ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Bhagavad Gita: ಹರೇ ಕೃಷ್ಣ, ಹರೇ ಕೃಷ್ಣ ಯಜ್ಞದಲ್ಲಿ ಹಿಂಸೆಯ ಪ್ರಶ್ನೆಯೇ ಇಲ್ಲ; ಗೀತೆಯ ಅರ್ಥ ತಿಳಿಯಿರಿ

Bhagavad Gita: ಹರೇ ಕೃಷ್ಣ, ಹರೇ ಕೃಷ್ಣ ಯಜ್ಞದಲ್ಲಿ ಹಿಂಸೆಯ ಪ್ರಶ್ನೆಯೇ ಇಲ್ಲ; ಗೀತೆಯ ಅರ್ಥ ತಿಳಿಯಿರಿ

Bhagavad Gita Updesh: ಹರೇ ಕೃಷ್ಣ, ಹರೇ ಕೃಷ್ಣ ಯಜ್ಞದಲ್ಲಿ ಹಿಂಸೆಯ ಪ್ರಶ್ನೆಯೇ ಇಲ್ಲ ಎಂಬುದರ ಅರ್ಥವನ್ನು ಭಗವದ್ಗೀತೆಯ 10 ನೇ ಅಧ್ಯಾಯದ 25ನೇ ಶ್ಲೋಕದಲ್ಲಿ ಓದಿ.

ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.

ಅಧ್ಯಾಯ 10 - ವಿಭೂತಿ ಯೋಗ -ಶ್ಲೋಕ - 23

ರುದ್ರಾಣಾಂ ಶನ್ಕರಶ್ಚಾಸ್ಮಿ ವಿತ್ತೇಶೋ ಯಕ್ಷರಕ್ಷಸಾಮ್ |

ವಸೂನಾಂ ಪಾವಕಶ್ಚಾಸ್ಮಿ ಮೇರುಃ ಶಿಖರಿಣಾಮಹಮ್ ||23||

ಅನುವಾದ: ರುದ್ರರಲ್ಲಿ ನಾನು ಶಿವ, ಯಕ್ಷರಾಕ್ಷರಲ್ಲಿ ನಾನು ಕುಬೇರ, ವಸುಗಳಲ್ಲಿ ನಾನು ಅಗ್ನಿ ಮತ್ತು ಪರ್ವತಗಳಲ್ಲಿ ನಾನು ಮೇರು.

ಭಾವಾರ್ಥ: ರುದ್ರರಲ್ಲಿ ಹನ್ನೊಂದು ಮಂದಿ. ಅವರಲ್ಲಿ ಶಂಕರ ಅಥವಾ ಶಿವನು ಪ್ರಾಧಾನ. ಅವನು ವಿಶ್ವದಲ್ಲಿನ ತಮೋಗುಣದ ಹೊಣೆಯನ್ನು ವಹಿಸಿಕೊಂಡಿರುವ ಪರಮ ಪ್ರಭುವಿನ ಅವತಾರ. ಯಕ್ಷರು ಮತ್ತು ರಾಕ್ಷಸರ ನಾಯಕ ಕುಬೇರ. ಅವನು ದೇವತೆಗಳ ಕೋಶಾಧಿಪತಿ ಮತ್ತು ಪರಮ ಪ್ರಭುವಿನ ಪ್ರತಿನಿಧಿ. ಮೇರುವು ಸಂಪನ್ಮೂಲಗಳ ಶ್ರೀಮಂತಿಕೆಗೆ ಹೆಸರಾದ ಪರ್ವತ (Bhagavad Gita Updesh in Kannada).

ಅಧ್ಯಾಯ 10 - ವಿಭೂತಿ ಯೋಗ -ಶ್ಲೋಕ - 24

ಪುರೋಧಸಾಂ ಚ ಮುಖ್ಯಂ ಮಾಂ ವಿದ್ಧಿ ಪಾರ್ಥ ಬೃಹಸ್ಪತಿಮ್ |

ಸೇನಾನೀನಾಮಹಂ ಸ್ಕನ್ಧಃ ಸರಸಾಮಸ್ಮಿ ಸಾಗರಃ ||24||

ಅನುವಾದ: ಅರ್ಜುನನೆ, ಪುರೋಹಿತರಲ್ಲಿ ನಾನು ಮುಖ್ಯನಾದ ಬೃಹಸ್ಪತಿ ಎಂದು ತಿಳಿದುಕೊ. ಸೇನಾಧಿಪತಿಗಳಲ್ಲಿ ನಾನು ಕಾರ್ತಿಕೇಯ ಮತ್ತು ಸರಸ್ಸುಗಳಲ್ಲಿ ನಾನು ಸಾಗರ.

