ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Bhagavad Gita: ಶ್ರೀಕೃಷ್ಣನಿಗಿಂತ ಶ್ರೇಷ್ಠರು ಯಾರೂ ಇಲ್ಲ, ಆತನಿಂದ ಎಲ್ಲವೂ ಸಾಧ್ಯ; ಗೀತೆಯ ಸಾರಾಂಶ ಹೀಗಿದೆ

Bhagavad Gita: ಶ್ರೀಕೃಷ್ಣನಿಗಿಂತ ಶ್ರೇಷ್ಠರು ಯಾರೂ ಇಲ್ಲ, ಆತನಿಂದ ಎಲ್ಲವೂ ಸಾಧ್ಯ; ಗೀತೆಯ ಸಾರಾಂಶ ಹೀಗಿದೆ

Bhagavad Gita in Updesh: ಶ್ರೀಕೃಷ್ಣನಿಗಿಂತ ಶ್ರೇಷ್ಠರು ಯಾರೂ ಇಲ್ಲ ಆತನಿಗಿಂತ ಶ್ರೇಷ್ಠರು ಯಾರೂ ಇಲ್ಲ. ಅವನಿಗೆ ಯಾರೂ ಸಮಾನರಿಲ್ಲ ಮತ್ತು ಪ್ರತಿಯೊಬ್ಬರೂ ಅವನಿಗಿಂತ ಕೆಳಗಿರುವವರೇ ಎಂಬುದರ ಅರ್ಥವನ್ನು ಭಗವದ್ಗೀತೆಯ 11ನೇ ಅಧ್ಯಾಯದ 43ನೇ ಶ್ಲೋಕದಲ್ಲಿ ತಿಳಿಯಿರಿ.

ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.

ಅಧ್ಯಾಯ 11 - ವಿಶ್ವರೂಪ -ಶ್ಲೋಕ - 43

ಪಿತಾಸಿ ಲೋಕಸ್ಯ ಚರಾಚರಸ್ಯ

ತ್ವಮಸ್ಯ ಪೂಜ್ಯಶ್ಚ ಗುರುರ್ಗರೀಯಾನ್ |

ನ ತ್ವತ್ಸಮೋಸ್ತ್ಯಭ್ಯಧಿಕಃ ಕುತೋನ್ಯೋ

ಲೋಕತ್ರಯೇಪ್ಯಪ್ರತಿಮಪ್ರಭಾವ ||43||

ಭಗವದ್ಗೀತೆಯ 11ನೇ ಅಧ್ಯಾಯ ವಿಶ್ವರೂಪದ ಮುಂದವರಿದ ಭಾಗವಾಗಿದಲ್ಲಿ ಪರಮ ಪ್ರಭುವಾದ ಕೃಷ್ಣನಿಗೆ ಸಾಮಾನ್ಯ ಮನುಷ್ಯನಿಗಿರುವಂತೆಯೇ ಇಂದ್ರಿಯಗಳೂ ದೇಹವೂ ಉಂಟು. ಆದರೆ ಅವನ ಮಟ್ಟಿಗೆ ಅವನ ಇಂದ್ರಿಯಗಳು, ಅವನ ದೇಹ, ಅವನ ಮನಸ್ಸು ಮತ್ತು ಅವನು ಇವುಗಳ ನಡುವೆ ಯಾವುದೇ ವ್ಯತ್ಯಾಸವಿಲ್ಲ. ಕೃಷ್ಣನು ತನ್ನ ಆತ್ಮ, ಮನಸ್ಸು, ಹೃದಯ ಮತ್ತು ಬೇರೆ ಎಲ್ಲದರಿಂದ ಬೇರೆ ಎಂದು ಅವನನ್ನು ಪರಿಪೂರ್ಣವಾಗಿ ಅರ್ಥಮಾಡಿಕೊಳ್ಳಲಾರದ ಮೂಢರು ಹೇಳುತ್ತಾರೆ. ಕೃಷ್ಣನು ಪರಮ ಪ್ರಭುವು. ಆದುದರಿಂದ ಅವನ ಚಟುವಟಿಕೆಗಳು ಮತ್ತು ಸಾಮರ್ಥ್ಯವು ಪರಮವಾದವು (Bhagavad Gita in Updesh in Kannada).

