ಭಗವದ್ಗೀತೆ: ಹತೋಟಿಯಲ್ಲಿ ಇಟ್ಟುಕೊಳ್ಳದವನ ಮನಸ್ಸು ಶತ್ರುವಿನಂತೆ ವರ್ತಿಸುತ್ತೆ; ಅರ್ಜುನನಿಗೆ ಶ್ರೀಕೃಷ್ಣ ಹೇಳಿದ ಮಾತಿನ ಅರ್ಥ ತಿಳಿಯಿರಿ
ಮಹಾಭಾರತದಲ್ಲಿ ಯುದ್ಧ ಆರಂಭಕ್ಕೂ ಮುನ್ನ ಅರ್ಜುನ ಹತಾಶನಾದ ಸಂದರ್ಭದಲ್ಲಿ ಶ್ರೀಕೃಷ್ಣ ನೀಡುವ ಉಪದೇಶವೇ ಭಗವದ್ಗೀತೆ. ಹಿಂದೂ ಧರ್ಮದಲ್ಲಿ ಗೀತೆಯ ಪ್ರಾಮುಖ್ಯ ಅನನ್ಯವಾಗಿದೆ. ಮನುಷ್ಯರ ಜೀವನಕ್ಕೆ ಇಂದಿಗೂ ಪ್ರಸ್ತುತವಾಗಿದೆ. ಹತೋಟಿಯಲ್ಲಿ ಇಟ್ಟುಕೊಳ್ಳದವನ ಮನಸ್ಸು ಶತ್ರುವಿನಂತೆ ವರ್ತಿಸುತ್ತೆ ಎಂಬುದರ ಅರ್ಥವನ್ನು ಇವತ್ತು ತಿಳಿಯೋಣ
ಮನಸ್ಸನ್ನು ಹತೋಟಿಯಲ್ಲಿ ಇಟ್ಟುಕೊಳ್ಳದ ವ್ಯಕ್ತಿಯ ಮನಸ್ಸು ಶತ್ರುವಿನಂತೆ ವರ್ತಿಸುತ್ತದೆ ಎಂದು ಶ್ರೀಕೃಷ್ಣ ಭಗವದ್ಗೀತೆಯಲ್ಲಿ ಹೇಳುತ್ತಾನೆ. ಒಬ್ಬರ ವರ್ತಮಾನವನ್ನು ನೋಡುವ ಮೂಲಕ ಅವರ ಭವಿಷ್ಯವನ್ನು ಅಪಹಾಸ್ಯ ಮಾಡಬಾರದು. ಯಾಕೆಂದರೆ ಸಮಯವು ಕಲ್ಲಿದ್ದಲನ್ನು ನಿಧಾನವಾಗಿ ವಜ್ರಗಳನ್ನಾಗಿ ಪರಿವರ್ತಿಸುವ ಶಕ್ತಿಯನ್ನು ಹೊಂದಿದೆ.
ದೇವರು ಯಾರ ಭವಿಷ್ಯವನ್ನೂ ಬರೆಯುವುದಿಲ್ಲ ಎಂದು ಗೀತೆ ಹೇಳುತ್ತದೆ. ಜೀವನದ ಪ್ರತಿಯೊಂದು ಹಂತದಲ್ಲೂ ನಮ್ಮ ಆಲೋಚನೆಗಳು, ನಮ್ಮ ನಡವಳಿಕೆ ಹಾಗೂ ಕಾರ್ಯಗಳು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತದೆ. ಶ್ರೀಕೃಷ್ಣನು ಹೀಗೆ ಹೇಳುತ್ತಾನೆ. ನನ್ನ ಭಕ್ತನು ನನ್ನಲ್ಲಿ ನಂಬಿಕೆಯಿಂದ ಮೌನವಾಗಿ ಆಲಿಸಿದರೆ ಅವನ ಮೌನ ಮತ್ತು ನಂಬಿಕೆಗೆ ನಾನೇ ಪ್ರತಿಕ್ರಿಯಿಸುತ್ತೇನೆ ಎಂಬುದಾಗಿ ಹೇಳಿದ್ದಾನೆ.
ಕಾಮ, ಕ್ರೋಧ ಮತ್ತು ಲೋಭ ಇವು ನರಕದ ಮೂರು ದ್ವಾರಗಳು. ಮೂರನ್ನೂ ಸ್ವಯಂ ವಿನಾಶಕಾರಿ ಎಂದು ಪರಿಗಣಿಸಲಾಗುತ್ತದೆ ಎಂದು ಗೀತೆಯಲ್ಲಿ ಹೇಳಲಾಗಿದೆ. ಈ ದೇಹವು ನಿಮ್ಮದಲ್ಲ ಅಥವಾ ನೀವು ಈ ದೇಹಕ್ಕೆ ಸೇರಿದವರಲ್ಲ. ಈ ದೇಹವು ಬೆಂಕಿ, ನೀರು, ಗಾಳಿ, ಭೂಮಿ ಹಾಗೂ ಆಕಾಶದಿಂದ ಮಾಡಲ್ಪಟ್ಟಿದೆ. ಅಂತಿಮವಾಗಿ ಅವುಗಳಲ್ಲಿ ಈ ದೇಹ ವಿಲೀನಗೊಳ್ಳುತ್ತದೆ. ಆದರೆ ಆತ್ಮವು ಅಚಲವಾಗಿದೆ.
