ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಭಗವದ್ಗೀತೆ: ಬದುಕಿನ ಮಹತ್ವ ತಿಳಿದ ಮನುಷ್ಯನಿಗೆ ಕಶ್ಮಲ ಭೂಷಣವಲ್ಲ; ಗೀತೆಯಲ್ಲಿ ಅರ್ಜುನನಿಗೆ ಶ್ರೀಕೃಷ್ಣ ಹೇಳಿದ ಮಾತಿನ ಅರ್ಥ ಹೀಗಿದೆ

ಭಗವದ್ಗೀತೆ: ಬದುಕಿನ ಮಹತ್ವ ತಿಳಿದ ಮನುಷ್ಯನಿಗೆ ಕಶ್ಮಲ ಭೂಷಣವಲ್ಲ; ಗೀತೆಯಲ್ಲಿ ಅರ್ಜುನನಿಗೆ ಶ್ರೀಕೃಷ್ಣ ಹೇಳಿದ ಮಾತಿನ ಅರ್ಥ ಹೀಗಿದೆ

ಕುರುಕ್ಷೇತ್ರದ ಯುದ್ಧದಲ್ಲಿ ಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಸತ್ಯದ ಮಾರ್ಗವನ್ನು ಅನುಸರಿಸುವುದು ಗೀತೆಯ ಅರ್ಥವಾಗಿದೆ. ಬದುಕಿನ ಮಹತ್ವ ತಿಳಿದ ಮನುಷ್ಯನಿಗೆ ಕಶ್ಮಲ ಭೂಷಣವಲ್ಲ ಎಂದು ಅರ್ಜುನನಿಗೆ ಶ್ರೀಕೃಷ್ಣ ಹೇಳಿದ್ದು ಯಾಕೆ ಅನ್ನೋದನ್ನ ಇಲ್ಲಿ ತಿಳಿಯೋಣ.

ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.

ತಂ ತಥಾ ಕೃಪಯಾಮಿಷ್ಟಮಶ್ರುಪೂರ್ಣಾಕುಲೇಕ್ಷಣಮ್|

ವಿಷೀದನ್ತಮ್ ಇದಂ ವಾಕ್ಯಮುವಾಚ ಮಧುಸೂದನಃ ||1||

ಸಂಜಯನು ನುಡಿದನು - ಕರುಣೆಯಿಂದ ತುಂಬಿ ವಿಷಣ್ಣಮನಸ್ಕನಾಗಿ ಕಂಬನಿ ತುಂಬಿದ ಅರ್ಜುನನನ್ನು ನೋಡಿ ಮಧುಸೂದನನಾದ ಕೃಷ್ಣನು ಹೀಗೆ ಹೇಳಿದನು.

ಲೌಕಿಕ ಅನುಕಂಪ, ದುಃಖ ಮತ್ತು ಕಂಬನಿ ಇವೆಲ್ಲ ಆತ್ಮದ ಬಗ್ಗೆ ಅಜ್ಞಾನದ ಲಕ್ಷಣಗಳು. ಅಮರವಾದ ಆತ್ಮದ ಬಗ್ಗೆ ಅನುಕಂಪವಿರುವುದೇ ಆತ್ಮಸಾಕ್ಷಾತ್ಕಾರ. ಈ ಶ್ಲೋಕದಲ್ಲಿ ಮಧುಸೂದನ ಎನ್ನುವ ಪದ ಮಹತ್ವದ್ದು. ಶ್ರೀಕೃಷ್ಣನು ಮಧುವೆನ್ನುವ ರಾಕ್ಷಸನನ್ನು ಕೊಂದಿದ್ದ. ಈಗ ಅರ್ಜುನನು ತನ್ನ ಕರ್ತವ್ಯಪಾಲನೆಯಲ್ಲಿ ಅವನನ್ನು ಆವರಿಸಿದ್ದ ತಪ್ಪು ತಿಳುವಳಿಕೆ ಎಂಬ ರಾಕ್ಷಸನನ್ನು ಕೃಷ್ಣನು ಕೊಲ್ಲಬೇಕೆಂದು ಬಯಸಿದನು.

ಯಾವ ವಿಷಯಕ್ಕೆ ಅಥವಾ ಯಾರ ವಿಷಯದಲ್ಲಿ ಅನುಕಂಪ ತೋರಿಸಬೇಕು ಎಂದು ಯಾರಿಗೂ ತಿಳಿಯುವುದಿಲ್ಲ. ಮುಳುಗುತ್ತಿರುವ ಮನುಷ್ಯನ ಉಪಿನ ಬಗ್ಗೆ ಅನುಕಂಪ ತೋರಿಸುವುದರಲ್ಲಿ ಅರ್ಥವಿಲ್ಲ. ಅಜ್ಞಾನ ಸಾಗರದಲ್ಲಿ ಮುಳುಗುತ್ತಿರುವವನ ಹೊರ ಉಡುಪನ್ನು, ಎಂದರೆ, ಜಡ ಐಹಿಕ ದೇಹವನ್ನು ರಕ್ಷಿಸುವ ಮಾತ್ರದಿಂದ ಅವನನ್ನು ರಕ್ಷಿಸಲು ಸಾಧ್ಯವಿಲ್ಲ. ಇದನ್ನು ತಿಳಿಯದೆ ಹೊರ ಉಡುಪಿಗಾಗಿ ಅಳುವವನ್ನು ಶೂದ್ರ ಎಂದು, ಅಥವಾ ಅನವಶ್ಯಕವಾಗಿ ಗೋಳಾಡುವವನು ಎಂದು ಕರೆಯುತ್ತಾರೆ.

