ಭಗವದ್ಗೀತೆ: ದೇಹದ ಕಲ್ಪನೆಗಳಲ್ಲೇ ಮುಳುಗಿರುವವನಿಗೆ ತನ್ನ ನಿಜಸ್ಥಿತಿ ಅರಿವಾಗುವುದಿಲ್ಲ; ಗೀತೆಯಲ್ಲಿನ ಈ ಮಾತಿನ ಅರ್ಥ ತಿಳಿಯಿರಿ
ಭಗವಂತನ ಶ್ರೀಕೃಷ್ಣ ವಿಭಿನಾಂಶವಾದ ಜೀವಿಯ ಸೃಷ್ಟಿಕರ್ತನೂ ಇಲ್ಲ, ಭೋಗಿಸುವವನೂ ಅಲ್ಲ. ಅವನು ಸಹಕರಿಸುವವನು ಮಾತ್ರ. ಸೃಷ್ಟಿಯಾಗಿದ್ದಾನೆ ಮತ್ತು ಭೋಗಿಸಲ್ಪಡುತ್ತಾನೆ ಎಂದು ಭಗವದ್ಗೀತೆಯಲ್ಲಿ ಹೇಳಲಾಗಿದೆ. ಇದರ ಅರ್ಥ ತಿಳಿಯಿರಿ.
ಭಗವದ್ಗೀತೆಯ (BhagavadGita) ಸಾರಾಂಶದಲ್ಲಿ ಹೀಗೆ ಹೇಳಲಾಗಿದೆ. ಭೌತಿಕ ಕಲ್ಮಷವಿರುವಾಗ ನಾವು ಬದ್ಧರು ಎನ್ನಿಸಿಕೊಳ್ಳುತ್ತೇವೆ. ನಾವು ಭೌತಿಕ ಪ್ರಕೃತಿಯ ಸೃಷ್ಟಿ ಎಂಬ ಭಾವನೆಯಿಂದ ಮಿಥ್ಯಾಪ್ರಜ್ಞೆಯನ್ನು ತೋರುತ್ತೇವೆ. ಇದಕ್ಕೆ ಮಿಥ್ಯಾಹಂಕಾರ ಎಂದು ಹೆಸರು. ದೇಹದ ಕಲ್ಪನೆಗಳಲ್ಲೇ ಮುಳುಗಿರುವವನಿಗೆ ತನ್ನ ನಿಜಸ್ಥಿತಿಯು ಅವಿವಾಗುವುದಿಲ್ಲ.
ದೇಹಾತ್ಮ ಕಲ್ಪನೆಯನ್ನು ಹೋಗಲಾಗಿಡಸುವುದಕ್ಕಾಗಿಯೇ ಭಗವದ್ಗೀತೆಯನ್ನು ಉಪದೇಶಿಸಲಾಯಿತು. ಈ ತಿಳುವಳಿಕೆಯನ್ನು ಭಗವಂತನಿಂದ ಪಡೆಯುವುದಕ್ಕಾಗಿ ಅರ್ಜುನನು ತನ್ನನ್ನು ಇಂತಹ ಸ್ಥಿತಿಯಲ್ಲಿ ಇರಿಸಿಕೊಂಡನು. ಬದುಕಿನ ದೈಹಿಕ ಕಲ್ಪನೆಯಿಂದ ಬಿಡುಗಡೆ ಹೊಂದಬೇಕು; ಆಧ್ಯಾತ್ಮಿಕವಾದಿಗೆ ಇದೇ ಮೊದಲನೆಯ ಕ್ರಿಯೆ. ಸ್ವತಂತ್ರನಾಗಲು ಬಯಸುವವನು, ಮುಕ್ತನಾಗಲು ಬಯಸುವವನು ತಾವು ಈ ಜಡ ದೇಹವಲ್ಲ ಎನ್ನುವುದನ್ನು ತಿಳಿದುಕೊಳ್ಳಬೇಕು.
ಮುಕ್ತಿ ಎಂದರೆ ಭೌತಿಕ ಪ್ರಜ್ಞೆಯಿಂದ ಬಿಡುಗಡೆ. ಶ್ರೀಮದ್ಭಾಗವತದಲ್ಲಿಯೂ ಮುಕ್ತಿಯ ವಿವರಣೆ ಇದೆ. ಮುಕ್ತಿರ್‌ಹಿತ್ವಾನ್ಯಥಾರೂಪಂ ಸ್ವರೂಪೇಣ ವ್ಯವಸ್ಥಿತಿಃ ಹೀಗೆಂದರೆ ಈ ಐಹಿಕ ಜಗತ್ತಿನ ಕಲುಷಿತ ಪ್ರಜ್ಞೆಯಿಂದ ಬಿಡುಗಡೆ ಹೊಂದಿ ಪರಿಶುದ್ಧ ಪ್ರಜ್ಞೆಯಲ್ಲಿ ನಿಷ್ಠೆಯನ್ನು ಪಡೆಯುವುದು.
