ಸಂತೋಷ ಬಯಸುವ ಜನ ಬೇರೆಯವರನ್ನು ಟೀಕಿಸುವುದಿಲ್ಲ. ಅದು ಹೇಗೆ ಅನ್ನೋದನ್ನು ತಿಳಿಯೋಣ.

ಕುರುಕ್ಷೇತ್ರದ ಯುದ್ಧದಲ್ಲಿ ಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
ಕುರುಕ್ಷೇತ್ರದ ಯುದ್ಧದಲ್ಲಿ ಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.

Bhagavad Gita Updesh: ಬೇರೆಯವರನ್ನು ಟೀಕಿಸಬೇಡಿ: ಭಗವದ್ಗೀತೆಯಲ್ಲಿ ಶ್ರೀಕೃಷ್ಣ (Lord Sri Krishna) ಹೇಗೆ ಹೇಳುತ್ತಾನೆ. ನಿಜವಾಯಿಗೂಯ ಯಾರು ಸಂತೋಷವಾಗಿರಲು ಬಯಸುತ್ತಾರೋ ಅವರು ಬೇರೆಯವರನ್ನು ಎಂದಿಗೂ ಟೀಕಿಸುವುದಿಲ್ಲ. ಇತರರನ್ನು ಟೀಕಿಸುವುದರಿಂದ ನಮ್ಮ ಸಂತೋಷವನ್ನು ಕಳೆದುಕೊಳ್ಳುತ್ತೇವೆ. ಸಂತೋಷವಾಗಿರಲು ಬಯಸುವ ಜನರು ತಮ್ಮ ಸಂತೋಷದ ಜೊತೆಗೆ ಇತರರ ಸಂತೋಷದ ಬಗ್ಗೆಯೂ ಕಾಳಜಿ ವಹಿಸುತ್ತಾರೆ ಎಂದು ಶ್ರೀಕೃಷ್ಣ ಭಗವದ್ಗೀತೆಯಲ್ಲಿ ಹೇಳಿದ್ದಾನೆ.

ಹೋಲಿಕೆ ಮಾಡಿಕೊಳ್ಳಬೇಡಿ: ಜೀವನದಲ್ಲಿ ಯಾರೊಂದಿಗೂ ಹೋಲಿಕೆ ಮಾಡಿಕೊಳ್ಳಬಾರದು ಎಂದು ಶ್ರೀಕೃಷ್ಣ ಹೇಳುತ್ತಾನೆ. ದೇವರು ಕೊಟ್ಟಿರುವುದರಲ್ಲಿ ಸಂತೋಷವಾಗಿರಿ ಎಂದು ಗೀತೆಯಲ್ಲಿ ಹೇಳಲಾಗಿದೆ. ಅದಕ್ಕಾಗಿಯೇ ಇತರರೊಂದಿಗೆ ತಮ್ಮನ್ನು ತಾವು ಹೋಲಿಸಿಕೊಳ್ಳದ ಜನರು ಯಾವಾಗಲೂ ಸಂತೋಷವಾಗಿರುತ್ತಾರೆ.

ದೂರು ನೀಡಬೇಡಿ: ಬೇರೆಯವರ ಬಗ್ಗೆ ನೀವು ದೂರು ನೀಡುವುದರಿಂದ ನಿಮ್ಮ ಬಗ್ಗೆ ಒಳ್ಳೆಯ ಅಭಿಪ್ರಾಯ ಮೂಡಬಹುದು. ಆದರೆ ಇದು ಸಮಸ್ಯೆಯನ್ನು ಪರಿಹರಿಸುವುದಿಲ್ಲ. ಸಂತೋಷವಾಗಿರುವ ಜನರು ಅದನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿರುತ್ತಾರೆ. ಯಾವುದೇ ವಿಷಯದ ಕುರಿತು ಇವರಿಗೆ ದೂರು ನೀಡಬೇಕೆಂದು ಅನಿಸುವುದಿಲ್ಲ.

