ಭಗವದ್ಗೀತೆ: ಭಗವಂತ ನಮಗಾಗಿ ಪ್ರತ್ಯೇಕವಾಗಿ ಕೊಟ್ಟ ವಸ್ತುಗಳನ್ನು ನಾವು ಹೇಗೆ ಬಳಸಬೇಕು; ಗೀತೆಯ ಈ ಸಾರಾಂಶ ತಿಳಿಯಿರಿ
ಮನುಷ್ಯರು ಈ ಜಗತ್ತಿನಲ್ಲಿರುವುದು ಬೆಕ್ಕು ನಾಯಿಗಳಂತೆ ಜಗಳವಾಡುವುದಕ್ಕಲ್ಲ. ಮನುಷ್ಯನಾದವನು ತನ್ನ ಬದುಕಿನ ಗುರಿಯನ್ನು ಅರ್ಥ ಮಾಡಿಕೊಳ್ಳಬೇಕು. ಎಲ್ಲ ವೈದಿಕ ಸಾಹಿತ್ಯದಲ್ಲಿ ಈ ದಿಗ್ದರ್ಶವಿದೆ ಮತ್ತು ಭಗವದ್ಗೀತೆಯಲ್ಲಿ ಇದರ ತಿರುಳನ್ನು ಕೊಟ್ಟಿದೆ. ಭಗವದ್ಗೀತೆಯ ಪ್ರಸ್ತಾವನೆಯ ಪ್ರಮುಖ ಸಾರಾಂಶವನ್ನು ತಿಳಿಯಿರಿ.
ಭಗವದ್ಗೀತೆಯ (BhagavadGita) ಪ್ರಸ್ತಾವನೆಯಲ್ಲಿ ಹೀಗೆ ಹೇಳಲಾಗಿದೆ. ನಮಗಾಗಿ ಭಗವಂತನು ಪ್ರತ್ಯೇಕವಾಗಿ ತೆಗೆದಿಟ್ಟ ವಸ್ತುಗಳನ್ನು ನಾವು ಹೇಗೆ ಬಳಸಬೇಕು ಎನ್ನುವದಕ್ಕೆ ಹಲವಾರು ನಿರ್ದೇಶಗಳನ್ನು ಕೊಟ್ಟಿದೆ. ಇದನ್ನು ಭಗವದ್ಗೀತೆಯಲ್ಲೂ ವಿವರಿಸಿದೆ. ಅರ್ಜುನನು ಕುರುಕ್ಷೇತ್ರದ ಯುದ್ಧದಲ್ಲಿ ತಾನು ಯುದ್ಧ ಮಾಡುವುದಿಲ್ಲ ಎಂದು ನಿರ್ಧರಿಸಿದೆ. ಇದು ಅವನದೇ ನಿರ್ಮಣ.
ತನ್ನ ಬಂಧುಗಳನ್ನು ಕೊಂದನಂತರ ರಾಜ್ಯವನ್ನು ಸಂತೋಷದಿಂದ ಅನುಭವಿಸುವುದು ಸಾಧ್ಯವಿಲ್ಲ ಎಂದು ಅರ್ಜನನು ಭಗವಂತನಿಗೆ ಹೇಳಿದನು. ದೇಶದ ಆಧಾರದ ಮೇಲೆ ಮಾಡಿದ ನಿರ್ಣಯ ಇದು. ಏಕೆಂದರೆ ಅರ್ಜುನನು ದೇಹವೇ ತಾನು, ತನ್ನ ಸೋದರರು, ಸೋದರಳಿಯಂದಿರು, ಭಾವಂದಿರು, ಅಜ್ಜಂದಿರು ಮೊದಲಾದವರೆಲ್ಲ ತನ್ನ ರಕ್ತ ಸಂಬಂಧಿಗಳು ಅಥವಾ ತನ್ನ ದೇಹದ ವಿಸ್ತರಣೆಗಳು ಎಂದು ಭಾವಿಸಿದ್ದ. ಆದುದರಿಂದ ಆತನು ತನ್ನ ದೇಹದ ಬೇಡಿಕೆಗಳನ್ನು ಈಡೇರಿಸಲು ಬಯಸಿದ.
