ಭಗವದ್ಗೀತೆ: ಮನುಷ್ಯ ಭಗವಂತನನ್ನು ಹಿಂಬಾಲಿಸಿದರೆ ಸದಾ ಖುಷಿಯಾಗಿರುತ್ತಾನೆ; ಗೀತೆಯಲ್ಲಿನ ಈ ಅರ್ಥವನ್ನು ತಿಳಿಯಿರಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಭಗವದ್ಗೀತೆ: ಮನುಷ್ಯ ಭಗವಂತನನ್ನು ಹಿಂಬಾಲಿಸಿದರೆ ಸದಾ ಖುಷಿಯಾಗಿರುತ್ತಾನೆ; ಗೀತೆಯಲ್ಲಿನ ಈ ಅರ್ಥವನ್ನು ತಿಳಿಯಿರಿ

ಭಗವದ್ಗೀತೆ: ಮನುಷ್ಯ ಭಗವಂತನನ್ನು ಹಿಂಬಾಲಿಸಿದರೆ ಸದಾ ಖುಷಿಯಾಗಿರುತ್ತಾನೆ; ಗೀತೆಯಲ್ಲಿನ ಈ ಅರ್ಥವನ್ನು ತಿಳಿಯಿರಿ

ಕೃಷ್ಣ ಎಂದರೆ ಅತ್ಯುನ್ನತ ಆನಂದ. ಭಗವಂತನೇ ಎಲ್ಲ ಆನಂದದ ಸಾಗರ, ಎಲ್ಲ ಆನಂದದ ಭಂಡಾರ ಎಂದು ದೃಢಪಡಿಸಲಾಗಿದೆ. ನಾವೆಲ್ಲ ಆನಂದಕ್ಕಾಗಿ ಹಾತೊರೆಯುತ್ತೇವೆ. ಭಗವದ್ಗೀತೆಯಲ್ಲಿನ ಈ ಸಾರಾಂಶವನ್ನು ತಿಳಿಯಿರಿ.

ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.

ಕಾಮೈಸ್ ತೈಸ್ ತೈರ್ ಹೃತಜ್ಞಾನಾಃ ಪ್ರಪದ್ಯನ್ತೇನ್ಯ ದೇವತಾಃ

ತಂ ತಂ ನಿಯಮಮ್ ಆಸ್ಥಾಯ ಪ್ರಕೃತಾ ನಿಯತಾಃ ಸ್ವಯಾ

ಐಹಿಕ ಬಯಕೆಗಳು ಯಾರ ಬುದ್ದಿಶಕ್ತಿಯನ್ನು ಅಪಹರಿಸಿರುತ್ತವೆಯೋ ಅವರು ಅನ್ಯದೇವತೆಗಳಿಗೆ ಶರಣಾಗುತ್ತಾರೆ ಮತ್ತು ತಮ್ಮ ತಮ್ಮ ಪ್ರಕೃತಿಗಳಿಗುಣವಾಗಿ ಪೂಜೆಯ ನಿಯಮಗಳನ್ನು ಅನುಸರಿಸುತ್ತಾರೆ. ಕಾಮವನ್ನು ಅನುಸರಿಸುವವರು ಮಾತ್ರ ದೇವತೆಗಳನ್ನು ಪೂಜೆ ಮಾಡುತ್ತಾರೆ, ಪರಮ ಪ್ರಭು ಶ್ರೀಕೃಷ್ಣನನ್ನು ಪೂಜೆ ಮಾಡುವುದಿಲ್ಲ ಎಂದು ಇಲ್ಲಿ ಸ್ಪಷ್ಟವಾಗಿ ಹೇಳಿದೆ.

ನಾವು ಕೃಷ್ಣನ ಹೆಸರನ್ನು ಹೇಳಿದಾಗ ಯಾವುದೇ ಒಂದು ಪಂಥದವರು ಕೊಟ್ಟಿರುವ ಹೆಸರನ್ನು ಹೇಳುತ್ತಿಲ್ಲ. ಕೃಷ್ಣ ಎಂದರೆ ಅತ್ಯುನ್ನತ ಆನಂದ. ಭಗವಂತನೇ ಎಲ್ಲ ಆನಂದದ ಸಾಗರ, ಎಲ್ಲ ಆನಂದದ ಭಂಡಾರ ಎಂದು ದೃಢಪಡಿಸಿದೆ. ನಾವೆಲ್ಲ ಆನಂದಕ್ಕಾಗಿ ಹಾತೊರೆಯುತ್ತೇವೆ.

