ಭಗವದ್ಗೀತೆ: ದೇಹವು ನಿರಾನಂದ; ಆನಂದಮಯವಾಗಿರುವುದರ ಬದಲು ದುಃಖಮಯವಾಗಿದೆ; ಗೀತೆಯಲ್ಲಿನ ಮಾತಿನ ಅರ್ಥ ಹೀಗಿದೆ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಭಗವದ್ಗೀತೆ: ದೇಹವು ನಿರಾನಂದ; ಆನಂದಮಯವಾಗಿರುವುದರ ಬದಲು ದುಃಖಮಯವಾಗಿದೆ; ಗೀತೆಯಲ್ಲಿನ ಮಾತಿನ ಅರ್ಥ ಹೀಗಿದೆ

ಭಗವದ್ಗೀತೆ: ದೇಹವು ನಿರಾನಂದ; ಆನಂದಮಯವಾಗಿರುವುದರ ಬದಲು ದುಃಖಮಯವಾಗಿದೆ; ಗೀತೆಯಲ್ಲಿನ ಮಾತಿನ ಅರ್ಥ ಹೀಗಿದೆ

ಕುರುಕ್ಷೇತ್ರದ ಯುದ್ಧದಲ್ಲಿ ಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ದೇವರ ಗೀತೆ ಎಂಬ ಅರ್ಥ ಬರುವ ಭಗವದ್ಗೀತೆ ವಿಶ್ವದಲ್ಲಿರುವ ಧರ್ಮಗ್ರಂಥಗಳಲ್ಲಿ ಒಂದಾಗಿದೆ. ಸತ್ಯದ ಮಾರ್ಗವನ್ನು ಅನುಸರಿಸುವುದು ಗೀತೆಯ ಅರ್ಥವಾಗಿದೆ. ದೇಹವು ನಿರಾನಂದ ಎಂದು ಗೀತೆಯಲ್ಲಿರುವ ಈ ಸಾರಾಂಶದ ಅರ್ಥ ತಿಳಿಯಿರಿ.

ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.

ಭಗವದ್ಗೀತೆಯ (Bhagavadgita) ಎಂಡನೇ ಅಧ್ಯಾಯದಲ್ಲಿ ಹೀಗೆ ಹೇಳಿದೆ.

ಅನ್ತಕಾಲೇ ಚ ಮಾಮೇವ ಸ್ಮರನ್ ಮುಕ್ತ್ವಾ ಕಲೇವರಮ್|

ಯಃ ಪ್ರಯಾತಿ ಸ ಮಾದ್ಭಾವಂ ಯಾತಿ ನಾಸ್ತ್ಯತ್ರ ಸಂಶಯಃ||

"ಅಂತ್ಯಕಾಲದಲ್ಲಿ ನನ್ನನ್ನು ಸ್ಮರಿಸುತ್ತ ಯಾವನು ದೇಹವನ್ನು ಬಿಡುತ್ತಾನೋ ಆತನು ನನ್ನ ಭಾವವನ್ನು ಹೊಂದುವನು. ಇದರಲ್ಲಿ ಸಂಶಯವಿಲ್ಲ" (ಗೀತಾ 8.5) ತನ್ನ ಮರಣದ ಹೊತ್ತಿನಲ್ಲಿ ಕೃಷ್ಣನ ರೂಪವನ್ನು ಸ್ಮರಿಸಿಕೊಳ್ಳಬೇಕು; ಈ ರೂಪವನ್ನು ಧ್ಯಾನಿಸುತ್ತ ದೇಹವನ್ನು ಬಿಟ್ಟವನು ಖಂಡಿತವಾಗಿಯೂ ಆಧ್ಯಾತ್ಮಿಕ ಲೋಕವನ್ನು ಪಡೆಯುವನು.

