ಭಗವದ್ಗೀತೆ:ಜಗತ್ತಿನಲ್ಲಿ ಅತ್ಯಂತ ಸಂತೋಷದ ವ್ಯಕ್ತಿ ಯಾರು; ಶ್ರೀಕೃಷ್ಣನ ಮಾತಿನ ಅರ್ಥ ತಿಳಿಯಿರಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಭಗವದ್ಗೀತೆ:ಜಗತ್ತಿನಲ್ಲಿ ಅತ್ಯಂತ ಸಂತೋಷದ ವ್ಯಕ್ತಿ ಯಾರು; ಶ್ರೀಕೃಷ್ಣನ ಮಾತಿನ ಅರ್ಥ ತಿಳಿಯಿರಿ

ಭಗವದ್ಗೀತೆ:ಜಗತ್ತಿನಲ್ಲಿ ಅತ್ಯಂತ ಸಂತೋಷದ ವ್ಯಕ್ತಿ ಯಾರು; ಶ್ರೀಕೃಷ್ಣನ ಮಾತಿನ ಅರ್ಥ ತಿಳಿಯಿರಿ

ಕುರುಕ್ಷೇತ್ರದ ಯುದ್ಧದಲ್ಲಿ ಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ದೇವರ ಗೀತೆ ಎಂಬ ಅರ್ಥ ಬರುವ ಭಗವದ್ಗೀತೆ ವಿಶ್ವದಲ್ಲಿರುವ ಧರ್ಮಗ್ರಂಥಗಳಲ್ಲಿ ಒಂದಾಗಿದೆ. ಸತ್ಯದ ಮಾರ್ಗವನ್ನು ಅನುಸರಿಸುವುದು ಗೀತೆಯ ಅರ್ಥವಾಗಿದೆ. ಜಗತ್ತಿನಲ್ಲಿ ಅತ್ಯಂತ ಸಂತೋಷವಾಗಿರುವ ವ್ಯಕ್ತಿ ಯಾರು ಎಂಬ ಪ್ರಶ್ನೆಗೆ ಶ್ರೀಕೃಷ್ಣ ಏನು ಹೇಳಿದ್ದಾನೆ ನೋಡಿ.

ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.

ಜಗತ್ತಿನಲ್ಲಿ ಅ್ಯಂತ ಸಂತೋಷವಾಗಿರುವವರು ಯಾರು? ಶ್ರೀಕೃಷ್ಣ (Lord Krishna) ಅರ್ಜುನನಿಗೆ ಏನು ಸಲಹೆ ನೀಡುತ್ತಾನೆ ಎಂಬುದನ್ನು ಈ ದಿನ (ಆಗಸ್ಟ್ 24, ಗುರುವಾರ) ತಿಳಿಯೋಣ. ಪ್ರತಿಯೊಬ್ಬ ವ್ಯಕ್ತಿಯು ಕೋಪದ ಸಮಯದಲ್ಲಿ ಸ್ವಲ್ಪ ಸ್ವನಿಯಂತ್ರಣವನ್ನು ಹೊಂದಿರಬೇಕು. ತಪ್ಪು ಮಾಡಿದಾಗ ತಲೆಬಾಗಬೇಕು. ಈ ವಿಧಾನವನ್ನು ಅನುಸರಿಸಿದರೆ, ಪ್ರಪಂಚದ ಎಲ್ಲಾ ಸಮಸ್ಯೆಗಳು ಪರಿಹಾರವಾಗುತ್ತವೆ. ಕೋಪ ಮತ್ತು ಅಂಹಕಾರ ಎರಡೂ ವ್ಯಕ್ತಿಯನ್ನು ನಾಶಮಾಡುತ್ತವೆ.

