ಭಗವದ್ಗೀತೆ: ಮನುಷ್ಯನ ಸುಖ-ದುಃಖಕ್ಕೆ ದೇಹ ಮತ್ತು ಮನಸ್ಸೇ ಕಾರಣ; ಗೀತೆಯಲ್ಲಿನ ಅರ್ಥ ಹೀಗಿದೆ
ಕುರುಕ್ಷೇತ್ರದ ಯುದ್ಧದಲ್ಲಿ ಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಸತ್ಯದ ಮಾರ್ಗವನ್ನು ಅನುಸರಿಸುವುದು ಗೀತೆಯ ಅರ್ಥವಾಗಿದೆ. ಮನುಷ್ಯನ ಸುಖ-ದುಃಖಕ್ಕೆ ದೇಹ ಮತ್ತು ಮನಸ್ಸೇ ಕಾರಣ ಎಂಬ ಗೀತೆಯಲ್ಲಿನ ಅರ್ಥ ತಿಳಿಯಿರಿ.
ದೇಹಿನೋಸ್ಮಿತ್ ಯಥಾ ದೇಹೇ ಕೌಮಾರಂ ಯೌವನಂ ಜರಾ |
ತಥಾ ದೇಹಾನ್ತರಪ್ರಾಪ್ತಿಧೀರಸ್ತತ್ರ ನ ಮುಹ್ಯತಿ ||13||
ದೇಹಸ್ಥ ಆತ್ಮವು ಈ ದೇಹದಲ್ಲಿ ಬಾಲ್ಯದಿಂದ ಯೌವನಕ್ಕೆ, ಮುಪ್ಪಿಗೆ ಒಂದೇ ಸಮನೆ ಸಾಗುವ ರೀತಿಯಲ್ಲೇ ಆತ್ಮವು ಸಾವಿನನಂತರ ಮತ್ತೊಂದು ದೇಹಕ್ಕೆ ಸಾಗುತ್ತದೆ. ಧೀರನಾದವನು ಇದರಿಂದ ಗೊಂದಲಕ್ಕೆ ಒಳಲಾಗುವುದಿಲ್ಲ.
ಪ್ರತಿಯೊಂದು ಜೀವಿನಯೂ ಪ್ರತ್ಯೇಕ ಆತ್ಮ. ಆದುದರಿಂದ ಪ್ರತಿಯೊಂದು ಜೀವಿಯೂ ನಿಮಿಷ ನಿಮಷಕ್ಕೂ ತನ್ನ ದೇಹವನ್ನು ಬದಲಾಯಿಸುತ್ತಿರುತ್ತದೆ. ಕೆಲವೊಮ್ಮೆ ಮಗುವಿನಂತೆ, ಕೆಲವೊಮ್ಮೆ ಯುವಕನಂತೆ, ಮತ್ತೊಮ್ಮೆ ಮುದುಕನಂತೆ ಕಾಣಿಸಿಕೊಳ್ಳುತ್ತದೆ. ಆದರೆ ಇರುವುದು ಒಂದೇ ಆತ್ಮ. ಇದು ಯಾವ ಬಗೆಯ ವ್ಯತ್ಯಾಸವನ್ನೂ ಹೊಂದುವುದಿಲ್ಲ. ಈ ಪ್ರತ್ಯೇಕ ಆತ್ಮವು ಕಟ್ಟಕಡೆಗೆ ಸಾವಿನ ಸಮಯದಲ್ಲಿ ದೇಹವನ್ನು ಬದಲಾಯಿಸಿಸುತ್ತದೆ ಮತ್ತು ಇನ್ನೊಂದು ದೇಹವನ್ನು ಪ್ರವೇಶಿಸುತ್ತದೆ.
ಮುಂದಿನ ಜನ್ಮದಲ್ಲಿ ನಿಶ್ಚಯವಾಗಿ ಅದಕ್ಕೆ ಭೌತಿಕ ಅಥವಾ ಅಭೌತಿಕ ದೇಹವಿರುವುದರಿಂದ ಅರ್ಜುನನು ದುಃಖಿಸಲು ಕಾರವೇ ಇಲ್ಲ. ಭೀಷ್ಮ ಮತ್ತು ದ್ರೋಣರ ವಿಷಯದಲ್ಲಿ ಅವನಿಗೆ ತುಂಬ ಕಳಕಳಿಯಾದರೂ ದುಃಖಿಸುವ ಕಾರಣವಿಲ್ಲ. ಅದರ ಬದಲು ಅವರು ಹಳೆಯ ದೇಹಗಳನ್ನು ಬಿಟ್ಟು ಹೊಸ ದೇಹಗಳನ್ನು ಪ್ರವೇಶಿಸಿ ತಮ್ಮ ಚೈತನ್ಯವನ್ನು ಮತ್ತೆ ಪಡೆದುಕೊಳ್ಳುತ್ತಾರೆ ಎಂದು ಅವನು ಸಂತೋಷಪಡಬೇಕು.
