ಕನ್ನಡ ಸುದ್ದಿ  /  Astrology  /  Spiritual News Bhagavad Gita Updesh No Danger Person Who Engage With Lord Krishna Bhagavad Gita Quotes In Kannada Rmy

Bhagavad Gita: ಭಗವಂತನಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳುವ ವ್ಯಕ್ತಿಗೆ ಯಾವುದೇ ಅಪಾಯ ಇರುವುದಿಲ್ಲ; ಗೀತೆಯ ಅರ್ಥ ಹೀಗಿದೆ

Bhagavad Gita Updesh: ಭಗವಂತನಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳುವ ವ್ಯಕ್ತಿಗೆ ಯಾವುದೇ ಅಪಾಯ ಇರುವುದಿಲ್ಲ ಎಂಬುದರ ಬಗ್ಗೆ ಭಗವದ್ಗೀತೆಯಲ್ಲಿ ತಿಳಿಯಿರಿ.

ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.

ಅಧ್ಯಾಯ 6- ಧ್ಯಾನ ಯೋಗ:

ಯೋ ಮಾಂ ಪಶ್ಯತಿ ಸರ್ವತ್ರ ಸರ್ವಂ ಚ ಮಯಿ ಪಶ್ಯತಿ |

ತಸ್ಯಾಹಂ ನ ಪ್ರಣಶ್ಯಾಮಿ ಸ ಚ ಮೇ ನ ಪ್ರಣಶ್ಯತಿ ||30||

ಅನುವಾದ: ಯಾರು ನನ್ನನ್ನು ಎಲ್ಲೆಲ್ಲಿಯೂ ಕಾಣುತ್ತಾನೆಯೋ ಮತ್ತು ನನ್ನಲ್ಲಿ ಎಲ್ಲವನ್ನೂ ಕಾಣುತ್ತಾನೋ ಅವನು ನನ್ನನ್ನು ಯಾವಾಗಲೂ ಕಳೆದುಕೊಳ್ಳುವುದಿಲ್ಲ. ನಾನು ಅವನನ್ನು ಯಾವಾಗಲೂ ಕಳೆದುಕೊಳ್ಳುವುದಿಲ್ಲ.

ಭಾವಾರ್ಥ: ಕೃಷ್ಣಪ್ರಜ್ಞೆಯಲ್ಲಿರುವ ಮನುಷ್ಯನು ನಿಶ್ಚಯವಾಗಿಯೂ ಎಲ್ಲೆಲ್ಲಿಯೂ ಕೃಷ್ಣನನ್ನು ಕಾಣುತ್ತಾನೆ ಮತ್ತು ಕೃಷ್ಣನಲ್ಲಿ ಎಲ್ಲವನ್ನೂ ಕಾಣುತ್ತಾನೆ. ಇಂತಹ ಮನುಷ್ಯನು ಐಹಿಕ ಪ್ರಕೃತಿಯ ಪ್ರತ್ಯೇಕ ಅಭಿವ್ಯಕ್ತಿಗಳನ್ನು ನೋಡುವಂತೆ ತೋರಬಹುದು. ಆದರೆ ಪ್ರತಿಯೊಂದು ಬಾರಿಯೂ ಆತನಿಗೆ ಕೃಷ್ಣನ ಅರಿವಿರುತ್ತದೆ. ಏಕೆಂದರೆ ಪ್ರತಿಯೊಂದು ಕೃಷ್ಣನ ಶಕ್ತಿ ಅಭಿವ್ಯಕ್ತಿ ಎಂದು ಅವನಿಗೆ ತಿಳಿದಿರುತ್ತದೆ. ಕೃಷ್ಣನಿಲ್ಲದೆ ಯಾವುದೂ ಇರುವಂತಿಲ್ಲ, ಕೃಷ್ಣನು ಎಲ್ಲದರ ಒಡೆಯ. ಇದು ಕೃಷ್ಣಪ್ರಜ್ಞೆಯ ಮೂಲತತ್ವ.

ಕೃಷ್ಣಪ್ರಜ್ಞೆಯು ಕೃಷ್ಣಪ್ರೇಮದ ವರ್ಧನೆ. ಈ ಸ್ಥಿತಿಯು ಐಹಿಕ ಮೋಕ್ಷವನ್ನು ಮೀರಿದ ಸ್ಥಿತಿ. ಆತ್ಮ ಸಾಕ್ಷಾತ್ಕಾರವನ್ನು ಮೀರಿದ ಕೃಷ್ಣಪ್ರಜ್ಞೆಯ ಈ ಹಂತದಲ್ಲಿ ಭಕ್ತನು ಕೃಷ್ಣನೊಂದಿಗೆ ಒಂದಾಗುತ್ತಾನೆ. ಇದು ಹೇಗೆಂದರೆ ಭಕ್ತನಿಗೆ ಕೃಷ್ಣನೇ ಸರ್ವಸ್ವವಾಗುತ್ತಾನೆ ಮತ್ತು ಕೃಷ್ಣಪ್ರೇಮದಲ್ಲಿ ಭಕ್ತನು ಸಂಪೂರ್ಣನಾಗುತ್ತಾನೆ. ಆಗ ಭಗವಂತ ಭಕ್ತರ ನಡುವೆ ಒಂದು ಆತ್ಮೀಯ ಸಂಬಂಧವಿರುತ್ತದೆ. ಈ ಘಟ್ಟದಲ್ಲಿ ಜೀವಿಯನ್ನು ನಾಶಮಾಡಲು ಸಾಧ್ಯವೇ ಇಲ್ಲ. ದೇವೋತ್ತಮ ಪುರುಷನು ಭಕ್ತನ ದೃಷ್ಟಿಯಿಂದ ಮರೆಯಾಗುವುದೇ ಇಲ್ಲ. ಕೃಷ್ಣನಲ್ಲಿ ಲೀನವಾಗುವುದೆಂದರೆ ಆಧ್ಯಾತ್ಮಿಕ ವಿನಾಶ. ಭಕ್ತನು ಇಂತಹ ಅಪಾಯಕ್ಕೆ ಅವಕಾಶ ಕೊಡುವುದೇ ಇಲ್ಲ. ಬ್ರಹ್ಮಸಂಹಿತೆಯಲ್ಲಿ (5.28) ಹೀಗೆ ಹೇಳಿದೆ -