ಭಾವಾರ್ಥ: ಸ್ವರ್ಗಲೋಕಗಳ ಮುಖ್ಯ ದೇವತೆ ಇಂದ್ರ. ಅವನಿಗೆ ದೇವಲೋಕದ ರಾಜನೆಂದು ಹೆಸರು. ಆತನು ಆಳುವ ಲೋಕವು ಇಂದ್ರಲೋಕ. ಬೃಹಸ್ಪತಿಯು ಇಂದ್ರನ ಪುರೋಹಿತ. ಇಂದ್ರನು ಎಲ್ಲ ರಾಜರ ನಾಯಕನಾದ್ದರಿಂದ ಬೃಹಸ್ಪತಿಯು ಎಲ್ಲ ಪುರೋಹಿತರ ನಾಯಕ. ಇಂದ್ರನು ಎಲ್ಲ ರಾಜರಲ್ಲಿ ಪ್ರಮುಖನಾದಂತೆ ಪಾರ್ವತಿ ಮತ್ತು ಶಿವರ ಮಗನಾದ ಸ್ಕಂದ ಅಥವಾ ಕಾರ್ತಿಕೇಯನು ಎಲ್ಲ ಸೈನ್ಯಾಧಿಪತಿಗಳಲ್ಲಿ ಮುಖ್ಯನು. ಜಲರಾಶಿಗಳಲ್ಲಿ ಸಮುದ್ರವೇ ಅತ್ಯಂತ ದೊಡ್ಡದು. ಕೃಷ್ಣನ ಈ ನಿರೂಪಣೆಗಳು ಅವನ ಮಹಿಮೆಯ ಸೂಚನೆಗಳು ಅಷ್ಟೆ.

ಅಧ್ಯಾಯ 10 - ವಿಭೂತಿ ಯೋಗ -ಶ್ಲೋಕ - 25

ಮಹರ್ಷೀಣಾಂ ಭೃಗುರಹಂ ಗಿರಾಮಸ್ಮ್ಯೇಕರಮಕ್ಷರಮ್ |

ಯಜ್ಞಾನಾಂ ಜಪಯಜ್ಞೋಸ್ಮಿ ಸ್ಥಾವರಾಣಾಂ ಹಿಮಾಲಯಃ ||25||

ಅನುವಾದ: ಮಹರ್ಷಿಗಳಲ್ಲಿ ನಾನು ಭೃಗು, ಕಂಪನಗಳಲ್ಲಿ ನಾನು ದಿವ್ಯ ಓಂಕಾರ, ಯಜ್ಞಗಳಲ್ಲಿ ನಾನು ಜಪಯಜ್ಞ, ಚಲಿಸದ ವಸ್ತುಗಳಲ್ಲಿ ನಾನು ಹಿಮಾಲಯ.

ಭಾವಾರ್ಥ: ವಿಶ್ವದ ಪ್ರಥಮ ಜೀವಿಯಾದ ಬ್ರಹ್ಮನು ವಿವಿಧ ವರ್ಗಗಳ ಸಂತಾನ ಪ್ರಸಾರಕ್ಕಾಗಿ ಹಲವರು ಪುತ್ರರನ್ನು ಸೃಷ್ಟಿಸಿದನು. ಈ ಗಂಡು ಮಕ್ಕಳಲ್ಲಿ ಭೃಗುವು ಅತ್ಯಂತ ಶಕ್ತ ಋಷಿ. ಎಲ್ಲ ದಿವ್ಯಮಂತ್ರಗಳಲ್ಲಿ ಓಂಕಾರವು ಕೃಷ್ಣನ ಪ್ರತಿನಿಧಿ. ಎಲ್ಲ ಯಜ್ಞಗಳಲ್ಲಿ ಹರೇ ಕೃಷ್ಣ ಹರೇ ಕೃಷ್ಣ, ಕೃಷ್ಣ ಕೃಷ್ಣ ಹರೇ ಹರೇ, ಹರೇ ರಾಮ ಹರೇ ರಾಮ, ರಾಮ ರಾಮ ಹರೇ ಹರೇ ಎಂಬ ಸಂಕೀರ್ತನೆಯು ಕೃಷ್ಣನ ಅತ್ಯಂತ ಪರಿಶುದ್ಧ ಪ್ರತಿನಿಧಿ.

ಒಮ್ಮೊಮ್ಮೆ ಪಶುಬಲಿಯನ್ನು ಕೊಡಬೇಕೆಂದು ಹೇಳುವುದುಂಟು. ಆದರೆ ಹರೇ ಕೃಷ್ಣ, ಹರೇ ಕೃಷ್ಣ ಯಜ್ಞದಲ್ಲಿ ಹಿಂಸೆಯ ಪ್ರಶ್ನೆಯೇ ಇಲ್ಲ. ಅದು ಅತ್ಯಂತ ಸರಳವಾದದ್ದು ಮತ್ತು ಅತ್ಯಂತ ಪರಿಶುದ್ಧವಾದದ್ದು. ಲೋಕಗಳಲ್ಲಿ ಭವ್ಯವಾದದ್ದೆಲ್ಲ ಕೃಷ್ಣನ ಪ್ರತಿನಿಧಿ. ಆದುದರಿಂದ ಪ್ರಪಂಚದಲ್ಲಿ ಅತಿದೊಡ್ಡ ಪರ್ವತವಾದ ಹಿಮಾಲಯವು ಅವನ ಪ್ರತಿನಿಧಿ. ಹಿಂದಿನ ಶ್ಲೋಕದಲ್ಲಿ ಮೇರುಪರ್ವತವನ್ನು ಹೆಸರಿಸಲಾಗಿತ್ತು. ಆದರರೆ ಮೇರುವು ಒಮ್ಮೊಮ್ಮೆ ಚಲಿಸುತ್ತದೆ. ಹಿಮಾಲಯವು ಮೇರುಪರ್ವತಕ್ಕಿಂತ ಶ್ರೇಷ್ಠವಾದದ್ದು.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)