ಯಾವುದೇ ಮನುಷ್ಯನ ಬದುಕಿನ ಕರ್ಮಗಳಿಗೆ ಅನುಗುಣವಾಗಿ ವಿಧವಿಧವಾದ ಭೋಗಗಳೋ ನೋವುಗಳೋ ಲಭ್ಯವಾಗುವುದಕ್ಕೆ ದೇಹದ ಈ ಬದಲಾವಣೆಗಳೇ ಕಾರಣ. ಭೀಷ್ಮರು, ದ್ರೋಣರು ಪುಣ್ಯಚೇತನರು. ಆದುದರಿಂದ ನಿಶ್ಚಯವಾಗಿಯೂ ಮುಂದಿನ ಜನ್ಮದಲ್ಲಿ ಅವರು ಆಧ್ಯಾತ್ಮಿಕ ಶರೀರವನ್ನು ಪಡೆಯುವರು. ಕೊನೆಯ ಪಕ್ಷ ಸ್ವರ್ಗ ಮೊದಲಾದ ಲೋಕಗಳಲ್ಲಿ ಐಹಿಕ ಬದುಕಿನ ಉನ್ನತ ಭೋಗಗಳನ್ನು ಅನುಭವಿಸಲು ದೇಹಗಳನ್ನು ಪಡೆಯುವರು. ಹೇಗೇ ಆಗಲಿ ದುಃಖಕ್ಕೆ ಕಾರಣವೇ ಇಲ್ಲ.
ಈ ಗುಣಗಳು ಇರುವವರನ್ನು ಧೀರ ಎಂದು ಕರೆಯುತ್ತಾರೆ
ಜೀವಾತ್ಮ, ಪರಮಾತ್ಮ ಮತ್ತು ಐಹಿಕವಾಗಿ ಹಾಗೂ ಆಧ್ಯಾತ್ಮಿಕವಾಗಿ ಪ್ರಕೃತಿ ಇವುಗಳ ಸ್ವರೂಪದ ಪರಿಪೂರ್ಣ ಅರಿವಿರುವವನನ್ನು ಧೀರ ಎಂದು ಕರೆಯುತ್ತಾರೆ. ಇಂತಹ ಮನುಷ್ಯನು ದೇಹಗಳನ್ನು ಬದಲಾವಣೆಯಿಂದ ಮೋಸಹೋಗುವುದಿಲ್ಲ.
ಆತ್ಮದ ಏಕತ್ವದ ಮಾಯಾವಾದೀ ಸಿದ್ಧಾಂತವನ್ನು ಒಪ್ಪಲು ಸಾಧ್ಯವಿಲ್ಲ. ಏಕೆಂದರೆ ಆತ್ಮವನ್ನು ಭಿನ್ನಾಂಶಗಳನ್ನಾಗಿ ಕತ್ತರಿಸಲು ಸಾಧ್ಯವಿಲ್ಲ. ಹೀಗೆ ಜೀವಿಗಳಾಗಿ ಕತ್ತರಿಸುವುದೆಂದರೆ ಪರಮ ಶಕ್ತಿಯನ್ನು ಕತ್ತರಿಸಲು ಸಾಧ್ಯವಿಲ್ಲ. ಹೀಗೆ ಜೀವಿಗಳಾಗಿ ಕತ್ತರಿಸುವುದೆಂದರೆ ಪರಮ ಶಕ್ತಿಯನ್ನು ಕತ್ತರಿಸಲು ಸಾಧ್ಯ, ಅದು ಬದಲಾಗಬಹುದು ಎಂದು ಹೇಳಿದಂತಾಯಿತು.