ಪ್ರೇಮಾಂಜನಚ್ಛುರಿತಭಕ್ತಿ ವಿಲೋಚನೇನ

ಸನ್ತಃ ಸದೈವ ಹೃದಯೇಷು ವಿಲೋಕಯನ್ತಿ |

ಯಂ ಶ್ಯಾಮಸುನ್ದರಮ್ ಅಚಿಂತ್ಯಗುಣಸ್ವರೂಪಂ

ಗೋವಿನ್ದಮಾದಿಪುರುಷಂ ತಮಹಂ ಭಜಾಮಿ ||

ಆದಿಪುರುಷನಾದ ಗೋವಿಂದನನ್ನು ನಾನು ಪೂಜಿಸುತ್ತೇನೆ. ಪ್ರೇಮಾಂಜನವನ್ನು ಕಣ್ಣಿಗೆ ಲೇಪಿಸಿಕೊಂಡ ಭಕ್ತನು ಸದಾ ಅವನನ್ನು ನೋಡುತ್ತಾನೆ. ಭಕ್ತನ ಹೃದಯದಲ್ಲಿ ನೆಲೆಸಿರುವ ಅವನು ಶ್ಯಾಮಸುಂದರ ನಿತ್ಯಸ್ವರೂಪದಲ್ಲಿ ಕಾಣಿಸುತ್ತಾನೆ.

ಈ ಘಟ್ಟದಲ್ಲಿ ಕೃಷ್ಣನು ಭಕ್ತನ ದೃಷ್ಟಿಯಿಂದ ಮರೆಯಾಗುವುದೇ ಇಲ್ಲ. ಭಕ್ತನು ಭಗವಂತನನ್ನು ಕಾಣದೆ ಹೋಗುವುದೇ ಇಲ್ಲ. ಭಗವಂತನನ್ನು ಹೃದಯದಲ್ಲಿರುವ ಪರಮಾತ್ಮನೆಂದು ಕಾಣುವ ಯೋಗಿಗೂ ಈ ಮಾತು ಅನ್ವಯಿಸುತ್ತದೆ. ಇಂತಹ ಯೋಗಿಯು ಪರಿಶುದ್ಧ ಭಕ್ತನಾಗುತ್ತಾನೆ. ಅವನ ತನ್ನೊಳಗಿನ ಭಗವಂತನನ್ನು ಕಾಣದೆ ನಿಮಿಷವೂ ಬದುಕಲಾರ.

ಭಗವದ್ಗೀತೆಯ ಉಪದೇಶ ಇದೇ

ಮಹಾಭಾರತದ ಯುದ್ಧ ಆರಂಭಕ್ಕೂ ಮುನ್ನವೇ ಎದುರಾಳಿ ಬಣದಲ್ಲಿ ಇದ್ದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸುತ್ತಾನೆ. ಆಗ ಶ್ರೀಕೃಷ್ಣನು ಪಾಂಡವರಲ್ಲಿ ಒಬ್ಬರಾದ ಅರ್ಜುನನಿಗೆ ಉಪದೇಶ ನೀಡುತ್ತಾನೆ.

ಅರ್ಜುನನ ಮುಂದೆ ಬೃಹತ್ ಸೈನ್ಯ ನಿಂತಿರುತ್ತದೆ. ಆ ಸೈನ್ಯದಲ್ಲಿರುವ ಸಾರಥಿಗಳಲ್ಲಿ ಈತನ ಚಿಕ್ಕಪ್ಪ, ತಾಯಿಯ ಅಣ್ಣ, ತಾತ ಹಾಗೂ ಸಹೋದರರು ಇರುತ್ತಾರೆ. ಈ ವೇಳೆ ಅರ್ಜುನ, ನಾನು ನನ್ನ ಸ್ವಂತ ಜನರನ್ನು ಹೇಗೆ ಕೊಲ್ಲುವುದು ಎಂದು ಮನಸ್ಸಿನಲ್ಲೇ ಯೋಚನೆ ಮಾಡಿ ಯುದ್ಧಭೂಮಿಯಲ್ಲಿ ತನ್ನ ಬಿಲ್ಲನ್ನು ಕೆಳಗೆ ಇಳಿಸುತ್ತಾನೆ. ಆಗ ಅರ್ಜುನನಿಗೆ ಶ್ರೀಕೃಷ್ಣ ಮೇಲಿನಂತೆ ಉಪದೇಶ ನೀಡುತ್ತಾನೆ. ಇತರರನ್ನು ಮೋಸ ಮಾಡುವವನು ತಾನೂ ಸ್ವತಃ ಮೋಸ ಹೋಡುತ್ತಾನೆ ಎನ್ನುವುದು ಶ್ರೀಕೃಷ್ಣನ ಮಾತು.

(This copy first appeared in Hindustan Times Kannada website. To read more like this please logon to kannada.hindustantimes.com )