ಭಗವದ್ಗೀತೆ: ನಿನ್ನನ್ನು ನಂಬಿ, ಪ್ರೀತಿಸುವವರಿಗೆ ಎಂದಿಗೂ ದ್ರೋಹ ಮಾಡಬೇಡ; ಅರ್ಜುನನಿಗೆ ಶ್ರೀಕೃಷ್ಣ ನೀಡಿದ ಉಪದೇಶದ ಅರ್ಥ ಹೀಗಿದೆ
ಕುರುಕ್ಷೇತ್ರದ ಯುದ್ಧದಲ್ಲಿ ಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ದೇವರ ಗೀತೆ ಎಂಬ ಅರ್ಥ ಬರುವ ಭಗವದ್ಗೀತೆ ವಿಶ್ವದಲ್ಲಿ ಲಭ್ಯ ಇರುವ ಧರ್ಮಗ್ರಂಥಗಳಲ್ಲಿ ಒಂದಾಗಿದೆ. ಸತ್ಯದ ಮಾರ್ಗವನ್ನು ಅನುಸುರಿಸುವುದು ಗೀತೆಯ ಅರ್ಥವಾಗಿದೆ. ನಂಬಿದವರಿಗೆ ದ್ರೋಹ ಮಾಡಬೇಡ ಎಂಬ ಶ್ರೀಕೃಷ್ಣನ ಮಾತಿನ ಅರ್ಥ ತಿಳಿಯಿರಿ.
ಶ್ರೀಕೃಷ್ಣ (Lord Krishna) ಅರ್ಜುನನಿಗೆ (Arjuna) ಉಪದೇಶ ಮಾಡುವಾಗ ಹೀಗೆ ಹೇಳುತ್ತಾನೆ. ನೀನು ಎಲ್ಲಿಯವರೆಗೆ ಭಯಪಡುತ್ತೀಯೋ ಅಲ್ಲಿಯವರೆಗೆ ಬೇರೆಯವರು ನಿನ್ನ ಜೀವನವನ್ನು ನಿರ್ಧರಿಸುತ್ತಲೇ ಇರುತ್ತಾರೆ. ಆದ್ದರಿಂದ ನಿನ್ನ ಭಯವನ್ನು ನಿವಾರಿಸಿಕೊಂಡು ನಿರ್ಭಯವಾಗಿ ಮುನ್ನಡೆಯಬೇಕು ಎಂದು ಹೇಳಿರುವುದಾಗಿ ಭಗವದ್ಗೀತೆಯಲ್ಲಿ ಬರೆಯಲಾಗಿದೆ.
ನಿನ್ನನ್ನು ತುಂಬಾ ಪ್ರೀತಿಸುವರವರಿಗೆ, ನಂಬಿದವರಿಗೆ ಎಂದಿಗೂ ದ್ರೋಹ ಮಾಡಬೇಡ. ಅದಕ್ಕಾಗಿಯೇ ನಿಮ್ಮ ಪ್ರೀತಿಪಾತ್ರರ ಜೊತೆ ಮಾತನಾಡುವ ಮಾತುಗಳು, ನಡೆದುಕೊಳ್ಳುವಾಗ ಹಲವಾರು ಬಾರಿ ಯೋಚಿಸಬೇಕು ಎಂದು ಹೇಳಿದ್ದಾನೆ.
ಏನೇ ಕೆಲಸ ಮಾಡಿದರೂ ನಂಬಿಕೆಯಿಂದ ಮಾಡಿ
ತನ್ನ ಕರ್ಮವನ್ನು ಯಾವತ್ತೂ ಸಂಶಯಿಸಬಾರದು ಎಂದು ಗೀತೆಯಲ್ಲಿ ಬರೆಯಲಾಗಿದೆ. ಹೀಗೆ ಮಾಡುವುದರಿಂದ ಮನುಷ್ಯನು ತನ್ನನ್ನು ತಾನೇ ನಾಶಪಡಿಸಿಕೊಳ್ಳುತ್ತಾನೆ. ಆದ್ದರಿಂದ ನೀವು ಏನಾದರೂ ಸಾಧನೆ ಮಾಡಲು ಹೊರಟ್ಟಿದ್ದರೆ, ಏನೇ ಕೆಲಸ ಮಾಡಿದರೂ ನಂಬಿಕೆಯಿಂದ ಮಾಡಿ. ಆಗ ಮಾತ್ರ ನೀವು ಯಶಸ್ಸಿನ ಹಾದಿಯಲ್ಲಿ ಮುನ್ನಡೆಯುತ್ತೀರಿ.
