ಭಗವದ್ಗೀತೆ: ಮನುಷ್ಯ ಬದುಕಿನ ಸಮಸ್ಯೆಗಳನ್ನ ಬಗೆಹರಿಸಿಕೊಳ್ಳಲು ಏನು ಮಾಡಬೇಕು?; ಗೀತೆಯಲ್ಲಿನ ಸಾರಾಂಶ ಹೀಗಿದೆ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಭಗವದ್ಗೀತೆ: ಮನುಷ್ಯ ಬದುಕಿನ ಸಮಸ್ಯೆಗಳನ್ನ ಬಗೆಹರಿಸಿಕೊಳ್ಳಲು ಏನು ಮಾಡಬೇಕು?; ಗೀತೆಯಲ್ಲಿನ ಸಾರಾಂಶ ಹೀಗಿದೆ

ಭಗವದ್ಗೀತೆ: ಮನುಷ್ಯ ಬದುಕಿನ ಸಮಸ್ಯೆಗಳನ್ನ ಬಗೆಹರಿಸಿಕೊಳ್ಳಲು ಏನು ಮಾಡಬೇಕು?; ಗೀತೆಯಲ್ಲಿನ ಸಾರಾಂಶ ಹೀಗಿದೆ

ಕುರುಕ್ಷೇತ್ರದ ಯುದ್ಧದಲ್ಲಿ ಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಸತ್ಯದ ಮಾರ್ಗವನ್ನು ಅನುಸರಿಸುವುದು ಗೀತೆಯ ಅರ್ಥವಾಗಿದೆ. ಮನುಷ್ಯ ತನ್ನ ಬದುಕಿನ ಸಮಸ್ಯೆಗನ್ನು ಬರಿಹರಿಸಿಕೊಳ್ಳಬೇಕಾದರೆ ಏನು ಮಾಡಬೇಕು ಎಂಬುದನ್ನ ತಿಳಿಯೋಣ.

ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.

ಕಾರ್ಪಣ್ಯದೋಷೋಪಹತಸ್ವಭಾವಃ

ಪೃಚ್ಛಾಮಿ ತ್ವಾಂ ಧರ್ಮಸಮ್ ಮೂಢಚೇತಾಃ |

ಯುಚ್ಚಯ: ಸ್ವಾನ್ನಿಶ್ಚಿತಃ ಬ್ರೂಹಿ ತನ್ನೇ

ಶಿಷ್ಯಸ್ತೇಹಂ ಶಾಧಿ ಮಾಂ ತ್ವಾಂ ಪ್ರಸನ್ನಮ್ ||7||

ಕಾರ್ಪಣ್ಯದ ದೌರ್ಬಲ್ಯದಿಂದ ನಾನೀಗ ನನ್ನ ಕರ್ತವ್ಯದ ಬಗ್ಗೆ ಗೊಂದಲದಲ್ಲಿದ್ದೇನೆ, ಚಿತ್ತಸ್ವಾಸ್ಥ್ಯವನ್ನು ಸಂಪೂರ್ಣವಾಗಿ ಕಳೆದುಕೊಂಡಿದ್ದೇನೆ. ಇಂತಹ ಸ್ಥಿತಿಯಲ್ಲಿ ನನಗೆ ಯಾವುದು ಶ್ರೇಯಸ್ಕರ ಎಂದು ನಿಶ್ಚಯವಾಗಿ ಹೇಳು. ನಾನೀಗ ನಿನ್ನ ಶಿಶ್ಯ ಮತ್ತು ನಿನಗೆ ಶರಣಾಗತನಾದ ಆತ್ಮ. ದಯೆಯಿಟ್ಟು ನನಗೆ ಮಾರ್ಗದರ್ಶನ ಮಾಡು.

ವೈದಿಕ ಸಾಹಿತ್ಯವು ನಮಗೆ ಏನು ಬೋಧಿಸುತ್ತೆ?