ಭಗವದ್ಗೀತೆಯ ಉದ್ದೇಶ ಪರಿಶುದ್ಧ ಪ್ರಜ್ಞೆಯನ್ನ ಜಾಗೃತಗೊಳಿಸುವುದು
ಭಗವದ್ಗೀತೆಯ ಎಲ್ಲ ಉಪದೇಶಗಳ ಉದ್ದೇಶವು ಈ ಪರಿಶುದ್ಧ ಪ್ರಜ್ಞೆಯನ್ನು ಜಾಗೃತಗೊಳಿಸುವುದು. ಆದುದರಿಂದಲೇ ಗೀತೋಪದೇಶದ ಕೊನೆಯ ಘಟ್ಟದಲ್ಲಿ ಕೃಷ್ಣನು ಅರ್ಜುನನನ್ನು ಈಗ ನಿನ್ನ ಪ್ರಜ್ಞೆ ಪರಿಶುದ್ಧವಾಯಿತೆ ಎಂದು ಕೇಳವುದನ್ನುು ನೋಡುತ್ತೇವೆ. ಪರಿಶುದ್ಧಗೊಂಡ ಪ್ರಜ್ಞೆ ಎಂದರೆ ಭಗವಂತನ ಉಪದೇಶಕ್ಕೆ ವಿಭಿನ್ನಾಂಶಗಳಾದದ್ದರಿಂದ ನಮಗೆ ಪ್ರಜ್ಞೆಯು ಇದ್ದೇ ಇದೆ. ಆದರೆ ನಾವು ಕೀಳುಗುಣಗಳಿಂದ ಪ್ರಭಾವಿತರಾಗುವ ಸಾಧ್ಯತೆ ಇದೆ. ಆದರೆ ಭಗವಂತನು ಪರಾತ್ಪರನು; ಆದುದರಿಂದ ಈ ಬಗೆಯ ಪ್ರಭಾವಕ್ಕೆ ಎಂದೂ ಒಳಗಾಗುವುದಿಲ್ಲ. ಭಗವಂತನಿಗೂ ಅಲ್ಪ ಜೀವಿಗಳಿಗೂ ಇದೇ ವ್ಯತ್ಯಾಸ.
ಈ ಪ್ರಜ್ಞೆ ಎಂದರೇನು? 'ನಾನು ಇದ್ದೇನೆ' ಎನ್ನುವುದೇ ಈ ಪ್ರಜ್ಞೆ. ಹಾಗಾದರೆ ನಾನು ಯಾರು? ಕಲುಷಿತ ಪ್ರಜ್ಞೆಯಲ್ಲಿ 'ನಾನು ಇದ್ದೇನೆ' ಎನ್ನುವುದರ ಅರ್ಥ, "ನನ್ನ ಕಣ್ಣು ಕಾಣುವುದಕ್ಕೆಲ್ಲ ನಾನೇ ಪ್ರಭು, ಭೋಗಿಸುವವನು ನಾನೇ" ಎನ್ನುವುದು. ಪ್ರತಿಯೊಂದು ಜೀವಿಯು ತಾನೇ ಐಹಿಕ ಜಗತ್ತಿನ ಒಡೆಯ ಮತ್ತು ಸೃಷ್ಟಿಕರ್ತ ಎಂದು ಭಾವಿಸುತ್ತಾನೆ; ಅದರಿಂದಲೇ ಜಗತ್ತು ಸಾಗುತ್ತದೆ. ಭೌತಿಕ ಪ್ರಜ್ಞೆಗೆ ಎರಡು ಮಾನಸಿಕ ಭಾಗಗಳುಂಟು. ಒಂದು ನಾನೇ ಸೃಷ್ಟಿಕರ್ತ ಎನ್ನುವುದು, ಇನ್ನೊಂದು ನಾನೇ ಭೋಗಿಸುವವನು ಎನ್ನುವುದು. ಆದರೆ ವಾಸ್ತವವಾಗಿ ಸೃಷ್ಟಿಕರ್ತನೂ ಭಗವಂತನೇ ಮತ್ತು ಭೋಗಿಸುವವನೂ ಭಗವಂತನೇ.
ಭಗವಂತ ಭೋಗಿಸುವವನಲ್ಲ
ಭಗವಂತನ ವಿಭಿನಾಂಶವಾದ ಜೀವಿಯು ಸೃಷ್ಟಿಕರ್ತನೂ ಇಲ್ಲ, ಭೋಗಿಸುವವನೂ ಅಲ್ಲ. ಅವನು ಸಹಕರಿಸುವವನು ಮಾತ್ರ. ಅವನು ಸೃಷ್ಟಿಯಾಗಿದ್ದಾನೆ ಮತ್ತು ಭೋಗಿಸಲ್ಪಡುತ್ತಾನೆ. ಉದಾಹರಣೆಗೆ, ಒಂದು ಯಂತ್ರದ ಭಾಗವು ಇಡೀ ಯಂತ್ರದೊಂದಿಗೆ ಸಹಕರಿಸುತ್ತದೆ; ದೇಹದ ಒಂದು ಭಾಗವು ಇಡೀ ದೇಹದೊಂದಿಗೆ ಸಹಕರಿಸುತ್ತದೆ. ಕೈಗಳು, ಕಾಲುಗಳು, ಕಣ್ಣುಗಳು, ಮೊದಲಾದುವೆಲ್ಲ ದೇಹದ ಭಾಗಗಳು. ಆದರೆ ಅವು ವಾಸ್ತವಿಕವಾಗಿ ಭೋಗಿಸುವುದಿಲ್ಲ. ಭೋಗಿಸುವುದು ಹೊಟ್ಟೆ. ಕಾಲುಗಳು ಚಲಿಸುತ್ತವೆ. ಕೈಗಳು ಆಹಾರವನ್ನು ತೆಗೆದುಕೊಡುತ್ತವೆ. ಹಲ್ಲುಗಳು ಅಗಿಯುತ್ತವೆ.