ಮದ್ಭಾವಮ್ ಎನ್ನುವುದು ಭಗವಂತನ ಪರಮ ಸ್ವರೂಪವನ್ನು ಹೇಳುತ್ತದೆ. ಭಗವಂತನು ಸತ್-ಚಿತ್-ಆನನ್ದ ವಿಗ್ರಹ. ಎಂದರೆ ಅವನ ರೂಪವು ಸತಾನ, ಜ್ಞಾನಪೂರ್ಣ ಮತ್ತು ಆನಂದಪೂರ್ಣ. ನಮ್ಮ ಈಗಿನ ದೇಹವು ಸತ್-ಚಿತ್-ಆನನ್ದವಲ್ಲ. ಅದು ಅಸತ್, ಸತ್ ಅಲ್ಲ, ಅದು ಸನಾತನವಲ್ಲ; ನಾಶವಾಗಕ್ಕದ್ದು. ಅದು ಚಿತ್ ಅಲ್ಲ, ಜ್ಞಾನಪೂರ್ಣವಲ್ಲ ನಮಗೆ ಆಧ್ಯಾತ್ಮಿಕ ರಾಜ್ಯದ ವಿಷಯ ತಿಳಿಯದು. ಈ ಐಹಿಕ ಜಗತ್ತಿನ ವಿಷಯವೂ ಪರಿಪೂರ್ಣವಾಗಿ ತಿಳಿಯದು.

ಐಹಿಕ ಜಗತ್ತಿನಲ್ಲಿ ನಾವು ಅನುಭವಿಸುವ ಎಲ್ಲ ದುಃಖಗಳ ಮೂಲ ದೇಹವೇ

ಇಲ್ಲಿ ನಮಗೆ ತಿಳಿಯದ ಎಷ್ಟೋ ಸಂಗತಿಗಳುಂಟು. ದೇಹವು ನಿರಾನಂದ; ಆನಂದ ಮಯವಾಗಿರುವುದರ ಬದಲು ಅದು ದುಃಖಮಯವಾಗಿದೆ. ಈ ಐಹಿಕ ಜಗತ್ತಿನಲ್ಲಿ ನಾವು ಅನುಭವಿಸುವ ಎಲ್ಲ ದುಃಖಗಳ ಮೂಲ ದೇಹವೇ. ದೇವೋತ್ತಮ ಪರಮ ಪುರುಷನಾದ ಶ್ರೀಕೃಷ್ಣನನ್ನು ಸ್ಮರಿಸುತ್ತ ಯಾವನು ದೇಹವನ್ನು ಬಿಡುವನೋ ಅವನು ಕೂಡಲೇ ಸತ್-ಚಿತ್-ಆನನ್ದ ದೇಹವನ್ನು ಪಡೆಯುತ್ತಾನೆ.

ಈ ದೇಹವನ್ನು ಬಿಟ್ಟು ಈ ಐಹಿಕ ಜಗತ್ತಿನಲ್ಲಿ ಮತ್ತೊಂದು ದೇಹವನ್ನು ಪಡೆಯುವ ಪ್ರಕ್ರಿಯೆಯು ವ್ಯವಸ್ಥಿತವಾಗಿದೆ. ಒಬ್ಬ ಮನುಷ್ಯನು ಮುಂದಿನ ಜನ್ಮದಲ್ಲಿ ಯಾವ ರೂಪದ ದೇಹವನ್ನು ಪಡೆಯಬೇಕೆಂದು ತೀರ್ಮಾನವಾದ ಅನಂತರ ಅವನು ಸಾಯುತ್ತಾನೆ. ಈ ತೀರ್ಮಾನವನ್ನು ಜೀವಿಯು ಮಾಡುವುದಿಲ್ಲ. ಅವನಿಗಿಂತ ಮೇಲಿನವರು ಮಾಡುತ್ತಾರೆ.

ಈ ಜನ್ಮನದಲ್ಲಿ ನಮ್ಮ ಕರ್ಮಗಳಿಗೆ ಅನುಗುಣವಾಗಿ ನಾವು ಮೇಲೇರುತ್ತೇವೆ ಅಥವಾ ಕೆಳಕ್ಕಿಳಿಯುತ್ತೇವೆ. ಈ ಜನ್ಮವು ಮುಂದಿನ ಜನ್ಮನಕ್ಕೆ ಸಿದ್ಧತೆ. ಆದುದರಿಂದ ನಾವು ಭಗವಂತನ ರಾಜ್ಯಕ್ಕೆ ಏರಲು ಈ ಜನ್ಮದಲ್ಲಿ ಸಿದ್ಧತೆಯನ್ನು ಮಾಡಿಕೊಳ್ಳುವುದು ಸಾಧ್ಯವಾದರೆ, ನಿಶ್ಚಯವಾಗಿಯೂ ಈ ಐಹಿಕ ದೇಹವನ್ನು ತ್ಯಜಿಸಿದ ಅನಂತರ ಭಗವಂತನ ದೇಹವನ್ನು ಹೋಲುವ ಆಧ್ಯಾತ್ಮಿಕ ದೇಹವನ್ನು ಪಡೆಯುತ್ತೇವೆ.

