Bhagavad Gita: ಈ ಕಾರಣದಿಂದ ಶ್ರೀಕೃಷ್ಣ ತೇಜಸ್ಸು, ಸಿರಿಗಳಿಂದ ಕೂಡಿದ ವಿಶ್ವರೂಪವನ್ನು ತೋರಿಸಿದ; ಗೀತೆಯ ಸಾರಾಂಶ ಹೀಗಿದೆ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Bhagavad Gita: ಈ ಕಾರಣದಿಂದ ಶ್ರೀಕೃಷ್ಣ ತೇಜಸ್ಸು, ಸಿರಿಗಳಿಂದ ಕೂಡಿದ ವಿಶ್ವರೂಪವನ್ನು ತೋರಿಸಿದ; ಗೀತೆಯ ಸಾರಾಂಶ ಹೀಗಿದೆ

Bhagavad Gita: ಈ ಕಾರಣದಿಂದ ಶ್ರೀಕೃಷ್ಣ ತೇಜಸ್ಸು, ಸಿರಿಗಳಿಂದ ಕೂಡಿದ ವಿಶ್ವರೂಪವನ್ನು ತೋರಿಸಿದ; ಗೀತೆಯ ಸಾರಾಂಶ ಹೀಗಿದೆ

Bhagavad Gita Updesh: ಈ ಕಾರಣದಿಂದ ಶ್ರೀಕೃಷ್ಣ ತೇಜಸ್ಸು, ಸಿರಿಗಳಿಂದ ಕೂಡಿದ ವಿಶ್ವರೂಪವನ್ನು ತೋರಿಸಿದ ಎಂಬುದರ ಅರ್ಥವನ್ನು ಭಗವದ್ಗೀತೆಯ 11ನೇ ಅಧ್ಯಾಯದ 47ನೇ ಶ್ಲೋಕದಲ್ಲಿ ಓದಿ.

ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.

ಅಧ್ಯಾಯ 11 - ವಿಶ್ವರೂಪ -ಶ್ಲೋಕ - 47

ಮಯಾ ಪ್ರಸನ್ನೇನ ತವಾರ್ಜುನೇದಮ್

ರೂಪಂ ಪರಂ ದರ್ಶಿತಮಾತ್ಮಯೋಗಾತ್ |

ತೇಜೋಮಯಂ ವಿಶ್ವಮನನ್ತಮಾದ್ಯಮ್

ಯನ್ಮೇ ತ್ವದನ್ಯೇನ ನ ದೃಷ್ಟಪೂರ್ವಮ್ ||47||

ಅನುವಾದ: ದೇವೋತ್ತಮ ಪರಮ ಪುರುಷನು ಹೀಗೆ ಹೇಳಿದನು - ಪ್ರಿಯ ಅರ್ಜುನ, ನಾನು ಪ್ರಸನ್ನನಾಗಿ ನನ್ನ ಅಂತರಂಗಶಕ್ತಿಯಿಂದ ಈ ಐಹಿಕ ಜಗತ್ತಿನಲ್ಲಿ ಈ ಪರಮ ವಿಶ್ವರೂಪವನ್ನು ನಿನಗೆ ತೋರಿಸಿದ್ದೇನೆ. ಅನಂತವೂ, ತೇಜೋಮಯವೂ ಆದ ಈ ಆದಿ ರೂಪವನ್ನು ನಿನಗೆ ಮೊದಲು ಯಾರೂ ನೋಡಿಲ್ಲ.