ಈ ಅಭಿಪ್ರಾಯವನ್ನು ಬದಲಾಯಿಸವುದಕ್ಕಾಗಿಯೇ ಭಗವಂತನು ಭಗವದ್ಗೀತೆಯನ್ನು ನುಡಿದ. ಕಡೆಯಲ್ಲಿ ಅರ್ಜುನನು, ಕರಿಷ್ಯೇ ವಚನಂ ತವ (ನಾನು ನಿನ್ನ ಮಾತಿನಂತೆ ನಡೆಯುತ್ತೇವೆ) ಎಂದು ಹೇಳಿ ಭಗವಂತನ ಆದೇಶಕ್ಕೆ ಅನುಗುಣವಾಗಿ ಯುದ್ಧ ಮಾಡಲು ತೀರ್ಮಾನಿಸಿದ.
ಮನುಷ್ಯನಾದವನು ತನ್ನ ಬದುಕಿನ ಗುರಿಯನ್ನು ಅರ್ಥ ಮಾಡಿಕೊಳ್ಳಬೇಕು
ಮನುಷ್ಯರು ಈ ಜಗತ್ತಿನಲ್ಲಿರುವುದು ಬೆಕ್ಕು ನಾಯಿಗಳಂತೆ ಜಗಳವಾಡುವುದಕ್ಕಲ್ಲ. ಮನುಷ್ಯನಾದವನು ತನ್ನ ಬದುಕಿನ ಗುರಿಯನ್ನು ಅರ್ಥ ಮಾಡಿಕೊಳ್ಳಬೇಕು. ಎಲ್ಲ ವೈದಿಕ ಸಾಹಿತ್ಯದಲ್ಲಿ ಈ ದಿಗ್ದರ್ಶವಿದೆ ಮತ್ತು ಭಗವದ್ಗೀತೆಯಲ್ಲಿ ಇದರ ತಿರುಳನ್ನು ಕೊಟ್ಟಿದೆ. ವೈದಿಕ ಸಾಹಿತ್ಯವು ಮನುಷ್ಯರಿಗಾಗಿ ಉದ್ದಿಷ್ಟವಾಗಿದೆ, ಪ್ರಾಣಿಗಳಿಗಾಗಿ ಅಲ್ಲ. ಪ್ರಾಣಿಗಳು ಇತರ ಪ್ರಾಣಿಗಳನ್ನು ಕೊಲ್ಲಬಹುದು. ಇದರಲ್ಲಿ ಪಾಪದ ಪ್ರಶ್ನೆಯೇ ಇಲ್ಲ. ಆಧರೆ ಮನುಷ್ಯನೊಬ್ಬನು ತನ್ನ ನಾಲಿಗೆಯ ರುಚಿಯನ್ನು ಅಂಕೆಯಲ್ಲಿಡದೆ ಅದರ ತೃಪ್ತಿಗಾಗಿ ಒಂದು ಪ್ರಾಣಿಯನ್ನು ಕೊಂದರೆ ಅವನು ನಿಸರ್ಗದ ನಿಯಮಗಳನ್ನು ಮುರಿದುದಕ್ಕಾಗಿ ಹೊಣೆಯಾಗುತ್ತಾನೆ.
ಭಗವದ್ಗೀತೆಯಲ್ಲಿ ಪ್ರಕೃತಿಯಲ್ಲಿ ಮೂರು ಗುಣಗಳು, ಇವು ಸತ್ವ, ರಜಸ್ಸು ಮತ್ತು ತಮಸ್ಸು, ಇವುಗಳಿಗೆ ಅನುಗುಣವಾಗಿ ಕಾರ್ಯಗಳಲ್ಲಿಯೂ ಮೂರು ವಿಧ ಎಂದು ಹಳಿದೆ. ಹೀಗೆಯೇ ಆಹಾರದಲ್ಲಿ ಸಹ ಮೂರು ರೀತಿಗಳು - ಸಾತ್ವಿಕ ಆಹಾರ, ರಾಜಸ ಆಹಾರ ಮತ್ತು ತಾಮಸ ಆಹಾರ - ಇದೆಲ್ಲವನ್ನೂ ಸ್ಪಷ್ಟವಾಗಿ ವರ್ಣಿಸಿದೆ. ಭಗವದ್ಗೀತೆಯ ಆದೇಶಗಳನ್ನು ನಾವು ಯೋಗ್ಯ ರೀತಿಯಲ್ಲಿ ಬಳಸಿಕೊಂಡರೆ ನಮ್ಮ ಇಡೀ ಬದುಕು ಪರಿಶುದ್ಧವಾಗುತ್ತದೆ. ಕಟ್ಟಕಡೆಗೆ ನಾವು ಭೌತಿಕ ಆಕಾಶದ ಆಟೆ ಇರುವ ನಮ್ಮ ಗುರಿಯನ್ನು ಸೇರಲು ಶಕ್ಕರಾಗುತ್ತೇವೆ. (ಯದ್ ಗತ್ವಾ ನ ನಿವರ್ತನ್ತೇ ತದ್-ಧಾಮ ಪರಮಂ ಮಮ).