ಮನುಷ್ಯನಿಗೆ ಕೆಟ್ಟ ಸಹವಾಹಸ ಕಲ್ಲಿದ್ದಲು ಇದ್ದಂತೆ ಎಂದು ಭಗವದ್ಗೀತೆಯಲ್ಲಿ ಹೇಳಲಾಗಿದೆ. ಕಲ್ಲಿದ್ದಲು ಬಿಸಿಯಾದಾಗ ಕೈಗಳನ್ನು ಸುಡುತ್ತದೆ. ತುಂಬಾ ತಣ್ಣಗೆ ಇದ್ದಾಗ ಕೈಗಳನ್ನು ಕಪ್ಪಾಗಿಸುತ್ತದೆ.
‘ಕೋಪವು ಬುದ್ದಿಯನ್ನು ನಾಶಪಡಿಸುತ್ತದೆ’
ಯಾವುದೇ ಪ್ರಯತ್ನದಲ್ಲಿ ಯಶಸ್ಸನ್ನು ಸಾಧಿಸಲು ಮನಸ್ಸಿನ ಮೇಲೆ ನಿಯಂತ್ರಣ ಅತ್ಯಗತ್ಯ ಎಂದು ಶ್ರೀಕೃಷ್ಣ ಹೇಳುತ್ತಾನೆ. ಕೆಲಸ ಮಾಡುವಾಗ ನಿಮ್ಮ ಮನಸ್ಸನ್ನು ಯಾವಾಗಲೂ ಶಾಂತವಾಗಿ ಮತ್ತು ಸ್ಥಿರವಾಗಿ ಇಟ್ಟುಕೊಳ್ಳಿ. ಕೋಪವು ಬುದ್ದಿಯನ್ನು ನಾಶಪಡಿಸುತ್ತದೆ. ಈಗಾಗಲೇ ಮಾಡಿರುವ ಕೆಲಸವನ್ನೂ ಹಾಳು ಮಾಡುತ್ತದೆ. ಆದ್ದರಿಂದ ನಿಮ್ಮ ಮನಸ್ಸನ್ನು ಶಾಂತವಾಗಿಡಲು ಪ್ರಯತ್ನಿಸಬೇಕು.
‘ನಿಮ್ಮಿಂದ ಏನನ್ನು ಕಳೆದುಕೊಳ್ಳುತ್ತೀರೋ ಅದು ನಿಮ್ಮದಲ್ಲ’
ಯಾವುದೇ ಪ್ರಯತ್ನದಲ್ಲಿ ಯಶಸ್ಸನ್ನು ಸಾಧಿಸಲು ಮನಸ್ಸಿನ ಮೇಲೆ ನಿಯಂತ್ರಣ ಅತ್ಯಗತ್ಯ ಎಂದು ಶ್ರೀ ಕೃಷ್ಣ ಗೀತೆಯಲ್ಲಿ ಹೇಳುತ್ತಾನೆ. ಕೆಲಸ ಮಾಡುವಾಗ ನಿಮ್ಮ ಮನಸ್ಸನ್ನು ಯಾವಾಗಲೂ ಶಾಂತವಾಗಿ ಮತ್ತು ಸ್ಥಿರವಾಗಿರಿಸಿಕೊಳ್ಳಿ. ಕೋಪವು ಬುದ್ಧಿಯನ್ನು ನಾಶಪಡಿಸುತ್ತದೆ ಮತ್ತು ಮಾಡಿದ ಕೆಲಸವನ್ನು ಹಾಳು ಮಾಡುತ್ತದೆ. ಆದ್ದರಿಂದ ನಿಮ್ಮ ಮನಸ್ಸನ್ನು ಶಾಂತವಾಗಿಡಲು ಪ್ರಯತ್ನಿಸಿ. ನಿಮ್ಮಿಂದ ಏನನ್ನು ಕಸಿದುಕೊಳ್ಳಲಾಗುತ್ತದೆಯೋ ಅದು ನಿಮ್ಮದಲ್ಲ ಎಂದು ಶ್ರೀಕೃಷ್ಣ ಹೇಳಿದ್ದಾನೆ.
