Bhagavad Gita: ಭಗವಂತನಲ್ಲಿ ಪೂರ್ಣವಾಗಿ ತೊಡಗಿಸಿಕೊಳ್ಳಲು ಮನುಷ್ಯ ಈ 9 ಕಾರ್ಯ ಮಾಡಬೇಕು; ಗೀತೆಯ ಅರ್ಥ ತಿಳಿಯಿರಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Bhagavad Gita: ಭಗವಂತನಲ್ಲಿ ಪೂರ್ಣವಾಗಿ ತೊಡಗಿಸಿಕೊಳ್ಳಲು ಮನುಷ್ಯ ಈ 9 ಕಾರ್ಯ ಮಾಡಬೇಕು; ಗೀತೆಯ ಅರ್ಥ ತಿಳಿಯಿರಿ

Bhagavad Gita: ಭಗವಂತನಲ್ಲಿ ಪೂರ್ಣವಾಗಿ ತೊಡಗಿಸಿಕೊಳ್ಳಲು ಮನುಷ್ಯ ಈ 9 ಕಾರ್ಯ ಮಾಡಬೇಕು; ಗೀತೆಯ ಅರ್ಥ ತಿಳಿಯಿರಿ

Bhagavad Gita Updesh: ಮನುಷ್ಯ ಭಗವಂತನಲ್ಲಿ ಪೂರ್ಣವಾಗಿ ತೊಡಗಿಸಿಕೊಳ್ಳಲು ಈ 9 ಕಾರ್ಯಗಳನ್ನು ಮಾಡಬೇಕು ಎಂಬುದರ ಅರ್ಥವನ್ನು ಭಗವದ್ಗೀತೆಯ 6ನೇ ಅಧ್ಯಾಯದ ಶ್ಲೋಕ 18 ರಲ್ಲಿ ತಿಳಿಯಿರಿ.

ಮನುಷ್ಯ ಭಗವಂತನಲ್ಲಿ ಪೂರ್ಣವಾಗಿ ತೊಡಗಿಸಿಕೊಳ್ಳಲು ಈ 9 ಕಾರ್ಯ ಮಾಡಬೇಕು ಎಂಬುರದ ಅರ್ಥವನ್ನು ಭಗವದ್ಗೀತೆಯಲ್ಲಿ ತಿಳಿಯಿರಿ.
ಮನುಷ್ಯ ಭಗವಂತನಲ್ಲಿ ಪೂರ್ಣವಾಗಿ ತೊಡಗಿಸಿಕೊಳ್ಳಲು ಈ 9 ಕಾರ್ಯ ಮಾಡಬೇಕು ಎಂಬುರದ ಅರ್ಥವನ್ನು ಭಗವದ್ಗೀತೆಯಲ್ಲಿ ತಿಳಿಯಿರಿ.

ಅಧ್ಯಾಯ 6- ಧ್ಯಾನ ಯೋಗ: ಶ್ಲೋಕ - 18

ಯದಾ ವಿನಿಯತಂ ಚಿತ್ತಮಾತ್ಮನ್ಯೇವಾವತಿಷ್ಠತೇ |

ನಿಸ್ಪೃಹಃ ಸರ್ವಕಾಮೇಭ್ಯೂ ಯುಕ್ತ ಇತ್ಯುಚ್ಯತೇ ತದಾ ||18||

Bhagavad Gita Updesh in Kannada: ಯೋಗಾಭ್ಯಾಸದಿಂದ ಯೋಗಿಯು ತನ್ನ ಮಾನಸಿಕ ಚಟುವಟಿಕೆಗಳನ್ನು ಶಿಸ್ತಿಗೆ ಒಳಪಡಿಸಿ, ಯಾವುದೇ ಐಹಿಕ ಬಯಕೆಗಳಲ್ಲಿದೆ ಆಧ್ಯಾತ್ಮಿಕಯಲ್ಲಿ ನೆಲೆಸಿದಾಗ ಆತನನ್ನು ಯೋಗದಲ್ಲಿ ವ್ಯವಸ್ಥಿತವಾಗಿರುವವನೆಂದು ಹೇಳುತ್ತಾರೆ.