ಭೌತಿಕ ಚಟುವಟಿಕೆಗಳ ಸಂಪೂರ್ಣ ವ್ಯವಸ್ಥೆಯು ಪ್ರಕೃತಿಯ ರೀತಿಯಲ್ಲೇ ಎಲ್ಲರಿಗೂ ಗೊಂದಲವನ್ನಂಟುಮಾಡುತ್ತದೆ. ಹೆಜ್ಜೆಹೆಜ್ಜೆಗೂ ಗೊಂದಲ. ಆದ್ದರಿಂದ ಯಾರೇ ಆಗಲಿ ಬದುಕಿನ ಗುರಿಯನ್ನು ಸಾಧಿಸುವುದಕ್ಕೆ ಯೋಗ್ಯವಾದ ಮಾರ್ಗದರ್ಶನವನ್ನು ಮಾಡಬಲ್ಲ ಒಬ್ಬ ನಿಜವಾದ ಗುರುವಿನ ಬಳಿಗೆ ಹೋಗುವುದು ಉಚಿತವಾದದ್ದು. ನಾವು ಅಪೇಕ್ಷಿಸದೆಯೇ ಉಂಟಾಗುವ ಬದುಕಿನ ಗೊಂದಲಗಳಿಂದ ಪಾರಾಗುವುದಕ್ಕೆ ಒಬ್ಬ ನಿಜವಾದ ಗುರುವಿನ ಬಳಿಗೆ ಹೋಗಬೇಕೆಂದು ಎಲ್ಲ ವೈದಿಕ ಸಾಹಿತ್ಯವು ನಮಗೆ ಬೋಧಿಸುತ್ತವೆ.

ಯಾರೂ ಉರಿ ಹೊತ್ತಿಸದೆಯೇ ಹೇಗೋ ಹೊತ್ತಿಕೊಂಡು ಪ್ರಜ್ವಲಿಸುವ ಕಾಡುಕಿಚ್ಚಿನಂತೆ ಈ ಗೊಂದಲಗಳು. ಇದೇ ರೀತಿಯಲ್ಲಿ ಜಗತ್ತಿನ ಸ್ಥಿತಿ ಎಂತಹುದೆಂದರೆ ನಮಗೆ ಗೊಂದಲ ಬೇಡವೆಂದರೂ ಬದುಕಿನ ಗೊಂದಲಗಳು ತಾವಾಗಿಯೇ ತಲೆದೋರುತ್ತವೆ. ಯಾರಿಗೂ ಬೆಂಕಿ ಬೇಡ. ಆದರೂ ಅದು ಹೊತ್ತಿಕೊಂಡು ಉರಿಯುತ್ತದೆ. ಇದರಿಂದ ನಮಗೆ ದಿಕ್ಕುತೋರದಾಗುತ್ತದೆ. ಬದುಕಿನ ಗೊಂದಲಗಳನ್ನು ಪರಿಹಾರ ಮಾಡಿಕೊಳ್ಳಲು ಮತ್ತು ಪರಿಹಾರ ವಿಜ್ಞಾನವನ್ನು ತಿಳಿಯಲು ಗುರುಶಿಷ್ಯ ಪರಂಪರೆಯಲ್ಲಿರುವ ಒಬ್ಬ ಗುರುವಿನ ಬಳಿಗೆ ಹೋಗಬೇಕೆಂದು ವೇದಗಳ ವಿವೇಕವಾಣಿ ಹೇಳುತ್ತದೆ. ನಿಜವಾದ ಗುರುವನ್ನು ಪಡೆದಿರುವ ಮನುಷ್ಯನಿಗೆ ಎಲ್ಲವೂ ತಿಳಿದಿರುತ್ತದೆ ಎಂದೇ ನಿರೀಕ್ಷಣೆ, ಆದುದರಿಂದ ಯಾರೇ ಆಗಲಿ ಐಹಿಕ ಗೊಂದಲಗಳಲ್ಲಿಯೇ ಉಳಿಯಬಾರದು; ಒಬ್ಬ ಗುರುವಿನ ಬಳಿಗೆ ಹೋಗಬೇಕು. ಇದೇ ಈ ಶ್ಲೋಕದ ಭಾವಾರ್ಥ.

ಮನುಷ್ಯ ಬದುಕಿನ ಸಮಸ್ಯೆಗಳನ್ನ ಪರಿಹರಿಸಿಕೊಳ್ಳಬೇಕು

ಐಹಿಕ ಗೊಂದಲಗಳಲ್ಲಿ ಇರುವ ಮನುಷ್ಯ ಯಾರು? ಅವರು ಬದುಕಿನ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳದವನು. ಗೊಂದಲದಲ್ಲಿ ಸಿಕ್ಕ ಮನುಷ್ಯನನ್ನು ಬೃಹದಾರಣ್ಯಕ ಉಪನಿಷತ್ತಿನಲ್ಲಿ (3.8.10) ಹೀಗೆ ವರ್ಣಿಸಿದೆ ಯೋ ವಾ ಏತದ್ ಅಕ್ಷರಂ ಗಾರ್ಗಿ ಅವಿದಿತ್ವಾಸ್ಮಾ-ಲೋಕಾತ್ ಪ್ರೈತಿ ಸ ಕೃಪಣಃ 'ಮನಷ್ಟವಾಗಿ ಬದುಕಿನ ಸಮಸ್ಯೆಗಳನ್ನು ಪರಿಹರಿಸಿಕೊಳ್ಳದೆ, ಆತ್ಮಸತ್ಕಾರದ ವಿಜ್ಞಾನವನ್ನು ತಿಳಿದುಕೊಳ್ಳದೆ ಬೆಕ್ಕುಗಳು ಮತ್ತು ನಾಯಿಗಳಂತೆ ಬದುಕಿ ಈ ಜಗತ್ತನ್ನು ಬಿಡುವವನ ಕೃವಣ.