ದೇಹದ ಎಲ್ಲ ಭಾಗಗಳೂ ಹೊಟ್ಟೆಯನ್ನು ತೃಪ್ತಿಪಡಿಸುವುದರಲ್ಲಿ ನಿರತವಾಗಿವೆ. ಇದಕ್ಕೆ ಕಾರಣ, ದೇಹದ ವ್ಯವಸ್ಥೆಗೆ ಪುಷ್ಟಿನೀಡುವ ಮುಖ್ಯಭಾಗ ಹೊಟ್ಟೆಯೇ. ಆದುದರಿಂದ ಎಲ್ಲವೂ ಹೋಗುವುದು ಹೊಟ್ಟೆಗೇ. ಮರವನ್ನು ಪೋಷಿಸಲು ಬೇರಗಳಿಗೆ ನೀರೆರೆಯುತ್ತೇವೆ; ದೇಹವನ್ನು ಪೋಷಿಸಲು ಹೊಟ್ಟೆಗೆ ಆಹಾರವನ್ನು ಕೊಡುತ್ತೇವೆ. ಏಕೆಂದರೆ, ದೇಹವು ಆರೋಗ್ಯವಾಗಿರಬೇಕಾದರೆ ದೇಹದ ಭಾಗಗಳು ಹೊಟ್ಟೆಗೆ ಆಹಾರ ನೀಡಲು ಸಹಕರಿಸಬೇಕು. ಹಾಗೆಯೇ, ಭೋಗಿಸುವವನೂ ಸೃಷ್ಟಿಕರ್ತನೂ ಭಗವಂತನೇ. ಅಧೀನ ಜೀವಿಗಳಾದ ನಾವು ಇರುವುದೇ ಆತನ ಸಂತೃಪ್ತಿಗಾಗಿ; ಪರಸ್ಪರ ಸಹಕರಿಸಿ ಕೆಲಸಮಾಡುವುದಕ್ಕಾಗಿ. ಹೊಟ್ಟೆಯು ತೆಗೆದುಕೊಂಡ ಆಹಾರವು ದೇಹದ ಇತರ ಎಲ್ಲ ಭಾಗಗಳಿಗೆ ನೆರವಾಗುವಂತೆ ಈ ಸಹಕಾರವು ವಾಸ್ತವವಾಗಿ ನಮಗೆ ಸಹಾಯ ಮಾಡುತ್ತದೆ.
ಕೈಬೆರಳುಗಳು ಆಹಾರವನ್ನು ಹೊಟ್ಟೆಗೆ ಕೊಡದೆ ತಾವೇ ತೆಗೆದುಕೊಳ್ಳಬೇಕೆಂದು ಯೋಜಿಸಿದರೆ ಅವಕ್ಕೆ ಸೋಲಾಗುತ್ತದೆ. ಸಹಕಾರದಿಂದ ಜೀವಿಗಳಿಗೆ ಸವಿಯಲು ಸಾದ್ಯವಾಗುತ್ತದೆ. ಈ ಸಂಬಂಧವು ಒಡೆಯ-ಸೇವಕರ ಸಂಬಂಧದಂತೆಯೂ ಹೌದು. ಒಡೆಯನಿಗೆ ತೃಪ್ತಿಯಾದರೆ ಸೇವಕನಿಗೆ ತೃಪ್ತಿಯಾಗುತ್ತದೆ. ವ್ಯಕ್ತವಾದ ವಿಶ್ವವನ್ನು ಸೃಷ್ಟಿಸಿದ ಭಗವಂತನಲ್ಲಿ ಸೃಷ್ಟಿಸುವ ಪ್ರವೃತ್ತಿ ಮತ್ತು ಸವಿಯುವ ಪ್ರವೃತ್ತಿ ಎರಡೂ ಇರುತ್ತವೆ. ಆದುದರಿಂದ ಈ ಐಹಿಕ ಜಗತ್ತನ್ನು ಸೃಷ್ಟಿಸುವ ಮತ್ತು ಸವಿಯುವ ಪ್ರವೃತ್ತಿಗಳು ಜೀವಿಯಲ್ಲಿಯೂ ಇರುತ್ತವೆ. ಆದರೂ ಭಗವಂತನಿಗೆ ತೃಪ್ತಿಯಾಗಬೇಕು.