ನಮ್ಮ ಇಂದ್ರಿಯಗಳಂತೆ ಅವನಿಗೆ ಇಂದ್ರಿಯಗಳಿಲ್ಲದಿದ್ದರೂ ಆತನು ಎಲ್ಲ ಇಂದ್ರಿಯ ಕ್ರಿಯೆಗಳನ್ನು ಮಾಡಬಲ್ಲನು. ಆದುದರಿಂದ ಅವನ ಇಂದ್ರಿಯಗಳು ದೋಷಪೂರ್ಣವೂ ಅಲ್ಲ, ಮಿತವೂ ಅಲ್ಲ, ಅವನಿಗಿಂತ ಶ್ರೇಷ್ಠರು ಯಾರೂ ಇಲ್ಲ. ಅವನಿಗೆ ಯಾರೂ ಸಮಾನರಿಲ್ಲ ಮತ್ತು ಪ್ರತಿಯೊಬ್ಬರೂ ಅವನಿಗಿಂತ ಕೆಳಗಿರುವವರೇ. ದೇವೋತ್ತಮ ಪರಮ ಪುರುಷನ ಜ್ಞಾನ, ಶಕ್ತಿ ಮತ್ತು ಚಟುವಟಿಕೆಗಳೆಲ್ಲ ದಿವ್ಯವಾದವು. ಭಗವದ್ಗೀತೆಯಲ್ಲಿ (4.9) ಹೇಳಿದಂತೆ.

ಜನ್ಮ ಕರ್ಮ ಚ ಮೇ ದಿವ್ಯಮ್ ಏವಂ ಯೋ ವೇತ್ತಿ ತತ್ತ್ವತಃ |

ತ್ಯಕ್ತ್ವಾ ದೇಹಂ ಪುನರ್ ಜನ್ಮ ನೈತಿ ಮಾಮ್ ಏತಿ ಸೋರ್ಜುನ ||

ಕೃಷ್ಣನ ದಿವ್ಯಶರೀರ, ಚಟುವಟಿಕೆಗಳು ಮತ್ತು ಪರಿಪೂರ್ಣತೆಯನ್ನು ಬಲ್ಲ ಯಾರೇ ಆಗಲಿ ದೇಹವನ್ನು ತ್ಯಜಿಸಿದ ಅನಂತರ ಅವನ (ಕೃಷ್ಣನ) ಬಳಿಗೆ ಹಿಂತಿರುಗುತ್ತಾರೆ. ಈ ದುಃಖಮಯ ಜಗತ್ತಿಗೆ ಹಿಂದಿರುವುದಿಲ್ಲ. ಆದುದರಿಂದ ಕೃಷ್ಣನ ಚಟುವಟಿಕೆಗಳು ಇತರರ ಚಟುವಟಿಕೆಗಳಿಗಿಂತ ಭಿನ್ನವಾದವು ಎನ್ನುವುದನ್ನು ತಿಳಿದುಕೊಳ್ಳಬೇಕು. ಅತ್ಯುತ್ತಮ ನೀತಿ ಎಂದರೆ ಕೃಷ್ಣನ ತತ್ವಗಳನ್ನು ಅನುಸರಿಸುವುದು. ಇದು ಮನುಷ್ಯನನ್ನು ಪರಿಪೂರ್ಣನನ್ನಾಗಿ ಮಾಡುತ್ತದೆ.

ಕೃಷ್ಣನಿಗೆ ಯಾರೂ ಒಡೆಯರಲ್ಲ, ಎಲ್ಲರೂ ಅವನ ಸೇವಕರು ಎಂದು ಹೇಳಿದೆ. ಚೈನತ್ಯ ಚರಿತಾಮೃತವು (ಆದಿ 5.142) ಇದನ್ನು ದೃಢಪಡಿಸುತ್ತದೆ - ಏಕಲೇ ಈಶ್ವರ ಕೃಷ್ಣ, ಆರ ಸಬ ಭೃತ್ಯ - ಕೃಷ್ಣನೊಬ್ಬನೇ ದೇವರು, ಬೇರೆ ಪ್ರತಿಯೊಬ್ಬರೂ ಅವನ ಸೇವಕರು. ಪ್ರತಿಯೊಬ್ಬರೂ ಅವನ ಅಪ್ಪಣೆಯನ್ನು ನಡೆಸುತ್ತಾರೆ. ಅವನ ಅಪ್ಪಣೆಯನ್ನು ತಿರಸ್ಕರಿಸಬಲ್ಲವರು ಯಾರೂ ಇಲ್ಲ. ಪ್ರತಿಯೊಬ್ಬರೂ ಅವನ ಮೇಲ್ವಿಚಾರಣೆಯಲ್ಲಿ ಇರುವುದರಿಂದ ಅವನ ಮಾರ್ಗದರ್ಶನದಂತೆ ನಡೆದುಕೊಳ್ಳುತ್ತಾರೆ. ಬ್ರಹ್ಮ ಸಂಹಿತೆಯಲ್ಲಿ ಹೇಳಿರುವಂತೆ ಅವನು ಎಲ್ಲ ಕಾರಣಗಳ ಕಾರಣನು.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.