ಸಾಮಾನ್ಯ ಮನುಷ್ಯನ ಕಾರ್ಯಗಳಿಗೂ ಯೋಗಿಯ ಕಾರ್ಯಗಳಿಗೂ ವ್ಯತ್ಯಾಸವೆಂದರೆ ಯೋಗಿಗೆ ಯಾವುದೇ ಬಗೆಯ ಐಹಿಕ ಬಯಕೆಗಳು - ಇವುಗಳಲ್ಲಿ ಲೈಂಗಿಕ ಬಯಕೆಯೇ ಮುಖ್ಯವಾದದ್ದು - ಇರುವುದಿಲ್ಲ ಎನ್ನುವುದು. ಪರಿಪೂರ್ಣ ಯೋಗಿಯು ಮಾನಸಿಕ ಚಟುವಟಿಕೆಗಳಲ್ಲಿ ಎಂತಹ ಶಿಸ್ತನ್ನು ಸಾಧಿಸಿರುತ್ತಾನೆ ಎಂದರೆ ಯಾವುದೇ ಬಗೆಯ ಐಹಿಕ ಬಯಕೆಯು ಅವನನ್ನು ಕಲಕಲಾರದು. ಈ ಪರಿಪೂರ್ಣ ಹಂತವನ್ನು ಕೃಷ್ಣಪ್ರಜ್ಞೆಯಲ್ಲಿರುವವರು ತಂತಾವೇ ಮುಟ್ಟಬಲ್ಲರು. ಇದನ್ನು ಶ್ರೀಮದ್ಭಾಗವತದಲ್ಲಿ (9.4.18-20) ಹೀಗೆ ಹೇಳಿದೆ -

ಸ ವೈ ಮನಃ ಕೃಷ್ಣಪದಾರವಿನ್ದ ಯೋರ್

ವಚಾಂಸಿ ವೈಕುಂಠ ಗುರ್ಣಾನುವರ್ಣನೇ |

ಕರೌ ಹರೇರ್ ಮನ್ದಿರಮಾರ್ಜನಾದಿಷು

ಶ್ರುತಿಂ ಚಕಾರಾಚ್ಯುತ ಸತ್ಕಥೋದಯೇ ||

ಮುಕುನ್ದಲಿನ್ಗಾಲಯದರ್ಶನೇ ದೃಶೌ

ತದ್‌ಭೃತ್ಯಗಾತ್ರಸ್ಪರ್ಶೇಂಗಸಂಗಮಮ್ |

ಫ್ರಾಣಂ ಚ ತತ್ಪಾದ ಸರೋಜ ಸೌರಭೇ

ಶ್ರೀಮತ್ತುಲಸ್ಯಾ ರಸನಾಂ ತದರ್ಪಿತೇ ||

ಪಾದೌ ಹರೇಃ ಕ್ಷೇತ್ರಪದಾನುಸರ್ಪಣೇ

ಶಿರೋ ಹೃಷಿಕೇಶಪದಾಭಿವನ್ದನೇ |

ಕಾಮಂ ಚ ದಾಸ್ಯೇ ನ ತು ಕಾಮಕಾಮ್ಯಯಾ

ಯಥೋತ್ತಮಶ್ಲೋಕಜನಾಶ್ರಯಾ ರತಿಃ ||

ಪರಿಶುದ್ಧ ಭಕ್ತ ರಾಜ ಅಂಬರೀಷನು ಶ್ರೀಕೃಷ್ಣನಿಗಾಗಿ ಮಾಡಿದ ಕಾರ್ಯಗಳಿವು

ರಾಜ ಅಂಬರೀಷನು ಮೊಟ್ಟಮೊದಲು ತನ್ನ ಮನಸ್ಸನ್ನು ಶ್ರೀಕೃಷ್ಣನ ಪಾದಕಮಲಗಳಲ್ಲಿ ನಿಲ್ಲಿಸಿದನು. ಅನಂತರ ಒಂದರ ಅನಂತರ ಒಂದರಂತೆ ತನ್ನ ಮಾತುಗಳನ್ನು ಭಗವಂತನ ದಿವ್ಯಗುಣಗಳನ್ನು ವರ್ಣಿಸುವುದರಲ್ಲಿಯೂ, ತನ್ನ ಕೈಗಳನ್ನು ಭಗವಂತನ ದೇವಾಲಯವನ್ನು ಒರಸುವುದರಲ್ಲಿಯೂ, ತನ್ನ ಕಿವಿಗಳನ್ನು ಭಗವಂತನ ಲೀಲೆಗಳನ್ನು ಕೇಳುವುದರಲ್ಲಿಯೂ, ತನ್ನ ಕಣ್ಣುಗಳನ್ನು ಭಗವಂತನ ದಿವ್ಯ ರೂಪಗಳ ದರ್ಶನದಲ್ಲಿಯೂ, ತನ್ನ ದೇಹವನ್ನ ಭಕ್ತರ ದೇಹಗಳ ಅಸ್ವಾದಿಸುವುದರಲ್ಲಿಯೂ, ತನ್ನ ನಾಲಿಗೆಯನ್ನು ಭಗವಂತನ ಪಾದಪದ್ಮಗಳಿಗೆ ಅರ್ಪಿಸಿದ ತುಳಸೀದಳವನ್ನು ಸವಿಯುವುದರಲ್ಲಿಯೂ, ತನ್ನ ಕಾಲುಗಳನ್ನು ಪುಣ್ಯಕ್ಷೇತ್ರಗಳಿಗೂ ಭಗವಂತನ ದೇವಾಲಯಕ್ಕೂ ಹೋಗುವುದರಲ್ಲಿಯೂ, ತನ್ನ ಶಿರವನ್ನು ಭಗವಂತನಿಗೆ ಪ್ರಣಾಮ ಮಾಡುವುದರಲ್ಲಿಯೂ ಮತ್ತು ತನ್ನ ಬಯಕೆಗಳನ್ನು ಭಗವಂತನ ಮಹತ್ಕಾರ್ಯವನ್ನು ಮಾಡುವುದರಲ್ಲಿಯೂ ತೊಡಗಿಸಿದನು. ಈ ಎಲ್ಲ ಅಲೌಕಿಕ ಕಾರ್ಯಗಳು ಪರಿಶುದ್ಧ ಭಕ್ತರಿಗೆ ಯೋಗ್ಯವಾದವು.