" ಜೀವಿಗೆ ಬದುಕಿನ ಈ ಮಾನವ ಸ್ವರೂಪವು ಅಮೂಲ್ಯವಾದ ಆಸ್ತಿ. ಬದುಕಿನ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಈ ಸ್ವರೂಪವನ್ನು ಬಳಸಬಹುದು, ಆದುದರಿಂದ ಯಾವನು ಈ ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳುವುದಿಲ್ಲವೋ ಅವನೊಬ್ಬ ಕೃಪಣ. ಇದಕ್ಕೆ ಪ್ರತಿಯಾಗಿ ಬದುಕಿನ ಎಲ್ಲ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಈ ದೇಹವನ್ನು ಬಳಸಿಕೊಳ್ಳುವಷ್ಟು ಬುದ್ದಿವಂತನಾದವನು ಬ್ರಾಹ್ಮಣ, ಯಾ ಏಕಪ್ ಅಕ್ಷರಂ ಗಾರ್ಗಿ ವಿದಿತ್ಯಾಸ್ಮಾ-ಲೋಕಾತ್ ಪ್ರೈತಿ ಸ ಬ್ರಾಹ್ಮಣಃ

ಮನುಷ್ಯ ಮೋಹವನ್ನು ತಳೆಯಲು ಇದೇ ಕಾರಣ

ಕೃಪಣರು ಬದುಕಿನ ಐಹಿಕ ಕಲ್ಪನೆಯನ್ನಿಟ್ಟುಕೊಂಡಿರುತ್ತಾರೆ. ಇದರಿಂದ ಕುಟುಂಬ, ಸಮಾಜ, ದೇಶ ಮೊದಲಾದವುಗಳ ವಿಷಯದಲ್ಲಿ ಅತಿಮೋಹವನ್ನು ಇಟ್ಟುಕೊಂಡು ಕಾಲವನ್ನು ವ್ಯರ್ಥಮಾಡುತ್ತಾರೆ. ಈ ಚರ್ಮರೋಗದ ಕಾರಣದಿಂದ ಮನುಷ್ಯನು ಕೌಟುಂಬಿಕ ಜೀವನದಲ್ಲಿ ಎಂದರೆ ಹೆಂಡತಿ, ಮಕ್ಕಳು ಮತ್ತು ಇತರ ಸದಸ್ಯರಲ್ಲಿ ಮೋಹವನ್ನು ತಳೆಯುತ್ತಾನೆ. ತನ್ನ ಕುಟುಂಬದ ಸದಸ್ಯನನ್ನು ಸಾವಿನಿಂದ ತಾನು ರಕ್ಷಿಸಬಲ್ಲೆ ಎಂದು ಕೃಪಣನು ಭಾವಿಸುತ್ತಾನೆ. ಅಥವಾ ತನ್ನ ಕುಟುಂಬ ಅಥವಾ ಸಮಾಜವು ಸಾವಿನ ಅಂಚಿನಲ್ಲಿರುವ ತನ್ನನ್ನು ಕಾಪಾಡಬಲ್ಲುದು ಎಂದು ಕೃವಣನು ಭಾವಿಸುತ್ತಾನೆ. ಇಂತಹ ಸಂಸಾರ ವ್ಯಾಮೋಹವನ್ನು ಕೆಳವರ್ಗದ ಪ್ರಾಣಿಗಳಲ್ಲಿ ಸಹ ಕಾಣಬಹುದು. ಅವು ತಮ್ಮ ಮರಿಗಳನ್ನು ಎಚ್ಚರಿಕೆಯಿಂದ ನೋಡಿಕೊಳ್ಳುತ್ತವೆ. ಬುದ್ಧಿವಂತರಾಗಿದ್ದ ಅರ್ಜುನನು ತನ್ನ ಸಂಸಾರದ ಸದಸ್ಯರಲ್ಲಿ ತನಗಿರುವ ಮೋಹ ಮತ್ತು ಅವರನ್ನು