ಅರ್ಜುನನು ಒಬ್ಬ ಕ್ಷತ್ರಿಯ. ಅವನಿಂದ ಇಂತಹ ನಡವಳಿಕೆಯನ್ನು ನಿರೀಕ್ಷಿಸುವುದಿಲ್ಲ. ಆದರೆ ಶ್ರೀಕೃಷ್ಣನು ಅಜ್ಞಾನಿಯ ದುಃಖವನ್ನು ಚದುರಿಸಿಬಿಡಬಲ್ಲ. ಈ ಉದ್ದೇಶಕ್ಕಾಗಿ ಅವನು ಭಗವದ್ಗೀತೆಯನ್ನು ಹೇಳಿದ್ದು. ಈ ಅಧ್ಯಾಯವು ಪರಮಾಧಿಕಾರಿಯಾದ ಶ್ರೀಕೃಷ್ಣನು ವಿವರಿಸಿದಂತೆ ಜಡದೇಹದ ಮತ್ತು ಆತ್ಮದ ವಿಶ್ಲೇಷಣಾತ್ಮಕ ಅಧ್ಯಯದಿಂದ ನಮಗೆ ಆತ್ಮ ಸಾಕ್ಷಾತ್ಕಾರದ ವಿಷಯವನ್ನು ತಿಳಿಸಿಕೊಡುತ್ತದೆ. ಕರ್ಮಫಲದಲ್ಲಿ ಆಸಕ್ತಿಯಿಲ್ಲದೆ ಕೆಲಸ ಮಾಡುತ್ತಾ ಆತ್ಮದ ಕಲ್ಪನೆಯಲ್ಲಿ ದೃಢವಾಗಿ ನೆಲೆಗೊಂಡಿದ್ದರೆ ಮಾತ್ರ ಈ ಸಾಕ್ಷಾತ್ಕಾರವು ಸಾಧ್ಯ.

ಕುತಾಸ್ತ್ವಾ ಕಶ್ಮಲಮಿದಂ ವಿಷಮೇ ಸಮುಪಸ್ಥಿತಮ್|

ಅನಾರ್ಯಜುಷ್ಟಮಸ್ವರ್ಗ್ಯಮಕೀರ್ತಿಕರಮರ್ಜನ||2||

ದೇವೋತ್ತಮ ಪರಮ ಪುರುಷನು ಹೇಳಿದನು - ಪ್ರಿಯ ಅರ್ಜುನ, ಈ ಕಶ್ಮಲವು ನಿನಗೆ ಹೇಗೆ ಬಂದಿತು? ಬದುಕಿನ ಮಹತ್ವವನ್ನು ತಿಳಿದ ಮನುಷ್ಯನಿಗೆ ಈ ಕಶ್ಮಲವು ಭೂಷಣವಲ್ಲ; ಅನಾರ್ಯವಾದದ್ದು. ಇಂತಹ ಕಶ್ಮಲವು ಸ್ವರ್ಗಕ್ಕೆ ಕೊಂಡೊಯ್ಯುವುದಿಲ್ಲ, ಅಪಕೀರ್ತಿಗೆ ಕಾರಣವಾಗುತ್ತದೆ.

ಕೃಷ್ಣನೂ, ದೇವೋತ್ತಮ ಪರಮ ಪುರಷನೂ ಅಭಿನ್ನ. ಆದುದರಿಂದಲೇ ಗೀತೆಯ ಉದ್ದಕ್ಕೂ ಶ್ರೀಕೃಷ್ಣನನ್ನು ಭಗವಾನ್ ಎಂದೇ ಕರೆಯಲಾಗಿದೆ. ಭಗವಾನನು ಪರಮಸತ್ಯದಲ್ಲಿ ಅಂತಿಮ. ಪರಮಸತ್ಯದ ಸಾಕ್ಷಾತ್ಕಾರವು ತಿಳುವಳಿಕೆಯ ಮೂರು ಅವಸ್ಥೆಗಳಲ್ಲಿ ಬರುತ್ತದೆ. ಈ ಮೂರು ಅವ್ಯವಸ್ಥೆಗಳೆಂದರೆ ಬ್ರಹ್ಮನ್ ಅಥವಾ ನಿರಾಕಾರದ ಸರ್ವವ್ಯಾಪಿಯಾದ ಆತ್ಮ; ಪರಮಾತ್ಮ ಅಥವಾ ಎಲ್ಲ ಜೀವಿಗಳ ಹೃದಯಗಳಲ್ಲಿ ನೆಲೆಸಿರುವ ಅಂತರ್ಯಾಮಿಯಾದ ಪರಮ ಆತ್ಮ; ಮೂರನೆಯದಾಗಿ ಭಗವಾನ್ ಅಥವಾ ದೇವೋತ್ತಮನಾದ ಪರಮ ಪುರುಷ ಶ್ರೀಕೃಷ್ಣ.

ವಿಭಾಗ