ನಿರಾಕಾರ ಮಾರ್ಗವನ್ನು ಅನುಸರಿಸುವವರಿಗೆ ಈ ಆಧ್ಯಾತ್ಮಿಕ ಹಂತವನ್ನು ವ್ಯಕ್ತಿನಿಷ್ಠವಾಗಿ ನಿರೂಪಿಸಲು ಸಾಧ್ಯವಿಲ್ಲದಿರಬಹುದು. ಆದರೆ ಕೃಷ್ಣಪ್ರಜ್ಞೆಯಲ್ಲಿರುವ ಮನುಷ್ಯನಿಗೆ ಇದು ಬಹು ಸುಲಭ ಮತ್ತು ಕಾರ್ಯಸಾಧ್ಯ. ಮೇಲೆ ಹೇಳಿರುವ ಮಹಾರಾಜ ಅಂಬರೀಷನ ಕಾರ್ಯಗಳ ಮೇಲಿನ ವರ್ಣನೆಯಿಂದ ಇದು ಸ್ಪಷ್ಟವಾಗುತ್ತದೆ.

ನಿರಂತರ ಸ್ಮರಣೆಯಿಂದ ಮನಸ್ಸನ್ನು ಭಗವಂತನ ಪಾದಕಮಲಗಳಲ್ಲಿ ನಿಲ್ಲಿಸದಿದ್ದರೆ ಇಂತಹ ಅಲೌಕಿಕ ಕಾರ್ಯಗಳು ಸಾಧ್ಯವಾಗುವುದಿಲ್ಲ. ಆದುದರಿಂದ ಭಗವಂತನ ಭಕ್ತಿಸೇವೆಯಲ್ಲಿ ಈ ವಿಧಿತ ಕಾರ್ಯಗಳಿಗೆ ಅರ್ಚನೆ ಎಂದು ಹೆಸರು. ಹೀಗೆಂದರೆ ಎಲ್ಲ ಇಂದ್ರಿಯಗಳನ್ನು ಭಗವಂತನ ಸೇವೆಯಲ್ಲಿ ತೊಡಗಿಸುವುದು. ಇಂದ್ರಿಯಗಳಿಗೂ ವಯಸ್ಸಿಗೂ ಕೆಲಸಬೇಕು. ಬರಿಯ ನಿರಾಕರಣೆ ಕಾರ್ಯಸಾಧ್ಯವಲ್ಲ. ಆದುದರಿಂದ ಜನಸಾಮಾನ್ಯರಿಗೆ ಅದರಲ್ಲಿಯೂ ವಿಶೇಷವಾಗಿ ಸನ್ಯಾಸಾಶ್ರಮದಲ್ಲಿ ಇಲ್ಲದಿರುವವರಿಗೆ - ಮೇಲೆ ವರ್ಣಿಸಿದಂತೆ ಇಂದ್ರಿಯಗಳ ಮತ್ತು ಮನಸ್ಸಿನ ಆಧ್ಯಾತ್ಮಿಕ ಕರ್ತವ್ಯಮಗ್ನತೆಯು ಆಧ್ಯಾತ್ಮಿಕ ಸಾಧನೆಗೆ ಪರಿಪೂರ್ಣವಾದ ಪ್ರಕ್ರಿಯೆ. ಭಗವದ್ಗೀತೆಯಲ್ಲಿ ಇದನ್ನು ಯುಕ್ತ ಎಂದು ಕರೆದಿದೆ.

(This copy first appeared in Hindustan Times Kannada website. To read more like this please logon to kannada.hindustantimes.com )

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.