ದುಃಖದಲ್ಲಿರುವವರನ್ನು ಎಂದಿಗೂ ಕೈಬಿಡಬಾರದು

ತಪ್ಪನ್ನು ತಪ್ಪು ಎಂದು ಕರೆಯುವ ಸಾಮರ್ಥ್ಯ ಇಲ್ಲದಿದ್ದರೆ ನಿಮ್ಮ ಪ್ರತಿಭೆ ನಿಷ್ಪ್ರಯೋಕವಾಗುತ್ತದೆ ಎಂದು ಶ್ರೀಕೃಷ್ಣ ಹೇಳಿದ್ದಾನೆ. ನಿನ್ನನ್ನು ನೋಯಿಸುವವರಿಗೂ ತೊಂದರೆಯಾಗುತ್ತದೆ, ಅದೃಷ್ಟವಿದ್ದರೆ ದೇವರು ಇದನ್ನು ನೋಡುವ ಅವಕಾಶವನ್ನು ನೀಡುತ್ತಾನೆ. ಅದಕ್ಕಾಗಿಯೇ ದುಃಖದಲ್ಲಿ ಇರುವವರನ್ನು ಎಂದಿಗೂ ಕೈಬಿಡಬಾರದು ಎಂದು ಗೀತೆಯಲ್ಲಿ ಬರೆಯಲಾಗಿದೆ.

ನಿಮ್ಮ ಸ್ವಂತ ಆಲೋಚನೆಗಳು ಪ್ರೇರಣೆಯ ದೊಡ್ಡ ಮೂಲ

ಭಗವದ್ಗೀತೆಯಲ್ಲಿ ಶ್ರೀಕೃಷ್ಣನು ಹೇಳುವ ಪ್ರಕಾರ, ವಿಜಯಕ್ಕಾಗಿ ತನ್ನನ್ನು ತಾನು ಪ್ರೇರೇಪಿಸಿಕೊಳ್ಳಬೇಕು. ನಿಮ್ಮ ಸ್ವಂತ ಆಲೋಚನೆಗಳು ಪ್ರೇರಣೆಯ ದೊಡ್ಡ ಮೂಲವಾಗಿದೆ. ಆದ್ದರಿಂದ ದೊಡ್ಡದಾಗಿ ಯೋಜಿಸಿ ಮತ್ತು ನಿಮ್ಮನ್ನು ನೀವು ಗೆಲ್ಲಲು ಪ್ರೇರೇಪಿಸಿಕೊಳ್ಳಬೇಕು.

ಜಗತ್ತಿನಲ್ಲಿ ಅತ್ಯಂತ ಸಂತೋಷವಾಗಿರುವವರು ಯಾರು?

ಇತರರಿಂದ ಏನನ್ನಾದರೂ ನಿರೀಕ್ಷಿಸುವುದು ವ್ಯರ್ಥವೆಂದು ಅರಿತುಕೊಳ್ಳುವವರೇ ಜಗತ್ತಿನಲ್ಲಿ ಅತ್ಯಂತ ಸಂತೋಷವಾಗಿರುವವರು. ವ್ಯಕ್ತಿಯ ದುಃಖಕ್ಕೆ ನಿರೀಕ್ಷೆಯೇ ಕಾರಣ ಎಂದು ಶ್ರೀಕೃಷ್ಣ ಹೇಳಿರುವುದಾಗಿ ಗೀತೆಯಲ್ಲಿ ಬರೆಯಲಾಗಿದೆ.

ಯಾವುದೇ ವ್ಯಕ್ತಿಯು ತಾನು ಏನಾಗಬೇಕೆಂದು ಬಯಸುತ್ತಾನೋ ಅದನ್ನು ಸಾಧಿಸುತ್ತಾನೆ. ಬಯಸಿದ್ದಂತೆ ಆಗಬಹುದು. ಆತನು ನಿರಂತರವಾಗಿ ಧ್ಯಾನ ಮಾಡುತ್ತಿದ್ದರೆ ಮತ್ತು ಅವನು ಬಯಸಿದ್ದಕ್ಕಾಗಿ ನಂಬಿಕೆಯಿಂದ ಶ್ರಮಿಸಿದರೆ ವ್ಯಕ್ತಿಯು ತನ್ನ ಪ್ರಯತ್ನಗಳು ಸರಿಯಾದ ದಿಕ್ಕಿನಲ್ಲಿವೆ ಎಂದು ನಂಬಬೇಕು ಎಂದು ಶ್ರೀಕೃಷ್ಣ ಹೇಳಿದ್ದಾನೆ.