ಆನನ್ದಮಯೋಭ್ಯಾಸಾತ್ (ವೇದಾಂತ ಸೂತ್ತ 1.1.12). ಭಗವಂತನಂತೆ ಜೀವಿಗಳಿಗೂ ಪ್ರಜ್ಞಾಭರಿತರು ಮತ್ತು ಅವರು ಸುಖವನ್ನು ಅರಸುತ್ತಾರೆ. ಭಗವಂತನು ಸದಾ ಆನಂದಮಯನು. ಜೀವಿಗಳು ಭಗವಂತನೊಂದಿಗೆ ಸೇರಿದರೆ, ಅವನೊಡನೆ ಸಹಕರಿಸಿದರೆ ಮತ್ತು ಅವನ ಸಹವಾಸದಲ್ಲಿ ಭಾಗಿಗಳಾದರೆ ಅವರೂ ಸುಖಿಗಳಾಗುತ್ತಾರೆ.

ಭಗವಂತನು ಸುಖಮಯವಾದ ತನ್ನ ಲೀಲೆಗಳನ್ನು ವೃಂದಾವನದಲ್ಲಿ ತೋರಲು ಈ ಮರ್ತ್ಯ ಜಗತ್ತಿಗೆ ಇಳಿದು ಬರುತ್ತಾನೆ. ಶ್ರೀಕೃಷ್ಣನು ವೃಂದಾವನದಲ್ಲಿದ್ದಾಗ ಅವನ ಗೋಪಾಲಕ ಸ್ನೇಹಿತರೊಡನೆ, ಅವನ ಸಖಿಯರೊಡನೆ, ವೃಂದಾವನದ ಇತರ ನಿವಾಸಿಗಳೊಡನೆ ಮತ್ತು ಗೋವುಗಳೊಡನೆ ಅವನ ಲೀಲೆಗಳು ಸುಖಮಯವಾಗಿದ್ದವು.

ಇಡೀ ವೃಂದಾವನದ ಜನತೆಗೆ ಕೃಷ್ಣನನ್ನು ಬಿಟ್ಟು ಬೇರೇನೂ ತಿಳಿದಿರಲಿಲ್ಲ. ಆದರೆ ಶ್ರೀಕೃಷ್ಣನು ತನ್ನ ತಂಡೆ ನಂದಮಹಾರಾಜನಿಗೆ ದೇವೆಯಾದ ಇಂದ್ರನನ್ನು ಪೂಜೆ ಮಾಡುವುದರಲ್ಲಿ ಇದ್ದ ಉತ್ಸಾಹವನ್ನು ಕುಂದಿಸಿದನು. ಏಕೆಂದರೆ ಜನರು ಯಾವ ದೇವತೆಯನ್ನೂ ಪೂಜಿಸಬಾರದೆಂದು ತೋರಿಸಲು ಕೃಷ್ಣನು ಬಯಿಸಿದ. ಅವರು ಪೂಜಿಸಬೇಕಾದದ್ದು ಭಗವಂತನನ್ನು ಮಾತ್ರ. ಏಕೆಂದರೆ ಅವರ ಕಟ್ಟಕಡೆಯ ಗುರಿ ಭಗವಂತನ ನಿವಾಸಕ್ಕೆ ಹಿಂದಿರುವುದು.

ನ ತದ್ಭಾಸಯತೇ ಸೂರ್ಯೋ ನ ಶಶಾನ್ಕೋ ನ ಪಾವಕಃ

ಯದ್‌ಗತ್ವಾ ನ ನಿವರ್ತನ್ತೇ ತದ್ ಧಾಮ ಪರಮಂ ಮಮ

'ಈ ನನ್ನ ಪರಮ ಧಾಮವನ್ನು ಸೂರ್ಯನಾಗಲಿ ಚಂದ್ರನಾಗಲಿ ಅಗ್ನಿಯಾಗಲಿ ವಿದ್ಯುಚ್ಛಕ್ತಿಯಾಗಲಿ ಬೆಳಗುವುದಿಲ್ಲ. ಅದನ್ನು ಸೇರಿದವರು ಈ ಐಹಿಕ ಜಗತ್ತಿಗೆ ಹಿಂದಕ್ಕೆ ಬರುವುದೇ ಇಲ್ಲ'.