ಭಾವಾರ್ಥ: ಅರ್ಜುನನು ಪರಮ ಪ್ರಭುವಿನ ವಿಶ್ವರೂಪವನ್ನು ಕಾಣಲು ಬಯಸಿದನು. ಆದುದರಿಂದ ತನ್ನ ಭಕ್ತನಾದ ಅರ್ಜುನನಲ್ಲಿ ಇದ್ದ ದಯೆಯಿಂದ ಶ್ರೀಕೃಷ್ಣನು ತೇಜಸ್ಸು ಮತ್ತು ಸಿರಿಗಳಿಂದ ಕೂಡಿ ವಿಶ್ವರೂಪವನ್ನು ತೋರಿಸಿದನು. ಈ ರೂಪವು ಸೂರ್ಯನಂತೆ ಕಣ್ಣನ್ನು ಕೋರೈಸುತ್ತಿತ್ತು ಮತ್ತು ಅದರ ಹಲವು ಮುಖಗಳು ವೇಗವಾಗಿ ಬದಲಾಗುತ್ತಿದ್ದವು. ತನ್ನ ಗಳೆಯ ಅರ್ಜುನನ ತೃಪ್ತಿಗಾಗಿ ಪ್ರಭುವು ಈ ರೂಪವನ್ನು ತೋರಿಸಿದನು. ತನ್ನ ಅಂತರಂಗಶಕ್ತಿಯಿಂದ ಕೃಷ್ಣನು ಈ ರೂಪವನ್ನು ತೋರಿಸಿದನು (Bhagavad Gita Updesh in Kannada).

ಈ ಶಕ್ತಿಯನ್ನು ಮನುಷ್ಯನ ಊಹೆಯು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ. ಅರ್ಜುನನಿಗೆ ಮೊದಲು ಈ ವಿಶ್ವರೂಪವನ್ನು ಯಾರೂ ಕಂಡಿರಲಿಲ್ಲ. ಆದರೆ ಈ ರೂಪವನ್ನು ಅರ್ಜುನನಿಗೆ ತೋರಿಸಿದುದರಿಂದ ಸ್ವರ್ಗಲೋಕಗಳಲ್ಲಿಯೂ ಹೊರಗಿನ ಆಕಾಶದ ಲೋಕಗಳಲ್ಲಿಯೂ ಇದ್ದ ಭಕ್ತರು ಅದನ್ನು ನೋಡಲು ಸಾಧ್ಯವಾಯಿತು. ಅವರು ಆ ರೂಪವನ್ನು ಮೊದಲು ನೋಡಿರಲಿಲ್ಲ. ಅರ್ಜುನನಿಂದಾಗಿ ಅವರು ನೋಡಲು ಸಾಧ್ಯವಾಯಿತು. ಎಂದರೆ, ಕೃಷ್ಣನು ಕೃಪೆಯಿಟ್ಟು ಅರ್ಜುನನಿಗೆ ತೋರಿಸಿದ ವಿಶ್ವರೂಪವನ್ನು ಭಗವಂತನ ಗುರು ಶಿಷ್ಯ ಪರಂಪರೆಗೆ ಸೇರಿದವರೆಲ್ಲ ನೋಡಬಲ್ಲವರಾದರು.

ಕೃಷ್ಣನು ಶಾಂತಿ ಸಂಧಾನಕ್ಕಾಗಿ ದುರ್ಯೋಧನನ ಬಳಿ ಹೋದಾಗ ಈ ರೂಪವನ್ನು ದುರ್ಯೋಧನನಿಗೆ ತೋರಿಸಿದ ಎಂದು ಒಬ್ಬರು ವ್ಯಾಖ್ಯಾನ ಮಾಡಿದ್ದಾರೆ. ದುರದೃಷ್ಟದಿಂದ ದುರ್ಯೋಧನನು ಆ ಶಾಂತಿ ಸಂಧಾನಕ್ಕೆ ಒಪ್ಪಲಿಲ್ಲ. ಆಗ ಕೃಷ್ಣನು ತನ್ನ ವಿಶ್ವರೂಪಗಳಲ್ಲಿ ಕೆಲವನ್ನು ಪ್ರಕಟಮಾಡಿದ್ದನು. ಆದರೆ ಆ ರೂಪಗಳು ಅರ್ಜುನಿಗೆ ತೋರಿಸಿದ ರೂಪಕ್ಕಿಂತ ಬೇರೆಯಾದವು. ಈ ರೂಪವನ್ನು ಹಿಂದೆ ಬೇರೆ ಯಾರೂ ನೋಡಿರಲಿಲ್ಲ ಎಂದು ಸ್ಪಷ್ಟವಾಗಿ ಹೇಳಿದೆ.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.