ಸಾವಿನಿಂದ ರಕ್ಷಿಸುವ ಬಯಕೆ - ಇವೇ ತನ್ನ ಗೊಂದಲಗಳಿಗೆ ಕಾರಣ ಎಂದು ಅರ್ಥಮಾಡಿಕೊಳ್ಳಬಲ್ಲವನಾಗಿದ್ದ, ಯುದ್ಧ ಮಾಡುವುದು ತನ್ನ ಕರ್ತವ್ಯ ಮತ್ತು ಈ ಕರ್ತವ್ಯವು ತನಗಾಗಿ ಕಾಯುತ್ತಿದೆ ಎಂದು ಅವನಿಗೆ ತಿಳಿದಿತ್ತು. ಆದರೂ ತನ್ನ ಕೃಪಣತೆಯ ದೋಷದಿಂದ ಅವನಿಗೆ ತನ್ನ ಕರ್ತವ್ಯವನ್ನು ಪಾಲಿಸುವುದು ಸಾಧ್ಯವಾಗಲಿಲ್ಲ. ಆದುದರಿಂದ ಅವನು ಪರಮ ಗುರುವಾದ ಕೃಷ್ಣನನ್ನು ನಿಶ್ಚಿತವಾದ ಪರಿಹಾರವನ್ನು ಹೇಳಿಕೊಡುವಂತೆ ಬೇಡುತ್ತಿದ್ದಾನೆ.

ಗೀತೆಯನ್ನು ಅರ್ಥಮಾಡಿಕೊಂಡ ಮೊದಲ ಶಿಷ್ಯ ಇವರೇ

ತಾನು ಕೃಷ್ಣನ ಶಿಷ್ಯನಾಗುವ ಅಪೇಕ್ಷೆಯನ್ನು ಹೇಳುತ್ತಾನೆ. ಸಖ್ಯಭಾವದ ಮಾತುಗಳನ್ನು ನಿಲ್ಲಿಸಲು ಅರ್ಜುನನು ಬಯಸುತ್ತಾನೆ. ಗುರು ಮತ್ತು ಶಿಷ್ಯರ ನಡುವಣ ಮಾತುಗಳು ಗಂಭೀರ ಸ್ವರೂಪದವು. ಈಗ ಅರ್ಜುನನು ತಾನು ಒಪ್ಪಿಕೊಂಡ ಗುರುವಿನೊಡನೆ ಬಹು ಗಂಭೀರವಾಗಿ ಮಾತನಾಡಲು ಬಯಸುತ್ತಾನೆ. ಆದ್ದರಿಂದ ಕೃಷ್ಣನು ಭಗವದ್ಗೀತೆಯ ವಿಜ್ಞಾನದ ಮೂಲಗುರು ಮತ್ತು ಗೀತೆಯನ್ನು ಅರ್ಥಮಾಡಿಕೊಂಡ ಮೊದಲ ಶಿಷ್ಯ ಅರ್ಜುನ. ಆರ್ಜುನನು ಗೀತೆಯನ್ನು ಹೇಗೆ ಅರ್ಥಮಾಡಿಕೊಂಡ ಎನ್ನುವುದನ್ನು ಭಗವದ್ಗೀತೆಯಲ್ಲೇ ಹೇಳಿದೆ.

ಇಷ್ಟಾದರೂ ಮೂರ್ಖರಾದ ಲೌಕಿಕ ವಿದ್ವಾಂಸರು, ಕೃಷ್ಣನನ್ನು ಒಬ್ಬ ವ್ಯಕ್ತಿಯೆಂದು ಗುರುತಿಸಿ ಶರಣಾಗತರಾಗುವ ಅಗತ್ಯವಿಲ್ಲ, ಕೃಷ್ಣನೊಳಗೆ ಜನ್ಮತಾಳದೆ ಇರುವ ಅಂಶಕ್ಕೆ ಶರಣಾಗಬೇಕು ಎಂದು ವಿವರಿಸುತ್ತಾರೆ. ಕೃಷ್ಣನ ಒಳಗು ಮತ್ತು ಹೊರಗುಗಳಿಗೆ ಭೇದವಿಲ್ಲ. ಇದನ್ನು ತಿಳಿಯದೆ ಭಗವದ್ಗೀತೆಯನ್ನು ಅರ್ಥಮಾಡಿಕೊಳ್ಳುವನೆಂದು ಹೊರಡುವವನು ಮೂರ್ಖರಲ್ಲಿ ಮೂರ್ಖ.

Whats_app_banner

ವಿಭಾಗ

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.