ಇದು ಪರಮಾತ್ಮನಿಗೆ ಬದಲಾವಣೆ ಎನ್ನುವುದು ಇಲ್ಲವೇ ಇಲ್ಲ ಎನ್ನುವ ತತ್ವಕ್ಕೆ ವಿರುದ್ಧವಾದುದು. ಹೀಗೆಯು ಒಂದು ಅಂಶವನ್ನು ದೃಢಪಡಿಸಿುತ್ತದೆ. ಪರಮ ಪ್ರಭವಿನ ಭಿನ್ನಾಂಶಗಳು ಸತಾತನವಾದವು. ಇವನ್ನು ಕ್ಷರ ಎಂದು ಕರೆಯುತ್ತಾರೆ. ಹೀಗೆಂದರೆ ಐಹಿಕ ಪ್ರಕೃತಿಯಲ್ಲಿ ಬೀಳುವ ಪ್ರವೃತ್ತಿ ಅವುಗಳದು. ಈ ಭಿನ್ನಾಂಶಗಳು ನಿರಂತರವಾಗಿ ಹಾಗೆಯೇ ಉಳಿಯುತ್ತದೆ. ಮುಕ್ತಿ ಪಡೆದ ನಂತರವೂ ಜೀವಾತ್ಮವು ಒಂದು ಭಿನ್ನಾಂಶವಾಗಿಯೇ ಉಳಿಯುತ್ತದೆಯ ಆದರೆ ಮುಕ್ತಿ ಪಡೆದ ಅನಂತರ ನಿರಂತರ ಪರಮಾನಂದದಲ್ಲಿ ಮತ್ತು ಅರಿವಿನಲ್ಲಿ ಅದು ಪರಮ ಪುರುಷನ ಸನ್ನಿಧಿಯಲ್ಲಿ ಉಳಿಯುತ್ತದೆ.
ಪ್ರತಿಬಿಂಬದ ಸಿದ್ಧಾಂತವನ್ನು ಪ್ರತಿಯೊಂದು ಪ್ರತ್ಯೇಕ ದೇಹದಲ್ಲಿ ವಾಸಿಸುವ ಪರಮಾತ್ಮನಿಗೆ ಅನ್ವಯಿಸಬಹುದು. ಪರಮಾತ್ಮನು ಜೀವಾತ್ಮನಿಗಿಂತ ಭಿನ್ನ. ಆಕಾಶವು ನೀರನಲ್ಲಿ ಪ್ರತಿಬಿಂಬಿತವಾದರೆ ಪ್ರತಿಬಿಂಬವು ಚಂದ್ರ, ಸೂರ್ಯ ಮತ್ತು ತಾರೆಗಳನ್ನೂ ಪ್ರತಿನಿಧಿಸುತ್ತದೆ. ತಾರೆಗಳನ್ನು ಜೀವಿಗಳಿಗೆ ಹೋಲಿಸಬಹುದು ಮತ್ತು ಸೂರ್ಯನನ್ನು ಅಥವಾ ಚಂದ್ರನನ್ನು ಪರಮಾತ್ಮನಿಗೆ ಹೋಲಿಸಬಹುದು. ಭಿನ್ನಾಂಶವಾದ ಆತ್ಮದ ಪ್ರತಿನಿಧಿ ಅರ್ಜುನ. ಪರಮಾತ್ಮನು ದೇವೋತ್ತಮ ಪರಮ ಪುಷನಾದ ಶ್ರೀಕೃಷ್ಣ. ಅವರಿಬ್ಬರೂ ಒಂದೇ ಮಟ್ಟದವರಲ್ಲ. ಇದು ನಾಲ್ಕನೆಯ ಅಧ್ಯಾದ ಪ್ರಾಂಭದಲ್ಲಿ ತಿಳಿಯುತ್ತದೆ.
ಅರ್ಜುನನು ಶ್ರೀಕೃಷ್ಣನಿಗೆ ಸರಿಸಮಾನನಾದರೆ ಮತ್ತು ಕೃಷ್ಣನು ಅರ್ಜುನನಿಗಿಂತ ದೊಡ್ಡವನಲ್ಲದಿದ್ದರೆ ಅವರು ಗುರು ಶಿಷ್ಯ ಸಂಬಂಧಕ್ಕೆ ಅರ್ಥವಿಲ್ಲ. ಇಬ್ಬರೂ ಮಾಯೆಯಿಂದ ಭ್ರಮಿತರಾದರೆ ಒಬ್ಬನು ಗುರು, ಮತ್ತೊಬ್ಬನು ಶಿಷ್ಯ ಎಂದು ಇರಬೇಕಾಗಿಯೇ ಇಲ್ಲ. ಮಾಯೆಯ ಹಿಡಿತದಲ್ಲಿರುವ ಯಾರೂ ಬೋಧನೆ ಮಾಡಲು ಅಧಿಕಾರ ಹೊಂದಿರುವುದಿಲ್ಲ. ಆದುದರಿಂದ ಇಂತಹ ಬೋಧನೆಯು ಮಾಯೆಯಿಂದ ಭ್ರಮಿತನಾಗಿ ಮರೆವಿಗೆ ವಶನೂ ಆದ ಅರ್ಜುನನಿಗಿಂತ ಅವನು ಉನ್ನತ ಸ್ಥಾನದಲ್ಲಿರುವವನು ಎನ್ನುವುದನ್ನು ಒಪ್ಪಿಕೊಳ್ಳಲಾಗಿದೆ.