ಮಹಾಭಾರತದ ಯುದ್ಧ ಆರಂಭಕ್ಕೂ ಮುನ್ನವೇ ಎದುರಾಳಿ ಬಣದಲ್ಲಿ ಇದ್ದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸುತ್ತಾನೆ. ಆಗ ಶ್ರೀಕೃಷ್ಣನು ಪಾಂಡವರಲ್ಲಿ ಒಬ್ಬರಾದ ಅರ್ಜುನನಿಗೆ ಉಪದೇಶ ನೀಡುತ್ತಾನೆ.
ಅರ್ಜುನನ ಮುಂದೆ ಬೃಹತ್ ಸೈನ್ಯ ನಿಂತಿರುತ್ತದೆ. ಆ ಸೈನ್ಯದಲ್ಲಿರುವ ಸಾರಥಿಗಳಲ್ಲಿ ಈತನ ಚಿಕ್ಕಪ್ಪ, ತಾಯಿಯ ಅಣ್ಣ, ತಾತ ಹಾಗೂ ಸಹೋದರರು ಇರುತ್ತಾರೆ. ಈ ವೇಳೆ ಅರ್ಜುನ, ನಾನು ನನ್ನ ಸ್ವಂತ ಜನರನ್ನು ಹೇಗೆ ಕೊಲ್ಲುವುದು ಎಂದು ಮನಸ್ಸಿನಲ್ಲೇ ಯೋಚನೆ ಮಾಡಿ ಯುದ್ಧಭೂಮಿಯಲ್ಲಿ ತನ್ನ ಬಿಲ್ಲನ್ನು ಕೆಳಗೆ ಇಳಿಸುತ್ತಾನೆ. ಆಗ ಅರ್ಜುನನಿಗೆ ಶ್ರೀಕೃಷ್ಣ ಮೇಲಿನಂತೆ ಉಪದೇಶ ನೀಡುತ್ತಾನೆ. ಇತರರನ್ನು ಮೋಸ ಮಾಡುವವನು ತಾನೂ ಸ್ವತಃ ಮೋಸ ಹೋಗುತ್ತಾನೆ ಎನ್ನುವುದು ಶ್ರೀಕೃಷ್ಣ ಮಾತು.
ಭಗವದ್ಗೀತೆಯಲ್ಲಿ 18 ಅಧ್ಯಾಯಗಳು, 720 ಶ್ಲೋಕಗಳನ್ನು ಹೇಳಾಗಿದೆ. ಇದರಲ್ಲಿನ ಧರ್ಮೋಪದೇಶಗಳು ಮನುಷ್ಯರನ್ನು ಉತ್ತಮ ವ್ಯಕ್ತಿಗಳನ್ನಾಗಿ ರೂಪಿಸಲು ಸಹಕಾರಿಯಾಗಿದೆ. ಇದರಲ್ಲಿನ ಅಂಶಗಳನ್ನು ಜೀವನದಲ್ಲಿ ಅವಳಡಿಸಿಕೊಂಡಾಗ ಶಾಂತಿ, ನೆಮ್ಮದಿ ಹಾಗೂ ಅನ್ಯೋನ್ಯವಾಗಿ ಬಾಳಿ ಬದುಕಬಹುದಾಗಿದೆ.
ವಿಭಾಗ