ಹಿಂದೆಯೇ ವಿವರಿಸಿದಂತೆ ಆಧ್ಯಾತ್ಮಿಕವಾದಿಗಳಲ್ಲಿ ಬ್ರಹ್ಮವಾದಿ, ಪರಮಾತ್ಮವಾದಿ ಮತ್ತು ಭಕ್ತ, ಹೀಗೆ ಬೇರೆ ಬೇರೆ ವರ್ಗಗಳವರಿದ್ದಾರೆ. ಮೊದಲೇ ಹೇಳಿದಂತೆ ಬ್ರಹ್ಮಜ್ಯೋತಿ (ಆಧ್ಯಾತ್ಮಿಕ ಗಗನ)ಯಲ್ಲಿ ಅಸಂಖ್ಯಾತ ಆಧ್ಯಾತ್ಮಿಕ ಗ್ರಹಗಳಿವೆ. ಈ ಗ್ರಹಗಳ ಸಂಖ್ಯೆಯು ಐಹಿಕ ಜಗತ್ತಿನ ಎಲ್ಲ ಗ್ರಹಗಳ ಸಂಖ್ಯೆಗಿಂತ ಅಪಾರವಾದದ್ದು. ಈ ಐಹಿಕ ಜಗತ್ತು ಸೃಷ್ಟಿಯ ಸುಮಾರು ಕಾಲುಭಾಗ (ಏಕಾಂಶೇ ಸ್ಥಿತೋ ಜಗತ್) ಎಂದು ಹೇಳಲಾಗಿದೆ.

ಸೃಷ್ಟಿಯ ಬಹು ಭಾಗವು ಆಧ್ಯಾತ್ಮಿಕ ಗಗನ

ಈ ಐಹಿಕ ವಿಭಾಗದಲ್ಲಿ ಕೋಟ್ಯಂತರ ವಿಶ್ವಗಳಿವೆ, ಕೋಟ್ಯಂತರ ಸೂರ್ಯರು, ಚಂದ್ರರು, ತಾರೆಗಳು ಇವೆ. ಆದರೆ ಈ ಸಮಸ್ತ ಭೌತಿಕ ಸೃಷ್ಟಿಯೂ ಇಡೀ ಸೃಷ್ಟಿಯ ಒಂದು ಸಣ್ಣ ಭಾಗ ಮಾತ್ರ. ಸೃಷ್ಟಿಯ ಬಹು ಭಾಗವು ಆಧ್ಯಾತ್ಮಿಕ ಗಗನ. ಪರಬ್ರಹ್ಮನ ಅಸ್ತಿತ್ವದಲ್ಲಿ ಒಂದಾಗಬಯಸುವವನು ಕೂಡಲೇ ಭಗವಂತನ ಬ್ರಹ್ಮಜ್ಯೋತಿಗೆ ಒಯ್ಯಲ್ಪಡುತ್ತಾನೆ.