ನಂಬಿಕೆ ಹೊಂದಿದ್ದರೆ ಅರ್ಹವಾದ ಎಲ್ಲವನ್ನೂ ಪಡೆಯುತ್ತೀರಿ
ಹಾಗಾದರೆ ನೀವು ಏನು? ದೇವರು ಹೇಳುತ್ತಾನೆ ಓ ಮನುಷ್ಯನೇ ನಿನ್ನನ್ನು ದೇವರಿಗೆ ಒಪ್ಪಿಸು. ಅದು ಅತ್ಯುತ್ತಮವಾದ ಆಧಾರವಾಗಿದೆ. ದೇವರ ಬೆಂಬಲವನ್ನು ತಿಳಿದಿರುವವನು ಭಯ, ಆತಂಕ ಹಾಗೂ ದುಃಖದಿಂದ ಶಾಶ್ವತವಾಗಿ ಮುಕ್ತನಾಗಿರುತ್ತಾನೆ. ಗೀತೆಯ ಪ್ರಕಾರ, ನಿಮ್ಮ ಹಣೆಬರಹವನ್ನು ಯಾರೂ ಕಸಿದುಕೊಳ್ಳಲು ಸಾಧ್ಯವಿಲ್ಲ. ನೀವು ದೇವರಲ್ಲಿ ನಂಬಿಕೆ ಹೊಂದಿದ್ದರೆ ಅರ್ಹವಾದ ಎಲ್ಲವನ್ನೂ ಪಡೆಯುತ್ತೀರಿ.
ಗೀತೆಯ ಮಹಾಭಾರತದಲ್ಲಿ ಯುದ್ಧ ಆರಂಭಕ್ಕೂ ಮುನ್ನ ಹತಾಶನಾದ ಅರ್ಜುನನಿಗೆ ಶ್ರೀಕೃಷ್ಣನು ನೀಡಿದ ಉಪದೇಶವಾಗಿದೆ. ಹಿಂದೂ ಧರ್ಮದಲ್ಲಿ ಭಗವದ್ಗೀತೆಯ ಪ್ರಾಮುಖ್ಯತೆ ಅನನ್ಯವಾಗಿದೆ. ಮಹಾಭಾರತ ಹಿಂದೂ ಜನರ ಸಂಸ್ಕೃತಿಯ ಪವಿತ್ರ ಗ್ರಂಥವಾಗಿದೆ. ಇದು ಅಧರ್ಮದೊಂದಿಗಿನ ಧರ್ಮದ ಯುದ್ಧವನ್ನು ಆಧರಿಸಿದೆ. ಇದನ್ನು ಐದನೇ ವೇದ ಅಂತಲೂ ಕರೆಯುತ್ತಾರೆ. ಭಗವದ್ಗೀತೆ ಮತ್ತು ವಿದುರ್ ನೀತಿ ಭಗವದ್ಗೀತೆಯ ಎರಡು ಕಂಬಗಳಿದ್ದಂತೆ.
ಅರ್ಜುನ ತನ್ನ ಸ್ವಂತ ಸಂಬಂಧಿಕರ ವಿರುದ್ಧ ಹೋರಾಡುವ ಮೊದಲು ತನ್ನ ಬಿಲ್ಲುಬಾಣವನ್ನು ಕೆಳಗೆ ಇಳಿಸಿ ಮನಸ್ಸಿನಲ್ಲೇ ಹೀಗೆ ಅಂದುಕೊಳ್ಳುತ್ತಾನೆ. ನನ್ನ ಸ್ವಂತ ಬಂಧುಗಳ ವಿರುದ್ಧ ನಾನು ಹೇಗೆ ಯುದ್ಧ ಮಾಡಲಿ ಎಂದು ಯೋಚಿಸುತ್ತಾನೆ. ಆಗ ಅರ್ಜುನನ ಈ ಎಲ್ಲಾ ಪ್ರಶ್ನೆಗಳಿಗೆ ಶ್ರೀಕೃಷ್ಣನು ಗೀತೆಯ ಮೂಲಕ ಉತ್ತರ ನೀಡುತ್ತಾನೆ.
-----------------------------------------------------------------------------------
ಸಂಬಂಧಿತ ಲೇಖನ
ವಿಭಾಗ