ಭೂತಕಾಲದ ಚಿಂತೆ ಬಿಡಿ: ಹಿಂದೆ ಕಳೆದು ಹೋಗಿರುವ ಘಟನೆಗಳ ಬಗ್ಗೆ ಚಿಂತಿಸಿ ಪ್ರಯೋಜವಿಲ್ಲ. ಇದರಿಂದ ನಿಮ್ಮ ಸಮಯ ವ್ಯರ್ಥವಾಗುತ್ತದೆಯೇ ಹೊರತು ಅದರಿಂದ ನಿಮಗೆ ಏನೂ ಪ್ರಯೋಜನಾಗುವುದಿಲ್ಲ. ಇದನ್ನು ಚೆನ್ನಾಗಿ ಅರ್ಥಮಾಡಿಕೊಂಡರೆ ಕಳೆದು ಹೋದ ಘಟನೆಗಳು, ಸನ್ನಿವೇಶಗಳ, ಸಂಬಂಧಗಳು ಬಗ್ಗೆ ಯೋಚಿಸುವವ ಬದಲು ವರ್ತಮಾನದ ಜೀವನ ಸಂತೋಷಕ್ಕೆ ಇರುವ ಮಾರ್ಗವಾಗಿದೆ ಎಂದು ಶ್ರೀಕೃಷ್ಣ ಗೀತೆಯಲ್ಲಿ ಹೇಳಿದ್ದಾನೆ.

ಭಗವಂತನಿಗೆ ರೂಪ ಇಲ್ಲ: ಭಗವಂತ ಶ್ರೀಕೃಷ್ಣ ಮತ್ತೊಂದು ಮಾತನ್ನು ಹೇಳಿದ್ದಾನೆ. ನನಗೆ ರೂಪವಿಲ್ಲ. ಯಾರು ಯಾವ ರೂಪದಲ್ಲಿ ನನ್ನನ್ನು ಪೂಜಿಸುತ್ತಾರೋ ಆ ರೂಪದಲ್ಲೇ ಅವರಿಗೆ ಅನುಗ್ರಹಿಸುತ್ತೇನೆ ಎಂದು ಭಗವದ್ಗೀತೆಯ ನಾಲ್ಕನೇ ಅಧ್ಯಾಯ 11ನೇ ಶ್ಲೋಕದಲ್ಲಿದೆ.

ಮಹಾಭಾರತದ ಯುದ್ಧ ಆರಂಭಕ್ಕೂ ಮುನ್ನವೇ ಎದುರಾಳಿ ಬಣದಲ್ಲಿ ಇದ್ದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸುತ್ತಾನೆ. ಆಗ ಶ್ರೀಕೃಷ್ಣನು ಪಾಂಡವರಲ್ಲಿ ಒಬ್ಬರಾದ ಅರ್ಜುನನಿಗೆ ಉಪದೇಶ ನೀಡುತ್ತಾನೆ.

ಅರ್ಜುನನ ಮುಂದೆ ಬೃಹತ್ ಸೈನ್ಯ ನಿಂತಿರುತ್ತದೆ. ಆ ಸೈನ್ಯದಲ್ಲಿರುವ ಸಾರಥಿಗಳಲ್ಲಿ ಈತನ ಚಿಕ್ಕಪ್ಪ, ತಾಯಿಯ ಅಣ್ಣ, ತಾತ ಹಾಗೂ ಸಹೋದರರು ಇರುತ್ತಾರೆ. ಈ ವೇಳೆ ಅರ್ಜುನ, ನಾನು ನನ್ನ ಸ್ವಂತ ಜನರನ್ನು ಹೇಗೆ ಕೊಲ್ಲುವುದು ಎಂದು ಮನಸ್ಸಿನಲ್ಲೇ ಯೋಚನೆ ಮಾಡಿ ಯುದ್ಧಭೂಮಿಯಲ್ಲಿ ತನ್ನ ಬಿಲ್ಲನ್ನು ಕೆಳಗೆ ಇಳಿಸುತ್ತಾನೆ. ಆಗ ಅರ್ಜುನನಿಗೆ ಶ್ರೀಕೃಷ್ಣ ಈ ಮೇಲಿನಂತೆ ಉಪದೇಶ ನೀಡುತ್ತಾನೆ. ಇತರರನ್ನು ಮೋಸ ಮಾಡುವವನು ತಾನೂ ಸ್ವತಃ ಮೋಸ ಹೋಗುತ್ತಾನೆ ಎನ್ನುವುದು ಶ್ರೀಕೃಷ್ಣ ಮಾತು.

-----------------------------------------------------------------------------------

ಸಂಬಂಧಿತ ಲೇಖನ

Whats_app_banner

ವಿಭಾಗ

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.