ಹೀಗೆ ಆಧ್ಯಾತ್ಮಿಕ ಗಗನವನ್ನು ಸೇರುತ್ತಾನೆ. ಭಗವಂತನ ಸಹವಾಸವನ್ನು ಸವಿಯಬಯಸುವ ಭಕ್ತನು ಅಸಂಖ್ಯಾತವಾದ ವೈಕುಂಠ ಗ್ರಹಗಳನ್ನು ಸೇರುತ್ತಾನೆ. ಅಲ್ಲಿ ಭಗವಂತನು, ನಾರಾಯಣನಾಗಿ ತನ್ನ ಸ್ವರೂಪವನ್ನು ಚತರ್ಭುಜಗಳಿಂದ ವಿಸ್ತರಿಸಿ, ಪ್ರದ್ಯುಮ್ನ, ಅನಿರುದ್ಧ, ಗೋವಿಂದ ಮೊದಲಾದ ಹೆಸರುಗಳೊಡನೆ ಅವನಿಗೆ ಸಹವಾಸ ಭಾಗ್ಯವನ್ನು ನೀಡುತ್ತಾನೆ. ಆದುದದರಿಂದ ಬದುಕಿನ ಅಂತ್ಯಕಾಲದಲ್ಲಿ ಆಧ್ಯಾತ್ಮಿಕವಾದಿಗಳು ಬ್ರಹ್ಮಜ್ಯೋತಿಯನ್ನು ಕುರಿತಾಗಲಿ, ಪರಮಾತ್ಮನನ್ನು ಕುರಿತಾಗಲಿ, ಶ್ರೀಕೃಷ್ಣನ ದೇವೋತ್ತಮ ಪರಮ ಪುರುಷತ್ವವನ್ನು ಕುರಿತಾಗಲಿ ಚಿಂತಿಸುತ್ತಾರೆ.

ಭಕ್ತನು ಮಾತ್ರ ಭಗವಂತನೊಡನೆ ನೇರ ಸಂಪರ್ಕ ಹೊಂದುತ್ತಾನೆ

ಇವುಗಳಲ್ಲಿ ಯಾವುದನ್ನು ಧ್ಯಾನಿಸಿದರೂ ಆಧ್ಯಾತ್ಮಿಕ ಗಗನವನ್ನು ಪ್ರವೇಶಿಸುತ್ತಾರೆ. ಆದರೆ ಭಕ್ತನು ಮಾತ್ರ ಅಥವಾ ಭಗವಂತನೊಡನೆ ನೇರ ಸಂಪರ್ಕ ಹೊಂದಿದವನು ಮಾತ್ರ ವೈಕುಂಠ ಗ್ರಹಗಳನ್ನು ಅಥವಾ ಗೋಲೋಕ ವೃಂದಾವನ ಗ್ರಹವನ್ನು ಪ್ರವೇಶಿಸುತ್ತಾನೆ. ಭಗವಂತನು, ಇದರಲ್ಲಿ ಸಂದೇಹವಿಲ್ಲ ಎಂದೂ ಹೇಳುತ್ತಾನೆ. ಇದನ್ನು ದೃಢವಾಗಿ ನಂಬಬೇಕು. ನಮ್ಮ ಕಲ್ಪನೆಗೆ ಸಂಪೂರ್ಣವಾಗಿ

ಹೊಂದಿಕಳ್ಳದಿರುವುದನ್ನು ನಾವು ತಿರಸ್ಕರಿಸಬಾರದು. ನಮ್ಮ ನಿಲುವು ನೀನು ಹೇಳಿದ ಪ್ರತಿಯೊಂದು ಮಾತನ್ನೂ ನಾನುನಂಬುತ್ತೇನೆ ಎಂದು ಅರ್ಜುನನ ನಿಲುವೇ ಆಡಬೇಕು. ಮರಣಕಾಲದಲ್ಲಿ ಯಾರು ತನ್ನನ್ನು ಬ್ರಹ್ಮನೆಂದೋ ಅಥವಾ ಪರಮಾತ್ಮನೆಂದೋ ಅಥವಾ ದೈವತ್ವದ ಪುರುಷನೆಂದೋ ಚಿಂತಿಸುತ್ತಾರೋ ಅವರು ಆಧ್ಯಾತ್ಮಿಕ ಗಗನವನ್ನು ಪ್ರವೇಶಿಸುತ್ತಾರೆ ಎಂದು ಭಗವಂತನು ಹೇಳಿದಾಗ ಅದರ ವಿಷಯದಲ್ಲಿ ಸಂಶಯವೇ ಇಲ್ಲ. ಅದನ್ನು ನಂಬದಿರುವ ಪ್ರಶ್ನೆಯೇ ಇಲ್ಲ.

Whats_app_banner

ವಿಭಾಗ

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.