ಈ ಶ್ಲೋಕವು ಸನಾತನ ಗಗನವನ್ನು ವರ್ಣಿಸುತ್ತದೆ, ಜನಿ. ಆಕಾಶದ ಐಹಿಕ ಪರಿಕಲ್ಪನೆಯೊಂದು ನಮಗಿದೆ. ಅದನ್ನು ಕುರಿತು ಯೋಚಿಸುವಾಗ ಸೂರ್ಯ, ಚಂದ್ರ, ನಕ್ಷತ್ರ ಮುಂತಾದುವುಗಳಿಗೆ ಸಂಬಂಧಿಸಿದಂತೆ ಯೋಚಿಸುತ್ತೇವೆ. ಆದರೆ ಈ ಆಧ್ಯಾತ್ಮಿಕ ಗಗನವನ್ನು ಬ್ರಹ್ಮೋಜ್ಯೋತಿಯು ಎಂದರೆ ಭಗವಂತನಿಂದ ಹೊರಸೂಸುತ್ತಿರುವ ಕಿರಣಗಳು ಬೆಳಗುತ್ತಿರುವುದರಿಂದ ಈ ಸನಾತನ ಗಗನಕ್ಕೆ ಸೂರ್ಯ ಅಥವಾ ಚಂದ್ರ ಅಥವಾ ವಿದ್ಯುಚ್ಛಕ್ತಿ ಅಥವಾ ಅಗ್ನಿಯ ಅಗತ್ಯವೇ ಇಲ್ಲ ಎಂದು ಶ್ಲೋಕದಲ್ಲಿ ಭಗವಂತ ಹೇಳಿದ್ದಾನೆ. ನಾವು ಇತರ ಗ್ರಹಗಳನ್ನು ತಲಪಲು ಕಷ್ಟದಿಂದ ಪ್ರಯತ್ನಿಸುತ್ತಿದ್ದೇವೆ. ಆದರೆ ಭಗವಂತನ ನಿವಾಸವನ್ನು ಅರ್ಥಮಾಡಿಕೊಳ್ಳಲು ಕಷ್ಟಪಡಲೇಬೇಕಾಗಿಲ್ಲ. ಈ ನಿವಾಸವನ್ನು ಗೋಲೋಕ ಎಂದು ಕರೆಯುತ್ತಾರೆ.

ಬ್ರಹ್ಮಸಂಹಿತೆಲ್ಲಿ (5.37) ಇದರ ಸುಂದರ ವರ್ಣೆಯಿದೆ. ಗೋಲೋಕ ಏವ ನಿವಸತ್ಯಖಿಲಾತ್ಮ ಭೂತಃ. ಭಗವಂತನು ನಿರಂತರವಾಗಿ ತನ್ನ ನಿವಾಸದ ಗೋಲೋಕದಲ್ಲಿ ವಾಸಿಸುತ್ತಾನೆ. ಆದರೂ ಈ ಪ್ರಪಂಚದಿಂದ ಅವನ ಬಳಿಗೆ ಹೋಗಲು ಸಾಧ್ಯವಿಲ್ಲ. ಇದಕ್ಕಾಗಿ ತನ್ನ ನಿಜ ರೂಪವಾದ ಸತ್-ಚಿತ್-ಆನಂದ ವಿಗ್ರಹವನ್ನು ತೋರಿಸಲು ಇಳಿದು ಬರುತ್ತಾನೆ.

ಈ ರೂಪವನ್ನು ತೋರಿದಾಗ ಅವನು ಹೇಗೆ ಕಾಣಿಸುತ್ತಾನೆ ಎಂದು ನಾವು ಕಲ್ಪಿಸಿಕೊಳ್ಳುವ ಅಗತ್ಯವೇ ಇಲ್ಲ. ಅಂತಹ ಕಲ್ಪನೆಯ ಊಹೆಗಳಿಗೆ ಪ್ರೋತ್ಸಾಹ ಕೊಡದಿರಲು ಭಗವಂತನು ಇಳಿದುಬರುತ್ತಾನೆ ಮತ್ತು ತಾನು ಇರುವಂತೆ ಶ್ಯಾಮಸುಂದರನಾಗಿ ತೋರಿಸಿಕೊಳ್ಳುತ್ತಾನೆ. ಆದರೆ ದುರದೃಷ್ಟದಿಂದ, ಆತನು ನಮ್ಮಲ್ಲಿ ಒಬ್ಬನು ಎಂದು ಭಾವಿಸಬಾರದು. ಅವನು ಸರ್ವಶಕ್ತನಾದದ್ದರಿಂದಲೇ ನಮ್ಮ ಮುಂದೆ ತನ್ನ ನಿಜವಾದ ರೂಪವನ್ನು ಮೆರೆದು ತನ್ನ ಲೀಲೆಗಳನ್ನು ತೋರುತ್ತಾನೆ. ಇವು ಅವನ ನಿವಾಸದಲ್ಲಿನ ಲೀಲೆಗಳ ಪ್ರತಿರೂಪಗಳಾಗಿವೆ.

Whats_app_banner

ವಿಭಾಗ

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.