ಶ್ರೀಕೃಷ್ಣನು ಪಾಂಡವರಲ್ಲಿ ಒಬ್ಬರಾದ ಅರ್ಜುನನಿಗೆ ನೀಡಿದ ಉಪದೇಶವಿದು

ಮಹಾಭಾರತದ ಯುದ್ಧ ಆರಂಭಕ್ಕೂ ಮುನ್ನವೇ ಎದುರಾಳಿ ಬಣದಲ್ಲಿ ಇದ್ದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸುತ್ತಾನೆ. ಆಗ ಶ್ರೀಕೃಷ್ಣನು ಪಾಂಡವರಲ್ಲಿ ಒಬ್ಬರಾದ ಅರ್ಜುನನಿಗೆ ಉಪದೇಶ ನೀಡುತ್ತಾನೆ.

ಅರ್ಜುನನ ಮುಂದೆ ಬೃಹತ್ ಸೈನ್ಯ ನಿಂತಿರುತ್ತದೆ. ಆ ಸೈನ್ಯದಲ್ಲಿರುವ ಸಾರಥಿಗಳಲ್ಲಿ ಈತನ ಚಿಕ್ಕಪ್ಪ, ತಾಯಿಯ ಅಣ್ಣ, ತಾತ ಹಾಗೂ ಸಹೋದರರು ಇರುತ್ತಾರೆ. ಈ ವೇಳೆ ಅರ್ಜುನ, ನಾನು ನನ್ನ ಸ್ವಂತ ಜನರನ್ನು ಹೇಗೆ ಕೊಲ್ಲುವುದು ಎಂದು ಮನಸ್ಸಿನಲ್ಲೇ ಯೋಚನೆ ಮಾಡಿ ಯುದ್ಧಭೂಮಿಯಲ್ಲಿ ತನ್ನ ಬಿಲ್ಲನ್ನು ಕೆಳಗೆ ಇಳಿಸುತ್ತಾನೆ. ಆಗ ಅರ್ಜುನನಿಗೆ ಶ್ರೀಕೃಷ್ಣ ಉಪದೇಶ ನೀಡುತ್ತಾನೆ. ಇತರರನ್ನು ಮೋಸ ಮಾಡುವವನು ತಾನೂ ಸ್ವತಃ ಮೋಸ ಹೋಡುತ್ತಾನೆ ಎನ್ನುವುದು ಶ್ರೀಕೃಷ್ಣನ ಮಾತು.

ಭಗವದ್ಗೀತೆಯಲ್ಲಿ 18 ಅಧ್ಯಾಯಗಳು, 720 ಶ್ಲೋಕಗಳನ್ನು ಹೇಳಲಾಗಿದೆ. ಇದರಲ್ಲಿನ ಧರ್ಮೋಪದೇಶಗಳು ಮನುಷ್ಯರನ್ನು ಉತ್ತಮ ವ್ಯಕ್ತಿಗಳನ್ನಾಗಿ ರೂಪಿಸಲು ಸಹಕಾರಿಯಾಗಿದೆ. ಇದರಲ್ಲಿನ ಅಂಶಗಳನ್ನು ಜೀವನದಲ್ಲಿ ಅವಳಡಿಸಿಕೊಂಡಾಗ ಶಾಂತಿ, ನೆಮ್ಮದಿ ಹಾಗೂ ಅನ್ಯೋನ್ಯವಾಗಿ ಬಾಳಿ ಬದುಕಬಹುದಾಗಿದೆ. ಭಗವದ್ಗೀತೆಯ ಸಂದೇಶ ಇಂದಿಗೂ ಪ್ರಸ್ತುತವೆನಿಸಿದೆ. ಗೀತೆಯಲ್ಲಿರುವ ಮತ್ತಷ್ಟು ಉಪದೇಶಗಳನ್ನು ತಿಳಿಯಲು ಈ ಕೆಳಗಿನ ಸಂಬಂಧಿತ ಲೇಖನಗಳನ್ನು ಓದಿ.

Whats_app_banner

ವಿಭಾಗ

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.