ನಶ್ವರ ಜಗತ್ತಿನಾಚೆ ಬೇರೊಂದು ಜಗತ್ತಿದೆ
ಈ ಗುರಿಯನ್ನು ಸನಾತನ ಆಕಾಶ ಎಂದು ಕರೆದಿದೆ; ಇದು ಸತಾನ, ಆಧ್ಯಾತ್ಮಿಕ ಆಕಾಶ. ನಮ್ಮ ಐಹಿಕ ಜಗತ್ತಿನಲ್ಲಿ ಎಲ್ಲವೂ ನಶ್ವರ ಎಂದು ಕಂಡುಕೊಳ್ಳುತ್ತವೆ. ಯಾವುದೇ ವಸ್ತು ಹಟ್ಟುತ್ತದೆ, ಸ್ವಲ್ಪ ಕಾಲ ಇರುತ್ತದೆ, ಕೆಲವು ಉಪವಸ್ತುಗಳನ್ನು ಸೃಷ್ಟಿ ಮಾಡುತ್ತದೆ, ಕ್ಷಯಿಸುತ್ತದೆ, ಅನಂತರ ಮಾಯವಾಗುತ್ತದೆ. ಇದು ಇಹಜತ್ತಿನ ನಿಮಯ. ಆದರೆ ಈ ನಶ್ವರ ಜಗತ್ತಿನಾಚೆ ಬೇರೊಂದು ಜಗತ್ತಿದೆ. ನಮಗೆ ಅದರ ವಿಷಯ ತಿಳಿದಿದೆ. ಅದು ಬೇರೊಂದು ಸ್ವಭಾವದ ಜಗತ್ತು. ಅದು ಸನಾತನ, ಎಂದೆಂದಿಗೂ ಇರುವಂತಹದು.
ಹನ್ನೊಂದನೆಯ ಅಧ್ಯಾಯದಲ್ಲಿ ಜೀವಿಯನ್ನೂ ಸನಾತನ, ಎಂದೆಂದಿಗೂ ಇರುವಂತಹದು ಎಂದು ವರ್ಣಿಸಿದೆ. ಭಗವಂತನನ್ನೂ ಸನಾತನ ಎಂದು ವರ್ಣಿಸಿದೆ. ಭಗವಂತನೊಡನೆ ನಮಗೆ ನಿಕಟ ಬಾಂಧವ್ಯವಿದೆ; ನಾವೆಲ್ಲ ಗುಣಾತ್ಮಕವಾಗಿ ಒಂದೇ ಆದದ್ದರಿಂದ ಸನಾತನ ಧಾಮ, ಸನಾತನ ಪರಮ ಪುರುಷ, ಸನಾತನ ಜೀವಿಗಳು. ಭಗವದ್ಗೀತೆಯ ಸಂಪೂರ್ಣ ಉದ್ದೇಶವೇ ನಮ್ಮ ಸನಾತನ ಧರ್ಮವನ್ನು, ಜೀವನದ ನಿರಂತರ ಕರ್ತವ್ಯವನ್ನು ಮರಳಿ ತಂದುಕೊಡುವುದು. ನಾವು ತಾತ್ಕಾಲಿಕವಾಗಿ ಬೇರೆ ಕ್ರಿಯೆಗಳಲ್ಲಿ ನಿರತರಾಗಿುತ್ತೇವೆ. ಆದರೆ ಈ ತಾತ್ಕಾಲಿಕ ಕ್ರಿಯೆಗಳನ್ನು ಬಿಟ್ಟು ಭಗವಂತನು ಆದೇಶಿಸಿದ ಕಾರ್ಯಗಳಲ್ಲಿ ನಿರತರಾದಾಗ ಈ ಎಲ್ಲಾ ಚಟುವಟಿಕೆಗಳನ್ನು ಪರಿಶುದ್ಧಗೊಳಿಸಬಹುದು. ಇದಕ್ಕೆ ಪರಿಶುದ್ಧ ಜೀವನ ಎಂದು ಹೆಸರು.
ಇದನ್ನೂ ತಿಳಿಯಿರಿ: ಏಷ್ಯಾಕಪ್ 2023 ವೇಳಾಪಟ್ಟಿ
ಇದನ್ನೂ ತಿಳಿಯಿರಿ: ಏಷ್ಯಾಕಪ್ 2023 ಪಾಯಿಂಟ್ಸ್ ಟೇಬಲ್